ಕನ್ನಡ ಸುದ್ದಿ  /  ಮನರಂಜನೆ  /  Sayaji Shinde: ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಖಳನಟ; ಆಂಜಿಯೋಪ್ಲಾಸ್ಟಿ ಬಳಿಕ ಆರೋಗ್ಯವಾಗಿದ್ದೇನೆ ಎಂದ ಸಯಾಜಿ ಶಿಂಧೆ

Sayaji Shinde: ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಖಳನಟ; ಆಂಜಿಯೋಪ್ಲಾಸ್ಟಿ ಬಳಿಕ ಆರೋಗ್ಯವಾಗಿದ್ದೇನೆ ಎಂದ ಸಯಾಜಿ ಶಿಂಧೆ

Sayaji Shinde Health Update: ಮರಾಠಿ, ಹಿಂದಿ, ತೆಲುಗು, ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಖಳನಾಯಕನಾಗಿ ಖ್ಯಾತಿ ಪಡೆದಿರುವ ನಟ ಸಯಾಜಿ ಶಿಂಧೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಅವರಿಗೆ ಆಂಜಿಯೋಪ್ಲಾಸ್ಟ್ರಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಆಸ್ಪತ್ರೆಯಿಂದಲೇ ವಿಡಿಯೋ ಮೂಲಕ ಆರೋಗ್ಯದ ಮಾಹಿತಿ ನೀಡಿದ ಸಯಾಜಿ ಶಿಂಧೆ
ಆಸ್ಪತ್ರೆಯಿಂದಲೇ ವಿಡಿಯೋ ಮೂಲಕ ಆರೋಗ್ಯದ ಮಾಹಿತಿ ನೀಡಿದ ಸಯಾಜಿ ಶಿಂಧೆ

ಬೆಂಗಳೂರು: ಮರಾಠಿ, ಹಿಂದಿ, ತೆಲುಗು, ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಖಳನಟನಾಗಿ ಪ್ರೇಕ್ಷಕರ ಮನಗೆದ್ದ ಖ್ಯಾತ ನಟ ಸಯಾಜಿ ಶಿಂಧೆ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣದಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಖ್ಯಾತ ನಟನ ಆರೋಗ್ಯ ಪರೀಕ್ಷೆ ನಡೆಸಿದ ವೈದ್ಯರು ತಕ್ಷಣ ಆಂಜಿಯೋಪ್ಲಾಸ್ಟ್ರಿ ಶಸ್ತ್ರಚಿಕಿತ್ಸೆ ನಡೆಸಿ ಹೃದಯ ರಕ್ತನಾಳಗಳ ತಡೆಗಳನ್ನು ನಿವಾರಿಸಿದ್ದಾರೆ. ಇದೀಗ ಸಯಾಜಿ ಶಿಂಧೆ ಆರೋಗ್ಯ ಸ್ಥಿರವಾಗಿದೆ. ಇನ್ನೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ನಾನು ಕ್ಷೇಮ ಎಂದ ಖಳನಟ

ಇದೀಗ ನಟ ಸಯಾಜಿ ಶಿಂಧೆ ಅವರು ಆಸ್ಪತ್ರೆಯ ಬೆಡ್‌ನಿಂದಲೇ ವಿಡಿಯೋ ಮಾಡಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. "ನಮಸ್ಕಾರ, ನಾನು ತುಂಬಾ ಚೆನ್ನಾಗಿದ್ದೇನೆ, ನನ್ನನ್ನು ಪ್ರೀತಿಸುವ ನನ್ನ ಎಲ್ಲಾ ಅಭಿಮಾನಿಗಳು, ನನ್ನ ಹಿತೈಷಿಗಳು ನನ್ನೊಂದಿಗಿದ್ದಾರೆ, ಈಗ ಚಿಂತಿಸಬೇಡಿ, ನಿಮ್ಮ ಮನರಂಜನೆಗೆ ನಾನು ಶೀಘ್ರದಲ್ಲೇ ಬರುತ್ತೇನೆ ಧನ್ಯವಾದಗಳು..." ಎಂದು ಅವರು ಪೋಸ್ಟ್‌ ಮಾಡಿದ್ದಾರೆ. ಅವರು ವಿಡಿಯೋದಲ್ಲಿ ತನಗೆ ಕಾಣಿಸಿಕೊಂಡ ಆರೋಗ್ಯ ತೊಂದರೆ ಮತ್ತು ಪಡೆದಿರುವ ಚಿಕಿತ್ಸೆ ಕುರಿತು ಮಾಹಿತಿ ನೀಡಿದ್ದಾರೆ.

