ಕನ್ನಡ ಸುದ್ದಿ  /  ಮನರಂಜನೆ  /  Kangaroo Trailer: ‘ಕನ್ನಡತಿ’ ಧಾರಾವಾಹಿ ಬಳಿಕ ‘ಕಾಂಗರೂ’ ಆದಿತ್ಯ ಜತೆ ಬರ್ತಿದ್ದಾರೆ ರಂಜನಿ ರಾಘವನ್

Kangaroo Trailer: ‘ಕನ್ನಡತಿ’ ಧಾರಾವಾಹಿ ಬಳಿಕ ‘ಕಾಂಗರೂ’ ಆದಿತ್ಯ ಜತೆ ಬರ್ತಿದ್ದಾರೆ ರಂಜನಿ ರಾಘವನ್

ಆದಿತ್ಯ ಮತ್ತು ರಂಜನಿ ರಾಘವನ್‌ ನಾಯಕ ನಾಯಕಿಯಾಗಿ ನಟಿಸಿರುವ ‘ಕಾಂಗರೂ’ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ. ಮೇ 3ರಂದು ಚಿತ್ರ ರಿಲೀಸ್ ಆಗುವ ವಿಚಾರವನ್ನೂ ನಿರ್ಮಾಪಕರು ಘೋಷಣೆ ಮಾಡಿದ್ದಾರೆ.

Kangaroo Trailer: ‘ಕನ್ನಡತಿ’ ಧಾರಾವಾಹಿ ಬಳಿಕ ‘ಕಾಂಗರೂ’ ಆದಿತ್ಯ ಜತೆ ಬರ್ತಿದ್ದಾರೆ ರಂಜನಿ ರಾಘವನ್
Kangaroo Trailer: ‘ಕನ್ನಡತಿ’ ಧಾರಾವಾಹಿ ಬಳಿಕ ‘ಕಾಂಗರೂ’ ಆದಿತ್ಯ ಜತೆ ಬರ್ತಿದ್ದಾರೆ ರಂಜನಿ ರಾಘವನ್

Kangaroo Trailer: ಆದಿತ್ಯ ಮತ್ತು ಕಿರುತೆರೆಯಲ್ಲಿ ಮೋಡಿ ಮಾಡಿದ್ದ ನಟಿ ರಂಜನಿ ರಾಘವನ್‌ ನಟಿಸಿರುವ ಕಾಂಗರೂ ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಹಿರಿಯ ಪಿಆರ್‌ಓ ಸುಧೀಂದ್ರ ವೆಂಕಟೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕರ್ನಾಟಕ ಸಣ್ಣ ಕೈಗಾರಿಕೆ ಉದ್ಯಮದ ಮಾಜಿ ಅಧ್ಯಕ್ಷ ಅರಸಪ್ಪ, ಪೀಣ್ಯ ಕೈಗಾರಿಕಾ ಉದ್ಯಮದ ಅಧ್ಯಕ್ಷ ಆರಿಫ್, ನಿರ್ಮಾಪಕ ಸಿಲ್ಕ್ ಮಂಜು ಸೇರಿ ಹಲವರು ಸಮಾರಂಭದಲ್ಲಿದ್ದರು. 

ಟ್ರೆಂಡಿಂಗ್​ ಸುದ್ದಿ

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿಒಟ್ಟು ಆರು ಜನ ಸ್ನೇಹಿತರು ಸೇರಿ ಕಾಂಗರೂ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರವಿ ಕೀಲರ ಮಂಡ್ಯ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ ಹಾಗೂ ಕೆ ಜಿ ಆರ್ ಗೌಡ ಜಂಟಿಯಾಗಿ ಸಿನಿಮಾ ನಿರ್ಮಿಸಿದ್ದಾರೆ.‌

ಕಥೆ ರೂಪದಲ್ಲಿ ಅನಿಮೇಷನ್‌ ಸಿನಿಮಾ

“ನಿರ್ದೇಶಕ ಕಿಶೋರ್ ಅವರು ಕಥೆ ಕೇಳಿ ಎಂದರು. ನಾನು ಸರಿ ಎಂದೆ. ಆನಂತರ ಕೇಳುವುದು ಬೇಡ ಸರ್ ಸಿನಿಮಾನೇ ತೋರಿಸುತ್ತೇನೆ ಎಂದರು. ನನಗೆ ಆಶ್ಚರ್ಯವಾಯಿತು. ಚಿತ್ರದ ಕಥೆಯನ್ನು ಅನಿಮೇಶನ್ ಮೂಲಕ ತೋರಿಸಿದ ಪ್ರಥಮ ನಿರ್ದೇಶಕ ಇವರೆ ಇರಬಹುದು. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರ ಸೇರಿದಂತೆ ಎಲ್ಲಾ ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ” ಎನ್ನುತ್ತಾರೆ ಆದಿತ್ಯ.

