ಮ್ಯಾಕ್ಸ್‌ ಸಿನಿಮಾ ಕೈ ತಪ್ಪುವುದ್ರಲ್ಲಿತ್ತು; ಬೇ..ರ್ಸಿ ಎಂದೆಲ್ಲ ಪ್ರಮೋದ್‌ ಶೆಟ್ಟಿಗೆ ರಿಷಬ್‌ ಶೆಟ್ಟಿ ಬೈದದ್ಯಾಕೆ? ಶೆಟ್ರ ನೆನಪುಗಳು
ಕನ್ನಡ ಸುದ್ದಿ  /  ಮನರಂಜನೆ  /  ಮ್ಯಾಕ್ಸ್‌ ಸಿನಿಮಾ ಕೈ ತಪ್ಪುವುದ್ರಲ್ಲಿತ್ತು; ಬೇ..ರ್ಸಿ ಎಂದೆಲ್ಲ ಪ್ರಮೋದ್‌ ಶೆಟ್ಟಿಗೆ ರಿಷಬ್‌ ಶೆಟ್ಟಿ ಬೈದದ್ಯಾಕೆ? ಶೆಟ್ರ ನೆನಪುಗಳು

ಮ್ಯಾಕ್ಸ್‌ ಸಿನಿಮಾ ಕೈ ತಪ್ಪುವುದ್ರಲ್ಲಿತ್ತು; ಬೇ..ರ್ಸಿ ಎಂದೆಲ್ಲ ಪ್ರಮೋದ್‌ ಶೆಟ್ಟಿಗೆ ರಿಷಬ್‌ ಶೆಟ್ಟಿ ಬೈದದ್ಯಾಕೆ? ಶೆಟ್ರ ನೆನಪುಗಳು

Pramod Shetty about Max Movie: ಆರ್‌ಜೆ ನೇತ್ರಾ ನಡೆಸಿಕೊಟ್ಟ ಯೂಟ್ಯೂಬ್‌ ಸಂದರ್ಶನದಲ್ಲಿ ಪ್ರಮೋದ್‌ ಶೆಟ್ಟಿ ಅವರು ಮ್ಯಾಕ್ಸ್‌ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿದ ಸಂದರ್ಭದ ಕುರಿತು ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸಲು ಒಪ್ಪದೇ ಇದ್ದಾಗ ರಿಷಬ್‌ ಶೆಟ್ಟಿ ಹೇಗೆ ಬೈದಿದ್ರು ಎಂದೂ ನೆನಪಿಸಿಕೊಂಡಿದ್ದಾರೆ.

ಪ್ರಮೋದ್‌ ಶೆಟ್ಟಿಗೆ ರಿಷಬ್‌ ಶೆಟ್ಟಿ ಬೈದದ್ಯಾಕೆ? ಶೆಟ್ರ ನೆನಪುಗಳು
ಪ್ರಮೋದ್‌ ಶೆಟ್ಟಿಗೆ ರಿಷಬ್‌ ಶೆಟ್ಟಿ ಬೈದದ್ಯಾಕೆ? ಶೆಟ್ರ ನೆನಪುಗಳು

ಬೆಂಗಳೂರು: ಆರ್‌ಜೆ ನೇತ್ರಾ ನಡೆಸಿಕೊಟ್ಟ ಯೂಟ್ಯೂಬ್‌ ಸಂದರ್ಶನದಲ್ಲಿ ಪ್ರಮೋದ್‌ ಶೆಟ್ಟಿ ಅವರು ಮ್ಯಾಕ್ಸ್‌ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿದ ಸಂದರ್ಭದ ಕುರಿತು ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸಲು ಒಪ್ಪದೇ ಇದ್ದಾಗ ರಿಷಬ್‌ ಶೆಟ್ಟಿ ಹೇಗೆ ಬೈದಿದ್ರು ಎಂದೂ ನೆನಪಿಸಿಕೊಂಡಿದ್ದಾರೆ.

