Kichcha Sudeep: ತಪ್ಪನ್ನು ಸರಿಯೆಂದು ನಾನೇಕೆ ಒಪ್ಪಿಕೊಳ್ಳಲಿ; ನಿರ್ಮಾಪಕ ಕುಮಾರ್ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಸುದೀಪ್‌
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ತಪ್ಪನ್ನು ಸರಿಯೆಂದು ನಾನೇಕೆ ಒಪ್ಪಿಕೊಳ್ಳಲಿ; ನಿರ್ಮಾಪಕ ಕುಮಾರ್ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಸುದೀಪ್‌

Kichcha Sudeep: ತಪ್ಪನ್ನು ಸರಿಯೆಂದು ನಾನೇಕೆ ಒಪ್ಪಿಕೊಳ್ಳಲಿ; ನಿರ್ಮಾಪಕ ಕುಮಾರ್ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಸುದೀಪ್‌

ನೇರವಾಗಿ ಕೋರ್ಟ್‌ ಮೆಟ್ಟಿಲೇರಿರುವ ಸುದೀಪ್, ನೋಟೀಸ್‌ ಮೂಲಕ ಹೇಳಿದಂತೆ ನಿರ್ಮಾಪಕ ಕುಮಾರ್‌ಗೆ ವಿರುದ್ಧ 10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇತ್ತ ನಾನೂ ಕಾನೂನು ಮೂಲಕ ಉತ್ತರ ಪಡೆಯಲಿದ್ದೇನೆ ಎಂದಿದ್ದಾರೆ ಕುಮಾರ್‌.

ತಪ್ಪನ್ನು ಸರಿಯೆಂದು ನಾನೇಕೆ ಒಪ್ಪಿಕೊಳ್ಳಲಿ; ನಿರ್ಮಾಪಕರ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಸುದೀಪ್‌
ತಪ್ಪನ್ನು ಸರಿಯೆಂದು ನಾನೇಕೆ ಒಪ್ಪಿಕೊಳ್ಳಲಿ; ನಿರ್ಮಾಪಕರ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಸುದೀಪ್‌

Kichcha Sudeep: ಕಳೆದ 15 ದಿನಗಳಿಂದ ನಟ ಸುದೀಪ್‌ ಮತ್ತು ನಿರ್ಮಾಪಕ ಕುಮಾರ್‌ ನಡುವಿನ ಕಿತ್ತಾಟ ಕೋರ್ಟ್‌ ಮೆಟ್ಟಿಲೇರಿದೆ. ಈ ವರೆಗೂ ಪತ್ರಿಕಾಗೋಷ್ಠಿಯ ಮೂಲಕ ನಟ ಸುದೀಪ್‌ ವಿರುದ್ಧ ಹಲವು ಆರೋಪ ಮಾಡಿದ್ದ ನಿರ್ಮಾಪಕ ಕುಮಾರ್‌, ನಮಗೆ ಸುದೀಪ್‌ ಅವರಿಂದ ಅನ್ಯಾಯವಾಗಿದೆ ಎಂದು ಹೇಳಿಕೊಂಡಿದ್ದರು. ನಿರ್ಮಾಪಕರ ಆರೋಪವನ್ನು ಅಲ್ಲಗೆಳೆದ ಸುದೀಪ್‌, ಕುಮಾರ್‌ಗೆ ನೋಟೀಸ್‌ ರವಾನಿಸಿ, ಎಚ್ಚರಿಕೆ ಸಂದೇಶ ರವಾನಿಸಿದ್ದರು. ಇದೀಗ ಈ ವಿಚಾರ ಕೋರ್ಟ್‌ ಮೆಟ್ಟಿಲೇರಿದೆ.

ಶನಿವಾರ ಬೆಳಗ್ಗೆ (ಜುಲೈ 15) ಬೆಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಂದ ಸುದೀಪ್‌, ನಿರ್ಮಾಪಕ ಎನ್‌. ಕುಮಾರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಸಮರಕ್ಕಿಳಿದಿದ್ದಾರೆ. ಈ ಕಾನೂನು ಹೋರಾಟದ ಬಗ್ಗೆ ಇಬ್ಬರೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾರಿಗೆ ಉತ್ತರ ನೀಡಬೇಕಿತ್ತೋ, ಅವರಿಗೆ ಕೊಡಲಿದ್ದೇನೆ ಎಂದು ಸುದೀಪ್‌ ಹೇಳಿದರೆ, ಇತ್ತ ಎನ್‌. ಕುಮಾರ್‌, ನನಗೆ ಜುಲೈ 13ರಂದು ನೋಟೀಸ್‌ ಸಿಕ್ಕಿದೆ. ಇನ್ಮೇಲೆ ನಾನೂ ಸಹ ನನ್ನ ವಕೀಲರ ಮೂಲಕ ಉತ್ತರಿಸಲಿದ್ದೇನೆ ಎಂದಿದ್ದಾರೆ.

