ಕನ್ನಡ ಸುದ್ದಿ  /  ಮನರಂಜನೆ  /  ನಮಗಿದು ಪರೀಕ್ಷೆಯ ಸಮಯ, ಕೇಡು ಬಯಸಿದವ್ರನ್ನ ಆ ಚಾಮುಂಡಿಯೇ ನೋಡಿಕೊಳ್ತಾಳೆ; ಪತಿ ದರ್ಶನ್‌ ಬಗ್ಗೆ ವಿಜಯಲಕ್ಷ್ಮೀ ದರ್ಶನ್‌ ಪೋಸ್ಟ್‌

ನಮಗಿದು ಪರೀಕ್ಷೆಯ ಸಮಯ, ಕೇಡು ಬಯಸಿದವ್ರನ್ನ ಆ ಚಾಮುಂಡಿಯೇ ನೋಡಿಕೊಳ್ತಾಳೆ; ಪತಿ ದರ್ಶನ್‌ ಬಗ್ಗೆ ವಿಜಯಲಕ್ಷ್ಮೀ ದರ್ಶನ್‌ ಪೋಸ್ಟ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿ ಜೈಲು ಸೇರಿರುವ ದರ್ಶನ್‌ ಪರ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ ಪತ್ನಿ ವಿಜಯಲಕ್ಷ್ಮೀ ದರ್ಶನ್‌.

ನಮಗಿದು ಪರೀಕ್ಷೆಯ ಸಮಯ, ಕೇಡು ಬಯಸಿದವ್ರನ್ನ ಆ ಚಾಮುಂಡಿಯೇ ನೋಡಿಕೊಳ್ತಾಳೆ; ಪತಿ ದರ್ಶನ್‌ ಬಗ್ಗೆ ವಿಜಯಲಕ್ಷ್ಮೀ ದರ್ಶನ್‌ ಪೋಸ್ಟ್‌
ನಮಗಿದು ಪರೀಕ್ಷೆಯ ಸಮಯ, ಕೇಡು ಬಯಸಿದವ್ರನ್ನ ಆ ಚಾಮುಂಡಿಯೇ ನೋಡಿಕೊಳ್ತಾಳೆ; ಪತಿ ದರ್ಶನ್‌ ಬಗ್ಗೆ ವಿಜಯಲಕ್ಷ್ಮೀ ದರ್ಶನ್‌ ಪೋಸ್ಟ್‌

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಸೇರಿ 17 ಮಂದಿಯನ್ನು ಜೈಲಿಗಟ್ಟಿದ್ದಾರೆ. ಪೊಲೀಸರೂ ಈ ಕೇಸ್‌ನ ಇಂಚಿಂಚೂ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ. ಈ ನಡುವೆ ಎರಡು ದಿನಗಳ ಹಿಂದಷ್ಟೇ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಮತ್ತು ಮಗ ವಿನೀಶ್‌ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಬಂದಿದ್ದರು. ಇದೀಗ ಪತಿ ದರ್ಶನ್‌ ಪರ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ ವಿಜಯಲಕ್ಷ್ಮೀ.

ವಿಜಯಲಕ್ಷ್ಮೀ ದರ್ಶನ್‌ ಪೋಸ್ಟ್‌

"ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ “ಸೆಲೆಬ್ರಿಟಿಗಳನ್ನು” ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ,ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ"

ಟ್ರೆಂಡಿಂಗ್​ ಸುದ್ದಿ

ಕೇಡು ಬಯಸಿದವ್ರನ್ನ ಚಾಮುಂಡಿಯೇ ನೋಡಿಕೊಳ್ತಾಳೆ

"ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ. ಸತ್ಯಮೇವ ಜಯತೆ!" ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಿಜಯಲಕ್ಷ್ಮೀ ಪೋಸ್ಟ್‌ಗೆ ಫ್ಯಾನ್ಸ್‌ ಪ್ರತಿಕ್ರಿಯೆ..

ಇನ್ನು ಘಟನೆ ಬಗ್ಗೆ ವಿಜಯಲಕ್ಷ್ಮೀ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ದರ್ಶನ್‌ ಅವರ ಅಪಾರ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಫ್ಯಾನ್ಸ್‌ ಏನಂದ್ರು?