"ಮ್ಯಾಕ್ಸ್‌ ಸಿನಿಮಾದ ಆಫರ್‌ ಬಂದದ್ದೇ ಅಚ್ಚರಿ. ಮ್ಯಾನೇಜರ್‌ವೊಬ್ಬರು ಫೋನ್‌ ಮಾಡಿ "ಒಳ್ಳೆ ಫಿಲ್ಮ್‌ ಇದೆ ಶೆಟ್ರೆ, ಅರ್ಜೆಂಟಾಗಿ ನಿಮ್ಮ ಐದು ದಿನ ಬೇಕು. ಮಿಕ್ಕಿದ್ದು ಎರಡು ತಿಂಗಳು ಬಿಟ್ಟು ಕೊಟ್ರೆ ಸಾಕು" ಎಂದು ಕೇಳಿದ್ರು. "ನನ್ನ ಶೂಟಿಂಗ್‌ ಶೆಡ್ಯೂಲ್‌ 2-3 ತಿಂಗಳು ಆಗಿರುತ್ತದೆ. ಹೀಗಾಗಿ ಕಷ್ಟ. ಎರಡು ದಿನ ಇದೆ. ಮೂರು ದಿನ ನೀವು ಬೇರೆಲ್ಲಾದರೂ ಹಾಕಲು ಆಗುತ್ತಾ ಎಂದು ಕೇಳಿದೆ. ಅದಕ್ಕೆ ಇಲ್ಲ ಅರ್ಜೆಂಟ್‌ ಐದು ದಿನ ಬೇಕು ಅಂದ್ರು. ನನಗೆ ಅದು ಮ್ಯಾಕ್ಸ್‌ ಸಿನಿಮಾದ ವಿಷಯವೆಂದು ಗೊತ್ತಿರಲಿಲ್ಲ. ಮರುದಿನ ಮತ್ತೆ ಕಾಲ್‌ ಮಾಡ್ತಿನಿ ಅಂದ್ರು" ಎಂದು ಮ್ಯಾಕ್ಸ್‌ ಸಿನಿಮಾದಲ್ಲಿ ಅವಕಾಶ ದೊರಕಿದ ಸನ್ನಿವೇಶವನ್ನು ಪ್ರಮೋದ್‌ ಶೆಟ್ಟಿ ನೆನಪಿಸಿದ್ದಾರೆ. ಆರ್‌ಜೆ ನೇತ್ರಾ ಅವರೊಂದಿಗಿನ ಯೂಟ್ಯೂಬ್‌ ಸಂದರ್ಶನದಲ್ಲಿ ಅವರು ಈ ವಿವರ ನೀಡಿದ್ದಾರೆ.

ಮ್ಯಾಕ್ಸ್‌ ಸಿನಿಮಾ ಕೈ ತಪ್ಪುವುದ್ರಲ್ಲಿತ್ತು

ಮರುದಿನ ಮತ್ತೆ ಕಾಲ್‌ ಮಾಡಿದ್ರು. ಯಾವ ಫಿಲ್ಮ್‌ ಏನು ಎತ್ತ ಏನೂ ಹೇಳಿರಲಿಲ್ಲ. "ಇಲ್ಲ ಸಮಯ ಹೊಂದಾಣಿಕೆ ಆಗ್ತಾ ಇಲ್ಲ. ಕಷ್ಟ ಎಂದೆ. ಅದಕ್ಕೆ ಅವರು ಈ ಸಿನಿಮಾ ಬಿಡ್ತೀರ ನೀವು... ಈ ಸಿನಿಮಾ ಬಿಡ್ತೀರ ನೀವು" ಎಂದು ಒತ್ತಿಒತ್ತಿ ಹೇಳಿದ್ರು. "ಯಾವ ಸಿನಿಮಾ ಅಂತ ಹೇಳು ಗುರು ಅಂತ ಕೇಳಿದೆ. ಮ್ಯಾಕ್ಸ್‌ ಸಿನಿಮಾ ಸುದೀಪ್‌ದು ಅಂದ್ರು. ಓ ಶಿಟ್‌ ಓಕೆ ಅಂದೆ. ಈಗ ಬಿಡಲು ಮನಸ್ಸಿಲ್ಲ. ಏನಾದರೂ ಸಾಹಸ ಮಾಡಿ ಸಮಯ ಮಾಡಬೇಕಲ್ವ ಎಂಬ ಯೋಚನೆ ಬಂತು" ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಪ್ರಮೋದ್‌ ಶೆಟ್ಟಿ.

