ಕನ್ನಡದ ಫಾರೆಸ್ಟ್ ಚಿತ್ರಕ್ಕೆ ಬಂದ 7.8 ಅಡಿ ಎತ್ತರದ ಜಮ್ಮು-ಕಾಶ್ಮೀರ ಮೂಲದ ನಟ ಸುನೀಲ್ ಕುಮಾರ್; ಯಶ್‌ ಮುಂದಿನ ಚಿತ್ರಕ್ಕೂ ಬಂದಿದೆ ಬುಲಾವ್‌
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡದ ಫಾರೆಸ್ಟ್ ಚಿತ್ರಕ್ಕೆ ಬಂದ 7.8 ಅಡಿ ಎತ್ತರದ ಜಮ್ಮು-ಕಾಶ್ಮೀರ ಮೂಲದ ನಟ ಸುನೀಲ್ ಕುಮಾರ್; ಯಶ್‌ ಮುಂದಿನ ಚಿತ್ರಕ್ಕೂ ಬಂದಿದೆ ಬುಲಾವ್‌

ಕನ್ನಡದ ಫಾರೆಸ್ಟ್ ಚಿತ್ರಕ್ಕೆ ಬಂದ 7.8 ಅಡಿ ಎತ್ತರದ ಜಮ್ಮು-ಕಾಶ್ಮೀರ ಮೂಲದ ನಟ ಸುನೀಲ್ ಕುಮಾರ್; ಯಶ್‌ ಮುಂದಿನ ಚಿತ್ರಕ್ಕೂ ಬಂದಿದೆ ಬುಲಾವ್‌

ಜಮ್ಮು- ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಕನ್ನಡದ ಫಾರೆಸ್ಟ್‌ ಚಿತ್ರದಲ್ಲಿ ಅಭಿನಯಿಸಿದ್ದಾರೆ. 7.8. ಅಡಿ ಎತ್ತರವಿರುವ ಸುನೀಲ್ ಅವರನ್ನು ಅಲ್ಲಿನವರು ದಿ ಗ್ರೇಟ್ ಕಲಿ ಆಫ್ ಜಮ್ಮು ಎಂದು ಕರೆಯುತ್ತಾರೆ.

ಜಮ್ಮು- ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಹಿಂದಿಯ ಸ್ತ್ರೀ 2 ಚಿತ್ರದ ಶೂಟಿಂಗ್‌ ವೇಳೆ ಶ್ರದ್ಧಾ ಕಪೂರ್‌ ಜತೆಗೆ (ಎಡ ಚಿತ್ರ) ಕಾಣಿಸಿಕೊಂಡಿದ್ದು ಹೀಗೆ.  ಕನ್ನಡದ ಫಾರೆಸ್ಟ್‌ ಚಿತ್ರದ ತಂಡದ ಜತೆಗೂ ಸುನೀಲ್‌ ಕುಮಾರ್‌ (ಬಲ ಚಿತ್ರ)
ಜಮ್ಮು- ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಹಿಂದಿಯ ಸ್ತ್ರೀ 2 ಚಿತ್ರದ ಶೂಟಿಂಗ್‌ ವೇಳೆ ಶ್ರದ್ಧಾ ಕಪೂರ್‌ ಜತೆಗೆ (ಎಡ ಚಿತ್ರ) ಕಾಣಿಸಿಕೊಂಡಿದ್ದು ಹೀಗೆ. ಕನ್ನಡದ ಫಾರೆಸ್ಟ್‌ ಚಿತ್ರದ ತಂಡದ ಜತೆಗೂ ಸುನೀಲ್‌ ಕುಮಾರ್‌ (ಬಲ ಚಿತ್ರ)

Forest Kannada Film: ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ ಫಾರೆಸ್ಟ್ ಚಿತ್ರ ಆರಂಭದಿಂದಲೂ ಕುತೂಹಲ ಮೂಡಿಸಿರುವ ಚಿತ್ರ. ಫಾರೆಸ್ಟ್ ಹಲವು ವಿಶೇಷಗಳನ್ನೊಳಗೊಂಡ ಚಿತ್ರವೂ ಹೌದು. ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಜಮ್ಮು- ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಅಭಿನಯಿಸಿದ್ದಾರೆ. 7.8. ಅಡಿ ಎತ್ತರವಿರುವ ಸುನೀಲ್ ಕುಮಾರ್ ಅವರನ್ನು ಅಲ್ಲಿನವರು ದಿ ಗ್ರೇಟ್ ಕಲಿ ಆಫ್ ಜಮ್ಮು ಎಂದು ಕರೆಯುತ್ತಾರೆ. ಇದೀಗ ಇದೇ ಕಲಿ, ಕನ್ನಡ ಸಿನಿಮಾಕ್ಕೂ ಎಂಟ್ರಿಕೊಟ್ಟಿದ್ದಾರೆ.

