‘ಇವತ್ತು ಇವ್ಳು, ನಾಳೆ ಅವ್ಳು’ ಎಂದ ದರ್ಶನ್‌ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ; ನಟನ ಕೀಳು ಮಾತು ಖಂಡಿಸಿ ಮಹಿಳಾ ಆಯೋಗಕ್ಕೆ ದೂರು-sandalwood news actor darshan uses derogatory words about women gowdatiyara sene filed a complaint against darshan mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಇವತ್ತು ಇವ್ಳು, ನಾಳೆ ಅವ್ಳು’ ಎಂದ ದರ್ಶನ್‌ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ; ನಟನ ಕೀಳು ಮಾತು ಖಂಡಿಸಿ ಮಹಿಳಾ ಆಯೋಗಕ್ಕೆ ದೂರು

‘ಇವತ್ತು ಇವ್ಳು, ನಾಳೆ ಅವ್ಳು’ ಎಂದ ದರ್ಶನ್‌ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ; ನಟನ ಕೀಳು ಮಾತು ಖಂಡಿಸಿ ಮಹಿಳಾ ಆಯೋಗಕ್ಕೆ ದೂರು

ಬೆಳ್ಳಿ ಪರ್ವ ಕಾರ್ಯಕ್ರಮದ ವೇದಿಕೆ ಮೇಲೆ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ಬಗ್ಗೆಯೂ ಪರೋಕ್ಷವಾಗಿ ಹೇಳಿಕೆ ನೀಡಿದ್ದರು ದರ್ಶನ್.‌ ಇವತ್ತು ಇವಳು ನಾಳಿ ಅವಳು ಎಂದಿದ್ದರು. ಈಗ ಅಂದು ಹೇಳಿಕೆ ನೀಡಿದ ಮಾತೇ ಇದೀಗ ಮಹಿಳಾ ವರ್ಗವನ್ನು ಕೆಣಕಿದೆ. ನೇರವಾಗಿ ದರ್ಶನ್‌ ವಿರುದ್ಧ ಗೌಡತಿಯರ ಸೇನೆ ದೂರು ದಾಖಲಿಸಿದೆ.

‘ಇವತ್ತು ಇವ್ಳು, ನಾಳೆ ಅವ್ಳು’ ಎಂದ ದರ್ಶನ್‌ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ; ನಟನ ಕೀಳು ಮಾತು ಖಂಡಿಸಿ ಮಹಿಳಾ ಆಯೋಗಕ್ಕೆ ದೂರು
‘ಇವತ್ತು ಇವ್ಳು, ನಾಳೆ ಅವ್ಳು’ ಎಂದ ದರ್ಶನ್‌ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ; ನಟನ ಕೀಳು ಮಾತು ಖಂಡಿಸಿ ಮಹಿಳಾ ಆಯೋಗಕ್ಕೆ ದೂರು

Darshan: ಕಾಂಟ್ರವರ್ಸಿಗಳ ಮೂಲಕವೇ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್.‌ ತಮ್ಮ ಹೇಳಿಕೆಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಆ ಮಾತುಗಳು ಕೆಲವರ ಮತ್ತು ಕೆಲವು ವರ್ಗದವರ ಕೆಂಗೆಣ್ಣಿಗೂ ಕಾರಣವಾಗಿವೆ. ಜತೆಗೆ ನಟನ ವಿರುದ್ಧವೂ ಕೆಲವು ಸಂಘಟನೆಗಳು ತಿರುಗಿಬಿದ್ದಿವೆ. ಪೊಲೀಸ್‌ ಠಾಣೆಗಳಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ.

ಇತ್ತೀಚೆಗಷ್ಟೇ ಶ್ರೀರಂಗಪಟ್ಟಣದಲ್ಲಿ ದರ್ಶನ್‌ ಚಿತ್ರರಂಗಕ್ಕೆ ಆಗಮಿಸಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದ್ಧೂರಿ ಬೆಳ್ಳಿ ಪರ್ವ ಹೆಸರಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದ ವೇದಿಕೆ ಮೇಲೆ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ಬಗ್ಗೆಯೂ ಪರೋಕ್ಷವಾಗಿ ಹೇಳಿಕೆ ನೀಡಿದ್ದರು ದರ್ಶನ್.‌ ಈಗ ಅಂದು ಹೇಳಿಕೆ ನೀಡಿದ ಮಾತೇ ಇದೀಗ ಮಹಿಳಾ ವರ್ಗವನ್ನು ಕೆಣಕಿದೆ. ನೇರವಾಗಿ ದರ್ಶನ್‌ ವಿರುದ್ಧ ಗೌಡತಿಯರ ಸೇನೆ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದೆ.

ಗೌಡತಿಯರ ಸೇನೆಯ ದೂರಿನಲ್ಲೇನಿದೆ?

