ಜೈಲಿನಲ್ಲಿ ಹಾಯಾಗಿ ಸಿಗರೇಟ್‌ ಸೇದುತ್ತಿರುವ ದರ್ಶನ್‌ ಅಂಡ್‌ ಗ್ಯಾಂಗ್‌; ತಲೆಗೆ ವಿಗ್‌ ಇಲ್ಲದ ಫೋಟೋ ವೈರಲ್‌-sandalwood news a photo of actor darshan thoogudeepa smoking a cigarette in central jail has gone viral mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜೈಲಿನಲ್ಲಿ ಹಾಯಾಗಿ ಸಿಗರೇಟ್‌ ಸೇದುತ್ತಿರುವ ದರ್ಶನ್‌ ಅಂಡ್‌ ಗ್ಯಾಂಗ್‌; ತಲೆಗೆ ವಿಗ್‌ ಇಲ್ಲದ ಫೋಟೋ ವೈರಲ್‌

ಜೈಲಿನಲ್ಲಿ ಹಾಯಾಗಿ ಸಿಗರೇಟ್‌ ಸೇದುತ್ತಿರುವ ದರ್ಶನ್‌ ಅಂಡ್‌ ಗ್ಯಾಂಗ್‌; ತಲೆಗೆ ವಿಗ್‌ ಇಲ್ಲದ ಫೋಟೋ ವೈರಲ್‌

ಜೈಲಿನಲ್ಲಿ ನಟ ದರ್ಶನ್‌ ಒಂದು ಕೈಯಲ್ಲಿ ಸಿಗರೇಟ್‌ ಹಿಡಿದು ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಹಸನ್ಮುಖಿಯಾಗಿ ಕುಳಿತ ಭಂಗಿಯ ಫೋಟೋ ವೈರಲ್‌ ಆಗಿದೆ . ಬರೀ ದರ್ಶನ್‌ ಮಾತ್ರವಲ್ಲದೆ, ಅವರ ಜತೆಗೆ ಇನ್ನೂ ಮೂವರು ಇರುವುದು ಕಂಡಿದ್ದು, ಫೋಟೋ ನೋಡಿದರೆ ಪರಪ್ಪನ ಅಗ್ರಹಾರದಲ್ಲಿ ಇವರಿಗೆ ವಿಐಪಿ ಟ್ರೀಟ್‌ಮೆಂಟ್‌ ಸಿಗುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಜೈಲಿನಲ್ಲಿ ನಟ ದರ್ಶನ್‌ ಒಂದು ಕೈಯಲ್ಲಿ ಸಿಗರೇಟ್‌ ಹಿಡಿದು ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಹಸನ್ಮುಖಿಯಾಗಿ ಕುಳಿತ ಭಂಗಿಯ ಫೋಟೋ ಇದಾಗಿದೆ. ಬರೀ ದರ್ಶನ್‌ ಮಾತ್ರವಲ್ಲದೆ, ಅವರ ಜತೆಗೆ ಇನ್ನೂ ಮೂವರು ಇರುವುದು ಕಂಡಿದೆ.
ಜೈಲಿನಲ್ಲಿ ನಟ ದರ್ಶನ್‌ ಒಂದು ಕೈಯಲ್ಲಿ ಸಿಗರೇಟ್‌ ಹಿಡಿದು ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಹಸನ್ಮುಖಿಯಾಗಿ ಕುಳಿತ ಭಂಗಿಯ ಫೋಟೋ ಇದಾಗಿದೆ. ಬರೀ ದರ್ಶನ್‌ ಮಾತ್ರವಲ್ಲದೆ, ಅವರ ಜತೆಗೆ ಇನ್ನೂ ಮೂವರು ಇರುವುದು ಕಂಡಿದೆ.

Darshan thoogudeepa Viral Photo: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಜೈಲು ಸೇರಿ ಎರಡು ತಿಂಗಳ ಮೇಲಾಯಿತು. ಈಗಾಗಲೇ ಈ ಪ್ರಕರಣದ ತನಿಖೆ ಕೊನೇ ಹಂತಕ್ಕೆ ಬಂದಿದ್ದು, ಬಂಧಿತರ ಜಾಮೀನಿಗೂ ಕೋರ್ಟ್‌ ನಿರಾಕರಣೆ ಮಾಡಿದೆ. ಈ ನಡುವೆ ಇದೇ ದರ್ಶನ್‌ ಅಂಡ್‌ ಗ್ಯಾಂಗ್‌ ಜೈಲಿನಲ್ಲಿ ಹೇಗಿದೆ? ಎಂಬುದಕ್ಕೆ ಈ ವರೆಗೂ ಯಾವೊಂದು ಫೋಟೋ ಲಭ್ಯವಾಗಿರಲಿಲ್ಲ. ಇದೀಗ ದರ್ಶನ್‌ ಜೈಲಿನಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾರೆ ಎಂಬುದರ ಕುರಿತು ಫೋಟೋವೊಂದು ವೈರಲ್‌ ಆಗಿದೆ.

ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ?

ಸದ್ಯ ವೈರಲ್‌ ಆಗಿರುವ ಫೋಟೋ ನೋಡಿದರೆ, ರೇಣುಕಾಸ್ವಾಮಿ ಹತ್ಯೆಗೈದ ಆರೋಪಿಗಳಿಗೆ ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೀಟ್‌ಮೆಂಟ್‌ ಸಿಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಅಂದರೆ, ಜೈಲಿನಲ್ಲಿ ನಟ ದರ್ಶನ್‌ ಒಂದು ಕೈಯಲ್ಲಿ ಸಿಗರೇಟ್‌ ಹಿಡಿದು ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಹಸನ್ಮುಖಿಯಾಗಿ ಕುಳಿತ ಭಂಗಿಯ ಫೋಟೋ ಇದಾಗಿದೆ. ಬರೀ ದರ್ಶನ್‌ ಮಾತ್ರವಲ್ಲದೆ, ಅವರ ಜತೆಗೆ ಇನ್ನೂ ಮೂವರು ಇರುವುದು ಕಂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದ ಕೇಸ್.‌ ಅದರಲ್ಲೂ ನಟ ದರ್ಶನ್‌ ಈ ಕೊಲೆಯ A2 ಆರೋಪಿ. ಹೀಗಾಗಿ ಇಡೀ ರಾಜ್ಯದ ಜನತೆ ಈ ಪ್ರಕರಣದ ಮೇಲೆ ಕಣ್ಣಿಟ್ಟಿದ್ದಾರೆ. ದರ್ಶನ್‌ಗೆ ಶಿಕ್ಷೆ ಆಗುತ್ತಾ ಆಗಲ್ವಾ ಎಂದು ಊಹಿಸುತ್ತಿದ್ದಾರೆ. ಈ ಕೇಸ್‌ನ ಸಣ್ಣ ಸಣ್ಣ ಡೆವಲೆಂಪ್‌ಮೆಂಟ್‌ಗಳೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದೇ ಕೇಸ್‌ನ ತನಿಖೆ ಮಾಡಿದಷ್ಟು, ಮತ್ತಷ್ಟು ಮಗದಷ್ಟು ಪುರಾವೆಗಳು ಸಿಗುತ್ತಲೇ ಹೊರಟಿವೆ.

ಹೈ ಪ್ರೋಫೈಲ್‌ ಕೇಸ್‌ ಆಗಿರುವುದರಿಂದ ಪೊಲೀಸ್‌ ಇಲಾಖೆಯೂ ಈ ಪ್ರಕರಣವನ್ನು ಬಹಳ ಗಂಭೀರವಾಗಿಯೇ ಪರಿಗಣಿಸಿದ್ದು, ಇನ್ನೇನು ಅಂತಿಮವಾಗಿ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಸಲಿದೆ. ಇಷ್ಟೆಲ್ಲದರ ನಡುವೆಯೇ ನಟ ದರ್ಶನ್‌ ಅವರ ಜೈಲಿನಲ್ಲಿನ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಂದು ಕೈಲ್ಲಿ ಸಿಗರೇಟ್‌ ಹಿಡಿದು, ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಕೂತ ಭಂಗಿಯ ಫೋಟೋ ಇದಾಗಿದೆ.

ತಲೆ ಬೋಳಿಸಿದ್ದು ನಿಜ..

ನಟ ದರ್ಶನ್‌ ಅವರಿಗೆ ವಿಶೇಷ ಬ್ಯಾರಕ್‌ ನೀಡಲಾಗಿದೆ ಎಂದು ಈ ಹಿಂದೆ ಪೊಲೀಸ್‌ ಇಲಾಖೆ ಹೇಳಿತ್ತು. ಆ ಬ್ಯಾರಕ್‌ನಲ್ಲಿ ಬೇರೆಯವರಿಗೆ ಅವಕಾಶ ಇರದು. ಆದರೆ, ಇದೀಗ ವೈರಲ್‌ ಆಗಿರುವ ಫೋಟೋದಲ್ಲಿ ಕೊಲೆ ಪ್ರಕರಣದ ಇನ್ನು ಕೆಲವು ಆರೋಪಿಗಳ ಜತೆಗೆ ದರ್ಶನ್‌ ಕೂತಿದ್ದಾರೆ. ಇದೇ ವೇಳೆ ನಟ ದರ್ಶನ್‌ ಅವರ ತಲೆ ಬೋಳಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ ವೈರಲ್‌ ಫೋಟೋದಲ್ಲಿ ನಟ ದರ್ಶನ್‌ ವಿಗ್‌ ಧರಿಸಿಲ್ಲ.