ಬಾಲಿವುಡ್‌ನ ಸ್ತ್ರೀ 2 ಚಿತ್ರದಲ್ಲಿ ನಟನೆ

ಬಾಲಿವುಡ್‌ನಲ್ಲಿ ಸ್ತ್ರೀ 2 ಚಿತ್ರದಲ್ಲಿ ಸರ್ಕಟ್ ಎಂಬ ಮುಖ್ಯ ಖಳನಟನ ಪಾತ್ರದಲ್ಲಿ‌ ಸುನೀಲ್‌ ಕುಮಾರ್‌ ಅಭಿನಯಿಸಿದ್ದಾರೆ. ಯಶ್ ಅಭಿನಯದ ಚಿತ್ರದಲ್ಲಿ ನಟಿಸುವ ಮಾತುಕತೆ ಕೂಡ ನಡೆಯುತ್ತಿದೆ ಎಂದು ಸಂದರ್ಶನವೊಂದರಲ್ಲಿ ಸುನೀಲ್ ಕುಮಾರ್ ಹೇಳಿಕೊಂಡಿದ್ದಾರೆ. ಪ್ರಸ್ತುತ ಫಾರೆಸ್ಟ್ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌‌‌.‌ ಏಳು ದಿನಗಳ ಕಾಲ ಸಾಹಸ ನಿರ್ದೆಶಕ ರವಿವರ್ಮ ಅವರ ಸಾಹಾಸ ಸಂಯೋಜನೆಯಲ್ಲಿ ಫಾರೆಸ್ಟ್ ನಲ್ಲೇ ನಡೆದ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಸುನೀಲ್ ಕುಮಾರ್ ಭಾಗವಹಿಸಿದ್ದರು.

ಸದ್ಯ ಈ ಚಿತ್ರದಲ್ಲಿ ಇವರ ಪಾತ್ರವೇನು ಎಂಬ ಬಗ್ಗೆ ಚಿತ್ರತಂಡ ರಿವೀಲ್‌ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಪಾತ್ರದ ಬಗ್ಗೆ ಹೇಳಿಕೊಳ್ಳಲಿದೆ. ಅಂದಹಾಗೆ ಅತೀ ಎತ್ತರವಿರುವ ಕಾರಣ ತೆರೆದ ಜೀಪ್ ನಲ್ಲೇ ಸುನೀಲ್‌ ಕುಮಾರ್‌ ಪ್ರಯಾಣಿಸುತ್ತಿದ್ದರು. ವಿಮಾನ ಮುಂತಾದವುಗಳಲ್ಲಿ ಪ್ರಯಾಣಿಸುವಾಗಲೂ ಇವರಿಗೆ ಎರಡು ಟಿಕೇಟ್ ಬುಕ್ ಮಾಡಲಾಗುತ್ತಿತ್ತು ಎಂದು ನಿರ್ದೇಶಕ ಚಂದ್ರಮೋಹನ್ ತಿಳಿಸಿದ್ದಾರೆ.

ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ. ಕಾಂತರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ವಿಶೇಷ ಒಲವಿರುವ ನಿರ್ಮಾಪಕರು ಯಾವುದೇ ಕೊರತೆ ಬಾರದಂತೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಡಬಲ್ ಇಂಜಿನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಚಂದ್ರಮೋಹನ್ ಫಾರೆಸ್ಟ್‌ ಚಿತ್ರ ನಿರ್ದೇಶನ ಮಾಡಿದ್ದಾರೆ. ಚಂದ್ರಮೋಹನ್ ಹಾಗೂ ಸತ್ಯಶೌರ್ಯ ಸಾಗರ್ ಫಾರೆಸ್ಟ್ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದು, ಸತ್ಯಶೌರ್ಯ ಸಾಗರ್ ಸಂಭಾಷಣೆ ಬರೆದಿದ್ದಾರೆ.

ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಈ ಮಲ್ಟಿ ಸ್ಟಾರರ್ ಚಿತ್ರದ ಹೆಚ್ಚಿನ ಕಥೆ ಫಾರೆಸ್ಟ್ ನಲ್ಲೇ ನಡೆದಿದೆ. ಇನ್ನೇನು ಶೀಘ್ರದಲ್ಲಿ ಸಿನಿಮಾ ತೆರೆಗೆ ಬರಲು ಅಣಿಯಾಗುತ್ತಿದೆ.

ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ?

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದವರು ಚಿತ್ರದಲ್ಲಿದ್ದಾರೆ.

Whats_app_banner