ಕನ್ನಡ ಸುದ್ದಿ  /  ಮನರಂಜನೆ  /  ‘ಸೆಲೆಬ್ರಿಟಿ ಬದುಕೇ ಜೈಲುವಾಸ, ಅದು ಒಂಟಿ ಭಿಕ್ಷುಕನ ಜೀವನ’; ನವರಸ ನಾಯಕ ಜಗ್ಗೇಶ್‌ ಮಾತಿನ ಮರ್ಮವೇನು?

‘ಸೆಲೆಬ್ರಿಟಿ ಬದುಕೇ ಜೈಲುವಾಸ, ಅದು ಒಂಟಿ ಭಿಕ್ಷುಕನ ಜೀವನ’; ನವರಸ ನಾಯಕ ಜಗ್ಗೇಶ್‌ ಮಾತಿನ ಮರ್ಮವೇನು?

ಸೆಲೆಬ್ರಿಟಿ ಜೀವನ ಎಷ್ಟು ಕಷ್ಟ ಎಂಬುದನ್ನು ಸ್ವತಃ ಅದನ್ನು ಅನುಭವಿಸಿದವರಿದ್ದಾರೆ. ಬಹಿರಂಗವಾಗಿಯೇ ಅದು ಎಷ್ಟು ಕಷ್ಟದ ಬದುಕು ಎಂದೂ ಹೇಳಿಕೊಂಡಿದ್ದಾರೆ. ಈಗ ಜಗ್ಗೇಶ್‌ ಸಹ ಅದೇ ಸೆಲೆಬ್ರಿಟಿ ಬದುಕನ್ನು ವರ್ಣಿಸಿದ್ದಾರೆ.

‘ಸೆಲೆಬ್ರಿಟಿ ಬದುಕೇ ಜೈಲುವಾಸ, ಅದು ಒಂಟಿ ಭಿಕ್ಷುಕನ ಜೀವನ’; ನವರಸ ನಾಯಕ ಜಗ್ಗೇಶ್‌ ಮಾತಿನ ಮರ್ಮವೇನು?
‘ಸೆಲೆಬ್ರಿಟಿ ಬದುಕೇ ಜೈಲುವಾಸ, ಅದು ಒಂಟಿ ಭಿಕ್ಷುಕನ ಜೀವನ’; ನವರಸ ನಾಯಕ ಜಗ್ಗೇಶ್‌ ಮಾತಿನ ಮರ್ಮವೇನು?

Jaggesh: ಸ್ಯಾಂಡಲ್‌ವುಡ್‌ ನವರಸ ನಾಯಕ ಜಗ್ಗೇಶ್‌, ನಟನೆಯ ಜತೆ ಜತೆಗೆ ಅವರ ಜೀವನಾನುಭವದ ಮಾತುಗಳಿಂದಲೇ ಇತರರಿಗೂ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿರುತ್ತಾರೆ. ರಿಯಾಲಿಟಿ ಶೋಗಳಲ್ಲಿ, ಸಿನಿಮಾ ಇವೆಂಟ್‌ಗಳಲ್ಲಿ ಕೈಗೆ ಮೈಕ್‌ ಸಿಗುತ್ತಿದ್ದಂತೆ, ಹಳೇ ಕಥೆಗಳನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಾರೆ ಜಗ್ಗೇಶ್. ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಿರುವ ಜಗ್ಗೇಶ್‌ ಅಲ್ಲಿಯೂ ಆಗೊಂದು ಈಗೊಂದು ಘಟನಾವಳಿಗಳನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಈಗ ಸೆಲೆಬ್ರಿಟಿ ಬದುಕಿನ ಒಳಗೆ ಎಷ್ಟೆಲ್ಲ ಸಮಸ್ಯೆಗಳಿವೆ ಎಂಬುದನ್ನು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸೆಲೆಬ್ರಿಟಿ ಜೀವನ ಎಷ್ಟು ಕಷ್ಟ ಎಂಬುದನ್ನು ಸ್ವತಃ ಅದನ್ನು ಅನುಭವಿಸಿದವರಿದ್ದಾರೆ. ಬಹಿರಂಗವಾಗಿಯೇ ಅದು ಎಷ್ಟು ಕಷ್ಟದ ಬದುಕು ಎಂದೂ ಹೇಳಿಕೊಂಡಿದ್ದಾರೆ. ಸೆಲೆಬ್ರಿಟಿ ಜೀವನದಿಂದ ವೈಯಕ್ತಿಕ ಬದುಕು ನಾಶವಾಗುತ್ತಿದೆ ಎಂದೂ ಕೆಲವರು ಬೇಸರ ಹೊರಹಾಕಿದ ಉದಾಹರಣೆಗಳಿವೆ. ಈಗ ನಟ ಜಗ್ಗೇಶ್‌ ಸಹ ಅದೇ ಸೆಲೆಬ್ರಿಟಿ ಬದುಕನ್ನು ವರ್ಣಿಸಿದ್ದಾರೆ. ಈ ಪಂಜರದಲ್ಲಿ ಸಿಲುಕಿ ತಾವೆಷ್ಟು ಒದ್ದಾಡುತ್ತಿದ್ದೇವೆ ಎಂಬುದನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಹೀಗಿದೆ ನಟ ಜಗ್ಗೇಶ್‌ ಬರೆದ ಸುದೀರ್ಘ ಪೋಸ್ಟ್‌

