Darshan: ‘ಹೆಸರು ಬದಲಿಸಿಕೊಂಡರೆ ಮಾತ್ರ ಸಿನಿಮಾ ಚಾನ್ಸ್‌!’; ಖ್ಯಾತ ನಿರ್ದೇಶಕರಿಗೆ ದರ್ಶನ್‌ ಕಡೆಯಿಂದ ಖಡಕ್‌ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  Darshan: ‘ಹೆಸರು ಬದಲಿಸಿಕೊಂಡರೆ ಮಾತ್ರ ಸಿನಿಮಾ ಚಾನ್ಸ್‌!’; ಖ್ಯಾತ ನಿರ್ದೇಶಕರಿಗೆ ದರ್ಶನ್‌ ಕಡೆಯಿಂದ ಖಡಕ್‌ ಉತ್ತರ

Darshan: ‘ಹೆಸರು ಬದಲಿಸಿಕೊಂಡರೆ ಮಾತ್ರ ಸಿನಿಮಾ ಚಾನ್ಸ್‌!’; ಖ್ಯಾತ ನಿರ್ದೇಶಕರಿಗೆ ದರ್ಶನ್‌ ಕಡೆಯಿಂದ ಖಡಕ್‌ ಉತ್ತರ

ಚಿತ್ರರಂಗದಲ್ಲಿ ಬೆಳೀಬೇಕು, ಒಳ್ಳೊಳ್ಳೆ ಸಿನಿಮಾ ಅವಕಾಶ ಪಡೆದು ಸ್ಟಾರ್‌ ಆಗಬೇಕೆಂದು, ಕೆಲವರು ತಮ್ಮ ನಿಜ ಹೆಸರು ಮುಚ್ಚಿಟ್ಟು ಸ್ಕ್ರೀನ್‌ ನೇಮ್‌ ಚೇಂಜ್ ಮಾಡಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಆದರೆ, ದರ್ಶನ್‌ ಮಾತ್ರ ಆ ದಾರಿ ಹಿಡಿಯಲಿಲ್ಲ. ಎಷ್ಟೋ ಮಂದಿ ಹೆಸರು ಬದಲಿಸೋ ಎಂದರೂ, ಅವರ್ಯಾರ ಮಾತನ್ನೂ ಕೇಳಲಿಲ್ಲ. ಇದೀಗ ಅದೇ ಹೆಸರೇ ಒಂದು ಬ್ರಾಂಡ್‌ ಆಗಿ ಬದಲಾಗಿದೆ.

Darshan: ‘ಹೆಸರು ಬದಲಿಸಿಕೊಂಡರೆ ಮಾತ್ರ ಸಿನಿಮಾ ಚಾನ್ಸ್‌’; ಖ್ಯಾತ ನಿರ್ದೇಶಕರಿಗೆ ದರ್ಶನ್‌ ಕಡೆಯಿಂದ ಖಡಕ್‌ ಉತ್ತರ
Darshan: ‘ಹೆಸರು ಬದಲಿಸಿಕೊಂಡರೆ ಮಾತ್ರ ಸಿನಿಮಾ ಚಾನ್ಸ್‌’; ಖ್ಯಾತ ನಿರ್ದೇಶಕರಿಗೆ ದರ್ಶನ್‌ ಕಡೆಯಿಂದ ಖಡಕ್‌ ಉತ್ತರ

