ಉದ್ದ ಗಡ್ಡ ಬಿಟ್ಟು Ellige Payana Yavudo Daari ಎಂದ ಅಭಿಮನ್ಯು; ಅಷ್ಟಕ್ಕೂ ಹಿಂಗ್ಯಾಕಾದ್ರು ಸ್ಟಾರ್‌ ನಿರ್ದೇಶಕ ಕಾಶಿನಾಥ್‌ ಪುತ್ರ-sandalwood news abhhimanyuu kashinaths ellige payana yavudo daari movie teaser released directed by kiren s suryaa mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಉದ್ದ ಗಡ್ಡ ಬಿಟ್ಟು Ellige Payana Yavudo Daari ಎಂದ ಅಭಿಮನ್ಯು; ಅಷ್ಟಕ್ಕೂ ಹಿಂಗ್ಯಾಕಾದ್ರು ಸ್ಟಾರ್‌ ನಿರ್ದೇಶಕ ಕಾಶಿನಾಥ್‌ ಪುತ್ರ

ಉದ್ದ ಗಡ್ಡ ಬಿಟ್ಟು Ellige Payana Yavudo Daari ಎಂದ ಅಭಿಮನ್ಯು; ಅಷ್ಟಕ್ಕೂ ಹಿಂಗ್ಯಾಕಾದ್ರು ಸ್ಟಾರ್‌ ನಿರ್ದೇಶಕ ಕಾಶಿನಾಥ್‌ ಪುತ್ರ

Ellige Payana Yavudo Daari Teaser: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್‌ ಇದೀಗ ಹೊಸ ಸಿನಿಮಾ ಮೂಲಕ ಆಗಮಿಸಿದ್ದಾರೆ. ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಟೀಸರ್‌ ಹೊತ್ತು ಬಂದಿದ್ದಾರೆ.

ಅಭಿಮನ್ಯು ಕಾಶಿನಾಥ್‌ ನಟನೆಯ Ellige Payana Yavudo Daari ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.
ಅಭಿಮನ್ಯು ಕಾಶಿನಾಥ್‌ ನಟನೆಯ Ellige Payana Yavudo Daari ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.

Ellige Payana Yavudo Daari: ಕನ್ನಡ ಕಂಡ ಖ್ಯಾತ ನಟ ಮತ್ತು ನಿರ್ದೇಶಕರಲ್ಲಿ ಒಬ್ಬರು ದಿವಂಗತ ಕಾಶಿನಾಥ್‌. ಸ್ಯಾಂಡಲ್‌ವುಡ್‌ನ ಹಲವು ನಿರ್ದೇಶಕರಿಗೆ ಸ್ಫೂರ್ತಿಯಾಗಿ ಇಂದಿಗೂ ಅವರೊಳಗೆ ಹಸಿರಾಗಿದ್ದಾರೆ. ಹೀಗೆ ನಟನೆ ಮತ್ತು ನಿರ್ದೇಶನದಲ್ಲಿ ಮೋಡಿ ಮಾಡಿದ್ದ ಇದೇ ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಇದೀಗ ಹೊಸ ಸಿನಿಮಾ ಮೂಲಕ ಬಹು ವರ್ಷಗಳ ಬಳಿಕ ಚಂದನವನಕ್ಕೆ ಆಗಮಿಸಿದ್ದಾರೆ. ಆ ಸಿನಿಮಾ ಹೆಸರು ಎಲ್ಲಿಗೆ ಪಯಣ ಯಾವುದೋ ದಾರಿ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.

ಇದು ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ಚಿತ್ರ. ಬೇರೆಯದ್ದೇ ಥರನಾದ ವಿಶಿಷ್ಟ ಪಾತ್ರದ ಮೂಲಕ ಅಭಿಮನ್ಯು ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಈ ಟೀಸರ್‌ನಲ್ಲಿ ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದ ಗಡ್ಡ ಬಿಟ್ಟು ಕೊಂಚ ಡಿಫರೆಂಟ್‌ ಅವತಾರದಲ್ಲಿ ಎದುರಾಗಿದ್ದಾರೆ ಅಭಿಮನ್ಯು. ಥ್ರಿಲ್ಲರ್ ಕಥನವನ್ನು ಒಳಗೊಂಡಿರುವ ಚಿತ್ರವೆಂಬ ಸಂದೇಶವೊಂದು, ಈ ಸಿನಿಮಾದಲ್ಲಿ ಕಾಣಿಸುತ್ತಿದೆ. ಈ ಟೀಸರ್ ಜೊತೆ ಜೊತೆಗೇ ಒಂದಷ್ಟು ಸೂಕ್ಷ್ಮ ಸಂಗತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ಚೊಚ್ಚಲ ನಿರ್ದೇಶನ

ಈಗಾಗಲೇ ಹನ್ನೆರಡು ವರ್ಷಗಳ ಕಾಲ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿರುವ ಎಸ್ ಸೂರ್ಯ ನಿರ್ದೇಶನದ ಚೊಚ್ಚಲ ಚಿತ್ರವಿದು. ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದೊಂದು ಲವ್ ಕಂ ಥ್ರಿಲ್ಲರ್ ಶೈಲಿಯ ಸಿನಿಮಾ. ಇದುವರೆಗೆ ನೋಡಿದ್ದು ನಿಜವೋ ಸುಳ್ಳೋ ಎಂಬಂತೆ ಬೆರಗಿಗೆ ದೂಡುವ ರೀತಿಯಲ್ಲಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ ನಿರ್ದೇಶಕರು.

ಚಿತ್ರದ ಹಾಡಿಗೆ ಕಿಚ್ಚನ ಧ್ವನಿ

ವಿಶೇಷವೆಂದರೆ, ಕಿಚ್ಚ ಸುದೀಪ್ ಈ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ವಾಸುಕಿ ವೈಭವ್ ಹಾಗೂ ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ಶ್ರೀಲಕ್ಷ್ಮಿ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಎರಡು ಹಾಡುಗಳಿಗೆ ಖುದ್ದು ನಿರ್ದೇಶಕ ಕಿರಣ್ ಎಸ್ ಸೂರ್ಯ ಸಾಹಿತ್ಯ ಬರೆದಿದ್ದಾರೆ. ಸುದರ್ಶನ ಆರ್ಟ್ಸ್ ಬ್ಯಾನರಿನಡಿಯಲ್ಲಿ ಜತಿನ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ.

ತಾರಾಗಣ, ತಾಂತ್ರಿಕ ವರ್ಗ ಹೇಗಿದೆ?

ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ. ಪೋಸ್ಟ್ ಪ್ರೊಡಕ್ಷನ್ ಹಂತ ದಾಟಿಕೊಂಡಿರುವ ಈ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ.

mysore-dasara_Entry_Point