Darshan Thoogudeepa: ದರ್ಶನ್‌ಗೆ ಜೈಲೂಟವೇ ಗತಿ, ಜೈಲಿನ ಕೈದಿಗಳೆಲ್ಲ ಮನೆಯೂಟ ಕೇಳಿದ್ರೆ ಗತಿಯೇನು? ಪತ್ರ ಬರೆದ ಹಿರಿಯ ವಕೀಲ
ಕನ್ನಡ ಸುದ್ದಿ  /  ಮನರಂಜನೆ  /  Darshan Thoogudeepa: ದರ್ಶನ್‌ಗೆ ಜೈಲೂಟವೇ ಗತಿ, ಜೈಲಿನ ಕೈದಿಗಳೆಲ್ಲ ಮನೆಯೂಟ ಕೇಳಿದ್ರೆ ಗತಿಯೇನು? ಪತ್ರ ಬರೆದ ಹಿರಿಯ ವಕೀಲ

Darshan Thoogudeepa: ದರ್ಶನ್‌ಗೆ ಜೈಲೂಟವೇ ಗತಿ, ಜೈಲಿನ ಕೈದಿಗಳೆಲ್ಲ ಮನೆಯೂಟ ಕೇಳಿದ್ರೆ ಗತಿಯೇನು? ಪತ್ರ ಬರೆದ ಹಿರಿಯ ವಕೀಲ

Renukaswamy murder caseನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ನಂಬರ್‌ 2 ಆಗಿರುವ ನಟ ದರ್ಶನ್‌ಗೆ ಮನೆಯೂಟ ನೀಡಬಾರದೆಂದು ಕಾನೂನು ನಿಯಮಗಳನ್ನು ಉಲ್ಲೇಖಿಸಿ ಹಿರಿಯ ವಕೀಲ ಅಮೃತೇಶ್‌ ಪತ್ರ ಬರೆದಿದ್ದಾರೆ.

Darshan Thoogudeepa: ದರ್ಶನ್‌ಗೆ ಜೈಲೂಟವೇ ಗತಿ
Darshan Thoogudeepa: ದರ್ಶನ್‌ಗೆ ಜೈಲೂಟವೇ ಗತಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎ2 ಆರೋಪಿಯಾಗಿರುವ ನಟ ದರ್ಶನ್‌ ಅವರು ನಿನ್ನೆಯಷ್ಟೇ ಹೈಕೋರ್ಟ್‌ಗೆ ಮನೆಯೂಟ ಬೇಕೆಂದು ವಿನಂತಿಸಿ ಮನವಿ ಸಲ್ಲಿಸಿದ್ದರು. ತನ್ನ ಕುಟುಂಬ ಸದಸ್ಯರಿಂದ ಮನೆಯಲ್ಲಿ ತಯಾರಿಸಿದ ಅಥವಾ ಹೊರಗಿನ ಆಹಾರವನ್ನು ಪಡೆಯುವ ಅವಕಾಶ ನೀಡಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಈ ಮೂಲಕ ಬೆಂಗಳೂರಿನ 24ನೇ ಹೆಚ್ಚುವರಿ ಚೀಫ್‌ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್ಡರ್‌ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.

ದರ್ಶನ್‌ಗೆ ಜೈಲೂಟ ಸಿಗದೆ ಇರುವ ಸಾಧ್ಯತೆ ಹೆಚ್ಚಳವಾಗಿದೆ. ನಟ ದರ್ಶನ್‌ಗೆ ಯಾವುದೇ ಹೆಚ್ಚುವರಿ ಸೌಕರ್ಯ ನೀಡಬಾರದು ಎಂದು ಹಿರಿಯ ವಕೀಲರೊಬ್ಬರು ಕಾರಾಗೃಹ ಇಲಾಖೆ ಐಜಿಗೆ ಪತ್ರ ಬರೆದಿದ್ದಾರೆ. ಹೈಕೋರ್ಟ್‌ನ ಹಿರಿಯ ವಕೀಲರಾದ ಅಮೃತೇಶ್‌ ಪತ್ರ ಬರೆದಿದ್ದಾರೆ. ದರ್ಶನ್‌ಗೆ ಮನೆಯೂಟ ದೊರಕಿದರೆ ಜೈಲಿನ ಇತರೆ ಕೈದಿಗಳೂ ಮನೆಯೂಟ ಬಯಸಬಹುದು ಎಂದಿದ್ದಾರೆ.

ದರ್ಶನ್‌ಗೆ ಮನೆಯೂಟ ಏಕೆ ಬೇಡ?

"ಕಾನೂನಿನಡಿ ದರ್ಶನ್‌ ಓರ್ವ ಸಾಮಾನ್ಯ ವ್ಯಕ್ತಿ. ವಿಐಪಿ ಸ್ಟೇಟ್‌ ಹೊಂದಿರುವ ರಾಜಕಾರಣಿ ಅಲ್ಲ. ಯಾವುದೇ ಶಾಸನಬದ್ಧ ಹುದ್ದೆಯಲ್ಲೂ ಅವರಿಲ್ಲ. ಎಂಎಲ್‌ಎ, ಎಂಎಲ್‌ಸಿ, ಎಂಪಿಯಂತಹ ಹುದ್ದೆಗಳಲ್ಲಿ ಅವರಿಲ್ಲ. ಇವರು ಎಲ್ಲರಂತೆ ಕಾನೂನಿನಡಿ ಸಾಮಾನ್ಯ ವ್ಯಕ್ತಿಯಾಗಿರುವುದರಿಂದ ಇದೇ ರೀತಿ ಅವರನ್ನು ಪರಿಗಣಿಸಬೇಕು" ಎಂದು ಹೈಕೋರ್ಟ್‌ನ ಹಿರಿಯ ವಕೀಲರಾದ ಅಮೃತೇಶ್‌ ಮನವಿ ಮಾಡಿದ್ದಾರೆ.