  • ಅತ್ತಿಗೆ ನೀವ್ ಒಬ್ರು ನಮ್ ಬಾಸ್ ಜೊತೆ ಇರೋವರ್ಗು ಯಾರ್ ಏನು ಮಾಡಕ್ ಆಗಲ್ಲ
  • ನಮ್ಮ ಕೊನೆ ಉಸಿರಿರುವರೆಗೂ ಬಾಸ್ ನ ನಾವು ಯಾವತ್ತೂ ಬಿಟ್ ಕೊಡೋದಿಲ್ಲ ಅತ್ತಿಗೆ
  • ದಯವಿಟ್ಟು ನೀವು ಕುಗ್ಗಬೇಡಿ. ದರ್ಶನ್‌ ಅವರು ಖಂಡಿತ ಜಯಶಾಲಿಯಾಗಿ ಆಚೆ ಬರುತ್ತಾರೆ. ದರ್ಶನ್‌ ಅವರು ಖಂಡಿತ ನಿರಪರಾಧಿ ಎಂದು ನಮಗೆಲ್ಲಾ ಗೊತ್ತು. ನೀವು ಅವರಿಗೆ ಧೈರ್ಯ ಮತ್ತು ವಿಶ್ವಾಸ ತುಂಬಿ.
  • ನೀವು ಒಬ್ಬರು ನಮ್ಮ ಜೊತೆ ಇದ್ದರೆ ಸಾಕು ಅತ್ತಿಗೆ ಅದು ಎಂಥ ಪರಿಸ್ಥಿತಿ ಬಂದ್ರು ಎಲ್ಲರೂ ಸೇರಿ ಹೆದರಿಸೋಣಾ
  • ಸಾವಿರ ಜನ ಸಾವಿರ ಮಾತಾಡಲಿ ಬಾಸ್ ನ ಎಂದೆಂದಿಗೂ ಮರೆಯೋದಿಲ್ಲ ಬಿಡುವುದಿಲ್ಲ ಬಿಟ್ಟುಕೊಡುವುದಿಲ್ಲ ಬಾಸ್ ಹೊರಗಡೆ ಬಂದ್ರು ಬಾಸ್ ಮೇಲಿನ ಪ್ರೀತೀ ಎಂದೆಂದಿಗೂ ಕಡಿಮೆ ಆಗುವುದಿಲ್ಲ ಜೈ ಡಿ ಬಾಸ್
  • ಕೆಟ್ಟ ಸಮಯ ಹೋಗಿ ಒಳ್ಳೆ ಸಮಯ ಬರುತ್ತೆ ಅತ್ತಿಗೆ ನಮ್ ಬಾಸ್ ನ ಇನ್ನು ಹೆಚ್ಚು ಮೆರುಸ್ತೀವಿ
  • ಭಗವದ್ಗೀತೆಯಲ್ಲಿ ಈ ಸಮಯ ಕಳೆದು ಹೋಗುತ್ತದೆ ಎಂದು ಶ್ರೀ ಕೃಷ್ಣ ಹೇಳಿಲ್ಲವೇ ಹಾಗೆ ನಿಮ್ಮ ಕುಟುಂಬಕ್ಕೆ ಬಂದಿರುವ ಸಂಕಷ್ಟ ಕೂಡ ಕಳೆದುಹೋಗುತ್ತದೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನಿಮ್ಮ ಕುಟುಂಬದ ಮೇಲಿದೆ
  • ನಮ್ಮ ಎಲ್ಲಾ ದರ್ಶನ ಅವರ ಅಭಿಮಾನಿಗಳಿಂದ ಒಂದು ಕೋರಿಕೆ. ದರ್ಶನ್ ಅವರು ನಿರಪರಾಧಿ ಅಂತ ಕೋರ್ಟ್ ಅಲ್ಲಿ ತೀರ್ಮಾನ ಆದಾಗ, ನೀವು ಅಭಿಮಾನಿ ಅವರ ಕೋರಿಕೆ ಅಂತೆ ಎಲ್ಲಾ ಮಾಧ್ಯಮ ಮೇಲೆ ಮಾನನಷ್ಟ ಆರೋಪ ಹಾಕಬೇಕು ಅಂತ ನಿಮ್ಮಲ್ಲಿ ಕಳಕಳಿ ಆಗಿ ಮನವಿ ಮಾಡುತಾ ಇದ್ದೀವಿ.