Langoti Man Teaser: ಈ ಸಿನಿಮಾಕ್ಕೆ ಲಂಗೋಟಿಯೇ ಹೀರೋ! ಹೊಸಬರ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಿದ ನಟ ಶರಣ್‌-sandalwood news actor sharan releases the teaser of langoti man directed by sanjotha bhandari mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Langoti Man Teaser: ಈ ಸಿನಿಮಾಕ್ಕೆ ಲಂಗೋಟಿಯೇ ಹೀರೋ! ಹೊಸಬರ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಿದ ನಟ ಶರಣ್‌

Langoti Man Teaser: ಈ ಸಿನಿಮಾಕ್ಕೆ ಲಂಗೋಟಿಯೇ ಹೀರೋ! ಹೊಸಬರ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಿದ ನಟ ಶರಣ್‌

ತನು ಟಾಕೀಸ್ ಬ್ಯಾನರ್‌ನಲ್ಲಿ ಲಂಗೋಟಿ ಮ್ಯಾನ್ ಸಿನಿಮಾ ನಿರ್ಮಾಣವಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ ಬಿಡುಗಡೆಯಾಯಿತು. ನಟ ಶರಣ್ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ತನು ಟಾಕೀಸ್ ಬ್ಯಾನರ್‌ನಲ್ಲಿ ಲಂಗೋಟಿ ಮ್ಯಾನ್ ಸಿನಿಮಾ ನಿರ್ಮಾಣವಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ ಬಿಡುಗಡೆಯಾಯಿತು. ನಟ ಶರಣ್ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ತನು ಟಾಕೀಸ್ ಬ್ಯಾನರ್‌ನಲ್ಲಿ ಲಂಗೋಟಿ ಮ್ಯಾನ್ ಸಿನಿಮಾ ನಿರ್ಮಾಣವಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ ಬಿಡುಗಡೆಯಾಯಿತು. ನಟ ಶರಣ್ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

Langoti Man Teaser: ಈ ಹಿಂದೆ ಮಿರ್ಚಿ ಮಂಡಕ್ಕಿ ಖಡಕ್ ಚಾಯ್ ಸಿನಿಮಾ ನೀಡಿದ್ದ ನಿರ್ದೇಶಕಿ ಸಂಜೋತಾ ಭಂಡಾರಿ, ಇದೀಗ ಸುದೀರ್ಘ 10 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಸದ್ದಿಲ್ಲದೆ ಲಂಗೋಟಿ ಮ್ಯಾನ್‌ ಶೀರ್ಷಿಕೆಯ ಸಿನಿಮಾ ಶೂಟಿಂಗ್‌ ಸಹ ಮುಗಿದಿದ್ದು, ಚಿತ್ರದ ಟೀಸರ್‌ ಸಹ ಬಿಡುಗಡೆಯಾಗಿದೆ. ತನು ಟಾಕೀಸ್ ಬ್ಯಾನರ್‌ನಲ್ಲಿ ಲಂಗೋಟಿ ಮ್ಯಾನ್ ಸಿನಿಮಾ ನಿರ್ಮಾಣವಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ ಬಿಡುಗಡೆಯಾಯಿತು. ನಟ ಶರಣ್ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಿರ್ದೇಶಕಿ ಸಂಜೋತ ಸಿನಿಮಾ ಬಗ್ಗೆ ಮಾತನಾಡುತ್ತ, "ನಾನು ಹತ್ತು ವರ್ಷಗಳ ಹಿಂದೆ "ಮಿರ್ಚಿ ಮಂಡಕ್ಕಿ ಖಡಕ್ ಚಾಯ್" ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ನಾನು ಬೇರೆ ಒಂದು ಚಿತ್ರದ ಕಥೆ ಮಾಡುತ್ತಿದ್ದಾಗ ಈ ಕಾನ್ಸೆಪ್ಟ್ ಬಂತು‌. ಆ ಚಿತ್ರದ ಕಥೆ ಮಾಡುತ್ತಿದ್ದಾಗಲೂ ನನಗೆ ಇದೇ ಕಥೆ ತಲೆಗೆ ಬರುತ್ತಿತ್ತು. ಕೊನೆಗೆ "ಲಂಗೋಟಿ ಮ್ಯಾನ್" ಸಿನಿಮಾ ಸ್ವರೂಪ ಪಡೆದುಕೊಂಡಿತು. ಈ ಚಿತ್ರದಲ್ಲಿ ನಿಜವಾದ ಹೀರೋ ಅಂದರೆ ಲಂಗೋಟಿನೇ ಎಂದರು ನಿರ್ದೇಶಕಿ.