"ಸೆಲೆಬ್ರಿಟಿ ಆಗಲು ಎಲ್ಲರು ಒಂದಿಲ್ಲಾ ಒಂದು ರೀತಿ ಯತ್ನಿಸುತ್ತಾರೆ. ಕೆಲವರು ನಟ ನಟಿಯರಾಗಿ, ಕೆಲವರು ರಂಗಕಲಾವಿದರಾಗಿ, ಕೆಲವರು ಟೀವಿ, ಕೆಲವರು ತಮ್ಮ ಮೊಬೈಲ್ ಮೂಲಕ, ಮತ್ತೆ ಕೆಲವರು ಯೂಟ್ಯೂಬ್ ಮೂಲಕ ಒಟ್ಟಾರೆ ಹೇಗಾದರು ಸರಿ ಸೆಲೆಬ್ರಿಟಿ ಆಗಲೇಬೇಕು ಆಗದಿದ್ದರೆ ಡಿಪ್ರೇಷನ್‌ಗೆ ಒಳಗಾಗುತ್ತಾರೆ.

"ನಾನು ಸೆಲಿಬ್ರಿಟಿ ಕನಸು ಕಂಡವನಲ್ಲಾ. ಕಟ್ಟಿಕೊಂಡ ಮಡದಿ ಹಾಗೂ ಸಾಧಿಸಿ ಸಾಯಬೇಕು ಎಂಬ ಸಾಮಾನ್ಯ ಮನುಷ್ಯನ ಕನಸು ಮಾತ್ರ ಆಗಿತ್ತು. ಯಾವ ದೇವರ ವರವೋ ಯಾವ ಗುರುವಿನ ಕೃಪೆಯೋ ಅನ್ನದ ಸೂರಿನ ಜೊತೆ ದೊಡ್ಡ ಹೆಸರು ಪ್ರಾಪ್ತವಾಯಿತು. ಜೊತೆಗೆ ನನ್ನ ವೈಯಕ್ತಿಕ ಸಂತೋಷ ಕಮರಿಹೋಯಿತು. ಎಲ್ಲರಂತೆ ಎಲ್ಲಾಕಡೆ ಎಲ್ಲಾ ಸಂತೋಷ ನೋಡುವ ಯೋಗ ಇಲ್ಲವಾಯಿತು"

