ಕನ್ನಡ ಸುದ್ದಿ  /  ಮನರಂಜನೆ  /  Dwarakish Death: ಯುಗಾದಿ ಹಬ್ಬದಂದೇ ದ್ವಾರಕೀಶ್‌ಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತು! ಪತ್ನಿ ಶೈಲಜಾ ಬಿಚ್ಚಿಟ್ಟ ಸತ್ಯ

Dwarakish Death: ಯುಗಾದಿ ಹಬ್ಬದಂದೇ ದ್ವಾರಕೀಶ್‌ಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತು! ಪತ್ನಿ ಶೈಲಜಾ ಬಿಚ್ಚಿಟ್ಟ ಸತ್ಯ

ವಯಸ್ಸು ಹೆಚ್ಚಾದಂತೆ, ದ್ವಾರಕೀಶ್‌ ಅವರಲ್ಲಿ ಸಾವಿನ ಭಯವೂ ಹೆಚ್ಚಾಗುತ್ತ ಹೋಯಿತು. ಫ್ಯಾನ್‌ ಕೆಳಗೆ ಮಲಗುತ್ತಿರಲಿಲ್ಲ. ಒಬ್ಬರೇ ವಾಕಿಂಗ್‌ ಹೋಗುತ್ತಿರಲಿಲ್ಲ. ಕಣ್ಣಮುಂದೆ ಯಾರಾದರೂ ಇರಲೇಬೇಕಿತ್ತು. ಇದೆಲ್ಲದರ ನಡುವೆ ಮೊನ್ನೆ ಯುಗಾದಿಗೆ ಎಂದೂ ಕಾಣದ ಬದಲಾವಣೆ ಅವರಲ್ಲಿತ್ತು ಎಂದಿದ್ದಾರೆ ದ್ವಾರಕೀಶ್‌ ಅವರ ಎರಡನೇ ಪತ್ನಿ ಶೈಲಜಾ.

Dwarakish Death: ಯುಗಾದಿ ಹಬ್ಬದಂದೇ ದ್ವಾರಕೀಶ್‌ಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತು! ಪತ್ನಿ ಶೈಲಜಾ ಬಿಚ್ಚಿಟ್ಟ ಸತ್ಯ
Dwarakish Death: ಯುಗಾದಿ ಹಬ್ಬದಂದೇ ದ್ವಾರಕೀಶ್‌ಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತು! ಪತ್ನಿ ಶೈಲಜಾ ಬಿಚ್ಚಿಟ್ಟ ಸತ್ಯ

Dwarakisha Death: ಕರ್ನಾಟಕದ ಕುಳ್ಳ, ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ತಮ್ಮ 81ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಿರಿಯ ನಟನ ನಿಧನಕ್ಕೆ ಇಡೀ ಸ್ಯಾಂಡಲ್‌ವುಡ್‌ ಶಾಕ್‌ಗೆ ಒಳಗಾಗಿದೆ. ಚಂದನವನದ ಆಪ್ತರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸುತ್ತಿದ್ದಾರೆ. ಈ ನಡುವೆ, ಬೆಂಗಳೂರಿನ ಟೌನ್‌ ಹಾಲ್‌ ರವೀಂದ್ರ ಕಲಾಕ್ಷೇತ್ರದ ಬಳಿ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಅಪಾರ ಪ್ರಮಾಣದ ಅಭಿಮಾನಿಗಳು ಟೌನ್‌ ಹಾಲ್‌ನತ್ತ ದೌಡಾಯಿಸುತ್ತಿದ್ದಾರೆ. 12 ಗಂಟೆಯ ನಂತರ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಈ ನಡುವೆ ಪತಿಯ ನಿಧನದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ ಎರಡನೇ ಪತ್ನಿ ಶೈಲಜಾ.

ಟ್ರೆಂಡಿಂಗ್​ ಸುದ್ದಿ

ಅಂತ ಕುಟುಂಬ ಸಿಕ್ಕಿದ್ದೇ ನನ್ನ ಪುಣ್ಯ

"ನನ್ನದು ಅವರದು 38 ವರ್ಷಗಳ ಸಂಬಂಧ. ಅದನ್ನು ಹಾಗೇ ಹೇಳಲು ಆಗದು. ನಾನು ಪ್ರೀತಿಸಿದೇ ಎಂಬುದಕ್ಕಿಂತ ಅವರೇ ಪ್ರೀತಿಸಿದ್ದೇ ಜಾಸ್ತಿ. ತುಂಬ ಹಚ್ಚಿಕೊಂಡಿದ್ದರು. ನನಗೆ ದೂರ ತಳ್ಳಲಿಲ್ಲ. ಅಂಬುಜಕ್ಕ ಇದ್ದರೂ, ನನ್ನನ್ನು ಎರಡನೇ ಹೆಂಡ್ತಿ ಅಂತ ಯಾರೂ ನೋಡಲಿಲ್ಲ. ಮನೆಯವಳೇ ಆಗಿ ಹೋದೆ ನಾನು. ಮಕ್ಕಳೂ ಅಷ್ಟೇ ಆವಾಗ ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ನಾನು ತುಂಬ ಅದೃಷ್ಟ ಮಾಡಿದ್ದೆ, ಅವರ ಜತೆಗೆ ಜೀವನ ಮಾಡಿದ್ದಕ್ಕೆ. ಒಂದು ದಿನ ನನ್ನ ಮನಸ್ಸು ನೋಯಿಸಲಿಲ್ಲ. ಒಂದು ದಿನ ನನಗೆ ಬೇಜಾರು ಮಾಡಲಿಲ್ಲ"

ಸಾಸಿವೆ ಕಾಳಷ್ಟೂ ನೋವು ನೀಡಿಲ್ಲ..