ಮುಂದುವರಿದು ಮಾತನಾಡಿ, "ಆಕಾಶ್ ರಾಂಬೊ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಸಂಹಿತ ವಿನ್ಯ, ಗಿಲ್ಲಿ ನಟ, ಸ್ನೇಹ ಋಷಿ, ಪವನ್, ಆಟೋ ನಾಗರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ‌. ಕಥೆ ಹಾಗೂ ಸಂಭಾಷಣೆಯಲ್ಲೂ ಅನೇಕ ಮಿತ್ರರು ಸಹಾಯ ಮಾಡಿದ್ದಾರೆ. ಚಿತ್ರ ಗೆಲುವ ವಿಶ್ವಾಸ ನನಗಂತೂ ಇದೆ‌. ಟೀಸರ್ ಬಿಡುಗಡೆ ಮಾಡಿಕೊಟ್ಟ ಶರಣ್ ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ" ಎಂದರು‌.

ನಟ ಶರಣ್‌ ಮೆಚ್ಚುಗೆ

"ಈ ಸಮಾರಂಭಕ್ಕೆ ಬಂದು ನಿರ್ದೇಶಕರ ಮಾತು ಕೇಳಿದ ಮೇಲೆ ಅವರಿಗೆ ಚಿತ್ರದ ಮೇಲಿರುವ ಭರವಸೆ ಹಾಗೂ ತಾವೊಬ್ಬರೇ ಕ್ರೆಡಿಟ್ ತೆಗೆದುಕೊಳ್ಳದೆ, ಚಿತ್ರತಂಡದ ಪ್ರತಿಯೊಬ್ಬರನ್ನು ಪರಿಚಯಿಸಿದ ರೀತಿ ಕಂಡು ಸಂತೋಷವಾಯಿತು. ಈಗಂತೂ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನೇ ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ ಲಂಗೋಟಿ ಮ್ಯಾನ್" ಸಹ ಸೇರಲಿ ಎಂದು ಶರಣ್ ಹಾರೈಸಿದರು.

ನಾಯಕ ಆಕಾಶ್‌ ಹೇಳುವುದೇನು?

ನಾಯಕ ಆಕಾಶ್‌ ರಾಂಬೋ ಸಹ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. "ಈ ಚಿತ್ರದಲ್ಲೊಂದು ಅರೆಬೆತ್ತಲೆ ದೃಶ್ಯವಿದೆ. ಬೇಕಾದರೆ ಬೆತ್ತಲೆಯಾಗಿಯೇ ಓಡುತ್ತೇನೆ ಎಂದೆ. ಸಿಕ್ಕ ಪಾತ್ರವನ್ನು ಖುಷಿಯಾಗಿಯೇ ಮಾಡಿದ್ದೀನಿ. ಯಾವುದೇ ಹಿಂಜರಿಕೆ ಇರಲಿಲ್ಲ. ಒಳ್ಳೆಯದಾಗುತ್ತದೆ ಎಂದು ನಂಬಿದ್ದೇನೆ. ನನಗೆ ಲಂಗೋಟಿ ಹಾಕೋಕೆ ಇಷ್ಟವಿರುವುದಿಲ್ಲ. ಚಿಕ್ಕ ವಯಸ್ಸಿನಿಂದ ಲಂಗೋಟಿ ಹಾಕಿರುತ್ತೇನೆ. ಅಂಡರ್‌ವೇರ್‌ ಹಾಕಬೇಕು ಎಂಬ ಆಸೆ ಇರುತ್ತದೆ. ನಾನು ಅಂಡರ್‌ವೇರ್‌ ಹುಡುಕಾಟದಲ್ಲಿರುತ್ತೇನೆ. ಅದು ನನ್ನಿಂದ ದೂರ ಹೋಗುತ್ತಿರುತ್ತದೆ. ಅದೇ ನನ್ನ ಪಾತ್ರ’ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೌತ್ ಡಿಸಿಸಿ ಪ್ರೆಸಿಡೆಂಟ್ ಓ ಮಂಜುನಾಥ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದಲ್ಲಿ ನಟಿಸಿರುವ ಆಕಾಶ್ ರಾಂಬೊ, ಧೀರೇಂದ್ರ, ಸಂಹಿತ ವಿನ್ಯ ಮುಂತಾದ ಕಾಲವಿದರು ಚಿತ್ರದ ಕುರಿತು ಮಾತನಾಡಿದರು. "ಲಂಗೋಟಿ ಮ್ಯಾನ್" ಚಿತ್ರದ ಟೀಸರ್ ‌ಹಾಗೂ ಪೋಸ್ಟರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಟೀಸರ್ ನೋಡಿದಾಗ ಮನೋರಂಜನಾ ಪ್ರಧಾನ ಚಿತ್ರ ಎನಿಸಿದರೂ, ಚಿತ್ರದ ಮೂಲಕ‌‌ ಬೇರೊಂದು ವಿಷಯವನ್ನು ಹೇಳ ಹೊರಟಿರುವುದು ತಿಳಿಯುತ್ತದೆ. ‌