ಕನ್ನಡ ಸುದ್ದಿ  /  Entertainment  /  Sandalwood News Actor Jaggesh With Nanu Nandini Fame Vickypedia Vikas Ranganayaka Movie Promotion Pcp

Ranganayaka: ನನ್ನಪ್ಪನಿಗೂ ಕಣ್ಣು ಕಾಣೋಲ್ಲ, ಆದ್ರೂ ಇಬ್ರು ಮಕ್ಕಳು; ನಟ ಜಗ್ಗೇಶ್‌ ಜತೆ ನಾನು ನಂದಿನಿ ವಿಕ್ಕಿ ಪೋಲಿ ಕಾಮಿಡಿ

Ranganayaka Movie: ಕನ್ನಡ ನಟ ಜಗ್ಗೇಶ್‌ ರಂಗನಾಯಕ ಸಿನಿಮಾ ಮಾರ್ಚ್‌ 8ರಂದು ಬಿಡುಗಡೆಯಾಗಲಿದೆ. ನಾನು ನಂದಿನಿ ಬೆಂಗಳೂರಿಗೆ ಬಂದಿನಿ ಖ್ಯಾತಿಯ ಸೋಷಿಯಲ್‌ ಮೀಡಿಯಾ ಸ್ಟಾರ್‌ ವಿಕಾಸ್‌ (ವಿಕ್ಕಿಪೀಡಿಯಾ) ಜತೆ ಜಗ್ಗೇಶ್‌ ರಂಗನಾಯಕ ಸಿನಿಮಾ ಪ್ರಮೋಷನ್‌ಗಾಗಿ ಒಂದು ವಿಡಿಯೋ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ನಟ ಜಗ್ಗೇಶ್‌ ಜತೆ ನಾನು ನಂದಿನಿ ವಿಕ್ಕಿ ಕಾಮಿಡಿ
ನಟ ಜಗ್ಗೇಶ್‌ ಜತೆ ನಾನು ನಂದಿನಿ ವಿಕ್ಕಿ ಕಾಮಿಡಿ

ವಿಕ್ಕಿಪೀಡಿಯಾ ಹೆಸರಿನಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವಿಕಾಸ್‌ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ನಾನು ನಂದಿನಿ ಬೆಂಗಳೂರಿಗೆ ಬಂದಿನಿ, ಕರಿಮಣಿ ಮಾಲೀಕ ರಾವುಲ್ಲಾ ಇತ್ಯಾದಿ ವಿಡಿಯೋಗಳು ಸಾಕಷ್ಟು ವೈರಲ್‌ ಆಗಿವೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಸಾಕಷ್ಟು ಫ್ಯಾನ್ಸ್‌ ಫಾಲೋವರ್‌ಗಳನ್ನು ಹೊಂದಿರುವ ವಿಕ್ಕಿಪೀಡಿಯಾ ತಂಡವನ್ನು ಸಿನಿಮಾ ಪ್ರಮೋಷನ್‌ಗೂ ಸಾಕಷ್ಟು ಬಳಸಲಾಗುತ್ತಿದೆ. ಇತ್ತೀಚೆಗೆ ಬ್ಯಾಚುಲರ್‌ ಪಾರ್ಟಿ, ಶಿವರಾಜ್‌ಕುಮಾರ್‌ ನಟನೆಯ ಘೋಸ್ಟ್‌ ಪ್ರಚಾರಕ್ಕೂ ನಾನು ನಂದಿನಿ ತಂಡದ ವಿಡಿಯೋ ಬಳಸಲಾಗಿತ್ತು. ಇದೀಗ ನವರಸನಾಯಕ ಜಗ್ಗೇಶ್‌ ಕೂಡ ರಂಗನಾಯಕ ಸಿನಿಮಾಕ್ಕಾಗಿ ವಿಕ್ಕಿಪೀಡಿಯಾದ ಜತೆ ಒಂದು ವಿಡಿಯೋ ಮಾಡಿದ್ದಾರೆ.

