ಹಾಸಿಗೆ ಹಿಡಿದ ಜೂನಿಯರ್‌ ಪುನೀತ್‌ ರಾಜ್‌ಕುಮಾರ್‌! ಎರಡೂ ಕಿಡ್ನಿ ಕಳೆದುಕೊಂಡ ನಟ ಆನಂದ್‌ ಆರ್ಯ ಸ್ಥಿತಿ ಈಗ ಹೇಗಿದೆ?-sandalwood news actor anand arya popularly known as junior puneeth rajkumar was admitted to the hospital mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಹಾಸಿಗೆ ಹಿಡಿದ ಜೂನಿಯರ್‌ ಪುನೀತ್‌ ರಾಜ್‌ಕುಮಾರ್‌! ಎರಡೂ ಕಿಡ್ನಿ ಕಳೆದುಕೊಂಡ ನಟ ಆನಂದ್‌ ಆರ್ಯ ಸ್ಥಿತಿ ಈಗ ಹೇಗಿದೆ?

ಹಾಸಿಗೆ ಹಿಡಿದ ಜೂನಿಯರ್‌ ಪುನೀತ್‌ ರಾಜ್‌ಕುಮಾರ್‌! ಎರಡೂ ಕಿಡ್ನಿ ಕಳೆದುಕೊಂಡ ನಟ ಆನಂದ್‌ ಆರ್ಯ ಸ್ಥಿತಿ ಈಗ ಹೇಗಿದೆ?

ಜೂನಿಯರ್‌ ಪುನೀತ್‌ ರಾಜ್‌ಕುಮಾರ್‌ ಎಂದೇ ಖ್ಯಾತಿ ಪಡೆದ ನಟ ಆನಂದ್‌ ಆರ್ಯ ಅನಾರೋಗ್ಯ ಕಾರಣದಿಂದ ಆಸ್ಪತ್ರೆ ಸೇರಿದ್ದಾರೆ. ಈ ಹಿಂದೆ ಛಾಯಾ ಮತ್ತು ಮಾರಕಾಸ್ತ್ರ ಸಿನಿಮಾಗಳಲ್ಲಿ ಆನಂದ್ ನಟಿಸಿದ್ದರು. ಸಾಕಷ್ಟು ಶೋಗಳಲ್ಲಿ ಪುನೀತ್‌ ರೀತಿಯಲ್ಲಿಯೇ ಕಂಡು ಎಲ್ಲರನ್ನು ರಂಜಿಸಿದ್ದಾರೆ ಈ ನಟ.

ಹಾಸಿಗೆ ಹಿಡಿದ ಜೂನಿಯರ್‌ ಪುನೀತ್‌ ರಾಜ್‌ಕುಮಾರ್‌! ಕಿಡ್ನಿ ವೈಫಲ್ಯಕ್ಕೆ ಒಳಗಾದ ಆನಂದ್‌ ಆರ್ಯ
ಹಾಸಿಗೆ ಹಿಡಿದ ಜೂನಿಯರ್‌ ಪುನೀತ್‌ ರಾಜ್‌ಕುಮಾರ್‌! ಕಿಡ್ನಿ ವೈಫಲ್ಯಕ್ಕೆ ಒಳಗಾದ ಆನಂದ್‌ ಆರ್ಯ

Junior Puneeth Rajkumar: ಪುನೀತ್‌ ರಾಜ್‌ಕುಮಾರ್‌ ಕಳೆದುಕೊಂಡು ಕರುನಾಡಿನ ಅಭಿಮಾನಿಗಳು ನೋವಿನಲ್ಲಿದ್ದಾರೆ. ಆ ನೋವನ್ನು ಮರೆಸುವ ದೃಷ್ಟಿಯಿಂದ ಜೂನಿಯರ್‌ ಪುನೀತ್‌ ರಾಜ್‌ಕುಮಾರ್‌ಗಳು ಜನರನ್ನು ರಂಜಿಸುತ್ತಿದ್ದಾರೆ. ಪೈಕಿ ಆನಂದ್‌ ಆರ್ಯ ಸಹ ಒಬ್ಬರು. ಹಲವು ಸಿನಿಮಾಗಳಲ್ಲಿಯೂ ನಟಿಸಿರುವ ಆನಂದ್‌, ನೋಡಲು ಥೇಟ್‌ ಪುನೀತ್‌ ರಾಜ್‌ಕುಮಾರ್‌ ಅವರನ್ನೇ ಹೋಲುತ್ತಾರೆ. ಆ ಕಾರಣಕ್ಕೆ, ಜನ ಅವರಿಗೆ ಹೆಚ್ಚು ಪ್ರೀತಿ ಕೊಟ್ಟಿದ್ದರು. ಇದೀಗ ಇದೇ ಜೂನಿಯರ್‌ ಅಪ್ಪು, ಹಾಸಿಗೆ ಹಿಡಿದಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ರೀತಿ ಸ್ಟೈಲ್‌ ಮಾಡುತ್ತ, ಅವರಂತೆ ವಾಕ್‌ ಮಾಡಿ, ಅವರನ್ನೇ ಇಮಿಟೇಟ್‌ ಮಾಡುತ್ತಿದ್ದರು ಆನಂದ್‌ ಆರ್ಯ. ಸಾಕಷ್ಟು ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ರೀತಿಯಲ್ಲಿಯೇ ಡೈಲಾಗ್‌ ಹೊಡೆದು ಎಲ್ಲರನ್ನು ರಂಜಿಸುತ್ತಿದ್ದರು. ಪುನೀತ್‌ ರೀತಿ ಇದ್ದಾರೆ ಎಂಬ ಕಾರಣಕ್ಕೆ ಒಂದಷ್ಟು ಸಿನಿಮಾ ಅವಕಾಶಗಳನ್ನೂ ಪಡೆದಿದ್ದರು ಆನಂದ್‌ ಆರ್ಯ. ಮಾರಕಾಸ್ತ್ರ ಮತ್ತು ಛಾಯಾ ಎಂಬ ಎರಡು ಸಿನಿಮಾಗಳಲ್ಲಿ ಛಾನ್ಸ್‌ ಗಿಟ್ಟಿಸಿಕೊಂಡಿದ್ದರು. ಈಗ ಗಂಭೀರ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದಾರೆ.

