ಕನ್ನಡ ಸುದ್ದಿ  /  ಮನರಂಜನೆ  /  ಹಿಂದುತ್ವವನ್ನು ಟೀಕಿಸುವ ಭರದಲ್ಲಿ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ನಟ ಚೇತನ್‌ ಅಹಿಂಸಾ

ಹಿಂದುತ್ವವನ್ನು ಟೀಕಿಸುವ ಭರದಲ್ಲಿ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ನಟ ಚೇತನ್‌ ಅಹಿಂಸಾ

ಹಿಂದುತ್ವವು ಮುಸ್ಲಿಮರು ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ ಎನ್ನುವ ಭರದಲ್ಲಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ನಟ ಚೇತನ್‌ ಅಹಿಂಸಾ.

ಹಿಂದುತ್ವವನ್ನು ಟೀಕಿಸುವ ಭರದಲ್ಲಿ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ನಟ ಚೇತನ್‌ ಅಹಿಂಸಾ
ಹಿಂದುತ್ವವನ್ನು ಟೀಕಿಸುವ ಭರದಲ್ಲಿ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ನಟ ಚೇತನ್‌ ಅಹಿಂಸಾ

Chetan Ahimsa on Hindutva: ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ, ತಮ್ಮ ನೇರ ಮತ್ತು ತೀಕ್ಷ್ಣ ಪೋಸ್ಟ್‌ಗಳಿಂದಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಸಿಎಂ ಸಿದ್ಧರಾಮಯ್ಯ ಅವರನ್ನು ಸೋಮಾರಿ ಸಿದ್ದು ಎಂದು ಟೀಕೆ ಮಾಡಿ, ತಾವೇ ಕಟು ಟೀಕೆಗಳನ್ನು ಎದುರಿಸಿದ್ದ ಚೇತನ್‌ ಅಹಿಂಸಾ, ಇದೀಗ ಹಿಂದುತ್ವದ ಬಗ್ಗೆ ಪೋಸ್ಟ್‌ ಹಂಚಿಕೊಂಡು, ತಮ್ಮ ನಿಲುವು, ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೀಗಿದೆ ಚೇತನ್‌ ಅವರ ಪೋಸ್ಟ್‌

ಟ್ರೆಂಡಿಂಗ್​ ಸುದ್ದಿ

ಹಿಂದುತ್ವದ ಬಗ್ಗೆ ಚೇತನ್‌ ಹೇಳಿದ್ದೇನು?

1. ಹಿಂದುತ್ವವು ಮುಸ್ಲಿಮರು ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ: (ಧಾರ್ಮಿಕ ಅಲ್ಪಸಂಖ್ಯಾತರನ್ನ)

2. ದೋಷಪೂರಿತ ಕನ್ನಡ ಹೋರಾಟಗಾರರು ಮಾರ್ವಾಡಿಗಳು ಮತ್ತು ಸಿಂಧಿಗಳನ್ನು ಖಳನಾಯಕರನ್ನಾಗಿ ಮಾಡುತ್ತಾರೆ: (ಶ್ರೀಮಂತ ವಲಸಿಗರನ್ನ)

3. ದೋಷಪೂರಿತ ಜಾತಿ ವಿರೋಧಿ ಹೋರಾಟಗಾರರು ಬ್ರಾಹ್ಮಣರನ್ನು ಖಳನಾಯಕರನ್ನಾಗಿ ಮಾಡುತ್ತಾರ: (ಜಾತಿ ಶ್ರೇಣಿವ್ಯವಸ್ಥೆಯ ಗಣ್ಯರನ್ನ)

4. ನಾವು ಸಮಾನತಾವಾದಿಗಳು ಅಸಮಾನತೆಯ ಇಡೀ ವ್ಯವಸ್ಥೆಯನ್ನು ಖಳನಾಯಕನ್ನಾಗಿ ಮಾಡಬೇಕು— ಯಾವುದೇ ಸಮುದಾಯವಲ್ಲ.

ಬಿಜೆಪಿಗಿಂತ ಕಾಂಗ್ರೆಸ್‌ ಜಾಸ್ತಿ ಕೆಟ್ಟದಾಗಿದೆ..

"ಯಾರಾದರೂ 'ದ್ವೇಷದ ವಿರುದ್ಧ' ಮತ ಚಲಾಯಿಸಿದಾಗ, ಆ ವ್ಯಕ್ತಿಗೆ ಬಿಜೆಪಿ ಏಕಾಂಗಿ, ವ್ಯಾಪಕವಾದ ಶತ್ರು ಎಂದರ್ಥ; ಇದರರ್ಥ ಆ ವ್ಯಕ್ತಿಯು ಕಾಂಗ್ರೆಸ್ ಅಥವಾ ಇನ್ನೊಂದು ಮನುವಾದಿ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದರ್ಥ- ಇದರರ್ಥ ಅದು ಬಂಡವಾಳಶಾಹಿ/ ಪುರುಷಪ್ರಧಾನ/ ಬ್ರಹ್ಮಣ್ಯ/ ಭ್ರಷ್ಟಾಚಾರ/ ರಾಜವಂಶಗಳು/ ಪರಿಸರ ವಿರೋಧಿ/ ಹಿಂದಿಯನಿಸಂ/ ಇತ್ಯಾದಿಗಳಿಗೆ ನೀಡಿದ ಮತ. ಬಹುತೇಕ ಎಲ್ಲ ವಿಷಯಗಳಲ್ಲೂ ದ್ವೇಷಪೂರಿತ ಬಿಜೆಪಿಗಿಂತ ಕಾಂಗ್ರೆಸ್ ಜಾಸ್ತಿ ಕೆಟ್ಟದಾಗಿದೆ ಅಥವಾ ಅಷ್ಟೇ ಕೆಟ್ಟದಾಗಿದೆ"

