ಕನ್ನಡ ಸುದ್ದಿ  /  ಮನರಂಜನೆ  /  Majestic 2 Launch: ರಾಯರ ಸನ್ನಿಧಿಯಲ್ಲಿ ಸೆಟ್ಟೇರಿತು ಮೆಜೆಸ್ಟಿಕ್‌ 2 ಸಿನಿಮಾ; ಅಂದು ದಾಸ, ಇಂದು ಮರಿ ದಾಸ

Majestic 2 Launch: ರಾಯರ ಸನ್ನಿಧಿಯಲ್ಲಿ ಸೆಟ್ಟೇರಿತು ಮೆಜೆಸ್ಟಿಕ್‌ 2 ಸಿನಿಮಾ; ಅಂದು ದಾಸ, ಇಂದು ಮರಿ ದಾಸ

ಮೆಜೆಸ್ಟಿಕ್‌ 2 ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ ನಿರ್ದೇಶಕ ರಾಮು. ಭರತ್‌ ನಾಯಕನಾಗಿ ನಟಿಸಿದರೆ, ಸಂಯುಕ್ತ ವಿನ್ಯಾ ನಾಯಕಿಯಾಗಿದ್ದಾರೆ. ಹಿರಿಯ ನಟಿ ಶ್ರುತಿ ಈ ಚಿತ್ರದಲ್ಲಿ ಮರಿ ದಾಸನ ತಾಯಿಯಾಗಿ ನಟಿಸುತ್ತಿದ್ದಾರೆ.

Majestic 2 Launch: ರಾಯರ ಸನ್ನಿಧಿಯಲ್ಲಿ ಸೆಟ್ಟೇರಿತು ಮೆಜೆಸ್ಟಿಕ್‌ 2 ಸಿನಿಮಾ; ಅಂದು ದಾಸ, ಇಂದು ಮರಿ ದಾಸ
Majestic 2 Launch: ರಾಯರ ಸನ್ನಿಧಿಯಲ್ಲಿ ಸೆಟ್ಟೇರಿತು ಮೆಜೆಸ್ಟಿಕ್‌ 2 ಸಿನಿಮಾ; ಅಂದು ದಾಸ, ಇಂದು ಮರಿ ದಾಸ

Majestic 2: ಈ ಹಿಂದೆ ದರ್ಶನ್‌ ನಟನೆಯ ಮೆಜೆಸ್ಟಿಕ್‌ ಸಿನಿಮಾ ಬಿಡುಗಡೆಯಾದಾಗ, ದೊಡ್ಡ ಮಟ್ಟದಲ್ಲಿ ಆ ಸಿನಿಮಾ ಹಿಟ್‌ ಆಗಿತ್ತು. ದರ್ಶನ್‌ ಸಿನಿಮಾ ಕೆರಿಯರ್‌ಗೂ ಮೈಲೇಜ್‌ ಸಿಕ್ಕಿತ್ತು. ಈಗ ಅದೇ ಮೆಜೆಸ್ಟಿಕ್‌ ಸಿನಿಮಾ ಹೆಸರನ್ನೇ ಮರುಬಳಕೆ ಮಾಡಿಕೊಂಡು ಆಗಮಿಸುತ್ತಿದೆ ಹೊಸ ಸಿನಿಮಾ ತಂಡ. ನಿರ್ದೇಶಕ ರಾಮು ಈ ಸಿನಿಮಾ ಮೂಲಕ ಈಗಿನ ಕಾಲದ ಮೆಜೆಸ್ಟಿಕ್‌ನ ಬಣ್ಣವನ್ನು ತೆರೆಮೇಲೆ ತರಲು ಹೊರಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಿಂದಿನ ಮೆಜೆಸ್ಟಿಕ್‌ನಲ್ಲಿ ಆಗಿನ ಕಾಲದ ರೌಡಿಸಂ ಹೇಗೆ ನಡೆಯುತ್ತಿತ್ತೆಂದು ಹೇಳಿದರೆ, ಹೊಸ ಮೆಜೆಸ್ಟಿಕ್‌ನಲ್ಲಿ ಇಂದಿನ ದಿನಗಳಲ್ಲಿ ಏನೇನೆಲ್ಲ ಚಟುವಟಿಕೆಗಳು ನಡೆಯುತ್ತವೆ, ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂದು ಹೇಳಹೊರಟಿದ್ದಾರೆ ನಿರ್ದೇಶಕ ರಾಮು. ಆಗಿನ ಮೆಜೆಸ್ಟಿಕ್‌ಗೆ ರಾಮು ಅವರೇ ಕಥೆ ಬರೆದಿದ್ದರು. ಈಗ ಮೆಜೆಸ್ಟಿಕ್ ೨ ನಿರ್ದೇಶಿಸುತ್ತಿದ್ದಾರೆ, ಈ ಚಿತ್ರದ ಮುಹೂರ್ತ ಸಮಾರಂಭ ಭಾನುವಾರ ಬೆಳಿಗ್ಗೆ ಬುಲ್‌ಟೆಂಪಲ್ ರಸ್ತೆಯ ರಾಘವೇಂದ್ರ ಮಠದ ರಾಯರ ಸನ್ನಿಧಿಯಲ್ಲಿ ನೆರವೇರಿತು.

