ಕನ್ನಡ ಸುದ್ದಿ  /  ಮನರಂಜನೆ  /  Dwarakish Death: ದ್ವಾರಕೀಶ್‌ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ; ಪ್ರಚಂಡ ಕುಳ್ಳನ ಅಂತ್ಯಕ್ರಿಯೆ ಎಲ್ಲಿ, ಎಷ್ಟೊತ್ತಿಗೆ?

Dwarakish Death: ದ್ವಾರಕೀಶ್‌ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ; ಪ್ರಚಂಡ ಕುಳ್ಳನ ಅಂತ್ಯಕ್ರಿಯೆ ಎಲ್ಲಿ, ಎಷ್ಟೊತ್ತಿಗೆ?

ಹಿರಿಯ ನಟ ದ್ವಾರಕೀಶ್‌ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. X ವೇದಿಕೆಯಲ್ಲಿ ಪೋಸ್ಟ್‌ ಹಂಚಿಕೊಂಡು ನಮನ ಸಲ್ಲಿಸಿದ್ದಾರೆ. ಈ ನಡುವೆ ದ್ವಾರಕೀಶ್‌ ಅವರ ಅಂತ್ಯಕ್ರಿಯೆ ವಿವರವೂ ಇಲ್ಲಿದೆ.

Dwarakish Death: ದ್ವಾರಕೀಶ್‌ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ; ಪ್ರಚಂಡ ಕುಳ್ಳನ ಅಂತ್ಯಕ್ರಿಯೆ ಎಲ್ಲಿ, ಎಷ್ಟೊತ್ತಿಗೆ?
Dwarakish Death: ದ್ವಾರಕೀಶ್‌ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ; ಪ್ರಚಂಡ ಕುಳ್ಳನ ಅಂತ್ಯಕ್ರಿಯೆ ಎಲ್ಲಿ, ಎಷ್ಟೊತ್ತಿಗೆ?

Dwarakish Death: ಕರ್ನಾಟಕದ ಕುಳ್ಳ, ನಟ, ನಿರ್ಮಾಪಕ ದ್ವಾರಕೀಶ್‌ ನಿಧನರಾಗಿದ್ದಾರೆ. ಕನ್ನಡ ಚಿತ್ರೋದ್ಯಮ ಕಂಡ ಹಿರಿ ತಲೆಯೊಂದು ಇದೀಗ ಕಣ್ಮರೆಯಾಗಿದೆ. 81ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಸ್ಯಾಂಡಲ್‌ವುಡ್‌ ಸೇರಿ ದಕ್ಷಿಣ ಭಾರತದ ದಿಗ್ಗಜ ನಟರು, ದ್ವಾರಕೀಶ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅವರ ಜತೆಗಿನ ನಂಟು ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ. ಇದೀಗ ಇದೇ ಹಿರಿಯ ನಟನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೋದಿ ಸಂತಾಪ

"ಚಿತ್ರೋದ್ಯಮಕ್ಕೆ ದ್ವಾರಕೀಶ್ ಅವರ ಕೊಡುಗೆ ಅಪಾರ. ದಶಕಗಳ ಕಾಲ ಮರೆಯಲಾಗದ ಸಿನಿಮಾಗಳನ್ನು ನೀಡಿ ಕೋಟ್ಯಂತರ ಚಿತ್ರಪ್ರೇಮಿಗಳನ್ನು ರಂಜಿಸಿದ್ದಾರೆ. ಯುವ ಪ್ರತಿಭೆಗಳಿಗೆ ಅವಕಾಶ ನೀಡಿ, ಕನ್ನಡ ಚಿತ್ರೋದ್ಯಮವನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲಬೇಕು. ಬಹುಮುಖಿ ಪಾತ್ರಗಳ ಮೂಲಕ ಎಲ್ಲರ ಮನಸ್ಸಿನಲ್ಲಿ ನೆಲೆನಿಂತಿದ್ದಾರೆ. ಅವರ ನಿಧನದ ಸುದ್ದಿ ನಿಜಕ್ಕೂ ನೋವುಂಟು ಮಾಡಿದೆ. ಅವರ ಅತ್ಯದ್ಭುತವಾದ ಸಿನಿಮಾ ಪಯಣ ಸ್ಮರಣೀಯ. ಅವರ ಇಡೀ ಕುಟುಂಬಕ್ಕೆ ನನ್ನ ಸಂತಾಪಗಳು. ಓಂ ಶಾಂತಿ" ಎಂದು ತಮ್ಮ X ವೇದಿಕೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸಾರ್ವಜನಿಕ ದರ್ಶನಕ್ಕೆ ಅವಕಾಶ

ಮಂಗಳವಾರ (ಏಪ್ರಿಲ್‌ 17) ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ದ್ವಾರಕೀಶ್‌ ಅವರ ಮೃತದೇಹವನ್ನು ಎಲೆಕ್ಟ್ರಾನಿಕ್‌ ಸಿಟಿಯ ಗುಳಿಮಂಗಳದಲ್ಲಿನ ಮನೆಯಲ್ಲಿ ಇರಿಸಲಾಗಿದೆ. ಈಗಾಗಲೇ ಚಿತ್ರೋದ್ಯಮದ ಸಾಕಷ್ಟು ಮಂದಿ ಆಗಮಿಸಿ ನಟನ ಪಾರ್ಥಿವ ಶರೀರದ ವೀಕ್ಷಣೆ ಮಾಡಿ ನಮನ ಸಲ್ಲಿಸಿದ್ದಾರೆ. ಈ ನಡುವೆ ಸಾರ್ವಜನಿಕರ ದರ್ಶನಕ್ಕೂ ಇಡಲು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಟೌನ್‌ಹಾಲ್‌ ಬಳಿ ದ್ವಾರಕೀಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 12 ಗಂಟೆಯವರೆಗೆ ಅಂತಿಮ ದರ್ಶನ ನೆರವೇರಲಿದೆ.

ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ

12 ಗಂಟೆಯ ನಂತರ ಮೆರವಣಿಗೆ ಮೂಲಕ ಚಾಮರಾಜಪೇಟೆಯಲ್ಲಿನ ಟಿಆರ್‌ ಮಿಲ್‌ ಬಳಯ ಚಿತಾಗಾರದಲ್ಲಿ ದ್ವಾರಕೀಶ್‌ ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ನಡುವೆ ಹಿರಿಯ ನಟ, ನಿರ್ದೇಶಕ, ನಿರ್ಮಾಪಕನ ನಿಧನದ ಹಿನ್ನೆಲೆಯಲ್ಲಿ ಚಿತ್ರರಂಗದಿಂದಲೂ ನಮನ ಸಲ್ಲಿಕೆಯಾಗಿದೆ. ಸಿನಿಮಾ ಶೂಟಿಂಗ್‌ಗಳಿಗೆ ಬ್ರೇಕ್‌ ಬಿದ್ದಿದೆ. ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಸಿನಿಮಾಗಳೂ ಮಧ್ಯಾಹ್ನದ ಮೇಲಿಂದ ಪ್ರದರ್ಶನ ಕಾಣಲಿವೆ.

IPL_Entry_Point