"ಪ್ರತಿದಿನ ಯಾರು ಏನು ಹೇಳುತ್ತಾರೋ? ಯಾರು ತಪ್ಪು ಕಂಡು ಹಂಗಿಸುತ್ತಾರೋ? ಯಾರು ನಮ್ಮ ಬಾಯಿಂದ ಬಂದ ಅರಿಯದ ಮಾತು ಬಳಸಿ ಲೈಕ್ಸ್ ಪಡೆದು ಗಹಗಹಿಸಿ ನಗುತ್ತಾರೋ? ನನ್ನ ಖಾಸಗಿ ಸಂತೋಷವನ್ನು ಕಾಣದಂತೆ ಮೊಬೈಲ್ ನಲ್ಲಿ ಚಿತ್ರಿಸಿ ಲೈಕ್ಸ್ ಗಾಗಿ ಸಂಭ್ರಮಿಸೋ ಪುಣ್ಯಾತ್ಮರು ಬರುತ್ತಾರೋ? ಯಾರು ನನ್ನ ಕೇಡು ಬಯಸುತ್ತಾರೋ? ಒಟ್ಟಾರೆ ಸೆಲಿಬ್ರಿಟಿ ಬದುಕು ಜೀವನ ಪರ್ಯಂತ ಜೈಲುವಾಸದ ಬದುಕು ಅಥವಾ ಮಹಡಿ ಮನೆಯ ಒಂಟಿ ಭಿಕ್ಷುಕನ ಜೀವನ ಸೆಲಿಬ್ರಿಟಿಯ ಬದುಕು"

"ಇದನ್ನೆಲ್ಲಾ ಬದಿಗೊತ್ತಿ ನಾನು ಎಲ್ಲರಂತೆ ಸ್ವತಂತ್ರ ಜೀವಿಯೋ ಅಥವಾ ಪಂಜರದಿಂದ ಹಾರಿ ಪರಿಸರ ಸವಿಯೋ ಪಕ್ಷಿಯಂತೆ ಒಬ್ಬಂಟಿಯಾಗಿ ಆನಂದ ಪಡೆಯೋ ಯತ್ನಮಾಡುತ್ತಿದ್ದೇನೆ. ಇದರಲ್ಲಿ ಪೂರ್ಣ ಸಂತೋಷ ಸಿಗುತ್ತಿದೆಯೇ? ಸತ್ಯವಾಗಿಯೂ ಇಲ್ಲಾ. ಏನೋ ಒಂದೆ ಕಡೆ ಗೂಬೆಯಂತೆ ಇರಬಾರದು ಎಂಬ ಸಣ್ಣ ಪರಿವರ್ತನೆ ಅಷ್ಟೆ ಈ ಸೆಲಿಬ್ರಿಟಿಯ ಬದುಕು"

"ನಾನು ನನ್ನ ಸಹಾಯಕ ರಸ್ತೆಯಲ್ಲಿ ಸಿಕ್ಕ ತಾಟಿಲಿಂಗು ವ್ಯಾಪಾರಿಯ ಜೊತೆ ವ್ಯಾಪಾರ ಮುಗಿಸಿ ಅವನಿಗೆ ಸಂತೋಷ ಆಗುವಂತೆ ಅವನ ಬಂಡವಾಳ ಎರಡು ಹಣ್ಣಿಗೆ ನೀಡಿದಾಗ ಅವನ ಕಂಗಳ ಆನಂದಭಾಷ್ಪ ಶಿವನ ಜಲಾಭಿಷೇಕದಂತೆ ಭಾಸವಾಯಿತು"

"ಸೆಲಿಬ್ರಿಟಿಯ ಬದುಕು ಕಂಡು, ನೀವು ಸೆಲಿಬ್ರಿಟಿ ಆಗಬೇಕ? ಇಲ್ಲಾ ಸೆಲಿಬ್ರಿಟಿಯ ಮೇಲೆ ಪ್ರೀತಿ ಕರುಣೆ ತೋರಬೇಕ? ದೇವರು ವಾಸಮಾಡೋ ನಿಮ್ಮ ಹೃದಯಕ್ಕೆ ಸೇರಿದ್ದು. ಜೀವನ ನಾಟಕರಂಗ, ಸಮಾಜವೇ ರಂಗಮಂದಿರ, ದೇವರೆ ಸೂತ್ರದಾರ, ಅಭಿಮಾನಿಗಳೆ ಬಂಧುಮಿತ್ರರು" ಎಂದಿದ್ದಾರೆ ಜಗ್ಗೇಶ್‌.

IPL_Entry_Point