ಸಿನಿಮಾ ಮೊದಲ ದೃಶ್ಯಕ್ಕೆ ನಟಿ ಶ್ರುತಿ ಚಾಲನೆ ನೀಡಿದರೆ, ನಿರ್ಮಾಪಕ ಆನಂದಪ್ಪ ದಂಪತಿ ನಿರ್ಮಲಾ ಕ್ಲಾಪ್ ಮಾಡಿದರು. ಈ ಸಿನಿಮಾದ ಮೂಲಕ ಭರತ್ ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಚಿತ್ರದುರ್ಗದ ಟಿ.ಆನಂದಪ್ಪ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಇದೇ ಸಂಸ್ಥೆಯಿಂದ ಪಿಂಕ್‌ ನೋಟ್‌ ಹೆಸರಿನ ಸಿನಿಮಾ ನಿರ್ಮಾಣವಾಗುತ್ತಿದ್ದು, ಮೆಜೆಸ್ಟಿಕ್‌ 2 ಇವರ ಎರಡನೇ ಸಿನಿಮಾವಾಗಿದೆ.

ಇದು ನಾನು ನೋಡಿದ ಮೆಜೆಸ್ಟಿಕ್‌

ನಿರ್ದೇಶಕ ರಾಮು ಮಾತನಾಡಿ, ಆರಂಭದಲ್ಲಿ ನಾನು ನಿರ್ದೇಶಕ ಪಿ.ಎನ್. ಸತ್ಯ, ಜೋಗಿ ಪ್ರೇಮ್ ಅವರ ಜೊತೆ ಕೆಲಸ ಮಾಡಿದ್ದೆ. ನಾನು ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್‌ನಲ್ಲಿ ಏನೇನೆಲ್ಲ ಚಟುವಟಿಕೆಗಳು ನಡೀತಿದ್ವು ಎಂಬುದನ್ನು ಕಣ್ಣಾರೆ ನೋಡಿದ್ದೆ. ಅಂದು ನನ್ನ ಕಣ್ಣಿಗೆ ಕಂಡಿದ್ದನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುತ್ತಿದ್ದೇನೆ. ಇಂದಿನ ರೌಡಿಸಂ ಬಗ್ಗೆ ಸಿನಿಮಾ ಮಾತನಾಡಲಿದೆ. ರೌಡಿಸಂ ಹಾಗೂ ಆಕ್ಷನ್ ಕಥೆಯಿದು. ಹಿರಿಯ ನಟಿ ಶ್ರುತಿ ಮರಿ ದಾಸನ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.

ಮರಿದಾಸನಾಗಿ ಭರತ್

ನಾಯಕ ಭರತ್ ಮಾತನಾಡುತ್ತ, ನನ್ನ ಮೊದಲ ಚಿತ್ರಕ್ಕೆ ಇಷ್ಟೊಂದು ಅತಿಥಿಗಳು ಬಂದಿರುವುದು ನೋಡಿ ಖುಷಿಯಾಯ್ತು. ಇಷ್ಟೆಲ್ಲ ಆಗಿರುವುದು ಈ ಟೈಟಲ್‌ನಿಂದ. ಚಿತ್ರದ ಮೇನ್ ಫೋಕಸ್ ಅಂದ್ರೆ ಮೆಜೆಸ್ಟಿಕ್ ಟೈಟಲ್. ಮೆಜೆಸ್ಟಿಕ್ ಅಂದಕೂಡಲೇ ನೆನಪಿಗೆ ಬರೋದು ನಮ್ಮ ಡಿಬಾಸ್. ನಾನು ದರ್ಶನ್ ಅವರ ಅಭಿಮಾನಿ. ಚಿತ್ರದಲ್ಲಿ ಮರಿ ದಾಸ ಎನ್ನುವ ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದೇನೆ. ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದರು. ಈ ಚಿತ್ರಕ್ಕೆ ಸಂಹಿತಾ ವಿನ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತ ನೀಡಿದರೆ, ವೀನಸ್ ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

IPL_Entry_Point