ಬೇಗೂರು ಕಾಲೋನಿ ಚಿತ್ರಕ್ಕೆ ಭೀಮ ಬಲ; ಹೊಸಬರ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ವಿಜಯ್-sandalwood news actor duniya vijya supported to new team beguru colony movie kannada film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬೇಗೂರು ಕಾಲೋನಿ ಚಿತ್ರಕ್ಕೆ ಭೀಮ ಬಲ; ಹೊಸಬರ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ವಿಜಯ್

ಬೇಗೂರು ಕಾಲೋನಿ ಚಿತ್ರಕ್ಕೆ ಭೀಮ ಬಲ; ಹೊಸಬರ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ವಿಜಯ್

ಹೊಸಬರಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನಟ ದುನಿಯಾ ವಿಜಯ್‌ ಈಗ ಬೇಗೂರ್‌ ಕಾಲೋನಿ ತಂಡಕ್ಕೂ ಸಾಥ್‌ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಶನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಬೇಗೂರು ಕಾಲೋನಿ ಚಿತ್ರಕ್ಕೆ ಭೀಮ ಬಲ; ಹೊಸಬರ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ವಿಜಯ್
ಬೇಗೂರು ಕಾಲೋನಿ ಚಿತ್ರಕ್ಕೆ ಭೀಮ ಬಲ; ಹೊಸಬರ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ವಿಜಯ್

ಕನ್ನಡ ಚಿತ್ರರಂಗಕ್ಕೆ ಪ್ರತಿದಿನ ಹೊಸಬರು ಬರುತ್ತಾರೆ. ತಮ್ಮ ಪ್ರತಿಭೆಯನ್ನು ಸಾಬೀತು ಮಾಡಲು ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಇದೀಗ ಹೊಸಬರ ತಂಡವೊಂದು ಬೇಗೂರು ಕಾಲೋನಿ ಎಂಬ ಸಿನಿಮಾ ಮಾಡಿದ್ದು, ನಟ ದುನಿಯಾ ವಿಜಯ್‌, ಚಿತ್ರತಂಡಕ್ಕೆ ಸಾಥ್‌ ನೀಡಿದ್ದಾರೆ. ಇತ್ತೀಚೆಗೆ ಚಿತ್ರದ ಮೋಶನ್‌ ಪೋಸ್ಟರ್‌ ರಿಲೀಸ್‌ ಮಾಡಿ ಶುಭ ಕೋರಿದ್ದಾರೆ.

