ಜೀವಿತಾವಧಿಯ ಅರ್ಧಭಾಗ ಕ್ರಮಿಸಿದ ಶಿವಣ್ಣ, ತಮಿಳುನಾಡಿನಲ್ಲಿ ಷಷ್ಠಿ ಪೂರ್ತಿ ಆಚರಿಸಿದ ಶಿವರಾಜ್‌ ಕುಮಾರ್‌, ಏನಿದು ಪೂಜೆ, ಏನಿದರ ಮಹತ್ವ?-sandalwood news actor shiva rajkumar shashtipurti pooja in tamilnadu what is shashtiabdapurti significance ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜೀವಿತಾವಧಿಯ ಅರ್ಧಭಾಗ ಕ್ರಮಿಸಿದ ಶಿವಣ್ಣ, ತಮಿಳುನಾಡಿನಲ್ಲಿ ಷಷ್ಠಿ ಪೂರ್ತಿ ಆಚರಿಸಿದ ಶಿವರಾಜ್‌ ಕುಮಾರ್‌, ಏನಿದು ಪೂಜೆ, ಏನಿದರ ಮಹತ್ವ?

ಜೀವಿತಾವಧಿಯ ಅರ್ಧಭಾಗ ಕ್ರಮಿಸಿದ ಶಿವಣ್ಣ, ತಮಿಳುನಾಡಿನಲ್ಲಿ ಷಷ್ಠಿ ಪೂರ್ತಿ ಆಚರಿಸಿದ ಶಿವರಾಜ್‌ ಕುಮಾರ್‌, ಏನಿದು ಪೂಜೆ, ಏನಿದರ ಮಹತ್ವ?

What is Shashtiabdapurti: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ತಮಿಳುನಾಡಿನ ಅಮೃತ ಕದೇಶ್ವರರ್ ದೇಗುಲದಲ್ಲಿ ಷಷ್ಠಿ ಪೂರ್ತಿ ಆಚರಿಸಿಕೊಂಡಿದ್ದಾರೆ. ಶಿವಣ್ಣ ಮತ್ತು ಗೀತಾ ಶಿವರಾಜ್‌ಕುಮಾರ್‌ ಜತೆಯಾಗಿ ಕುಳಿತು ಷಷ್ಠಿ ಪೂರ್ತಿ ಪೂಜೆ ಕೈಗೊಳ್ಳುತ್ತಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಏನಿದು ಪೂಜೆ, ಏನಿದರ ಮಹತ್ವ? ತಿಳಿದುಕೊಳ್ಳೋಣ.

ಜೀವಿತಾವಧಿಯ ಅರ್ಧಭಾಗ ಕ್ರಮಿಸಿದ ಶಿವಣ್ಣ, ತಮಿಳುನಾಡಿನಲ್ಲಿ ಷಷ್ಠಿ ಪೂರ್ತಿ ಆಚರಿಸಿದ ಶಿವರಾಜ್‌ ಕುಮಾರ್‌
ಜೀವಿತಾವಧಿಯ ಅರ್ಧಭಾಗ ಕ್ರಮಿಸಿದ ಶಿವಣ್ಣ, ತಮಿಳುನಾಡಿನಲ್ಲಿ ಷಷ್ಠಿ ಪೂರ್ತಿ ಆಚರಿಸಿದ ಶಿವರಾಜ್‌ ಕುಮಾರ್‌

