ಕನ್ನಡ ಸುದ್ದಿ  /  ಮನರಂಜನೆ  /  ‘ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ’; ನಟ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌

‘ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ’; ನಟ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌

ಎಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ, ಯುವ ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

‘ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋಗಳನ್ನು ನಾನು ನೋಡುವ ಧೈರ್ಯ ಮಾಡಿಲ್ಲ’; ನಟ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌
‘ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋಗಳನ್ನು ನಾನು ನೋಡುವ ಧೈರ್ಯ ಮಾಡಿಲ್ಲ’; ನಟ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌

Nikhil Kumaraswamy on Prajwal Revanna case: ಹಾಸನದ ಜೆಡಿಎಸ್‌ ಮುಖಂಡ, ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ತನಿಖೆಯ ಹಾದಿಯಲ್ಲಿ SIT ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ವೆಸ್ಟಿಗೇಷನ್‌ ಮುಂದುವರಿಸಿದೆ. ಈ ನಡುವೆ ಎಚ್‌.ಡಿ ರೇವಣ್ಣ ಅವರಿಗೆ ಬಂಧನ ಭೀತಿ ಎದುರಾಗಿದ್ದು, ತಲೆ ಮರೆಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದೆಲ್ಲದರ ನಡುವೆ ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಒಂದಷ್ಟು ಮಹಿಳೆಯರು ದೂರು ನೀಡುವ ಪ್ರಕ್ರಿಯೆಯೂ ಮುಂದುವರಿದೆ. ಅದರಂತೆ ಶುಕ್ರವಾರ, ಬಂದೂಕು ಬೆದರಿಕೆಯಡಿ ಅತ್ಯಾಚಾರ ಎಸಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದ್ಯಸೆಯೊಬ್ಬರು ದೂರು ನೀಡಿದ್ದಾರೆ. ಈ ಎಲ್ಲ ಘಟನಾವಳಿಗಳ ಬೆನ್ನಲ್ಲೆ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಸಹ ಮೊದಲ ಸಲ ಈ ಕೇಸ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಜ್ಜಿ ತಾತ ನೋವಲ್ಲಿದ್ದಾರೆ..

“ನಮ್ಮ ಅಜ್ಜಿ ತಾತ ಸಾಕಷ್ಟು ನೋವಲ್ಲಿದ್ದಾರೆ. ಈಗಾಗಲೇ SIT ರಚನೆಯಾಗಿದೆ. ತನಿಖೆ ಆರಂಭವಾಗ್ತಿದೆ. ನನಗೆ ದುಃಖ ತಂದುಕೊಟ್ಟ ವಿಚಾರ ಏನೆಂದರೆ, ಆ ದೃಶ್ಯಾವಳಿಗಳನ್ನು ನೋಡುವ ಧೈರ್ಯ ನಾನು ಮಾಡಲಿಲ್ಲ. ನನ್ನ ಕೆಲವೊಂದಿಷ್ಟು ಸುತ್ತಮುತ್ತಲಿನ  ಆಪ್ತ ವರ್ಗ ಫೋನ್‌ ಮಾಡಿ ಹೇಳಿದಾಗ, ಮನಸ್ಸಿಗೆ ಬೇಜಾರಾಯ್ತು”

ಹೆಣ್ಣುಮಕ್ಕಳ ಮಾನಹಾನಿ ಖಂಡನೀಯ

"ಸಹಜವಾಗಿ, ಈ ರೀತಿಯ ಡಿಸ್ಟರ್ಬಿಂಗ್‌ ವಿಡಿಯೋಗಳು ಇದ್ದ ಸಂದರ್ಭದಲ್ಲಿ ಕನಿಷ್ಠ ಪಕ್ಷ ಬ್ಲರ್‌ ಆದ್ರೂ ಮಾಡಬೇಕಿತ್ತು.  ಇವತ್ತು ಆ ಹೆಣ್ಣು ಮಕ್ಕಳ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡುತ್ತಿದ್ದಾರೆ. ಓಪನ್‌ ಆಗಿಯೇ ಅವರ ಮುಖ ಕಾಣುವ ರೀತಿಯಲ್ಲಿ ರಾಜ್ಯದ ಜನತೆಗೆ ತೋರಿಸಿದ್ದಾರೆ. ಈ ಬಗ್ಗೆಯೂ ಹೆಚ್ಚಿನ ತನಿಖೆ ಆಗಬೇಕು ಎಂಬುದು ವೈಯಕ್ತಿಕ ಅಭಿಪ್ರಾಯ" ಎಂದಿದ್ದಾರೆ.

ಕಾನೂನಿಗಿಂತ ಯಾರೂ ದೊಡ್ಡವರಿಲ್ಲ

ದೇವೇಗೌಡ ಅವರನ್ನು, ಕುಮಾರಣ್ಣ ಅವರನ್ನು ಈ ಪ್ರಕರಣದಲ್ಲಿ ಎಳೆದು ತರುವುದು ಸಮಂಜಸ ಅಲ್ಲ.‌ ಈಗಾಗಲೇ ಆರೋಪಿ ಸ್ಥಾನದಲ್ಲಿ ಪ್ರಜ್ವಲ್‌ ಇದ್ದಾರೆ. ಅಂತಿಮವಾಗಿ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ತಪ್ಪು ಮಾಡಿದವರು ತಲೆ ಬಾಗಲೇಬೇಕು. ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ತನಿಖಾವರದಿ ನಮ್ಮ ಮುಂದೆ ಪ್ರಕಟವಾಗುತ್ತೋ ಆಗ ಮುಂದಿನದನ್ನು ಮಾತನಾಡೋಣ" ಎಂದರು. 

IPL_Entry_Point