ಕನ್ನಡ ಸುದ್ದಿ  /  ಮನರಂಜನೆ  /  ಅವಳು ಕೊನೆಗೂ ತಾಯಿ ಆದಳು, ಆರು ಪುಟಾಣಿಗಳೂ ಮಡಿಲು ಸೇರಿದವು; ಮೈಸೂರಿಗೆ ಓಡೋಡಿ ಬಂದು ಸಿಹಿ ಸುದ್ದಿ ಕೊಟ್ಟ ರಕ್ಷಿತ್‌ ಶೆಟ್ಟಿ

ಅವಳು ಕೊನೆಗೂ ತಾಯಿ ಆದಳು, ಆರು ಪುಟಾಣಿಗಳೂ ಮಡಿಲು ಸೇರಿದವು; ಮೈಸೂರಿಗೆ ಓಡೋಡಿ ಬಂದು ಸಿಹಿ ಸುದ್ದಿ ಕೊಟ್ಟ ರಕ್ಷಿತ್‌ ಶೆಟ್ಟಿ

ಬಹು ದಿನಗಳ ಬಳಿಕ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅದಕ್ಕಾಗಿಯೇ ಉಡುಪಿಯಿಂದ ಮೈಸೂರಿಗೆ ಬಂದಿದ್ದಾರೆ.

ಅವಳು ಕೊನೆಗೂ ತಾಯಿ ಆದಳು, ಆರು ಪುಟಾಣಿಗಳೂ ಮಡಿಲು ಸೇರಿದವು; ಮೈಸೂರಿಗೆ ಓಡೋಡಿ ಬಂದು ಸಿಹಿ ಸುದ್ದಿ ಕೊಟ್ಟ ರಕ್ಷಿತ್‌ ಶೆಟ್ಟಿ
ಅವಳು ಕೊನೆಗೂ ತಾಯಿ ಆದಳು, ಆರು ಪುಟಾಣಿಗಳೂ ಮಡಿಲು ಸೇರಿದವು; ಮೈಸೂರಿಗೆ ಓಡೋಡಿ ಬಂದು ಸಿಹಿ ಸುದ್ದಿ ಕೊಟ್ಟ ರಕ್ಷಿತ್‌ ಶೆಟ್ಟಿ

Rakshit Shetty: ಸ್ಯಾಂಡಲ್‌ವುಡ್‌ ನಟ ನಿರ್ದೇಶಕ, ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳ ಬಳಿಕ, ರಿಚರ್ಡ್‌ ಆಂಟನಿ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಶೀಘ್ರದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಸಿನಿಮಾದ ಅಪ್‌ಡೇಟ್‌ ನೀಡಲಿದ್ದೇವೆ ಎಂದೂ ಹೇಳಿಕೊಂಡಿದ್ದಾರೆ ರಕ್ಷಿತ್‌ ಶೆಟ್ಟಿ. ಇದೀಗ ಸಿಕ್ಕಾಪಟ್ಟೆ ಸಿನಿಮಾ ಕೆಲಸದ ನಡುವೆಯೂ ಮೈಸೂರಿಗೆ ಓಡೋಡಿ ಬಂದಿದ್ದಾರೆ. ಅದಕ್ಕೆ ಕಾರಣ, ಅವರು ಬಯಸಿದ್ದು ಕೊನೆಗೂ ಈಡೇರಿದೆ. ಆ ಖುಷಿಯನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ.

ಟ್ರೆಂಡಿಂಗ್​ ಸುದ್ದಿ

ಕಳೆದ ಎರಡು ವರ್ಷದ ಹಿಂದೆ ಅಂದರೆ 2022ರ ಜೂನ್‌ 10ರಂದು ರಕ್ಷಿತ್‌ ಶೆಟ್ಟಿಯ 777 ಚಾರ್ಲಿ ಸಿನಿಮಾ ತೆರೆಕಂಡಿತ್ತು. ಕನ್ನಡದ ಜತೆಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲೂ ಚಿತ್ರ ಮೂಡಿಬಂದಿತ್ತು. ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಚಿತ್ರದಲ್ಲಿನ ಶ್ವಾನವೂ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಈಗ ಅದೇ ಚಾರ್ಲಿ ಹೆಸರಿನ ನಾಯಿಯಿಂದ ಸಿಹಿ ಸುದ್ದಿ ಬಂದಿದೆ. ಅಂದರೆ, ಮುದ್ದಾದ 6 ಮರಿಗಳಿಗೆ ಚಾರ್ಲಿ ಜನ್ಮ ನೀಡಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ, ಮೈಸೂರಿಗೆ ಧಾವಿಸಿದ ರಕ್ಷಿತ್‌, ಮರಿಗಳನ್ನು ಕಣ್ತುಂಬಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದು ಎಲ್ಲರಿಗೂ ಆ ಪುಟಾಣಿ ಮರಿಗಳು ಮತ್ತು ಚಾರ್ಲಿಯ ದರ್ಶನ ಮಾಡಿಸಿದ್ದಾರೆ.

ಇದನ್ನೂ ಓದಿ: 4 ತಿಂಗಳಲ್ಲಿ ಮಲಯಾಳಂ ಚಿತ್ರರಂಗ ಗಳಿಸಿದ್ದು 1000 ಕೋಟಿ, ಕನ್ನಡ ಚಿತ್ರರಂಗ 100 ಕೋಟಿನೂ ದಾಟಿಲ್ವಲ್ಲ ಗುರೂ! ಹಿಂಗಾದ್ರೆ ಹೆಂಗೇ?- ಇಲ್ಲಿ ಕ್ಲಿಕ್‌ ಮಾಡಿ

ಆಕೆಗೆ ಮಕ್ಕಳಾಗಬೇಕೆಂದು ನಾವೂ ಬಯಸಿದ್ದೆವು..