ಬೇಗೂರು ಕಾಲೋನಿ ಮೋಶನ್‌ ಪೋಸ್ಟರ್‌ ರಿಲೀಸ್

ದುನಿಯಾ ವಿಜಯ್‌ ಕೂಡಾ ಒಂದು ಕಾಲದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದವರು. ಹೆಚ್ಚಾಗಿ ವಿಲನ್‌ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರಿಗೆ ಹೀರೋ ಇಮೇಜ್‌ ಸಿಕ್ಕಿದ್ದು ದುನಿಯಾ ಚಿತ್ರದ ಮೂಲಕ. ಇದೀಗ ವಿಜಯ್‌ ಸ್ಟಾರ್‌ ಹೀರೋ. ಇಷ್ಟದರೂ ವಿಜಯ್‌ ಸದಾ ಹೊಸಬರಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು, ಹೊಸ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ಫ್ಲೈಯಿಂಗ್ ಕಿಂಗ್ ಮಂಜು, ಬೇಗೂರು ಕಾಲೊನಿ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಶನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ ಎನ್ ಸುರೇಶ್ , ಖ್ಯಾತ ಸಂಭಾಷಣೆಗಾರ ಮಾಸ್ತಿ ಹಾಗೂ ಇನ್ನಿತರರು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಈ ವೇಳೆ ನಟ, ನಿರ್ಮಾಪಕ ವಿಜಯ್ ಕುಮಾರ್ ಮಾತನಾಡಿ, ನಿರ್ಮಾಪಕರು ನಮ್ಮ ಊರಿನ ಕಡೆಯವರು. ಬೇಗೂರು ಕಾಲೋನಿ ಬಹಳ ಶ್ರಮ ಪಟ್ಟು ಮಾಡಿರುವ ಸಿನಿಮಾ. ಇದೊಂದು ಹೋರಾಟದ ಕಥೆ. ಇದು ಸರ್ಕಾರಕ್ಕೆ ಮುಟ್ಟಲಿ,. ಕಾಲೋನಿ ಇಲ್ಲದೇ ನಗರ ಆಗುವುದಿಲ್ಲ. ಕಾಲೋನಿ ಶಕ್ತಿ ದೊಡ್ಡ ಶಕ್ತಿಯೇ. ಕಾಲೋನಿಯವರು ಮೊದಲು ಸಿನಿಮಾ ನೋಡಿ ಆಮೇಲೆ ಮಾಲ್‌ನವರು ಬಂದು ನೋಡ್ತಾರೆ. ರಾಜೀವ್ ಬಹಳ ಶ್ರಮ ಜೀವಿ, ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಹಾರೈಸಿದರು. ನಿರ್ದೇಶಕ ಫ್ಲೈಯಿಂಗ್ ಕಿಂಗ್‌ ಮಂಜು ಮಾತನಾಡಿ, ಕಾಲೋನಿಯಲ್ಲಿ ಎಲ್ಲಾ ರೀತಿ ಜನ ವಾಸ ಮಾಡ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆಯೇ ಬೇಗೂರು ಕಾಲೋನಿ. ಇದು ಹೋರಾಟದ ಕಥೆ. ನನ್ನಂಥ ಸಣ್ಣ ನಿರ್ದೇಶಕನಿಗೆ ವಿಜಯ್ ಅಣ್ಣ ಸಾಥ್ ಕೊಟ್ಟಿದ್ದು ನಾನು ಎಂದಿಗೂ ಮೆರಯುವುದಿಲ್ಲ ಎಂದರು.

ಫ್ಲೈಯಿಂಗ್‌ ಕಿಂಗ್‌ ಮಂಜು ನಿರ್ದೇಶನದ ಸಿನಿಮಾ

ನಟ ರಾಜೀವ್ ಹನು ಮಾತನಾಡಿ,  ಮಂಜು ನನಗೆ ಸತತ 15 ವರ್ಷಗಳ ಪರಿಚಯ. ಹೊಟ್ಟೆ ತುಂಬಿದರೆ ಸಾಕು, ಬೇರೇನೂ ಬೇಡ ಎಂದು ಕೆಲಸ ಮಾಡುವ ವ್ಯಕ್ತಿ. ಅವರ ಕೆಲಸ ಪರದೆಯ ಮೇಲೆ ಕಾಣುತ್ತಿದೆ. ಇಂದು ಇಷ್ಟೂ ಜನರನ್ನು ಒಟ್ಟುಗೂಡಿಸುವ ಕೆಲಸ ಕೂಡ ಅವರದ್ದು ಹಾಗೂ ನಿರ್ಮಾಪಕರದ್ದು. ರಾಜೀವ್, ರಾಘವನಾಗಿ ನಿಂತುಕೊಳ್ತಾನೆ ಎಂಬ ನಂಬಿಕೆ ಇದೆ ಎಂದರು. ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬೇಗೂರು ಕಾಲೋನಿ ಕ್ಯಾರೆಕ್ಟರ್ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳನ್ನು ಈ ವಿಡಿಯೋದಲ್ಲಿ ಪರಿಚಯಿಸಲಾಗಿದ್ದು, ಶೀಘ್ರದಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ನಿರೀಕ್ಷೆಯಲ್ಲಿದೆ.

ಬೇಗೂರು ಕಾಲೋನಿ ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್‌ ಅಡಿ ಎಂ ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದು, ರಾಜೀವ್ ಹನು ಸೇರಿದಂತೆ ಫ್ಲೈಯಿಂಗ್ ಕಿಂಗ್ ಮಂಜು, ಪಲ್ಲವಿ ಹರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಮುರಳಿ, ಬಾಲ ರಾಜವಾಡಿ ಬಣ್ಣ ಹಚ್ಚಿದ್ದಾರೆ. ವಿಜಯ್ ಸೋವರ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಪ್ರಮೋದ್ ತಳವಾರ್ ಸಂಕಲನ, ಹಾಗೂ ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಚಿತ್ರಕ್ಕಿದೆ.

mysore-dasara_Entry_Point