Darshan: ಹೆಸರು ಬದಲಿಸಿಕೊಂಡು ಸಿನಿಮಾರಂಗದಲ್ಲಿ ಸಾಧನೆ ಮಾಡಿದವರು, ಸ್ಟಾರ್‌ ಪಟ್ಟ ಅಲಂಕರಿಸಿದವರು ಒಬ್ಬಿಬ್ಬರಲ್ಲ. ಕನ್ನಡ ಚಿತ್ರೋದ್ಯಮದಲ್ಲೂ ಅಂತಹ ಸಾಕಷ್ಟು ಕಲಾವಿದರಿದ್ದಾರೆ. ಪರಭಾಷೆಗಳಲ್ಲೂ ಮಿಂಚುತ್ತಿರುವ ಹೀರೋ, ಹೀರೋಯಿನ್‌ಗಳಿದ್ದಾರೆ. ಏಕೆಂದರೆ, ಸ್ಕ್ರೀನ್‌ ನೇಮ್‌ ಎಂಬುದು ಸಣ್ಣ ಹೆಸರೇ ಇರಬಹುದು. ಆದರೆ, ಅದು ತಂದುಕೊಡುವ ಮನ್ನಣೆ ಮಾತ್ರ ಸಣ್ಣದೇನಲ್ಲ. ಕೆಲವರು ಅವರಿವರ ಒತ್ತಾಯಕ್ಕೆ ಮಣಿದು ಹೆಸರು ಬದಲಿಸಿಕೊಂಡರೆ, ಇನ್ನು ಕೆಲವರು ಗೆಲುವಿನ ಮೆಟ್ಟಿಲೇರಲು ಜೋತಿಷ್ಯ, ಸಂಖ್ಯಾಶಾಸ್ತ್ರದ ಮೊರೆ ಹೋಗುವುದೂ ಇಲ್ಲಿ ಕಾಮನ್.‌

ಈಗ್ಯಾಕೆ ಈ ಹೆಸರಿನ ವಿಷ್ಯ ಅಂದ್ರಾ? ಇದೇ ಹೆಸರಿನ ವಿಚಾರಕ್ಕೆ ನಟ ದರ್ಶನ್‌ ಅವರ ಹಳೇ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದು ವೈರಲ್‌ ಆಗುತ್ತಿದೆ. ಅಭಿಮಾನಿ ವಲಯದಲ್ಲಿ ನೆಚ್ಚಿನ ನಟನ ಅಂದಿನ ಮಾತು, ದರ್ಶನ್ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಅಷ್ಟಕ್ಕೂ ಏನದು ಸನ್ನಿವೇಶ? ಸ್ಟಾರ್‌ ನಟನ ಮಗನಾದರೂ ಚಂದನವನದಲ್ಲಿ ಸಿನಿಮಾ ಅವಕಾಶ ಪಡೆಯಲು ಹರಸಾಹಸವನ್ನೇ ಪಟ್ಟಿದ್ದಾರೆ ದರ್ಶನ್.‌ ಆರಂಭದಲ್ಲಿ ಖಳನಾಗಿ ಎಂಟ್ರಿಕೊಟ್ಟು, ನಾಯಕನ ಸ್ಥಾನಕ್ಕೆ ಬರಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ.

ದರ್ಶನ್‌ ಅನ್ನೋ ಹೆಸರು ಚೆನ್ನಾಗಿಲ್ಲ..

ಹೀಗೆ ಒಂದು ದಿನ ತಮ್ಮ ಆರಂಭದ ದಿನಗಳಲ್ಲಿ ನಟ ದರ್ಶನ್‌ ಸಿನಿಮಾ ಅವಕಾಶವೊಂದನ್ನು ಕೇಳಿಕೊಂಡು ಆಗಿನ ಕಾಲದ ದೊಡ್ಡ ನಿರ್ದೇಶಕರೊಬ್ಬರ ಬಳಿ ಹೋಗಿದ್ದರು. ಸಿನಿಮಾದಲ್ಲಿ ನಟಿಸಲು ನನಗೂ ಅವಕಾಶ ಕೊಡಿ ಎಂದು ಅವರ ಮುಂದೆ ಬೇಡಿಕೊಂಡಿದ್ದರು. ದರ್ಶನ್‌ ಮಾತಿಗೆ ಒಪ್ಪಿದ್ದ ಆ ನಿರ್ದೇಶಕ, "ಓಹ್‌ ಆಯ್ತು ದರ್ಶನ್‌, ಸಿನಿಮಾ ಮಾಡೋಣ. ಅವಕಾಶ ಕೊಡ್ತಿನಿ, ಆದರೆ ದರ್ಶನ್‌ ಹೆಸರ್ಯಾಕೋ ಚೆನ್ನಾಗಿಲ್ಲ. ನೀನು ನಿನ್ನ ಹೆಸರನ್ನು ಬದಲಾಯಿಸಿಕೊಳ್ಳಬೇಕು, ಅದ್ಯಾಕೋ ಸರಿಹೋಗುತ್ತಿಲ್ಲ. ಒಳ್ಳೆಯ ಹೆಸರಿಡೋಣ" ಎಂದಿದ್ದರು. ನಿರ್ದೇಶಕರ ಈ ಷರತ್ತು ಕೇಳಿದ ದರ್ಶನ್‌, ಆ ಕ್ಷಣದಲ್ಲಿಯೇ ಅವರಿಗೆ ಪ್ರತ್ಯುತ್ತರ ಕೊಟ್ಟಿದ್ದರು.

