ಮಾಲಾಶ್ರೀ ನಟನೆಯ ನೈಟ್‌ ಕರ್ಫ್ಯೂ ಸಿನಿಮಾ ನಾಳೆ ಬಿಡುಗಡೆ; ಸೇನಾ ವೈದ್ಯೆಯ ಸಾಹಸ ಕಥನ, ಕನ್ನಡ- ತೆಲುಗು ಭಾಷೆಗಳಲ್ಲಿ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ಮಾಲಾಶ್ರೀ ನಟನೆಯ ನೈಟ್‌ ಕರ್ಫ್ಯೂ ಸಿನಿಮಾ ನಾಳೆ ಬಿಡುಗಡೆ; ಸೇನಾ ವೈದ್ಯೆಯ ಸಾಹಸ ಕಥನ, ಕನ್ನಡ- ತೆಲುಗು ಭಾಷೆಗಳಲ್ಲಿ ರಿಲೀಸ್‌

ಮಾಲಾಶ್ರೀ ನಟನೆಯ ನೈಟ್‌ ಕರ್ಫ್ಯೂ ಸಿನಿಮಾ ನಾಳೆ ಬಿಡುಗಡೆ; ಸೇನಾ ವೈದ್ಯೆಯ ಸಾಹಸ ಕಥನ, ಕನ್ನಡ- ತೆಲುಗು ಭಾಷೆಗಳಲ್ಲಿ ರಿಲೀಸ್‌

Malashree Night Curfew Movie: ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್‌ಸ್ಟಾರ್‌ ಆಕ್ಷನ್‌ ಕ್ವೀನ್‌ ಮಾಲಾಶ್ರೀ ನಟನೆಯ ನೈಟ್‌ ಕರ್ಫ್ಯೂ ಸಿನಿಮಾವು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಪ್ರಿಲ್‌ 12ರಂದು ಬಿಡುಗಡೆಯಾಗುತ್ತಿದೆ.

ಮಾಲಾಶ್ರೀ ನಟನೆಯ ನೈಟ್‌ ಕರ್ಫ್ಯೂ ಸಿನಿಮಾ ನಾಳೆ ಬಿಡುಗಡೆ
ಮಾಲಾಶ್ರೀ ನಟನೆಯ ನೈಟ್‌ ಕರ್ಫ್ಯೂ ಸಿನಿಮಾ ನಾಳೆ ಬಿಡುಗಡೆ

ಬೆಂಗಳೂರು: ಕನ್ನಡದ ಲೇಡಿ ಸೂಪರ್‌ಸ್ಟಾರ್‌ ಮಾಲಾಶ್ರೀ ನಟನೆಯ ಹೊಸ ಸಿನಿಮಾ ಯಾವುದೂ ಇತ್ತೀಚೆಗೆ ನೋಡಿಲ್ಲ ಎಂದು ಬೇಸರದಲ್ಲಿರುವವರಿಗೆ ಗುಡ್‌ ನ್ಯೂಸ್‌. ಮಾಲಾಶ್ರೀ ನಟನೆಯ ಹೊಸ ಸಿನಿಮಾವೊಂದು ನಾಳೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಆ ಸಿನಿಮಾದ ಹೆಸರು ನೈಟ್‌ ಕರ್ಫ್ಯೂ.

ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್‌ಸ್ಟಾರ್‌ ಆಕ್ಷನ್ ಕ್ವೀನ್ ಮಾಲಾಶ್ರೀ ಸಾಕಷ್ಟು ಸಮಯದ ಬಳಿಕರ "ನೈಟ್ ಕರ್ಫ್ಯೂ’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಸೇನೆಯಲ್ಲಿದ್ದು ಸೇವೆ ಸಲ್ಲಿಸಿದ ವೈದ್ಯರ ಪಾತ್ರದಲ್ಲಿ ಮಾಲಾಶ್ರೀ ನಟಿಸಿದ್ದಾರೆ. ಸಾಹಸ ಹಾಗೂ ಕುತೂಹಲದ ಕಥೆ ಹೊಂದಿದ್ದು, ಕೋವಿಡ್ 19 ಸಂದರ್ಭದಲ್ಲಿ ನಡೆದಂತಹ ಸತ್ಯ ಘಟನೆಗಳನ್ನು ತೆಗೆದುಕೊಂಡು ಅದನ್ನು ದೃಶ್ಯ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ಈ ಸಿನಿಮಾದ ರಚನೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ರವೀಂದ್ರವೆಂಶಿ. ಇವರು ಈ ಹಿಂದೆ ’ಪುಟಾಣಿ ಸಫಾರಿ’ ’ಮಠ’ ಮತ್ತು ’ವಾಸಂತಿ ನಲಿದಾಗ’ ಸಿನಿಮಾಗಳಿಗೆ ನಿರ್ದೇಶಕರಾಗಿದ್ದರು. ನೈಟ್‌ ಕರ್ಫ್ಯೂ ಸಿನಿಮಾವನ್ನೂ ಸೆನ್ಸಾರ್ ಮಂಡಳಿಯು ವೀಕ್ಷಿಸಿದ್ದು ಯುಎ ಪ್ರಮಾಣಪತ್ರ ನೀಡಿದೆ.