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ಗೆ ಈಗ 62 ವರ್ಷ ವಯಸ್ಸು (Shivarajkumar Age) ಎಂದರೆ ಅಭಿಮಾನಿಗಳಿಗೆ ನಂಬಲು ಕಷ್ಟವಾಗಬಹುದು. ತೆರೆಯ ಮೇಲೆ ಯಂಗ್‌ ಆಂಡ್‌ ಎನರ್ಜಿಟಿಕ್‌ ಆಗಿ ಕಾಣಿಸುವ ಶಿವಣ್ಣ ಇದೀಗ ತಮಿಳುನಾಡಿನ ಅಮೃತ ಕದೇಶ್ವರರ್ ದೇಗುಲದಲ್ಲಿ ಷಷ್ಠಿ ಪೂರ್ತಿ (Shashtiabdapurti) ಆಚರಿಸಿಕೊಂಡಿದ್ದಾರೆ. ಶಿವಣ್ಣ ಮತ್ತು ಗೀತಾ ಶಿವರಾಜ್‌ಕುಮಾರ್‌ ಜತೆಯಾಗಿ ಕುಳಿತು ಷಷ್ಠಿ ಪೂರ್ತಿ ಪೂಜೆ ಕೈಗೊಳ್ಳುತ್ತಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ವರದಿಗಳ ಪ್ರಕಾರ ತಿರುಕಾದಾಯುರ್‌ನಲ್ಲಿ ಷಷ್ಠಿ ಪೂರ್ತಿ ಪೂಜೆ ಸಲ್ಲಿಸಿದ್ದಾರೆ. ಈ ದಂಪತಿ ತಮ್ಮ ಬಾಲ್ಯ ಸ್ನೇಹಿತರ ಜತೆ ಈ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ದಾಂಪತ್ಯ ಜೀವನದಲ್ಲಿ ಯಶಸ್ವಿಯಾಗಿ 60 ವರ್ಷ ಪೂರೈಸಿದ ಬಳಿಕ ಈ ಪೂಜೆ ಕೈಗೊಳ್ಳಲಾಗುತ್ತದೆ. ಒಂದು ಸಾವಿರ ವರ್ಷಗಳ ಇತಿಹಾಸ ಇರುವ ಅಭಿರಾಮಿ ಅಮೃತ ಕದೇಶ್ವರರ್ ದೇಗುಲದಲ್ಲಿ ಈ ಪೂಜೆ ಕೈಗೊಂಡಿದ್ದಾರೆ.

ಷಷ್ಠಿ ಪೂರ್ತಿ ಎಂದರೇನು?

ಹಿಂದೂ ಧರ್ಮದಲ್ಲಿ ಷಷ್ಠಿ ಪೂರ್ತಿ ಪೂಜೆಗೆ ಸಾಕಷ್ಟು ಮಹತ್ವವಿದೆ. ಇದನ್ನು ಷಷ್ಠಿ ಅಬ್ದಪೂರ್ತಿ ಎಂದೂ ಕರೆಯಲಾಗುತ್ತದೆ. ವ್ಯಕ್ತಿಯೊಬ್ಬ ತನ್ನ ಜೀವಿತಾವಧಿಯ ಅರ್ಧ ಭಾಗವನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಈ ಪೂಜೆ ನಡೆಸಲಾಗುತ್ತದೆ. ಮಾನವನ ಸೈದ್ಧಾಂತಿಕ ಜೀವಿತಾವಧಿ 120 ವರ್ಷ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ಅರ್ಧ ಭಾಗ ಪೂರೈಸಿರುವ ಸಮಯದಲ್ಲಿ ಈ ಪೂಜೆ ಕೈಗೊಳ್ಳಲಾಗುತ್ತದೆ. ಷಷ್ಟಿ ಪೂರ್ತಿ ಎನ್ನುವುದು ಸಂಸ್ಕೃತ ಪದವಾಗಿದೆ. ಸಂಸ್ಕೃತದಲ್ಲಿ ಷಷ್ಠಿ ಎಂದರೆ 60. ಅಬ್ದಪೂರ್ತಿ ಎಂದರೆ ಅರವತ್ತು ವರ್ಷಗಳ ಚಕ್ರ.

