Kiccha Sudeep: ಆಲದ ಮರದ ಕಥೆ ಹೇಳಿದ ಕಿಚ್ಚ ಸುದೀಪ್‌; ಹೋಟೆಲ್‌ ಊಟ ಮಾಡೋ ನಾವು ಮನೆಗೆ ಬಂದು ಊಟ ಮಾಡೋಲ್ವ?
ಕನ್ನಡ ಸುದ್ದಿ  /  ಮನರಂಜನೆ  /  Kiccha Sudeep: ಆಲದ ಮರದ ಕಥೆ ಹೇಳಿದ ಕಿಚ್ಚ ಸುದೀಪ್‌; ಹೋಟೆಲ್‌ ಊಟ ಮಾಡೋ ನಾವು ಮನೆಗೆ ಬಂದು ಊಟ ಮಾಡೋಲ್ವ?

Kiccha Sudeep: ಆಲದ ಮರದ ಕಥೆ ಹೇಳಿದ ಕಿಚ್ಚ ಸುದೀಪ್‌; ಹೋಟೆಲ್‌ ಊಟ ಮಾಡೋ ನಾವು ಮನೆಗೆ ಬಂದು ಊಟ ಮಾಡೋಲ್ವ?

Kiccha Sudeep: ವಿನಯ್‌ ರಾಜ್‌ಕುಮಾರ್‌ ನಟನೆಯ ಪೆಪೆ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಟ್ರೇಲರ್‌ ಲಾಂಚ್‌ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ಕನ್ನಡ ಚಿತ್ರರಂಗದ ಸಿನಿಮಾಗಳ ಸೋಲು ಮತ್ತು ಗೆಲುವಿನ ಕುರಿತು ತನ್ನದೇ ಶೈಲಿಯಲ್ಲಿ ಮಾತನಾಡಿದ್ದು, "ಸ್ಯಾಂಡಲ್‌ವುಡ್‌ ಎನ್ನುವುದು ದೊಡ್ಡ ಆಲದ ಮರ" ಎಂದಿದ್ದಾರೆ.

Kiccha Sudeep: ಆಲದ ಮರದ ಕಥೆ ಹೇಳಿದ ಕಿಚ್ಚ ಸುದೀಪ್‌
Kiccha Sudeep: ಆಲದ ಮರದ ಕಥೆ ಹೇಳಿದ ಕಿಚ್ಚ ಸುದೀಪ್‌

ಬೆಂಗಳೂರು: ವಿನಯ್‌ ರಾಜ್‌ಕುಮಾರ್‌ ನಟನೆಯ ಪೆಪೆ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಟ್ರೇಲರ್‌ ಲಾಂಚ್‌ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ಕನ್ನಡ ಚಿತ್ರರಂಗದ ಸಿನಿಮಾಗಳ ಸೋಲು ಮತ್ತು ಗೆಲುವಿನ ಕುರಿತು ತನ್ನದೇ ಶೈಲಿಯಲ್ಲಿ ಮಾತನಾಡಿದ್ದು, "ಸ್ಯಾಂಡಲ್‌ವುಡ್‌ ಎನ್ನುವುದು ದೊಡ್ಡ ಆಲದ ಮರ" ಎಂದಿದ್ದಾರೆ. "ಒಂದು ಆಲದ ಮರ ಬೆಳೆಯಬೇಕೆಂದರೆ ಯಾವ ಸೈಜ್‌ ಇರುತ್ತದೆ" ಎಂದು ಕಿಚ್ಚ ಸುದೀಪ್‌ ಸ್ಟೇಜ್‌ನಲ್ಲಿ ಎಲ್ಲರಲ್ಲಿಯೂ ಕೇಳಿದ್ದಾರೆ. ಈ ಸಮಯದಲ್ಲಿ ನಿರೂಪಕಿ "ಒಂದು ಸಣ್ಣ ಸಸಿ" ಎನ್ನುತ್ತಾರೆ. "ಹೌದು ಇಷ್ಟು ಸಣ್ಣ ಗಾತ್ರ ಇರುತ್ತದೆ" ಎಂದು ಕಿಚ್ಚ ಬೆರಳಲ್ಲಿ ತೋರಿಸುತ್ತಾರೆ. "ಅದಾದ ಮೇಲೆ ದೊಡ್ಡದಾಗುತ್ತದೆ ಅಲ್ವ. ದೊಡ್ಡದಾಗುತ್ತ ದೊಡ್ಡದಾಗುತ್ತ ಎಷ್ಟು ದೊಡ್ಡದಾಗುತ್ತದೆ ಆಲದ ಮರ" ಎಂದು ಪ್ರಶ್ನಿಸುತ್ತಾರೆ. "ಎಷ್ಟೋ ಜನರಿಗೆ ಪ್ರಾಣಿ ಪಕ್ಷಿಗಳಿಗೆ ನೆರಳಾಗುವಷ್ಟು ದೊಡ್ಡದಾಗುತ್ತದೆ" ಎಂದು ನಿರೂಪಕಿ ಬೇಡ. "ಅಲ್ಲ ಫಿಲಾಸಫಿ ಬೇಡ" ಎನ್ನುತ್ತಾರೆ ಕಿಚ್ಚ. "ತುಂಬಾ ದೊಡ್ಡದಾಗುತ್ತದೆ" ಎನ್ನುತ್ತಾರೆ.