ಎರಡು ದಿನ ಇದ್ದದ್ದು ಮೂರು ದಿನ ಹೇಗೋ ಅಜೆಸ್ಟ್‌ ಆಯ್ತು. ಸುದೀಪ್‌ ಸರ್‌ ಜತೆ ಸಿನಿಮಾ ಮಾಡಿರಲಿಲ್ಲ. ಮಾಡಬೇಕು ಅಂದುಕೊಂಡೆ. ನಿರ್ದೇಶಕರು ನನ್ನ ಸೀನ್‌ ಕುರಿತು ಹೇಳಿದ್ದರು. ಸ್ವಲ್ಪ ಹೊತ್ತಿನ ದೃಶ್ಯವಾದರೂ ತುಂಬಾ ಪರಿಣಾಮಕಾರಿ ದೃಶ್ಯವದು. ಕ್ಯಾರೆಕ್ಟರ್‌ ಸಖತ್‌ ಚೆನ್ನಾಗಿದೆ. ಮಜಾ ಇದೆ. ಒಮ್ಮೆ ಟ್ರೈ ಮಾಡಬೇಕು. ಒಳ್ಳೆಯ ಅವಕಾಶ ಎಂದುಕೊಂಡೆ. ಈ ಸಿನಿಮಾದವರ ಜತೆ ಹೇಗೋ ಹೋಂದಾಣಿಕೆ ಮಾಡಿಕೊಂಡು ಚೆನ್ನೈನಿಂದ ಇಲ್ಲಿಗೆ ಇಲ್ಲಿಂದ ಚೆನ್ನೈಗೆ ಅಪ್‌ ಆಂಡ್‌ ಡೌನ್‌ ಮಾಡಿಕೊಂಡು ಹೇಗೋ ನಟಿಸಿದೆ." ಎಂದು ಪ್ರಮೋದ್‌ ಶೆಟ್ಟಿ ನೆನಪಿಸಿಕೊಂಡಿದ್ದಾರೆ.

"ಮ್ಯಾಕ್ಸ್‌ ಟೋಟಲ್‌ ಸಿನಿಮಾ ಮಜಾವಾಗಿದೆ. ಈ ಸಿನಿಮಾದ ಕುರಿತು ನಾನು ಹೇಳುವಂತೆ ಇಲ್ಲ. ಈ ಸಿನಿಮಾದಲ್ಲಿ ಸುದೀಪ್‌ ಸರ್‌ ವಿಶೇಷವಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಾಡಿದಂತೆ ಪೂರ್ಣ ಪ್ರಮಾಣದಲ್ಲಿ ಇಂತಹ ಪಾತ್ರದಲ್ಲಿ ಸುದೀಪ್‌ ಬೇರೆಲ್ಲೂ ಮಾಡಿಲ್ಲ ಅನಿಸುತ್ತದೆ. ಆಕ್ಷನ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಮಜಾ ಇದೆ" ಎಂದು ಮ್ಯಾಕ್ಸ್‌ ಸಿನಿಮಾದ ಕುರಿತು ಪ್ರಮೋದ್‌ ಶೆಟ್ಟಿ ಹೇಳಿದ್ದಾರೆ.

ಪ್ರಮೋದ್‌ ಶೆಟ್ಟಿಗೆ ರಿಷಬ್‌ ಶೆಟ್ಟಿ ಬೈದದ್ಯಾಕೆ?