ಮಂಜ ಮತ್ತು ಮಾಣಿ ರಂಗನಾಯಕ ಎಂಬ ಕ್ಯಾಪ್ಷನ್‌ನಡಿ ವಿಕ್ಕಿಪಿಡಿಯಾ ವಿಕಾಸ್‌ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿಕಾಸ್‌ ಕುರುಡನ ಪಾತ್ರ ಮಾಡಿದ್ದಾರೆ. ಜಗ್ಗೇಶ್‌ ಸಿನಿಮಾದವರ ಪಾತ್ರ ಮಾಡಿದಂತೆ ಇದೆ. ಇಲ್ಲಿ ಅಂಧ ವ್ಯಕ್ತಿಯೊಬ್ಬರು ಸಿನಿಮಾದ ಕಥೆ ಹೇಳುವ ಸೀನ್‌ ಇದೆ. ವಿಡಿಯೋಗೆ ಮಂಜ ಮತ್ತು ಮಾಣಿ ಎಂದು ಹೆಸರು ಇಡಲಾಗಿದೆ. "ನನ್ನ ತಂದೆ ಮಾಣಿ" ಎಂದು ವಿಕ್ಕಿ ಪರಿಚಯ ಮಾಡಿಕೊಳ್ಳುತ್ತಾರೆ.

"ಕಣ್ಣೇ ಕಾಣುತ್ತಿಲ್ಲ ಅನ್ತಿರಿ, ಸಿನಿಮಾ ಹೇಗೆ ಮಾಡ್ತಿರಿ?" ಎಂದು ಜಗ್ಗೇಶ್‌ ಕೇಳುತ್ತಾರೆ. "ಕಣ್ಣು ಇರುವವರು ಏನು ಚೆನ್ನಾಗಿ ಮಾಡ್ತಾರ ಸರ್‌?" ಎಂದು ವಿಕ್ಕಿ ಕೇಳುತ್ತಾನೆ. "ಸರಿ ಕಥೆ ಹೇಳಿಪಾ" ಎಂದು ಜಗ್ಗೇಶ್‌ ಹೇಳಿದಾಗ "ಇದು ಮಗಾ ತಾಯಿಗೆ ಮಾಡಿದ ಪ್ರಾಮೀಸ್‌ಗೆ ಜಗತ್ತಿನಲ್ಲಿರುವ ಚಿನ್ನವನ್ನೆಲ್ಲ ತರುವ ಕಥೆ" ಎಂದು ಹೇಳ್ತಾನೆ ಮಂಜ. "ಇವ್ರೇ ಇದನ್ನ ಆಲ್‌ರೆಡಿ ಮಾಡಿ ಬಿಸಾಕಿಬಿಟ್ಟಿದ್ದಾರೆ. ನೀವು ನೋಡಿರೊಲ್ಲ ಬಿಡಿ" "ಅಯ್ಯೋ ಇದು ನನ್ನಪ್ಪನ ಕಥೆ ಸಾರ್‌" "ನಿಮ್ಮ ಸ್ವಂತದ್ದೇನು ಇಲ್ವೇ" "ಸ್ವಂತದ್ದು ಒಂದು ಮನೆ ಇದೆ ಸಾರ್‌" "ನಾನು ಹೇಳಿದ್ದು ಕಥೆ" "ಓಹ್‌ ಕಥೆನಾ" ಎಂದು ಮಂಜ ಇನ್ನೊಂದು ಕಥೆ ಹೇಳುತ್ತಾನೆ.