ಸ್ಯಾಂಡಲ್‌ವುಡ್‌ ಎನ್ನುವುದು ಆಲದ ಮರ

"ಆಲದ ಮರ ದೊಡ್ಡದಾದ ಮೇಲೆ ಸೀಸನ್‌ ಚೇಂಜ್‌ ಆಗುತ್ತದೆ. ಬೇಸಿಗೆ, ಚಳಿಗಾಲ, ಮಳೆಗಾಲ ಎಲ್ಲವೂ ಬರುತ್ತದೆ. ಬೇಸಿಗೆಯಲ್ಲಿ ಎಲೆಗಳು ಉದುರುತ್ತವೆ. ಮಳೆಗಾಲದಲ್ಲಿ ಎಲೆಗಳು ಚಿಗೊರೊಡೆಯುತ್ತವೆ. ಹಣ್ಣುಗಳು ಆಗೋ ಸಮಯದಲ್ಲಿ ಆಗುತ್ತದೆ" ಎಂದು ಸುದೀಪ್‌ ಹೇಳುತ್ತಾರೆ. "ಒಂದು ಸಸಿಯಂತೆ ಇದ್ದ ಕನ್ನಡ ಚಿತ್ರರಂಗ ಬಹಳ ವರ್ಷಗಳಿಂದ ದೊಡ್ಡ ಆಲದ ಮರ ಆಗಿದೆ. ಆಲದ ಮರ ಬೆಳೆದ ಮೇಲೆ ಇವತ್ತು ನಾವು ಕನ್ನಡ ಚಿತ್ರರಂಗ ಬಿದ್ದೋಯ್ತು, ಸೋತೋಯ್ತು ಎಂದು ಹೇಳುವುದು ಸರಿಯೇ. ಮತ್ತೆ ಗೆಲ್ಸಿ, ಮತ್ತೆ ಗಾಳಿ ಬಂದಿದೆ ಎಂದೆಲ್ಲ ಹೇಳುವುದು ಸರಿಯೇ" ಎಂದು ಸುದೀಪ್‌ ಪ್ರಶ್ನಿಸಿದ್ದಾರೆ.

"ಎಲ್ಲಾ ಲೈಫ್‌ ಇದೇ ರೀತಿ ಇರುತ್ತದೆ. ಎಪಿ ಅರ್ಜುನ್‌ ಅವರೇ ನಿಮಗೂ ಹೇಳ್ತಾ ಇದ್ದೀನಿ. ಸೋಲೋದೇ ಗೆಲ್ಲೋದಕ್ಕೆ. ಕನ್ನಡ ಚಿತ್ರರಂಗದಲ್ಲಿ ಎಷ್ಟು ಚಿತ್ರಗಳು ಸೋತಿಲ್ಲ. ಗೆದ್ದ ಚಿತ್ರಗಳಿಗಿಂತ ಸೋತ ಚಿತ್ರಗಳೇ ಇಲ್ಲಿ ಹೆಚ್ಚಿವೆ. ಇಲ್ಲಿ ಎಷ್ಟು ಸಿನಿಮಾಗಳು ಗೆದ್ದಿವೆ? ಕನ್ನಡ ಚಿತ್ರರಂಗ ಎಷ್ಟು ದೃಢವಾಗಿ ನಿಂತಿದೆ. ನಾವು ಇಲ್ಲಿ ನಿಂತುಕೊಂಡು ಸೋಲ್ತಾ ಇದೆ ಗೆಲ್ಸಿ ಗೆಲ್ಲಿಸಿ ಎಂದು ಕರ್ನಾಟಕದ ಜನತೆ ಕರ್ನಾಟಕದಲ್ಲಿದ್ದುಕೊಂಡು ಕೇಳುವುದೇ ಮೊದಲ ತಪ್ಪು" ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

