Actor Kishore: ನಿಮ್ಮ 56 ಇಂಚಿನ ಬಡಾಯಿಗೆ, ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ; ಮೋದಿ ವಿರುದ್ಧ ಮತ್ತೆ ತಿರುಗಿ ಬಿದ್ದ ನಟ ಕಿಶೋರ್‌
ಕನ್ನಡ ಸುದ್ದಿ  /  ಮನರಂಜನೆ  /  Actor Kishore: ನಿಮ್ಮ 56 ಇಂಚಿನ ಬಡಾಯಿಗೆ, ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ; ಮೋದಿ ವಿರುದ್ಧ ಮತ್ತೆ ತಿರುಗಿ ಬಿದ್ದ ನಟ ಕಿಶೋರ್‌

Actor Kishore: ನಿಮ್ಮ 56 ಇಂಚಿನ ಬಡಾಯಿಗೆ, ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ; ಮೋದಿ ವಿರುದ್ಧ ಮತ್ತೆ ತಿರುಗಿ ಬಿದ್ದ ನಟ ಕಿಶೋರ್‌

ಬಹುಭಾಷಾ ನಟ ಕಿಶೋರ್‌ ಮತ್ತೆ ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಣಿಪುರದಲ್ಲಿ ಯುವತಿಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ ಎಂದಿದ್ದಾರೆ.

ನಿಮ್ಮ 56 ಇಂಚಿನ ಬಡಾಯಿಗೆ, ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ; ಮೋದಿ ವಿರುದ್ಧ ಮತ್ತೆ ತಿರುಗಿ ಬಿದ್ದ ನಟ ಕಿಶೋರ್‌
ನಿಮ್ಮ 56 ಇಂಚಿನ ಬಡಾಯಿಗೆ, ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ; ಮೋದಿ ವಿರುದ್ಧ ಮತ್ತೆ ತಿರುಗಿ ಬಿದ್ದ ನಟ ಕಿಶೋರ್‌

Actor Kishore: ಮಣಿಪುರದಲ್ಲಿ ಯುವತಿಯರ ಬಟ್ಟೆ ಬಿಚ್ಚಿಸಿ ನಡು ರಸ್ತೆಯಲ್ಲಿ ಮೆರವಣಿಗೆ ಮಾಡಿದ ಹೇಯ ಕೃತ್ಯ ಸುದೀರ್ಘ 77 ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಕೆಲ ತಿಂಗಳ ಹಿಂದೆ ಇಬ್ಬರು ಯುವತಿಯರ ಬಟ್ಟೆ ಬಿಚ್ಚಿ ಸಾಮೂಹಿಕ ಅತ್ಯಾಚಾರ ನಡೆಸಿ ಅಮಾನವೀಯ ಘಟನೆಗೆ ಸಾಕ್ಷಿಯಾಗಿತ್ತು ಮಣಿಪುರ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರ ಸರ್ಕಾರದ ನಡೆ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಕಿಶೋರ್‌ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಕಿಶೋರ್‌ ಹೀಗೆ ಕೇಂದ್ರದ ವಿರುದ್ಧ ತಿರುಗಿ ಬಿದ್ದದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಮೋದಿ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ಕಟು ಶಬ್ದಗಳಿಂದ ತಮ್ಮ ಆಕ್ರೋಶವನ್ನು ಹೊರಹಾಕುತ್ತಲೇ ಬಂದಿದ್ದಾರೆ. ಕುಸ್ತಿಪಟುಗಳನ್ನು ನಿರ್ಲಕ್ಷಿಸಿದ ವೇಳೆಯೂ ಮೋದಿ ಬಗ್ಗೆ ಕಾಮೆಂಟ್‌ ಮಾಡಿದ್ದರು ಕಿಶೋರ್‌. ಈಗ ಮಣಿಪುರದಲ್ಲಿ ನಡೆದ ಯುವತಿಯರ ಬೆತ್ತಲೆ ಮರವಣಿಗೆ ಮತ್ತು ಅತ್ಯಾಚಾರಗೈದ ಹೇಯ ಕೃತ್ಯವನ್ನು ಖಂಡಿಸಿ ಕೇಂದ್ರ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಿಶೋರ್‌ ಹೇಳುವುದೇನು?

"ಕೇವಲ ಮತ ​​ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನೀವು ಈಗಲಾದರೂ ನಿಮ್ಮ ಬಾಯಿ ತೆರೆದು ಈ ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ, ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ. ಹೌದು, ನಿಮ್ಮಿಂದ ನಾವು ಏನನ್ನಾದರೂ ನಿರೀಕ್ಷಿಸಲು ಹೇಗೆ ಸಾಧ್ಯ? ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬೆಂಬಲಿಸಿದವರು ನೀವೇ ಅಲ್ಲವೇ? ಎಂದು ಹಲವು ಪ್ರಕರಣಗಳನ್ನೂ ಇಲ್ಲಿ ಸೇರಿಸಿ ಮಾತನಾಡಿದ್ದಾರೆ.

ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರ

ಮುಂದುವರಿದು ಮಾತನಾಡಿರುವ ಕಿಶೋರ್‌, "ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬಿಡುಗಡೆ ಮಾಡಿ ಸಂಭ್ರಮಿಸಿದವರು ನೀವೇ ಅಲ್ಲವೇ? ಹಾತ್ರಸ್‌ನ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಮುಚ್ಚಿ ಮುಗಿಸಿದವರು ನೀವೇ ಅಲ್ಲವೇ??? ನಿಮ್ಮ ಘೋಷಣೆಗಳನ್ನು ನಿಲ್ಲಿಸಿ ಮೊದಲು ಕೆಲಸ ಮಾಡಿ.. ನಿಮ್ಮ ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ…" ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಏನಿದು ಘಟನೆ?

ಮಣಿಪುರದ ರಾಜಧಾನಿ ಇಂಪಾಲದಿಂದ 35 ಕಿಮೀ ದೂರದಲ್ಲಿರುವ ಕಾಂಗ್‌ ಪೋಕ್ಪಿಯಲ್ಲಿ ಮೇ 4ರಂದು ನಡೆದ ಘಟನೆ ಇಡೀ ದೇಶವೇ ತಲೆತಗ್ಗಿಸುವ ಕೃತ್ಯ ನಡೆದಿತ್ತು. ಇಬ್ಬರು ಯುವತಿಯರನ್ನು ವಿವಸ್ತ್ರಗೊಳಿಸಿ ನಡು ಬೀದಿಯಲ್ಲಿ ಮೆರವಣಿಗೆ ಮಾಡಿದ್ದಲ್ಲದೆ, ಯುವತಿಯರ ಪೋಷಕರನ್ನೂ ಹತ್ಯೆಗೈಯಲಾಗಿತ್ತು. ಈ ಮೆರವಣಿಗೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿಯೂ ವೈರಲ್‌ ಆಗಿದ್ದು, ಅಂದಿನಿಂದ ಇಲ್ಲಿಯವರೆಗೂ ಯಾರನ್ನೂ ಬಂಧಿಸಿರಲ್ಲಿಲ್ಲ. ಈಗ ಜು. 20ರಂದು 77 ದಿನಗಳ ಬಳಿಕ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Whats_app_banner