"ಎಲ್ಲರ ಕಾಲ ಎಳೀತ ಎಲ್ಲರನ್ನೂ ಮುಂದಕ್ಕೆ ಕರೆದುಕೊಂಡು ಹೋಗುವಂತಹ ಕಥೆ" "ಇದನ್ನು ಹೇಳಿ" "ಸರ್‌ ಇದು ಮಾಡರ್ನ್‌ ಕಥೆ, 1911ರಲ್ಲಿ ನಡೆದ ಘಟನೆ" ಎಂದು ಮಂಜ ಹೇಳಿದಾಗ ಜಗ್ಗೇಶ್‌ "ಹೇ..." ಅನ್ತಾರೆ. ಪೂರ್ತಿ ಕೇಳಿ ಸಾರ್‌ ಎಂದು ಪೂರ್ತಿ ಕಥೆ ಹೇಳುತ್ತಾರೆ. ಕಥೆ ಇಂಟ್ರೆಸ್ಟಿಂಗ್‌ ಆಗಿದೆ ಎಂದೆನಿಸುತ್ತದೆ. ಇದು ಒಳ್ಳೆ ಕಥೆ ಆದ್ರೆ ಹಾಲಿವುಡ್‌ಗೆ ಸೂಟ್‌ ಆಗುತ್ತದೆ ಎಂದು ಜಗ್ಗೇಶ್‌ ಹೇಳುತ್ತಾರೆ. ಇದಾದ ಬಳಿಕ ಮಂಜ ಹೊರಡುತ್ತಾನೆ. "ಇನ್ನೊಂದು ಇದೆ ಡ್ರೋನ್‌ದು ಹೇಳ್ಲಾ" ಎನ್ನುತ್ತಾನೆ. ಇಲ್ಲ ನೀವಿನ್ನು ಹೊರಡಬಹುದು ಅನ್ತಾರೆ ಜಗ್ಗೇಶ್‌. ಈ ಮೂಲಕ ಈ ಸ್ಕಿಟ್‌ನಲ್ಲಿ ಡ್ರೋನ್‌ ವಿಷ್ಯವೂ ಬಂದಿದೆ.

"ಇವ್ರೇ ಕರೆಕ್ಟಾಗಿ ನಿಮಗೆ ಡೋರ್‌ ಅಲ್ಲೇ ಇರೋದು ಅಂತ ಹೇಗೆ ಗೊತ್ತಾಗುತ್ತದೆ" ಎಂದು ಸಂದೇಹದಿಂದ ಜಗ್ಗೇಶ್‌ ಕೇಳ್ತಾರೆ. "ನಮ್ಮ ಅಪ್ಪಂಗೂ ಕಣ್ಣು ಕಾಣೋಲ್ಲ, ಆದ್ರೂ ಇಬ್ರು ಮಕ್ಲು" ಎಂದು ಕಾಮಿಡಿ ಮಾಡುತ್ತಾನೆ. ಸದ್ಯ ಹೋದ ಎಂದು ಜಗ್ಗೇಶ್‌ ಬೇರೆ ಯಾರಿಗೋ ಕರೆ ಮಾಡಿ "ಗುರು ನನ್ನತ್ರ ಒಂದು ಹೊಸ ಕಥೆ ಇದೆ. 1911ನಲ್ಲಿ ನಡೆಯುವಂತಹದ್ದು" ಎಂದು ಹೇಳುತ್ತಿದ್ದಾಗ ಬಾಗಿಲಿನತ್ರ ಮಂಜ ನಿಂತಿರ್ತಾನೆ. ಕಣ್ಣಿಂದ ಕನ್ನಡಕ ತೆಗೆದು ನೋಡುತ್ತಾನೆ. ಈ ಮೂಲಕ ಕಣ್ಣು ಕಾಣಿಸುವ ವಿಷ್ಯ ಗೊತ್ತಾಗುತ್ತದೆ. ಈ ಕಾಮಿಡಿ ಸ್ಕಿಟ್‌ ಮೂಲಕ ರಂಗನಾಯಕ ಸಿನಿಮಾದ ಪ್ರಮೋಷನ್‌ ಮಾಡಲಾಗಿದೆ. ರಂಗನಾಯಕ ಸಿನಿಮಾ ಇದೇ ಮಾರ್ಚ್‌ 8ರಂದು ಬಿಡುಗಡೆಯಾಗಲಿದೆ.

IPL_Entry_Point