"ಯುಗಾದಿ ಹಬ್ಬ ಮಾಡುವಾಗಲೂ ಅಷ್ಟೇ, ಯಾಕೋ ಕೊಂಚ ಡಲ್‌ ಆಗಿದ್ದರು. ನಾನೂ ಹೋಗಲೇಬೇಕಿತ್ತು, ಮನಸಿಗೆ ನೋವು ಮಾಡ್ಕೊಂಡು, ಹೋಗಲೇಬೇಕಾ ಪುಟ್ಟ ನೀನು ಎಂದು ಕೇಳಿದ್ದರು. ಅಂಥ ಗಂಡ ಸಿಕ್ಕಿದ್ದೇ ನನ್ನ ಪುಣ್ಯ. ಇಡೀ ಕುಟುಂಬ ಪಡೆದಿದ್ದೂ ನನ್ನ ಪುಣ್ಯ. ಅಂಬುಜಕ್ಕ ಇರಬಹುದು, ಐವರು ಮಕ್ಕಳನ್ನೂ ಪಡೆದ ನಾನೇ ಅದೃಷ್ಟವಂತೆ. ಒಂದು ಸಾಸಿವೆ ಕಾಳಿನಷ್ಟೂ ನೋವು ನೀಡಿಲ್ಲ. ಕಳೆದುಕೊಂಡು ನೋವಲ್ಲಿದ್ದೇನೆ" ಎಂದಿದ್ದಾರೆ.

ಸಾವಿನ ಭಯ ಅವರಲ್ಲಿ ಕಾಡುತ್ತಿತ್ತು

"ರಾಜಣ್ಣ ಹೋದ್ರು, ವಿಷ್ಣು ಹೋದ, ಅಂಬರೀಶ್‌ ಹೋದ.. ಪುಟ್ಟ ಎಲ್ಲರೂ ಹೋಗ್ತಿದ್ದಾರೆ. ನಾನು ಒಂಟಿಯಾಗ್ತಿದಿನಿ ಅಂತ ನನ್ನ ಮುಂದೆ ಕಣ್ಣೀರು ಸುರಿಸಿದರು. ನನ್ನ ಜತೆಗೆ ಯಾರೂ ಇಲ್ಲ, ನನ್ನ ಸ್ನೇಹಿತರೆಲ್ಲ ಹೊರಟು ಹೋದರು. ವಿಷ್ಣು ಅವರ ಸಾವಾದಾಗ ತುಂಬ ಅತ್ತರು. ನಾನು ಅದ್ಯಾವಾಗ ಹೋಗಿಬಿಡ್ತಿನೋ ಅನ್ನೋ ಭಯ ಅವರಿಗೂ ಇತ್ತು. ಇತ್ತೀಚಿನ ದಿನಗಳಲ್ಲಿ ಆ ಭಯ ಚೂರು ಜಾಸ್ತಿನೇ ಆಗಿತ್ತು. ವಾಕಿಂಗ್‌ ಹೋಗಲು ಹೆದರುವವರು, ಫ್ಯಾನ್‌ ಮೇಲೆ ಬಿದ್ದರೆ ಏನ್‌ ಕಥೆ? ಒಬ್ಬರೇ ಇರುತ್ತಿರಲಿಲ್ಲ, ಯೋಗಿ ಕಣ್ಣಿಗೆ ಕಾಣಲಿಲ್ಲ ಅಂದರೆ ಭಯಪಡೋರು. ಈಗ ಅವರನ್ನೇ ಕಳೆದುಕೊಂಡಿದ್ದೇವೆ"

ಸಾವಿನ ಮುನ್ಸೂಚನೆ ಸಿಕ್ಕಿತ್ತು

"ಒಳ್ಳೆಯ ಗಂಡ ಎಂಬುದಕ್ಕಿಂತ, ಒಳ್ಳೆಯ ಸ್ನೇಹಿತ. ನಾನು ಬ್ಯಾಂಕ್‌ನಲ್ಲಿ ಇದ್ದಿದ್ದರಿಂದ ಅಲ್ಲಿನವರಿಗೆ ಫೋನ್‌ ಮಾಡಿ ಕಿಚಾಯಿಸುತ್ತಿದ್ದರು. ಈ ನಡುವೆ ಕಳೆದ ಯುಗಾದಿ ಸಮಯದಲ್ಲಿ ಯಾವತ್ತೂ ಕಾಣದ ಒಂದು ಬದಲಾವಣೆಯನ್ನು ನಾನು ಕಂಡೆ. ಸಾವಿನ ಮುನ್ಸೂಚನೆ ಅವರಿಗೆ ಮೊದಲೇ ಸಿಕ್ಕಿತ್ತಾ ಅಂತ ಈಗ ನಮಗನಿಸುತ್ತಿದೆ. ಯಾವತ್ತೂ ಮಾಡದ ರೀತಿ, ನನ್ನ ಕೈ ಹಿಡಿದುಕೊಂಡು ಹೋಗಲೇಬೇಕಾ ಪುಟ್ಟ ಎಂದು ಕೇಳಿದರು. ತಬ್ಬಿಕೊಂಡು ನನ್ನ ಕಳಿಸಿಕೊಟ್ಟರು. ನನಗೆ ನೆನಪಿರುವ ಮಟ್ಟಿಗೆ ಅವರಿಗೆ ವಯಸ್ಸಾದ ಮೇಲಿಂದ ಯಾವತ್ತೂ ನನ್ನನ್ನು ತಬ್ಬಿಕೊಂಡಿರಲಿಲ್ಲ. ಜತೆಗೆ ತಲೆ ಸವರಿದ್ದರು" ಎಂದು ನೆನಪಿಸಿಕೊಂಡಿದ್ದಾರೆ ಶೈಲಜಾ.

IPL_Entry_Point