ಕನ್ನಡ ಸುದ್ದಿ  /  ಮನರಂಜನೆ  /  ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

90 bidi manig nadi movie watch online: ಕಳೆದ ವರ್ಷ ತೆರೆಕಂಡ "ನೈಂಟಿ ಬಿಡಿ ಮನೀಗ್‌ ನಡಿ" ಚಿತ್ರವು ಇದೀಗ ಯೂಟ್ಯೂಬ್‌ನಲ್ಲಿ ರಿಲೀಸ್‌ ಆಗಿದ್ದು, ಟ್ರೆಂಡಿಂಗ್‌ನಲ್ಲಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದ ಈ ಚಿತ್ರ 100ಕೆಗೂ ಹೆಚ್ಚು ಆರ್ಗಾನಿಕ್ಸ್‌ ವೀಕ್ಷಣೆ ಪಡೆದಿದೆ.

ನೈಂಟಿ ಬಿಡಿ ಮನೀಗ್ ನಡಿ ಸಿನಿಮಾ ಉಚಿತವಾಗಿ ನೋಡಿ
ನೈಂಟಿ ಬಿಡಿ ಮನೀಗ್ ನಡಿ ಸಿನಿಮಾ ಉಚಿತವಾಗಿ ನೋಡಿ

ಬೆಂಗಳೂರು: ಕಳೆದ ವರ್ಷದ ಜೂನ್ ತಿಂಗಳಲ್ಲಿ ತೆರೆಕಂಡು ಸದ್ದು ಮಾಡಿದ್ದ 'ನೈಂಟಿ ಬಿಡಿ ಮನೀಗ್ ನಡಿ' ಸಿನಿಮಾ ಇದೀಗ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ವೈರಲ್‌ ಆಗುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಂಡು, ಭರ್ಜರಿ ಹವಾ ಮಾಡಿಕೊಂಡಿದ್ದ ಈ ಸಿನಿಮಾವನ್ನು ಎರಡು ವಾರಗಳ ಹಿಂದೆ ಪನೊರಮಾ ಸಿನಿಟೈಮ್ಸ್‌ (Panorama Cinetimes) ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಮಾಡಲಾಗಿತ್ತು. ಈಗ ಸಾಕಷ್ಟು ಜನರು ಈ ಸಿನಿಮಾವನ್ನು ಉಚಿತವಾಗಿ ಯೂಟ್ಯೂಬ್‌ನಲ್ಲಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಕನ್ನಡ ಸಿನಿಮಾ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿ, ಟ್ರೆಂಡಿಂಗ್‌ನಲ್ಲಿದೆ. ದಿನದಿಂದ ದಿನಕ್ಕೆ ವೀವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ, "ಆರ್ಗಾನಿಕ್ ಲಕ್ಷ ವೀವ್ಸ್" (100K) ದಾಟಿಸಿಕೊಂಡು ಭರ್ಜರಿಯಾಗಿ ಮುನ್ನುಗ್ಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ನೈಂಟಿ ಬಿಡಿ ಮನೀಗ್‌ ನಡಿ ಸಿನಿಮಾ

'ಅಮ್ಮಾ ಟಾಕೀಸ್ ಬಾಗಲಕೋಟ' ಬ್ಯಾನರಿನಡಿ ಈ ಸಿನಿಮಾವನ್ನು ರತ್ನಮಾಲಾ ಬಾದರದಿನ್ನಿ ನಿರ್ಮಿಸಿದ್ದರು. ಈ "90"ಯಲ್ಲಿ ಹಾಸ್ಯ ನಟ 'ವೈಜನಾಥ ಬಿರಾದಾರ್', ತನ್ನ ಎಪ್ಪತ್ತರ ವಯಸ್ಸಲ್ಲಿ ದಾಖಲೆ ಎಂಬಂತೆ ಕಮರ್ಷಿಯಲ್‌ ಹೀರೋ ಆಗಿ ಮಿಂಚಿದ್ದಾರೆ. "ಸಿಂಗಲ್ ಕಣ್ಣಾ ಹಾರಸ್ತಿ, ಡಬ್ಬಲ್ ಹಾರನ್ ಬಾರಸ್ತೀ" ಎಂಬ ಪಕ್ಕಾ ಉತ್ತರ ಕರ್ನಾಟಕದ ಜವಾರಿ ಹಾಡಿಗೆ, ತನ್ನ ಎಪ್ಪತ್ತರ ವಯಸ್ಸೂ ಕೂಡ ಸೋಲುವಂತೆ, ಭರ್ಜರಿ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ.

ಈ ಸಿನಿಮಾದಲ್ಲಿ ನಗುತ್ತಾ, ನಗಿಸುತ್ತಾ, ಅಳುತ್ತಾ, ಅಳಿಸುತ್ತಾ ಸಂದೇಶ ಹೇಳಿದ್ದ ಇವರ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಇಳಿ ವಯಸ್ಸಲ್ಲೂ ಬತ್ತದ ಅವರ ಉತ್ಸಾಹಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ಅಧ್ಯಕ್ಷ ಶರಣ್ ಸೇರಿದಂತೆ ಚಿತ್ರರಂಗದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಗಾಂಧಿನಗರದ 'ಅನುಪಮ ಥಿಯೇಟರ್' ಮುಂದೆ ರಿಲೀಸ್ ದಿನ 'ನಲವತ್ತು ಅಡಿ ಕಟೌಟ್' ಹಾಕಿಸಿದ್ದ ಚಿತ್ರತಂಡ, ವೈಜನಾಥ ಬಿರಾದರರ ವೃತ್ತಿಜೀವನಕ್ಕೆ ಈ ಮೂಲಕ ಗೌರವ ಸೂಚಿಸಿತ್ತು.

ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸಿದ್ದ ಈ ಚಿತ್ರವು, ಕುಡಿತ, ಜೂಜು, ಡ್ರಗ್ಸ್‌, ಸ್ಮೋಕಿಂಗ್‌ನ ಕರಾಳ ಜಗತ್ತನ್ನು ತೆರೆದಿಟ್ಟಿತ್ತು. ಮನರಂಜನೆ ನೀಡುತ್ತಲೇ ಸಂದೇಶ ನೀಡಿತ್ತು. ಈ ಸಿನಿಮಾದಲ್ಲಿ ವೈಜನಾಥ ಬಿರಾದಾರ್ ಜೊತೆ ಕರಿಸುಬ್ಬು, ಧರ್ಮ,ನೀತಾ ಮೈಂದರ್ಗಿ, ಆರ್.ಡಿ ಬಾಬು, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ರಿಷಬ್ ಬಾದರದಿನ್ನಿ, ಪ್ರೀತು ಪೂಜಾ, ವಿವೇಕ್ ಜಂಬಗಿ, ಮುರುಳಿ ಹೊಸಕೋಟೆ,ರಕ್ಷಿತ್ ಗೌಡ, ರವಿದೀಪ್ ದಳವಾಯಿ, ಲೋಕೇಶ್ ಮಾಲೂರು ಮುಂತಾದ ಕಲಾವಿದರು ನಟಿಸಿದ್ದಾರೆ.

ಉಚಿತವಾಗಿ ಇಲ್ಲೇ ನೋಡಿ ನೈಂಟಿ ಬಿಡಿ ಮನೀಗ್‌ ನಡಿ ಸಿನಿಮಾ

ಈ ಸಿನಿಮಾ ವಿಶೇಷವಾಗಿ ಉತ್ತರ ಕರ್ನಾಟಕದ ಜನತೆಗೆ ಹೆಚ್ಚು ಇಷ್ಟವಾಗಿತ್ತು. ಉತ್ತರ ಕರ್ನಾಟಕದಲ್ಲಿ ನಡೆವ ಗಟ್ಟಿ ಕಥೆಗೆ, ಟೈಟ್ ಸ್ಕ್ರೀನ್ ಪ್ಲೇ ಕೂರಿಸಿ, ಕಚಕುಳಿ ಇಡುವ ಸಂಭಾಷಣೆ ಅಲ್ಲಿನ ಜನರಿಗೆ ಮೋಡಿ ಮಾಡಿತ್ತು. ಈ ಸಿನಿಮಾದ ಕುರಿತು ಉತ್ತಮ ವಿಮರ್ಶೆ ದೊರಕಿತ್ತು. ಕೃಷ್ಣ ನಾಯ್ಕರ್ ಛಾಯಾಗ್ರಹಣ, ಕಿರಣ್ ಶಂಕರ್ ಮತ್ತು ಶಿವು ಭೇರಗಿ ಸಂಗೀತ, ಭೂಷಣ್ ಕೊರಿಯೋಗ್ರಫಿ, ಯುಡಿವಿ ವೆಂಕಟೇಶ್ ಸಂಕಲನ, ರಾಕಿ ರಮೇಶ್ ಸ್ಟಂಟ್ಸ್, ವೀರ್ ಸಮರ್ಥ್ ಹಿನ್ನೆಲೆ ಸಂಗೀತವು ನೈಂಟಿ ಚಿತ್ರಕ್ಕೆ ಸಾಥ್‌ ನೀಡಿತ್ತು.

ಈ ಸಿನಿಮಾದಲ್ಲಿ 3 ಹಾಡು, ಮೂರು ಭರ್ಜರಿ ಆಕ್ಷನ್‌ ಸೀನ್‌ ಇದ್ದು, ಪಕ್ಕಾ ಕಮರ್ಶಿಯಲ್ ಮನರಂಜನೆ ಸಿನಿಮಾ ಆಗಿರೋದ್ರಿಂದ ಉತ್ತರ ಕರ್ನಾಟಕದ ಪ್ರೇಕ್ಷಕರು ಬಲುಬೇಗ ಅಪ್ಪಿಕೊಂಡರು. ಅಂದಿಗೆ ಚಿತ್ರ ಐವತ್ತು ದಿನ ಪೂರೈಸಿ ಸಂಭ್ರಮ ಪಟ್ಟಿತ್ತು. ಇದೀಗ ಯೂಟ್ಯೂಬ್ ಮೂಲಕ ಮತ್ತೆ ಸದ್ದು ಮಾಡುತ್ತಾ, "ನೈಂಟಿ ನಶೆ" ಏರಿಸುತ್ತಿದೆ.

IPL_Entry_Point