ಕನ್ನಡ ಸುದ್ದಿ  /  ಮನರಂಜನೆ  /  ಧ್ರುವ ಸರ್ಜಾ ಮನೆಗೆ ಬಂದ ಗಣೇಶ; ಹಬ್ಬದ ದಿನವೇ ಗಂಡುಮಗುವಿಗೆ ಜನ್ಮ ನೀಡಿದ ಪ್ರೇರಣಾ

ಧ್ರುವ ಸರ್ಜಾ ಮನೆಗೆ ಬಂದ ಗಣೇಶ; ಹಬ್ಬದ ದಿನವೇ ಗಂಡುಮಗುವಿಗೆ ಜನ್ಮ ನೀಡಿದ ಪ್ರೇರಣಾ

ಎರಡನೇ ಬಾರಿಗೆ ಅಪ್ಪನಾಗಿದ್ದೇನೆ, ಪ್ರೇರಣಾಗೆ ನಾರ್ಮಲ್‌ ಡೆಲಿವರಿ ಆಗಿದೆ ಎಂದು ಧ್ರುವ ಸರ್ಜಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಗುರುರಾಘವೇಂದ್ರ ಸ್ವಾಮಿಗಳ ಫೋಟೋವನ್ನೂ ಧ್ರುವ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ.

ಗಂಡುಮಗುವಿನ ತಂದೆ ಆದ ಧ್ರುವ ಸರ್ಜಾ
ಗಂಡುಮಗುವಿನ ತಂದೆ ಆದ ಧ್ರುವ ಸರ್ಜಾ

ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಧ್ರುವಾ ಸರ್ಜಾ ಎರಡನೇ ಬಾರಿಗೆ ತಂದೆ ಆಗಿದ್ದಾರೆ. ಇಂದು ದೇಶಾದ್ಯಂತ ಗೌರಿ-ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಈ ಶುಭ ದಿನವೇ ಧ್ರುವ ಸರ್ಜಾ ಮನೆಯಲ್ಲಿ ಡಬಲ್‌ ಸಂಭ್ರಮ ಮನೆ ಮಾಡಿದೆ. ತಾವು ಎರಡನೇ ಬಾರಿಗೆ ತಂದೆ ಆಗುತ್ತಿರುವ ಸಂತೋಷದ ವಿಚಾರವನ್ನು ಧ್ರುವ ಸರ್ಜಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಪ್ರೇರಣಾ ಸೀಮಂತ ಕಾರ್ಯ ನೆರವೇರಿಸಿದ್ದ ಧ್ರುವ

ಇತ್ತೀಚೆಗೆ ಧ್ರುವ ಸರ್ಜಾ ಪ್ರೇರಣಾ ಬೇಬಿ ಬಂಪ್‌ ಶೂಟ್‌ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಎರಡನೇ ಬಾರಿ ತಂದೆ ಆಗುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ನಂತರ ಪತ್ನಿ ಪ್ರೇರಣಾ ಸೀಮಂತ ಕಾರ್ಯವನ್ನು ಕನಕಪುರ ರಸ್ತೆಯ ಫಾರ್ಮ್‌ ಹೌಸ್‌ನಲ್ಲಿರುವ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಆಚರಿಸಿ ಸುದ್ದಿಯಾಗಿದ್ದರು. ಆ ದಿನ ಪ್ರೇರಣಾ ಹಾಗೂ ಧ್ರುವ ಮೊಬೈಲ್‌ನಲ್ಲಿ ಮಗಳಿಗೆ ಚಿರಂಜೀವಿ ಸರ್ಜಾ ಫೋಟೋ ತೋರಿಸಿ ದೊಡ್ಡಪ್ಪ ಎಂದು ಹೇಳಿಕೊಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆದಿತ್ತು. ನಿಮಗೆ ಅಣ್ಣನೇ ಜನಿಸಿ ಬರಲಿ ಎಂದು ಎಲ್ಲರೂ ಶುಭ ಹಾರೈಸಿದ್ದರು. ಅದರಂತೆ ಧ್ರುವ ಸರ್ಜಾಗೆ ಇಂದು ಗಂಡು ಮಗುವೇ ಜನಿಸಿದೆ.

ಸಂತೋಷ ಹಂಚಿಕೊಂಡ ಧ್ರುವ ಸರ್ಜಾ

''ಎರಡನೇ ಬಾರಿಗೆ ಅಪ್ಪನಾಗಿದ್ದೇನೆ, ಪ್ರೇರಣಾಗೆ ನಾರ್ಮಲ್‌ ಡೆಲಿವರಿ ಆಗಿದೆ'' ಎಂದು ಧ್ರುವ ಸರ್ಜಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಗುರುರಾಘವೇಂದ್ರ ಸ್ವಾಮಿಗಳ ಫೋಟೋವನ್ನೂ ಧ್ರುವ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ. ಬಸವನ ಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರೇರಣಾ ಇಂದು (ಸೆಪ್ಟೆಂಬರ್‌ 18) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಲವ್‌ ಮ್ಯಾರೇಜ್‌

ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‌ ಇಬ್ಬರದ್ದೂ ಲವ್‌ ಮ್ಯಾರೇಜ್.‌ 25 ನವೆಂಬರ್‌ 2019 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಕಳೆದ ವರ್ಷ ಅಕ್ಟೋಬರ್‌ 5 ರಂದು ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದರು. ಮಗಳು ಜನಿಸಿದ ನಂತರ ಹೆಣ್ಣು ಮಕ್ಕಳ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯ್ತು ಎಂದು ಧ್ರುವ ಮಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

ಕೆಡಿ ಚಿತ್ರದಲ್ಲಿ ಬ್ಯುಸಿ

ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಧ್ರುವ ಸರ್ಜಾ 'ಮಾರ್ಟಿನ್‌' ಬಿಡುಗಡೆಗೆ ಕಾಯುತ್ತಿದ್ದಾರೆ. ಡಿಸೆಂಬರ್‌ 22 ರಂದು ಮಾರ್ಟಿನ್‌ ರಿಲೀಸ್‌ ಆಗಲಿದೆ. ಸದ್ಯಕ್ಕೆ ಆಕ್ಷನ್‌ ಪ್ರಿನ್ಸ್‌, ಪ್ರೇಮ್‌ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ಬ್ಯುಸಿ ಇದ್ದಾರೆ.