ಸಿಎಂ ಸಿದ್ದುಗೆ ಸೋಮಾರಿ ಎಂದ ಚೇತನ್‌

"ಹಿಂದೂ ವ್ಯವಸ್ಥೆ ಮತ್ತು ಮನುವಾದಿಗಳು (ಕಾಂಗ್ರೆಸ್, ಎಎಪಿ, ಇತ್ಯಾದಿ) ಪ್ರಧಾನಿ ಮೋದಿಯವರನ್ನು 'ಹಿಟ್ಲರ್' ಎಂದು ಕರೆಯುವುದು ಸಹಜ. (1930-40ರ ದಶಕದಲ್ಲಿ ಹಿಟ್ಲರ್ ಮತ್ತು ನಾಜಿಗಳು 3 ಕೋಟಿಗೂ ಹೆಚ್ಚು ಜನರನ್ನು ಕೊಂದಿದ್ದರು; (2002ರ ಆಸ್ಟರಿಸ್ಕೊಂದಿಗೆ) ಮೋದಿ ನೇರವಾಗಿ 0 ಜನರನ್ನು ಕೊಂದಿದ್ದಾರೆ) ಆದರೆ 6 ವರ್ಷಗಳಲ್ಲಿ ಯಾವುದೇ ಪರಿವರ್ತನೆ ಮಾಡದ ಸಿಎಂ ಸಿದ್ದರಾಮಯ್ಯ ಅವರನ್ನು ನಾನು 'ಸೋಮಾರಿ' ಎಂದು ಕರೆದರೆ, ಅದು ಸೂಕ್ತವಲ್ಲ. ಬೂಟಾಟಿಕೆ"

ಪೆನ್‌ಡ್ರೈವ್‌ ಪ್ರಕರಣದ ಬಗ್ಗೆಯೂ ಮಾತು

"ಪ್ರಸ್ತುತ ನಡೆಯುತ್ತಿರುವ ಪೆನ್ ಡ್ರೈವ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಶಿವರಾಮೇ ಗೌಡ ಅವರ ಆಡಿಯೋ ಇಂದು ರಾಜಕೀಯವು ಹೇಗೆ ಕೊಳಕು ಮತ್ತು ದುರಾಸೆಯಿಂದ ತುಂಬಿದೆ ಎಂಬುದನ್ನು ಬಹಿರಂಗಪಡಿಸುತ್ತದೆ, ಈ ರಾಜಕಾರಣಿಗಳು ಅಧಿಕಾರವನ್ನು ಹಿಡಿಯಲು ಮತ್ತು ಎದುರಾಳಿಯನ್ನು ನಾಶಮಾಡಲು ಯಾವುದೇ ಕಾನೂನುಬಾಹಿರ ಮತ್ತು ಅನೈತಿಕ ಮಟ್ಟಕ್ಕೆ ಹೋಗುತ್ತಾರೆ ಎಂಬುದು ಈ ಆಡಿಯೋ ಸಾಬೀತು ಪಡಿಸುತ್ತದೆ. ಈ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಸಂತ್ರಸ್ತರಾದ ಮಹಿಳೆಯರ ಬಗ್ಗೆ ಶಿವರಾಮೇ ಗೌಡರು ತೋರಿಸಿರುವ ತೀವ್ರ ನಿರ್ಲಕ್ಷ್ಯವು ವಿಶೇಷವಾಗಿ ನೀಚವಾಗಿದೆ" ಎಂದಿದ್ದರು.

ಸಿಎಂ ಬ್ರಾಹ್ಮಣ್ಯ ರಾಜಕಾರಣಿಯಾಗಿದ್ದಾರೆ

ಕಳೆದ 1 ವರ್ಷದಲ್ಲಿ ದಲಿತ ವಿರೋಧಿ ಮತ್ತು ಆದಿವಾಸಿ ವಿರೋಧಿ ವ್ಯವಸ್ಥೆಯನ್ನು ಹೆಚ್ಚು ಆಳವಾಗಿ ಕ್ರೋಢೀಕರಿಸಿದ ಸಿಎಂ ಸಿದ್ದು ಏಕೆ ಬ್ರಾಹ್ಮಣ್ಯ ರಾಜಕಾರಣಿಯಾಗಿದ್ದಾರೆ ಎಂಬುದು ಇಲ್ಲಿದೆಃ

1. ಕುರುಬರನ್ನು (ಹಾಲುಮತ) ಎಸ್ಟಿ ವರ್ಗಕ್ಕೆ ಶಿಫಾರಸು ಮಾಡಲಾಗಿದೆ

2. 5 ಪ್ಯಾಚ್ವರ್ಕ್ ಯೋಜನೆಗಳಿಗಾಗಿ ದಲಿತರ ಮತ್ತು ಆದಿವಾಸಿಗಳ 11,000 ಕೋಟಿ ರೂ. ಹಣ ದುರ್ಬಳಕೆ

3. ಜಾತಿ ಗಣತಿಯ ಪ್ರಕಟಣೆ ಇಲ್ಲ

4. ಮಹತ್ವದ ಮೀಸಲಾತಿ ಹೆಚ್ಚಳ ಇಲ್ಲ (ST ಒಳ, ಖಾಸಗಿ ವಲಯದಲ್ಲಿ, etc)

5. ಭೂ ಸುಧಾರಣೆ ಇಲ್ಲ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024