ಕರ್ನಾಟಕ ಪ್ರಿಸನ್ಸ್‌ ಮತ್ತು ಕರೆಕ್ಷನಲ್‌ ಮ್ಯಾನುಯಲ್‌ 2021, ಆಕ್ಟ್‌ 196, ಪ್ರಿಸನ್ಸ್‌ ನಿಯಮಗಳು 1974ರ ಪ್ರಕಾರ ದರ್ಶನ್‌ ಯಾವುದೇ ಸೌಲಭ್ಯಗಳನ್ನು ಪಡೆಯುವಂತೆ ಇಲ್ಲ. ಮನೆಯಿಂದ ಊಟ, ಹಾಸಿಗೆ, ಬಟ್ಟೆ, ಬರೆಯುವ ವಸ್ತುಗಳು, ಏರ್‌ಕಂಡಿಷನ್‌, ಚೇರ್‌, ಟೇಬಲ್‌ ಇತ್ಯಾದಿಗಳನ್ನು ಪಡೆಯುವಂತೆ ಇಲ್ಲ ಎಂದು ವಕೀಲ ಅಮೃತೇಶ ಮನವಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ದರ್ಶನ್‌ಗೆ ಮನೆಯೂಟಕ್ಕೆ ಅವಕಾಶ ನೀಡಿದರೆ ಜೈಲಿನ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಏಳುತ್ತದೆ. ಇದೇ ರೀತಿ ಜೈಲಿನ ಅಧಿಕಾರಿಗಳ ಬಗ್ಗೆಯೂ ಬೇರೆ ರೀತಿಯ ಭಾವನೆ ಉಂಟಾಗುತ್ತದೆ. ಶಿಕ್ಷೆಗ ಒಳಪಡದ ಕೈದಿಗೆ ಮನೆಯ ಊಟದ ಅವಶ್ಯಕತೆ ಇದ್ದಲ್ಲಿ 1963ರ ಕಾರಾಗೃಹ ಕಾಯಿದೆಯ ಅನ್ವಯವೇ ಪರೀಕ್ಷೆಗೆ ಒಳಪಡಿಸಿ ಐಜಿ ಅನುಮೋದನೆ ನೀಡಬಹುದು. ಕೈದಿಗಳಿಗೆ ನೀಡುವ ಆಹಾರದ ಕುರಿತು ಜೈಲು ನಿಯಮಗಳಲ್ಲಿ ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಆಹಾರದ ತೂಕ, ಮಾಂಸಹಾರ ಪೂರೈಕೆ ಕುರಿತು ತಿಳಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಈಗಾಗಲೇ ದರ್ಶನ್‌ಗೆ ಹೈಕೋರ್ಟ್‌ ಮನೆಯೂಟ ನೀಡಲಾಗದು ಎಂದು ತಿಳಿಸಿದೆ. "ಎಲ್ಲಾ ಕೈದಿಗಳ ಕುರಿತು ಮಾನವೀಯತೆ ಇರಬೇಕು. ಸಿನಿಮಾ ನಟ, ಸೆಲೆಬ್ರಿಟಿ ಎಂಬ ಕಾರಣಕ್ಕೆ ಪ್ರತ್ಯೇಕ ನಿಯಮಗಳು ಇರುವುದಿಲ್ಲ. ಬಡ ಕೈದಿ, ಶ್ರೀಮಂತ ಕೈದಿ ಎಂಬ ಬೇಧಭಾವ ಇಲ್ಲ" ಎಂದು ಹೈಕೋರ್ಟ್‌ ತಿಳಿಸಿದೆ.

"ದರ್ಶನ್‌ಗೆ ಮಾತ್ರವಲ್ಲ ಜೈಲಿನಲ್ಲಿರುವ ಎಲ್ಲಾ ಕೈದಿಗಳಿಗೂ ಪೌಷ್ಟಿಕ ಆಹಾರ ನೀಡಬೇಕು. ಅನಾರೋಗ್ಯ ತುಂಬಾ ಬಿಗಡಾಯಿಸಿದ್ದರೆ ಜೈಲು ವೈದ್ಯರು ಅದನ್ನು ಪರಿಗಣಿಸಬಹುದು. ದರ್ಶನ್‌ಗೂ ಇತರೆ ಕೈದಿಗಳಿಗೂ ವ್ಯತ್ಯಾಸವಿಲ್ಲ. ಸೆಲೆಬ್ರಿಟಿ ಎಂಬ ಕಾರಣಕ್ಕೆ ಬೇರೆ ಆಹಾರ ಕೇಳಲು ಸಾಧ್ಯವಿಲ್ಲ" ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

Whats_app_banner