ಆರ್‌ಜೆ ನೇತ್ರಾರ ಬಳಿಕ ಪ್ರಮೋದ್‌ ಶೆಟ್ಟಿ ತನ್ನ ಉಳಿದವರು ಕಂಡಂತೆ ಸಿನಿಮಾದ ಅವಧಿಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. "ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸುವಂತೆ ರಿಷಬ್‌ ಶೆಟ್ಟಿ ಮತ್ತು ರಕ್ಷಿತ್‌ ಶೆಟ್ಟಿ ಅವರು ಬೆಂಗಳೂರಿನ ರಂಗಶಂಕರದ ಮುಂದೆ ಕರೆದ ನೆನಪು ಇನ್ನೂ ಹಾಗೇ ಇದೆ" ಎಂದು ನೆನಪಿಸಿಕೊಂಡಿದ್ದಾರೆ. "ನಾನು ಈ ಸಿನಿಮಾದಲ್ಲಿ ನಟಿಸೋದಿಲ್ಲ ಎಂದಾಗ ನನಗೆ ರಿಷಬ್‌ ಶೆಟ್ಟಿ ಅರ್ಧ ಗಂಟೆ ಕುಂದಾಪ್ರ ಕನ್ನಡದಲ್ಲಿ ಬೈದದ್ದು ನೆನಪಿದೆ. ನನಗೆ ರಂಗಭೂಮಿ ಬಿಟ್ಟು ಬರಲು ಮನಸ್ಸಿರಲಿಲ್ಲ. ರಂಗಭೂಮಿಯಲ್ಲಿ ಇರಲು ಮನಸ್ಸಿತ್ತು. ಸಿನಿಮಾ ಶೂಟಿಂಗ್‌ನಲ್ಲಿ ನಮ್ಮ ದೃಶ್ಯದ ಶೂಟಿಂಗ್‌ಗೆ ಕಾಯಬೇಕು. ಆದರೆ, ರಂಗಭೂಮಿಯಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಕೆಲಸ ಇರುತ್ತದೆ. ಅದಕ್ಕೆ ಬೇಡ ಅಂದಿದ್ದೆ. ಈಗ ಹಿಂತುರುಗಿ ನೋಡಿದಾಗ ರಿಷಬ್‌ ಶೆಟ್ಟಿ ಅಂದು ಬೈದದ್ದೇ ಕಾಣಿಸುತ್ತಿದೆ" ಎಂದು ನೆನಪಿಸಿಕೊಂಡಿದ್ದಾರೆ.

ರಿಷಬ್‌ ಶೆಟ್ಟಿ ಏನಂತ ಬೈದ್ರು ಎಂಬ ಪ್ರಶ್ನೆಯನ್ನು ಆರ್‌ಜೆ ನೇತ್ರಾ ಕೇಳಿದಾಗ "ಅದು ಸೆನ್ಸಾರ್‌ ಪದಗಳು. ಕಾಂತಾರ ಸಿನಿಮಾದಲ್ಲಿ ಒಂದಿಷ್ಟು ಕೇಳಿರ್ತಿರಿ. ಅದಕ್ಕೆ ಇನ್ನಷ್ಟು ಪದಗಳನ್ನು ಸೇರಿಸಿ ಬೈದಿದ್ರು. ಬೇವರ್ಸಿ ಈಗ ಟ್ರೆಂಡ್‌. ಅಂತಹ ತುಂಬಾ ಪದಗಳು ನಮ್ಮಲ್ಲಿವೆ. ಅದನ್ನೆಲ್ಲ ಬೈದ" ಎಂದು ನೆನಪಿಸಿಕೊಂಡಿದ್ದಾರೆ. "ಇದೊಂದು ಸಿನಿಮಾ ಮಾಡ್ತಿನಿ. ಆಮೇಲೆ ನನ್ನ ಕರೆಯುವಂತೆ ಇಲ್ಲ ಎಂದು ಆವಾಗ ರಿಷಬ್‌ ಶೆಟ್ಟಿಗೆ ಹೇಳಿದ್ದೆ. ಆಮೇಲೆ ಕಂಟಿನ್ಯೂಸ್‌ ಆಗಿ ಸಿನಿಮಾ ಬರ್ತಾ ಇತ್ತು. ಮಾಡ್ತಾ ಹೋದೆ" ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಪ್ರಮೋದ್‌ ಶೆಟ್ಟಿಯ ಮುಂಬರುವ ಸಿನಿಮಾಗಳು

ಮ್ಯಾಕ್ಸ್‌, ಲಾಫಿಂಗ್‌ ಬುದ್ಧ, ಚೀತಾ, ಬಘೀರ, ಶಹಬ್ಬಾಸ್‌ ಬಡ್ಡಿಮಗನೇ, ಕರಿಕಾನು ಗುಡ್ಡದ ಮೇಲೆ ಅಧಿಕ ಪ್ರಸಂಗ, ಜಲಂಧರ ಅಂತ ಸಿನಿಮಾ ರೆಡಿ ಇದೆ, ರಿಲೀಸ್‌ಗೆ ಕಾಯ್ತ ಇರೋ ಸಿನಿಮಾಗಳಿವು. ಇವೆಲ್ಲ ಡಿಸೆಂಬರ್‌ ಒಳಗೆ ಬಿಡುಗಡೆಯಾಗುವ ಸಿನಿಮಾಗಳು.

Whats_app_banner