ದೊಡ್ಡ ನಿರ್ದೇಶಕರಿಗೆ ಮಾತಲ್ಲೇ ತಿರುಗೇಟು..

"ದೊಡ್ಡ ನಿರ್ದೇಶಕರಾದರೂ, ನಾನು ಸುಮ್ಮನೆ ಇರಬಾರದೆಂದು, ಮನಸಲ್ಲಿನ ಮಾತನ್ನು ಹೇಳಿದ್ದೆ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಸರ್. ಅವಕಾಶ ಕೊಡದಿದ್ದರೂ ಬೇಜಾರಿಲ್ಲ. ಕೊಟ್ಟರೂ ನಾನು ಬಂದು ಮಾಡಲ್ಲ. ನಮ್ಮ ಅಪ್ಪ ಅಮ್ಮ ಇಟ್ಟಿರೋ ಹೆಸರದು. ಅದೊಂದು ಸಾಕು ನನಗೆ. ಅದನ್ನೇ ಇಟ್ಟುಕೊಂಡು ನಾನು ಮುಂದಕ್ಕೆ ಹೋಗಬೇಕೆಂದುಕೊಂಡಿದ್ದೇನೆ. ನೀವು ಕೊಟ್ಟಿರೋ ಪಾತ್ರಕ್ಕೆ ನನ್ನ ಹೆಸರನ್ನು ನಾನು ಚೇಂಜ್‌ ಮಾಡಿಕೊಳ್ಳಲು ತಯಾರಿಲ್ಲ" ಎಂದು ಕೆಲ ವರ್ಷಗಳ ಹಿಂದೆ ಚಂದನ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ದರ್ಶನ್‌ ಈ ವಿಚಾರವನ್ನು ಹೇಳಿಕೊಂಡಿದ್ದರು. ಈಗ ಅದೇ ವಿಡಿಯೋ ಮತ್ತೆ ವೈರಲ್‌ ಪಟ್ಟ ಪಡೆದುಕೊಂಡಿದೆ.

ಹಳೇ ವಿಡಿಯೋ ಮತ್ತೆ ವೈರಲ್..

ಹಳೇ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಹರಿದಾಡುತ್ತಿದ್ದಂತೆ, ಅಭಿಮಾನಿಗಳು ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಹಾಕುತ್ತಿದ್ದಾರೆ. "ಇವಾಗ ದರ್ಶನ್ ಅನ್ನೊ ಹೆಸರನ್ನ ಇಟ್ಕೋಳೋಕೆ ಖುಷಿ ಪಡ್ತಾರೆ ಅದು ಹೆಸರಲ್ಲ ಒಂದು ಬ್ರಾಂಡ್", "ದರ್ಶನ್ ಅನ್ನೋದು ಬರಿ ಹೆಸರು ಮಾತ್ರ ಅಲ್ಲ... ಬ್ರಾಂಡ್...", "ಇವಾಗ ನಿಮ್ಮ ಹೆಸರು ಇಟ್ಟೊಂಡು ಇರೋರು ಲಕ್ಷಾಂತರ ಜನ ಇದ್ದಾರೆ. ಅದರಲ್ಲಿ ನಾನೂ ಒಬ್ಬ", "ಅವತ್ತು ದರ್ಶನ್ ಹೆಸರು ಬದಲಿಸಿಕೊಂಡಿದ್ದರೆ ಇವತ್ತು ಡಿ ಬಾಸ್ ಅನ್ನುವ ಸಾಮ್ರಾಜ್ಯ ಬೆಳಿತಾ ಇರ್ಲಿಲ್ಲ" ಹೀಗೆ ಬಗೆಬಗೆ ಕಾಮೆಂಟ್‌ ಮೂಲಕ ನೆಚ್ಚಿನ ನಟನ ನೇರ ನೇರಾ ಮಾತನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸದ್ಯ ದರ್ಶನ್‌ ಡೆವಿಲ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Whats_app_banner