ಬಿಲ್ಡರ್ ಹಾಗೂ ಡೆವಲಪರ್ ಆಗಿರುವ ಬೆಂಗಳೂರಿನ ಬಿ.ಎಸ್.ಚಂದ್ರಶೇಖರ್ ನಿರ್ಮಾಣ ಮಾಡಿದ್ದ ಮಕ್ಕಳ ಸಿನಿಮಾ ’ಪುಟಾಣಿ ಸಫಾರಿ’ ಅನೇಕ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿತ್ತು. ಅಲ್ಲದೆ ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಇದರ ಪ್ರೇರಣೆಯಿಂದಲೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಮಾಲಾಶ್ರೀ ಜತೆ ರಂಜನಿ ರಾಘವನ್‌ ನಟನೆ

ಶಕ್ತಿಗಾಗಿ ಮಾಲಾಶ್ರೀ, ಯುಕ್ತಿಗಾಗಿ ರಂಜನಿ ರಾಘವನ್ ಸಹ ಡಾಕ್ಟರ್ ಆಗಿ ನಟನೆ ಮಾಡಿದ್ದಾರೆ. ಇವರೊಂದಿಗೆ ಪ್ರಮೋದ್‌ಶೆಟ್ಟಿ, ರಂಗಾಯಣರಘು, ಸಾಧುಕೋಕಿಲ, ಸಹನಶ್ರೀ, ಅಶ್ವಿನ್‌ರಮೇಶ್, ವರ್ಧನ್‌ತೀರ್ಥಹಳ್ಳಿ, ಮಂಜುಪಾವಗಡ, ಮಂಡ್ಯಸಿದ್ದು, ಸದಾನಂದ, ಗಂಗರಾಜು, ನಿತಿನ್, ವಸಂತಕುಮಾರ್.ಸಿ, ಬೇಬಿ ಮೌಲ್ಯಮಂಜುನಾಥ, ಜ್ಯೋತಿ, ರಜನಿ, ಶಿವರಾಜ್‌ಶೆಟ್ಟಿ, ಮಹೇಶ್.ಎಂ, ಅಲ್ಸೂರು ರಾಜಕುಮಾರ್ ಅಭಿನಯಿಸಿದ್ದಾರೆ.

ಹಿನ್ನಲೆ ಸಂಗೀತ ಎಂ.ಎಸ್.ಮಾರುತಿ, ಛಾಯಾಗ್ರಹಣ ಪ್ರಮೋದ್‌ ಭಾರತೀಯ, ಸಾಹಸ ಜಾಗ್ವಾರ್‌ ಸಣ್ಣಪ್ಪ, ಸಂಕಲನ ಸಿ.ರವಿಚಂದ್ರನ್ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ದಗೊಂಡಿದ್ದು, ಏಪ್ರಿಲ್ 12ರಂದು ತೆರೆ ಕಾಣುತ್ತಿದೆ.

ಈ ವಾರ ಬಿಡುಗಡೆಯಾಗುವ ಕನ್ನಡ ಸಿನಿಮಾಗಳು

ನಾಳೆ ನೈಟ್‌ ಮಾತ್ರವಲ್ಲದೆ ನೆನಪಿರಲಿ ಪ್ರೇಮ್‌ ನಾಯಕನಾಗಿ ನಟಿಸಿರುವ ಅಪ್ಪ ಐ ಲವ್‌ ಯು ಸಿನಿಮಾ ಕೂಡ ರಿಲೀಸ್‌ ಆಗುತ್ತಿದೆ. ಟಗರು ಚಿತ್ರದಲ್ಲಿ ನಟಿಸಿದ್ದ ಮಾನ್ವಿತಾ ಹರೀಶ್‌ ಈ ಚಿತ್ರದಲ್ಲಿ ನಾಯಕಿ. ಅಥರ್ವ್ ಆರ್ಯ 'ಅಪ್ಪಾ ಐ ಲವ್ ಯೂ' ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ.

ನೈಟ್‌ ಕರ್ಫ್ಯೂ, ಅಪ್ಪ ಐ ಲವ್‌ ಜತೆಗೆ ಸ್ಕ್ಯಾಮ್‌ 1770 ಸಿನಿಮಾ ಕೂಡ ನಾಳೆ ಬಿಡುಗಡೆಯಾಗುತ್ತಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್ (ದಡ್ಡ ಪ್ರವೀಣ) ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾನೆ. ಇದಲ್ಲದೆ ಮುಕ್ತ ಮನಸ್ಸು ಎಂಬ ಹೊಸಬರ ಸಿನಿಮಾವೂ ಈ ವಾರ ಬಿಡುಗಡೆಯಾಗುತ್ತಿದೆ. ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 5ರ ಸ್ಪರ್ಧಿ ಮೈಸೂರಿನ ಮೋಹನ್‌ ರಂಗನಾಥ್‌ ಈ ಸಿನಿಮಾದ ಹೀರೋ.

Whats_app_banner