ಕಾಂಗರೂ ಚಿತ್ರಕ್ಕೆ ಆರು ಜನ ನಿರ್ಮಾಪಕರು

ಈ ಬಗ್ಗೆ ಮಾತನಾಡುವ ಚನ್ನಕೇಶವ, “ನಾವು ಆರು ಜನ ಸ್ನೇಹಿತರು. ನಾವೆಲ್ಲಾ ಸಣ್ಣ ಕೈಗಾರಿಕೋದ್ಯಮಿಗಳು. ಪೀಣ್ಯದಲ್ಲಿ ನಮ್ಮ ಫ್ಯಾಕ್ಟರಿ ಇದೆ. ಸಿನಿಮಾ ರಂಗ ನಮಗೆ ಹೊಸತು. ಸ್ನೇಹಿತರ ಮೂಲಕ ಪರಿಚಿತರಾದ ನಿರ್ದೇಶಕ ಕಿಶೋರ್ ಅವರು ಈ ಚಿತ್ರದ ಕಥೆ ಹೇಳಿದ ರೀತಿ ನಮಗೆ ಇಷ್ಟವಾಯಿತು. ಚಿತ್ರ ನಿರ್ಮಾಣಕ್ಕೆ ಮುಂದಾದೆವು. ನಟ ಆದಿತ್ಯ ಹಾಗೂ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ. ಮೇ 3 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ” ಎಂದು ಆರು ಜನ ನಿರ್ಮಾಪಕರ ಪರವಾಗಿ ಚೆನ್ನಕೇಶವ ಮಾತನಾಡಿದರು.

ಸಸ್ಪೆನ್ಸ್‌ ಥ್ರಿಲ್ಲರ್‌ ಕಾಂಗರೂ

“ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ.‌ ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆಯಾದರೂ, ನಮ್ಮ ಚಿತ್ರ ಸ್ವಲ್ಪ ವಿಭಿನ್ನ. ಫ್ಯಾಮಿಲಿ ಆಡಿಯನ್ಸ್ ಗಾಗಿಯೇ ಮಾಡಿರುವ ಕಥೆ ಇದು. ಇನ್ನು ಕಾಂಗರೂ ಮೃದುಸ್ವಭಾವದ ಪ್ರಾಣಿ. ಯಾರ ತಂಟೆಗೂ ಹೋಗುವುದಿಲ್ಲ. ಆದರೆ ತನ್ನ ಮಕ್ಕಳ ತಂಟೆಗೆ ಬಂದರೆ ಅದು ಯಾರನ್ನು ಬಿಡುವುದಿಲ್ಲ. ಇದೇ ಚಿತ್ರದ ಕಥಾ ಸಾರಾಂಶ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ‌. ನಾಯಕ ಆದಿತ್ಯ, ನಾಯಕಿ ರಂಜನಿ ರಾಘವನ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ. ಸಾಧುಕೋಕಿಲರ ಸಂಗೀತ ನಿರ್ದೇಶನ ಹಾಗೂ ಉದಯಲೀಲಾ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್” ಎಂದರು ನಿರ್ದೇಶಕ ಕಿಶೋರ್ ಮೇಗಳಮನೆ.

ಐದನೇ ಚಿತ್ರದ ಖುಷಿಯಲ್ಲಿ ರಂಜನಿ

ನಾನು ಈ ಚಿತ್ರದಲ್ಲಿ ಮನೋವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದು ನಾನು ನಾಯಕಿಯಾಗಿ ನಟಿಸಿರುವ ಐದನೇ ಚಿತ್ರ ಎಂದರು ನಾಯಕಿ ರಂಜನಿ ರಾಘವನ್. ಚಿತ್ರದಲ್ಲಿ ನಟಿಸಿರುವ ನಾಗೇಂದ್ರ ಅರಸ್, ಅಶ್ವಿನ್ ಹಾಸನ್, ಶುಭಲಕ್ಷ್ಮೀ, ಗೌತಮ್ ಮುಂತಾದವರು "ಕಾಂಗರೂ" ಚಿತ್ರದ ಕುರಿತು ಮಾತನಾಡಿದರು.

IPL_Entry_Point