 

ಸಯಾಜಿ ಶಿಂದೆ ಅವರಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದಾರೆ ಎಂದು ಹಲವು ವರದಿಗಳು ತಿಳಿಸಿವೆ. ಈ ಸಮಯದಲ್ಲಿ ವೈದ್ಯರು ಪರೀಕ್ಷೆ ನಡೆಸಿದ್ದು, ಹೃದಯದ ರಕ್ತನಾಳದಲ್ಲಿ ಬ್ಲಾಕೇಜ್‌ ಕಂಡುಬಂದಿತ್ತು. ಇದಾದ ಬಳಿಕ ಮತ್ತೆ ಗುರುವಾರ ಮತ್ತೆ ಇವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ವರದಿಗಳ ಪ್ರಕಾರ ತಕ್ಷಣ ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಸಯಾಜಿ ಶಿಂಧೆ ಸಿನಿಮಾಗಳು

ಮರಾಠಿ ರಂಗನಟರಾಗಿ ಚಿತ್ರರಂಗಕ್ಕೆ ಶಿಂಧೆ ಪ್ರವೇಶಿಸಿದರು. ಮರಾಠಿಯಲ್ಲಿ 1995ರಲ್ಲಿ ಅಬೊಲಿ ಎಂಬ ಸಿನಿಮಾದಲ್ಲಿ ನಟಿಸಿದರು. ಬಳಿಕ ಶಖರಾಮ್‌ ಬಿಂದರ್‌, ಝುಲ್ವಾ, ಕಿಚನ್‌, ಅಮಚ್ಯಾ ಯಾ ಘರಾತ್‌, ಲಡಾಯಿ, ಆಶಿ ಗ್ಯಾನೇಶ್ವರಿ ಸೇರಿದಂತೆ ಹಲವು ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಇವರಿಗೆ ಹಲವು ಹಿಂದಿ ಚಿತ್ರಗಳಲ್ಲಿ ಅವಕಾಶ ದೊರಕಿತು. ದಿಶಾ ಸಿನಿಮಾದ ಮೂಲಕ ಬಾಲಿವುಡ್‌ ಪ್ರವೇಶಿಸಿದರು.

ಪತಿತ ಪಾವನಿ, ವೀರ ಕನ್ನಡಿಗ, ಲವ ಕುಶ, ಪೋರ್ಕಿ, ಶ್ರೀಮತಿ, ಅರಕ್ಷಕ, ಶಕ್ತಿ, ವೀರ, ಬ್ರಹ್ಮ, ಜೈಲಲಿತಾ, ಓಜಾ, ಲವ್‌ ಯು ಆಲಿಯಾ, ಉಪ್ಪಿ ಸೇರಿದಂತೆ ವಿವಿಧ ಕನ್ನಡ ಸಿನಿಮಾಗಳಲ್ಲಿ ಇವರು ಖಳನಟನಾಗಿ ನಟಿಸಿದ್ದರು. ತಮಿಳು, ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ತೆಲುಗಿನ ಬಹುತೇಕ ಎಲ್ಲಾ ಸಿನಿಮಾಗಳಲ್ಲಿಯೂ ಸಯಾಜಿ ಶಿಂದೆಯನ್ನು ನೋಡಿರಬಹುದು. ಅಲಾ ಇಲಾ ಎಲ, ಮಾ ಅವರ ಜಿಂದಗಿ, ಗಾಡ್‌ಫಾದರ್‌, ಗೋಡ್ಸೆ, ಅಖಂಡ, ವಕೀಲ್‌ ಸಾಬ್‌, ಸಾಫ್ಟ್‌ವೇರ್‌ ಸುಧೀರ್‌, ಐ ಸ್ಮಾರ್ಟ್‌ ಸುಧೀರ್‌, ರೂಲರ್‌, ಕಿರಕ್‌ ಪಾರ್ಟಿ, ಇಂಟಲಿಜೆಂಟ್‌ , ಮೆಹಬೂಬಾ, ಪಠಾಣ್‌, ಸ್ಪೈಡರ್‌, ಹೈಪರ್‌, ಶೌರ್ಯ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

IPL_Entry_Point