"ನಿಮ್ಮನ್ನು ನೀವು ನಂಬಿ ನೀವು ಕೆಲಸ ಮಾಡಿ. ನಮ್ಮ ಜನನ ನಮ್ಮ ಭಾಷೆನ ನಂಬಿ ಕೆಲಸ ಮಾಡಿ. ನೋಡಕ್ಕೆ ಆಗದೆ ಇರುವವರು ನೋಡೋದು ಬೇಡ. ನೋಡುವವರಿಗಾಗಿ ಮಾಡಿ. ಮನೆಯಲ್ಲಿ ಚೆನ್ನಾಗಿ ಅಡುಗೆ ಮಾಡೋಲ್ವ, ಆದ್ರೂ ನಾವು ಹೋಟೆಲ್‌ನಲ್ಲಿ ಊಟ ಮಾಡೋದಿಲ್ವ. ಹೋಟೆಲ್‌ ಊಟ ಮಾಡಿ ವಾಪಸ್‌ ಮನೆಗೆ ಬಂದಿಲ್ವ. ಅವೆಲ್ಲ ಇರುತ್ತದೆ. ಗಾಳಿ ಅಂತ ಒಂದು ಬರುತ್ತದೆ. ಇವತ್ತು ಸಿನಿಮಾ ಸೋಲಲು ಏನೋ ಕಾರಣವಾಯ್ತು ಎಂದು ನೋಡಬೇಕು. ಒಂದೇ ರೀತಿಯ ಸಿನಿಮಾಗಳು ಬಂದಿರಬಹುದು" ಎಂದು ಸುದೀಪ್‌ ಹೇಳಿದ್ದಾರೆ.

"ಏನೋ ಗಾಳಿ ಬರಬೇಕು. ನೋಡಿ ಈ ಪೆಪೆ ಟ್ರೇಲರ್‌ ಬಂತಲ್ಲ. ಈ ಟ್ರೇಲರ್‌ ನೋಡುವಾಗ ವಿನಯ್‌ ನಮ್ಮ ಹುಡುಗ, ರಾಘಣ್ಣ ನಮ್ಮವರು ಅದೆಲ್ಲ ಸೈಡ್‌ಗೆ ಇಡೋಣ. ಪೆಪೆ ನೋಡಿ ನಮಗೆ ಒಂದು ಏನು ಫೀಲ್‌ ಆಯ್ತು. ಇದೇ ಗೆಲುವಿನ ಲಕ್ಷಣ. ಸಿನಿಮಾ ಮಾಡಿದಾಗ ನಮ್ಮಿಂದಲೂ ತಪ್ಪಾಗಿರಬಹುದು. ನೀವೆಲ್ಲರೂ ಹೇಳಬಹುದು, ಸುದೀಪ್‌ ಬಂದಿದ್ದಾರೆ ಪ್ರೋತ್ಸಾಹ ನೀಡ್ತಾರೆ. ನನ್ನ ಫಿಲ್ಮ್‌ಗಳೂ ಎಷ್ಟು ಸೋತಿವೆ" ಎಂದು ಸುದೀಪ್‌ ನೆನಪಿಸಿಕೊಂಡಿದ್ದಾರೆ.

ಪೆಪೆ ಸಿನಿಮಾದ ಟ್ರೇಲರ್‌

ವಿನಯ್‌ ರಾಜ್‌ಕುಮಾರ್‌ ನಟನೆಯ ಪೆಪೆ ಸಿನಿಮಾದ ಟ್ರೇಲರ್‌ ಭಾನುವಾರ ಬಿಡುಗಡೆಯಾಗಿದೆ. ಈ ಟ್ರೇಲರ್‌ನಲ್ಲಿ ವಿನಯ್‌ ರಾಜ್‌ಕುಮಾರ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Whats_app_banner