ತಪ್ಪನ್ನು ಸರಿಯೆಂದು ನಾನೇಕೆ ಒಪ್ಪಿಕೊಳ್ಳಲಿ

ನಾನು ಅನುಕಂಪದ ಆಧಾರ ಮೇಲೆ ಕುಮಾರ್‌ಗೆ ಸಹಾಯ ಮಾಡಲು ಮುಂದಾಗಿದ್ದೆ. ಅದು ನನ್ನ ವಿರುದ್ಧ ಹೊರಳಿದೆ. ಹಾಗಾಗಿ ನಾನು ಏನೇ ಮಾಡಿದರೂ, ಕಾನೂನಿನ ನಡೆಯಂತೆ ಸಾಗಲಿದ್ದೇನೆ. ಅದರ ಚೌಕಟ್ಟಿನಲ್ಲಿಯೇ ಉತ್ತರ ಪಡೆಯಲಿದ್ದೇನೆ. ಇತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ಮೇಲೆ ನನಗೆ ಅಪಾರ ಗೌರವವಿದೆ. ಮೊದಲನೆಯದಾಗಿ ನಾನು ತಪ್ಪು ಮಾಡಿಲ್ಲ. ಒಂದು ವೇಳೆ ತಪ್ಪಾಗಿದ್ದರೆ ಒಪ್ಪಿಕೊಳ್ಳುವೆ. ಆದರೆ ಸರಿಯಾಗಿ ಇದ್ದಾಗ ಅದನ್ನು ತಪ್ಪೆಂದು ಒಪ್ಪುಕೊಳ್ಳುವುದು ಸರಿಯಲ್ಲ. ಈಗ ಕೋರ್ಟ್‌ ಮೂಲಕವೇ ನಾನು ಉತ್ತರ ಪಡೆಯುತ್ತೇನೆ. ಅಲ್ಲಿಯವರೆಗೂ ನಾನೂ ಏನನ್ನೂ ಮಾತನಾಡುವುದಿಲ್ಲ ಎಂದಿದ್ದಾರೆ ಸುದೀಪ್.‌

ವಕೀಲರ ನೇಮಿಸಿ ಕಾನೂನು ಹೋರಾಟಕ್ಕಿಳಿಯುವೆ

ಇನ್ನು ಇತ್ತ ಕಿಚ್ಚ ಸುದೀಪ್‌ ಕೋರ್ಟ್‌ ಮೆಟ್ಟಿಲೇರಿದ ಬಳಿಕ ಮಾತನಾಡಿರುವ ನಿರ್ಮಾಪಕ ಕುಮಾರ್‌, ಸುದೀಪ್‌ ಕಳುಹಿಸಿರುವ ನೋಟೀಸ್‌ ನನಗೆ ಜುಲೈ 13ರಂದು ಸಿಕ್ಕಿದೆ. ಆ ನೋಟೀಸ್‌ ಕನ್ನಡದ ಬದಲು ಇಂಗ್ಲಿಷ್‌ನಲ್ಲಿತ್ತು. ನನಗೆ ಇಂಗ್ಲೀಷ್‌ ಬರದ ಹಿನ್ನೆಲೆಯಲ್ಲಿ, ಇಂದು (ಜು. 15) ನಾನು ನನ್ನ ವಕೀಲರನ್ನು ಭೇಟಿ ಮಾಡಬೇಕೆಂದುಕೊಂಡಿದ್ದೆ. ಅಷ್ಟರಲ್ಲಿಯೇ ಸುದೀಪ್‌ ಅವರು ಕೋರ್ಟ್‌ಗೆ ಮೆಟ್ಟಿಲೇರಿದ್ದಾರೆ. ಕೋರ್ಟ್‌ನಲ್ಲಿ ನನ್ನ ಮೇಲೆ ಏನೆಲ್ಲ ಆರೋಪ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಹಾಗಾಗಿ ನನ್ನ ವಕೀಲರ ಸಲಹೆ ಪಡೆದುಕೊಂಡೇ ನಾನೂ ಸಹ ಕಾನೂನಿನ ಮೂಲಕವೇ ಮುಂದುವರಿಯುತ್ತೇನೆ ಎಂದಿದ್ದಾರೆ.

ಕೂತು ಮಾತಾಡೋಣ ಬನ್ನಿ ಎಂದರೂ ಬರಲಿಲ್ಲ..

ಈಗಾಗಲೇ ನಾನು ಕನ್ನಡದಲ್ಲಿ ಸಾಕಷ್ಟು ಸಿನಿಮಾ ನಿರ್ಮಾಣ ಮಾಡಿದ್ದೇನೆ. ಸಿನಿಮಾ ವಿತರಕನಾಗಿಯೂ ಕೆಲಸ ಮಾಡಿದ್ದೇನೆ. ಹೀಗಿರುವಾಗ ಈ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಎದುರಾದಾಗ, ಇಬ್ಬರೂ ಕೂತು ಮಾತನಾಡಿದ್ದರೆ ಮುಗಿಯುತ್ತಿತ್ತು. ನಮ್ಮ ಸಮಸ್ಯೆ ಬಗೆ ಹರಿಸಿಕೊಳ್ಳಲು ವಾಣಿಜ್ಯ ಮಂಡಳಿ ಇದೆ. ಬನ್ನಿ ಮಾತನಾಡೋಣ ಎಂದು ಅವರಿಗೆ ಹೇಳಿದ್ದೆ. ಆದರೆ, ಅವರು ಬರಲಿಲ್ಲ. ನೇರವಾಗಿ ಕೋರ್ಟ್‌ಗೆ ಹೋಗಿದ್ದಾರೆ. ನಾನೂ ಸಹ ನನ್ನ ವಕೀಲರೊಂದಿಗೆ ಕೋರ್ಟ್‌ಗೆ ತೆರಳುತ್ತೇನೆ" ಎಂದಿದ್ದಾರೆ.

Whats_app_banner