ಕನ್ನಡ ಸುದ್ದಿ  /  Entertainment  /  Sandalwood News Actor Abhishek Ambareesh Aviva Bidapa Wedding Preparation Begin Kannada Celebrities Mnk

Abhishek Ambareesh: ಮದುಮಗನಾದ ಅಭಿಷೇಕ್‌ ಅಂಬರೀಶ್;‌ ಜೆಪಿ ನಗರದ ಅಂಬಿ ಮನೆಯಲ್ಲೀಗ ಮದುವೆ ಸಂಭ್ರಮ

ಬೆಂಗಳೂರಿನ ಜೆ.ಪಿ. ನಗರದ ಅಂಬಿ ನಿವಾಸದಲ್ಲೀಗ ಅಭಿಷೇಕ್‌ ಅಂಬರೀಶ್‌ ಅವರ ಮದುವೆ ತಯಾರಿ ಶುರುವಾಗಿದೆ. ಇಡೀ ಮನೆಯನ್ನು ಹೂವುಗಳಿಂದ ಅಲಂಕರಿಸಲಾಗಿದ್ದು, ಅರಿಶಿನ ಶಾಸ್ತ್ರವೂ ನೆರವೇರಿದೆ.

ಮದುಮಗನಾದ ಅಭಿಷೇಕ್‌ ಅಂಬರೀಶ್;‌ ಜೆಪಿ ನಗರದ ಅಂಬಿ ಮನೆಯಲ್ಲೀಗ ಮದುವೆ ಸಂಭ್ರಮ
ಮದುಮಗನಾದ ಅಭಿಷೇಕ್‌ ಅಂಬರೀಶ್;‌ ಜೆಪಿ ನಗರದ ಅಂಬಿ ಮನೆಯಲ್ಲೀಗ ಮದುವೆ ಸಂಭ್ರಮ

Abhishek Ambareesh: ರೆಬೆಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿಡಪ ಮದುವೆಗೆ ದಿನಗಣನೆ ಆರಂಭವಾಗಿದೆ. ಜೂನ್‌ 5ರಂದು ನೆರವೇರಲಿರುವ ಈ ಜೋಡಿಯ ವಿವಾಹಕ್ಕೆ ಸಂಬಂಧಿಸಿದಂತೆ ಎರಡೂ ಮನೆಯಲ್ಲಿಯೂ ತಯಾರಿ ಕೆಲಸವೂ ಜೋರಾಗಿದೆ. ಅದರಂತೆ ಇಂದಿನಿಂದ (ಜೂನ್‌ 2) ಮದುವೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: ಒಟಿಟಿಯಲ್ಲಿ ಪೊನ್ನಿಯನ್‌ ಸೆಲ್ವನ್‌ 2 ಉಚಿತ ಸ್ಟ್ರೀಮಿಂಗ್‌ ಶುರು

ಸೋಷಿಯಲ್‌ ಮೀಡಿಯಾದಲ್ಲಿ ಅಭಿಷೇಕ್‌ ಮದುವೆಯ ತಯಾರಿಯ ಕೆಲವು ಫೋಟೋಗಳು ಹರಿದಾಡುತ್ತಿದ್ದು, ಅರಿಶಿನ ಶಾಸ್ತ್ರವನ್ನೂ ನೆರವೇರಿಸಲಾಗಿದೆ. ಮನೆಯನ್ನೂ ದೀಪಾಲಂಕಾರದಿಂದ ಸಿಂಗರಿಸಲಾಗಿದ್ದು, ಹೂವು ಮತ್ತು ಹಸಿರು ತಳಿರು ತೋರಣದಿಂದ ಮನೆಯ ಮುಂದೆ ಚಪ್ಪರ ಹಾಕುವ ಕೆಲಸ ನಡೆಯುತ್ತಿದೆ. ಜೂನ್‌ 4ರ ಬೆಳಗ್ಗೆ ಚಪ್ಪರ ಪೂಜೆ ನೆರವೇರಲಿದೆ. ಈಗಾಗಲೇ ಮದುವೆ ಮನೆಗೆ ಎರಡೂ ಕುಟುಂಬಗಳ ಸಂಬಂಧಿಕರು ಮತ್ತು ಸಿನಿಮಾ ಕ್ಷೇತ್ರದ ಆಪ್ತರು ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಬಾಡಿಗೆ ಜನರನ್ನು ಕರೆತಂದು ರ್‍ಯಾಲಿ ಮಾಡಿದರೆ ದೇಶದ ಗೌರವ ಹೆಚ್ಚಾಗಲ್ಲ, ಕುಸ್ತಿಪಟುಗಳ ಕಡೆಗೂ ಗಮನಹರಿಸಿ; ಕಿಶೋರ್‌ ಕಿಡಿ

ಅಂದಹಾಗೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಜೋಡಿಯ ಅದ್ದೂರಿ ನಿಶ್ಚಿತಾರ್ಥ ನೆರವೇರಿತ್ತು. ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಆಗಮಿಸಿ ಜೋಡಿಗೆ ಹರಸಿ ಹಾರೈಸಿದ್ದರು. ಇದೀಗ ಜೂನ್‌ 5ರಂದು ಮಾಣಿಕ್ಯ ಚಾಮರ ವಜ್ರದಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ. 9:30ರಿಂದ 10:30ರ ನಡುವೆ ಸಲ್ಲುವ ಕರ್ಕಾಟಕ ಶುಭ ಲಗ್ನದ ಮುಹೂರ್ತದಲ್ಲಿ ಅವಿವಾಗೆ ಅಭಿಷೇಕ್‌ ಮಾಂಗಲ್ಯಧಾರಣೆ ಮಾಡಲಿದ್ದಾರೆ.

ಇದಾದ ಬಳಿಕ ಜೂನ್‌ 7ರಂದು ಪ್ಯಾಲೇಸ್‌ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಜೂನ್‌ 16ರಂದು ಮಂಡ್ಯದಲ್ಲಿ ಬೀಗರ ಊಟದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಅವಿವಾ ಬಿದ್ದಪ್ಪ ಜೊತೆ ಚಳಿ ಚಳಿ ಡ್ಯೂಯೆಟ್‌ ಹಾಡಿದ ಯಂಗ್‌ ರೆಬೆಲ್‌ ಸ್ಟಾರ್‌

ಇಂದು (ಮೇ 29) ರೆಬೆಲ್‌ ಸ್ಟಾರ್‌ ಅಂಬರೀಶ್‌ 71ನೇ ಹುಟ್ಟುಹಬ್ಬ. ಅಭಿಮಾನಿಗಳು, ಸಿನಿ ಗಣ್ಯರು ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ಕಲಿಯುಗ ಕರ್ಣನನ್ನು ನೆನೆದಿದ್ದಾರೆ. ಈ ವಿಶೇಷ ದಿನದಂದು ಅಂಬರೀಶ್‌ ಪುತ್ರ ಅಭಿಷೇಕ್‌, ತಂದೆಯ ಸಿನಿಮಾ ಹಾಡುಗಳ ದೃಶ್ಯಗಳನ್ನು ರೀ ಕ್ರಿಯೇಟ್‌ ಮಾಡಿದ್ದು ಈ ವಿಡಿಯೋ ವೈರಲ್‌ ಆಗುತ್ತಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point