"ಯುವ ಜನರಿಗೆ ಮಾದರಿ ಆಗಬೇಕಿದ್ದ ಒಬ್ಬ ನಾಯಕ ನಟ ಅಸಹಜ ಹೇಳಿಕೆಗಳನ್ನು ಕೊಡುತ್ತಿರುವುದು. 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಭಾವನೆಯಿಂದ ಒಬ್ಬಳು ಹೋಗುತ್ತಾಳೆ ಒಬ್ಬಳು ಬರುತ್ತಾಳೆ ಅವಳ ಅಜ್ಜಿನಾ ಬಡಿಯ ಎಂದು ಉಡಾಫೆಯಾಗಿ ಮಾತನಾಡಿರುತ್ತಾರೆ. ಈ ಸಭೆಯಲ್ಲಿ ಆದಿಚುಂಚನಗಿರಿ ಗುರುಗಳು, ಸಂಸದೆ ಸುಮಲತಾ, ಹಲವಾರು ಗಣ್ಯಾತಿಗಣ್ಯರು, ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು. ಸಮಾಜಕ್ಕೆ ಮಾದರಿ ಆಗಬೇಕಾದ ನಟನೊಬ್ಬ ಸಾರ್ವಜನಿಕವಾಗಿ ಹೀಗೆ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ವಿಚಾರಣೆ ನಡೆಸಿ, ಆತ ಉಪಯೋಗಿಸಿರುವ ಪದಗಳು ಯಾವ ಭಾವನೆಯಿಂದ ಹೇಳಿದ್ದಾರೆಂದು ವಿವರಣೆ ಕೇಳಬೇಕಾಗಿ ವಿನಂತಿ"

"ಈ ಹಿಂದೆಯೂ ಈ ನಟ ಹೆಂಡತಿಗೆ ಸಿಗರೇಟ್​ನಿಂದ ಸುಟ್ಟು ಮಾನಸಿಕವಾಗಿ ಕಿರುಕುಳ ಕೊಟ್ಟು ಜೈಲು ಪಾಲಾಗಿದ್ದು ಇತಿಹಾಸ. ಇನ್ನೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆ ಬಿಚ್ಚಿ ರೂಮಿನಲ್ಲಿ ಕೂಡಿಹಾಕಿ ಎಂಬ ಹೇಳಿಕೆ ನೀಡಿ ಹೆಣ್ಣು ಮಕ್ಕಳು ಮುಜುಗರಗೊಳ್ಳುವಂತೆ ಮಾಡಿರುತ್ತಾನೆ. ಮಾದರಿ ನಾಯಕ ಯುವ ಜನತೆಗೆ ನೀಡುತ್ತಿರುವ ಸಂದೇಶ ಏನು ಎನ್ನುವುದರ ಸ್ಪಷ್ಟನೆ ನೀಡಿ ಕ್ಷಮೆ ಕೇಳಬೇಕು"

"ಈ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸಲೀಸಾಗಿ ಹರಿದಾಡುತ್ತಿದ್ದು ಯುವ ಜನತೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಹೆಣ್ಣು ಮಕ್ಕಳ ಬಗೆಗಿನ ಅವರ ದೃಷ್ಟಿಕೋನ ಬದಲಾಗಬಹುದು. ದರ್ಶನ್​ ಸಂಪೂರ್ಣ ಬದಲಾಗಬೇಕು. ಬದಲಾವಣೆ ಆಗದಿದ್ದರೆ ಹೆಣ್ಣು ಮಕ್ಕಳನ್ನು ತೆರೆಯಮೇಲೆ ಗೌರವಿಸಿದಂತೆ ತೆರೆಯ ಹಿಂದೆಯೂ ಗೌರವಿಸಬೇಕು. ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮಾಡಲು ಸಿದ್ಧ ಇದ್ದೇವೆ. ಮುಂದೆ ಸಾರ್ವಜನಿಕವಾಗಿ ಈ ರೀತಿ ಮಾತನಾಡದಂತೆ ಎಚ್ಚರಿಕೆ ವಹಿಸಬೇಕು" ಎಂದು ದೂರಿನಲ್ಲಿ ನಮೂದಿಸಿದ್ದಾರೆ.

ಆವತ್ತು ದರ್ಶನ್‌ ಹೇಳಿದ್ದೇನು?

‘ಚಿತ್ರರಂಗ, ರಾಜಕೀಯ, ಬಿಜಿನೆಸ್‌ ಯಾವುದೇ ಆಗಿರಲಿ ಶ್ರಮ ಹಾಕಲೇಬೇಕು. ನನಗೆ ನನ್ನ ಕೆಲಸ, ನನ್ನ ನಿರ್ಮಾಪಕರಷ್ಟೇ ಇಂಪಾರ್ಟೆಂಟ್‌. ಕೆಲಸದ ವಿಚಾರದಲ್ಲಿ ಫ್ಯಾಮಿಲಿ, ಎಲ್ಲವನ್ನೂ ಬದಿಗಿಟ್ಟು ಇದಕ್ಕೆ ನಿಲ್ತಿನಿ. ನನಗೆ ಸಿನಿಮಾ, ಆ ಸಿನಿಮಾನ ಪ್ರೀತಿಸುವ ನನ್ನ ಸೆಲೆಬ್ರಿಟಿಗಳಷ್ಟೇ ನನಗೆ ಮುಖ್ಯ. ಬೇರೆ ಯಾವುದರ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ ನಾಳೆ ಅವಳಿರ್ತಾಳೆ. ಅವಳ ಅಜ್ಜಿಣ ಬಡಿಯಾ. ನಾನ್ಯಾಕೆ ತಲೆ ಕೆಡಿಸಿಕೊಂಡು, ಕೂತ್ಕೊಳ್ಳಲಿ ಹೋಗ್ರಯ್ಯ. ನನಗೆ ನನ್ನ ಸಿನಿಮಾ. ನನ್ನ ಮೇಲೆ ದುಡ್ಡು ಹಾಕಿದ ನಿರ್ಮಾಪಕರು, ನಿರ್ದೇಶಕರು ಅವರಿಗಷ್ಟೇ ನಾನು ಸೀಮಿತ" ಎಂದಿದ್ದರು ದರ್ಶನ್.‌

mysore-dasara_Entry_Point