ಆಧ್ಯಾತ್ಮಿಕವಾಗಿ ಈ ಷಷ್ಠಿ ಪೂರ್ತಿಗೆ (ಷಷ್ಟಿಪೂರ್ತಿ ಎಂದೂ ಬರೆಯಲಾಗುತ್ತದೆ) ವಿಶೇಷ ಮಹತ್ವವಿದೆ. 60 ವರ್ಷಗಳ ಬಳಿಕದ ಅವಧಿಯನ್ನು ಅಧ್ಯಾತ್ಮಿಕ ಅನುಭವಕ್ಕೆ ಮೀಸಲಿಡುವಂತಹ ಸಮಯವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗಿದೆ. ಮನೆಯವರ ಕಾಳಜಿ, ವಾನಪ್ರಸ್ಥದ ನಡುವಿನ ಸೇತುವೆಯಾಗಿ ಈ ಅವಧಿ ಇರುತ್ತದೆ. ಈ ಅವಧಿಯಲ್ಲಿ ವಿವಾಹಿತ ದಂಪತಿ ಬ್ರಹ್ಮಚರ್ಯ ಆಚರಿಸುವ ಮೂಲಕ ಒಟ್ಟಿಗೆ ಇರಬೇಕು, ಈ ಮೂಲಕ ತಮ್ಮ ಜೀವನದ ಧ್ಯೇಯ ಪೂರೈಸಬೇಕು ಎಂದು ಲಭ್ಯ ಆನ್‌ಲೈನ್‌ ಮಾಹಿತಿಗಳಲ್ಲಿ ವಿವರಿಸಲಾಗಿದೆ.

ಷಷ್ಠಿ ಪೂರ್ತಿ ಪೂಜೆ ಹೇಗಿರುತ್ತದೆ?

ಈ ಪೂಜೆ ಅವಧಿ ಎರಡು ದಿನ ಇರುತ್ತದೆ. "ಯಮುನಾ ಪೂಜೆ" ಮಾಡುವ ಮೂಲಕ ಶುಭ ಅವಧಿಯಲ್ಲಿ ಷಷ್ಠಿ ಪೂರ್ತಿ ಪೂಜೆ ಆರಂಭಿಸಲಾಗುತ್ತದೆ. ಇದಾದ ಬಳಿಕ "ಗಂಗಾ ಪೂಜೆ", "ಇಷ್ಟ ದೇವತಾ ವಂದನೆ", "ಸಭಾ ವಂದನೆ", "ಪಂಚಗವ್ಯ ಸೇವೆಯೊಂದಿಗೆ ಪುಣ್ಯಹ", "ನಂದಿ ಪೂಜೆ", "ಋತ್ವಿಕ್ವರಣ" ಮತ್ತು ಕಲಶ ಸ್ಥಾಪನ" ನಡೆಸಲಾಗುತ್ತದೆ.

 

ದೇವತೆಗಳ ಕಲಶ ಸ್ಥಾಪನೆ - "ಮಹಾ ಗಣಪತಿ", "ಆದಿತ್ಯಾದಿ ನವಗ್ರಹ", "ಮೃತುಂಜಯ", "ಸಂವತ್ಸರ-ಅಯನ-ಋತು-ಮಾಸ-ಪಕ್ಷ-ಯೋಗ ದೇವತಾ", "ಕರಣ ದೇವತಾ", "ರಾಶ್ಯಾಧಿಪತಿ (ಗಂಡ ಮತ್ತು ಹೆಂಡತಿ)", " ನವದುರ್ಗಾ", "ಸಪ್ತಮ ಮರು ದೇವತಾ", "ದ್ವಾದಶ ಆದಿತ್ಯ - ಧಾತ, ಆರ್ಯಮ, ಮಿತ್ರ, ವರುಣ, ಇಂದ್ರ, ವಿವಸ್ವಾನ್, ತ್ವಷ್ಟ, ವಿಷ್ಣು, ಅನ್ಹೂಮಾನ್, ಭಗ, ಪುಷ್ ಮತ್ತು ಪರ್ಜನ್ಯ", "ಆಯುರ್ದೇವತಾ, ಇಷ್ಟದೇವತಾ, ಕುಲದೇವತೆ". ಮುಂದೆ ಆವಾಹನ-ಪ್ರಾಣ ಪ್ರತಿಷ್ಠಾಪನ, ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ, ನವಗ್ರಹ ಮತ್ತು ಗಣಪತಿ ಹೋಮ ನಡೆಸಲಾಗುತ್ತದೆ ಎಂದು ವೀಕಿಪೀಡಿಯಾದಲ್ಲಿ ಮಾಹಿತಿ ಲಭ್ಯವಿದೆ.