777 ಚಾರ್ಲಿ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಚಾರ್ಲಿ, ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಇಷ್ಟು ವರ್ಷಗಳು ಕಳೆದರೂ ಚಾರ್ಲಿ ಮರಿ ಹಾಕಿರಲಿಲ್ಲ. ಈಗ ಆ ಸುಗಳಿಗೆ ಬಂದಿದೆ. ಇದನ್ನು ಹೇಳಲು ಲೈವ್‌ ಬಂದ ರಕ್ಷಿತ್, "ಚಾರ್ಲಿ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳಾಗುತ್ತ ಬಂತು. ಇಷ್ಟು ವರ್ಷ ಕಳೆದರೂ ಚಾರ್ಲಿ ಇನ್ನೂ ಯಾಕೆ ಮರಿ ಹಾಕ್ತಿಲ್ಲ ಅನ್ನೋ ಭಾವ ಕಾಡ್ತಾ ಇತ್ತು. ಅವಳು ತಾಯಿಯಾದರೆ, ಆಕೆಯ ಜರ್ನಿ ಪೂರ್ಣ ಆಗುತ್ತೆ. ಈ ಬಗ್ಗೆ ಕಿರಣ್‌ ರಾಜ್‌ಗೂ ಹೇಳಿದ್ದೆ. ಏಕೆಂದರೆ, ಆಕೆಗೆ ವಯಸ್ಸಾಗಿದ್ದರಿಂದ, ಏನಾಗುತ್ತೋ ಎಂದು ಗೊತ್ತಿರಲಿಲ್ಲ.

ಇದನ್ನೂ ಓದಿ: ಕನ್ನಡ ಕಿರುತೆರೆಯಲ್ಲಿ ಮರ್ಯಾದಾ ಪುರುಷೋತ್ತಮನ ಜೀವನಗಾಥೆ; ಶ್ರೀಮದ್‌ ರಾಮಾಯಣ ಮಹಾಕಾವ್ಯ ಎಲ್ಲಿ, ಯಾವಾಗಿನಿಂದ ಶುರು?

ಮೇ 9ರಂದು ಮರಿಗಳಿಗೆ ಜನ್ಮ ನೀಡಿದ ಚಾರ್ಲಿ

ಸದ್ಯ ಚಾರ್ಲಿ ಮೈಸೂರಿನಲ್ಲಿ ಟ್ರೇನರ್‌ ಪ್ರಮೋದ್‌ ಅವರ ಜತೆಗಿದೆ. ಅವರಿಗೂ ಆಗಾಗ ಫೋನ್‌ ಮಾಡಿ ಈ ಬಗ್ಗೆ ಕೇಳುತ್ತಲೇ ಇದ್ದೆ. ವಯಸ್ಸಾಗಿದ್ದರಿಂದ ಸಾಧ್ಯತೆ ಕಡಿಮೆ ಅಂದುಕೊಂಡಿದ್ವಿ. ಆದರೆ, ಅಚ್ಚರಿ ಎಂಬಂತೆ, ಕೊನೆಗೂ ಮೇ 9ರಂದು ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದ್ದಾಳೆ. ಆ ಮರಿಗಳನ್ನು ನೋಡಲೆಂದೇ ನಾನು ಈಗ ಮೈಸೂರಿಗೆ ಬಂದಿದ್ದೇನೆ" ಎಂದು ರಕ್ಷಿತ್‌ ಶೆಟ್ಟಿ ವಿಡಿಯೋದಲ್ಲಿ ಖುಷಿಯಲ್ಲಿಯೇ ಹೇಳಿಕೊಂಡಿದ್ದಾರೆ.

5 ಹೆಣ್ಣು 1 ಗಂಡು ಮರಿ..

ಲೈವ್‌ ವೇಳೆ ಚಾರ್ಲಿ ಮತ್ತು ಅದರ ಮರಿಗಳನ್ನು ತೋರಿಸಿದ್ದಾರೆ. ರಕ್ಷಿತ್‌ ಫೋನ್‌ನಲ್ಲಿ ಲೈವ್‌ ಬರ್ತಿದ್ದಂತೆ, ಚಾರ್ಲಿಗೂ ಅದ್ಯಾಕೋ ಕ್ಯಾಮರಾ ಕಡೆ ತಿರುಗಿಯೂ ನೋಡಲಿಲ್ಲ. ಸಿನಿಮಾ ಶೂಟಿಂಗ್‌ ಸಮಯದಲ್ಲಿಯೇ ಅವಳು ಎಷ್ಟೋ ಸಲ ಕ್ಯಾಮರಾ ಎದುರಿಸಿದ್ದಾಳೆ. ಈಗ ಅವಳಿಗೆ ಕ್ಯಾಮರಾ ಸಾಕಾಗಿದೆ ಎಂದೂ ಹೇಳಿ, ಆರು ಮರಿಗಳ ಪೈಕಿ 5 ಹೆಣ್ಣು ಮರಿ, ಒಂದು ಗಂಡು ಮರಿ ಜನಿಸಿವೆ ಎಂದೂ ಮಾಹಿತಿ ನೀಡಿದ್ದಾರೆ ರಕ್ಷಿತ್‌ ಶೆಟ್ಟಿ.

IPL_Entry_Point