ಮಾಲಾಶ್ರೀ ಜತೆ ಮಾರಕಾಸ್ತ್ರದಲ್ಲಿ ನಟನೆ

ಶ್ರಾವ್ಯ ಕಂಬೈನ್ಸ್ ಬ್ಯಾನರ್‌ನಲ್ಲಿ ಕೋಮಲ ನಟರಾಜ್ ಅವರು ನಿರ್ಮಿಸಿದ್ದ ಸಿನಿಮಾ ಮಾರಕಾಸ್ತ್ರ. ಇದಕ್ಕೂ ಮೊದಲು ಮಾಯಾ ಸಿನಿಮಾದಲ್ಲಿ ನಟಿಸಿದ್ದರು ಆನಂದ್‌ ಆರ್ಯ. ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಹೊಂದಿದ್ದ ಗುರುಮೂರ್ತಿ ಸುನಾಮಿ, ಮಾರಕಾಸ್ತ್ರ ಸಿನಿಮಾ ಮೂಲಕ ಚಂದನವನಕ್ಕೆ ಬಂದಿದ್ದರು. ಮಾಲಾಶ್ರೀ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಕಳೆದ ವರ್ಷ ಈ ಸಿನಿಮಾ ತೆರೆಕಂಡಿತ್ತು.

ಅಷ್ಟಕ್ಕೂ ಆನಂದ್‌ ಆರ್ಯಗೆ ಆಗಿದ್ದೇನು?

ಕಳೆದ ನಾಲ್ಕು ವರ್ಷಗಳಿಂದ ರಕ್ತದೊತ್ತಡದಿಂದ ನಟ ಆನಂದ್‌ ಆರ್ಯ ಬಳಲುತ್ತಿದ್ದಾರೆ. ನಿಯಮಿತವಾಗಿ ಔಷಧೋಪಚಾರವನ್ನೂ ಪಾಲಿಸುತ್ತ ಬಂದಿದ್ದಾರೆ. ಆದರೆ, ಇತ್ತೀಚಿನ ಕೆಲ ದಿನಗಳ ಹಿಂದೆ ಶೂಟಿಂಗ್‌ ಸಮಯದಲ್ಲಿ ಬಿಪಿ ಮಾತ್ರೆ ತೆಗದುಕೊಳ್ಳುವುದನ್ನೇ ಬಿಟ್ಟಿದ್ದರು. ಹಾಗೆ ಮಾತ್ರೆ ಬಿಟ್ಟಿದ್ದೇ ಇದೀಗ ಅವರನ್ನು ಆಸ್ಪತ್ರೆಗೆ ತಂದು ಮಲಗಿಸಿದೆ. ಮಾತ್ರೆ ಬಿಟ್ಟ ಬಳಿಕ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ಐಸಿಯುಗೆ ಶಿಫ್ಟ್‌ ಮಾಡಲಾಗಿತ್ತು. ಪರೀಕ್ಷೆ ಮಾಡಿದ ವೈದ್ಯರು, ಎರಡೂ ಕಿಡ್ನಿ ಫೇಲ್‌ ಆಗಿದೆ ಎಂದು ತಿಳಿಸಿದ್ದಾರೆ. ಕಿಡ್ನಿ ಕಸಿ ಮಾಡಿಸಬೇಕಿದೆಯಂತೆ. ಜತೆಗೆ ಡಯಾಲಿಸಿಸ್‌ ಸಹ ನಡೆಯುತ್ತಿದೆ ಎಂದು ಫಿಲ್ಮೀ ಬೀಟ್‌ ಕನ್ನಡ ವರದಿ ಮಾಡಿದೆ. 

ವೃತ್ತಿಯಲ್ಲಿ ಚಾಲಕರಾಗಿರುವ ಆನಂದ್‌ ಆರ್ಯ ಅವರಿಗೆ ಪತ್ನಿ ಹಾಗೂ ಒಬ್ಬ ಮಗಳಿದ್ದಾಳೆ. ಹೀಗೆ ಹಾಸಿಗೆ ಹಿಡಿದ ಬಳಿಕ ಸಾಕಷ್ಟು ಮಂದಿ ಆನಂದ್‌ ಆರ್ಯ ಅವರಿಗೆ ಕಾಲ್‌ ಮಾಡಿ, ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸುತ್ತಿದ್ದಾರೆ. ಜತೆಗೆ ಹಣಕಾಸಿನ ನೆರವಿನ ನಿರೀಕ್ಷೆಯಲ್ಲಿದ್ದಾರೆ.

mysore-dasara_Entry_Point