ಪುನೀತ್ ರಾಜ್‌ಕುಮಾರ್ ಬರ್ತ್‌ಡೇಗೆ ಗೌರಿ ಚಿತ್ರತಂಡದಿಂದ ನೃತ್ಯ ನಮನ; ಸಮರ್ಜಿತ್ ಲಂಕೇಶ್ ಜತೆ ತಾನ್ಯಾ ಹೋಪ್ ಡಾನ್ಸ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಪುನೀತ್ ಅವರ ಹುಟ್ಟುಹಬ್ಬಕ್ಕೆ ಗೌರಿ ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ಸಮರ್ಜಿತ್ ಲಂಕೇಶ್ ಜೊತೆ ನಟಿ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ.

Gowri Movie: ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್, ಗೌರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇಂದ್ರಜಿತ್ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೀಗ ಇದೇ ಸಿನಿಮಾತಂಡ ಪವರ್‌ಸ್ಟಾರ್‌ಗೆ ವಿಶೇಷ ನಮನ ಸಲ್ಲಿಸುತ್ತಿದೆ.
ಮಾರ್ಚ್ 17, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಪುನೀತ್ ಅವರ ಹುಟ್ಟುಹಬ್ಬಕ್ಕೆ ಗೌರಿ ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ಸಮರ್ಜಿತ್ ಲಂಕೇಶ್ ಜೊತೆ ನಟಿ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.
ನಾನು ಅಪ್ಪು ಅವರ ಅಭಿಮಾನಿ ಎಂದು ಮಾತನಾಡಿದ ಸಮರ್ಜಿತ್, “ಪುನೀತ್ ಅವರ ಡ್ಯಾನ್ಸ್ ನನಗೆ ಸ್ಪೂರ್ತಿ. ಹಾಗಾಗಿ ಅವರ ಹುಟ್ಟುಹಬ್ಬದಂದು ಗೌರಿ ಚಿತ್ರತಂಡದಿಂದ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ” ಎಂದರು.
“ಇಂದ್ರಜಿತ್ ಅವರ ಮಗ ಸಮರ್ಜಿತ್ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರವಿದು. ಸಮರ್ಜಿತ್ ಬಹಳ ಲವಲವಿಕೆಯ ಹುಡುಗ. ಈ ಹಾಡಿನಲ್ಲಿ ಸಮರ್ಜಿತ್ ಅವರ ಜೊತೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ನಾನು ಸಹ ಪುನೀತ್ ಅವರ ಅಭಿಮಾನಿ” ಎಂದು ತಾನ್ಯ ಹೋಪ್ ತಿಳಿಸಿದರು.
“ಈಗಾಗಲೇ ಗೌರಿ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಆದರೆ ಇಂದು ಸಿನಿಮಾಗಿಂತ ಈ ಹಾಡಿನ ಬಗ್ಗೆ ಹೇಳಲು ಬಯಸುತ್ತೇನೆ. ಮುಂಬರುವ ಪುನೀತ್ ಅವರ ಹುಟ್ಟುಹಬ್ಬಕ್ಕೆ ಗೌರಿ ಚಿತ್ರತಂಡದಿಂದ ವಿಶೇಷ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಪುನೀತ್ ರಾಜಕುಮಾರ್ ಅವರ ಚಿತ್ರಗಳ ಪ್ರಸಿದ್ದ ಹಾಡುಗಳಿಗೆ ಸಮರ್ಜಿತ್ ಹಾಗೂ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಈ ವಿಶೇಷ ಗೀತೆಯ ತಾಲೀಮು ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣವಾಗಲಿದೆ” ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಮರ್ಜಿತ್ ಲಂಕೇಶ್ ಅವರಿಗೆ ನಾಯಕಿಯಾಗಿ ಸಾನ್ಯ ಅಯ್ಯರ್ ನಟಿಸುತ್ತಿದ್ದಾರೆ. ಜೆಸ್ಸಿಗಿಫ್ಟ್ ಮತ್ತು ಚಂದನ್ ಶೆಟ್ಟಿ ಸಂಗೀತ, ಎ. ಜೆ ಶೆಟ್ಟಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮಧು ರಾಜಶೇಖರ್, ಮಾಸ್ತಿ ಅವರ ಸಂಭಾಷಣೆ, ಕೆ. ಕಲ್ಯಾಣ್, ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಚಿತ್ರಕ್ಕಿರಲಿದೆ.
ನೈಜ ಘಟನೆ ಆಧರಿತ ಸಿನಿಮಾ
2017ರ ಸೆಪ್ಟೆಂಬರ್ 5ರಂದು 55 ವರ್ಷ ವಯಸ್ಸಿನ ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಮನೆಯ ಹೊರಗೆ ಬಂದಾಗ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದರು. ಈ ಪ್ರಕರಣ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ಸುದ್ದಿಯಾಗಿತ್ತು. ಇದೀಗ ಇದೇ ಪ್ರಕರಣವನ್ನು ಆಯ್ಕೆಮಾಡಿಕೊಂಡು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಗೌರಿ ಹೆಸರಿನ ಸಿನಿಮಾ ಮಾಡ ಹೊರಟಿದ್ದಾರಾ ಇಂದ್ರಜಿತ್ ಲಂಕೇಶ್.
