ಕನ್ನಡ ಸುದ್ದಿ  /  ಮನರಂಜನೆ  /  Sri Murali: ಬಘೀರ ಎಫೆಕ್ಟ್‌! ಪೆಟ್ಟಿನ ಮೇಲೆ ಪೆಟ್ಟು, ವ್ಹೀಲ್‌ ಚೇರ್‌ನಲ್ಲೇ ಆಸ್ಪತ್ರೆಗೆ ದಾಖಲಾದ ನಟ ಶ್ರೀಮುರಳಿ Video

Sri Murali: ಬಘೀರ ಎಫೆಕ್ಟ್‌! ಪೆಟ್ಟಿನ ಮೇಲೆ ಪೆಟ್ಟು, ವ್ಹೀಲ್‌ ಚೇರ್‌ನಲ್ಲೇ ಆಸ್ಪತ್ರೆಗೆ ದಾಖಲಾದ ನಟ ಶ್ರೀಮುರಳಿ VIDEO

ಬಘೀರ ಸಿನಿಮಾ ಶೂಟಿಂಗ್‌ ವೇಳೆ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ ನಟ ಶ್ರೀ ಮುರಳಿ. ಮೈಸೂರಿನಲ್ಲಿ ನಡೆದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ವ್ಹೀಲ್‌ ಚೇರ್‌ ಮೇಲೆಯೇ ಕರೆತರಲಾಗಿದೆ.

Sri Murali: ಬಘೀರ ಎಫೆಕ್ಟ್‌! ಪೆಟ್ಟಿನ ಮೇಲೆ ಪೆಟ್ಟು, ವ್ಹೀಲ್‌ ಚೇರ್‌ನಲ್ಲೇ ಆಸ್ಪತ್ರೆಗೆ ದಾಖಲಾದ ನಟ ಶ್ರೀಮುರಳಿ
Sri Murali: ಬಘೀರ ಎಫೆಕ್ಟ್‌! ಪೆಟ್ಟಿನ ಮೇಲೆ ಪೆಟ್ಟು, ವ್ಹೀಲ್‌ ಚೇರ್‌ನಲ್ಲೇ ಆಸ್ಪತ್ರೆಗೆ ದಾಖಲಾದ ನಟ ಶ್ರೀಮುರಳಿ

Sri Murali Hospitalised: ಸ್ಯಾಂಡಲ್‌ವುಡ್‌ ನಟ ಶ್ರೀಮುರಳಿ ತೆರೆಮೇಲೆ ಕಾಣಿಸಿಕೊಂಡು ಬರೋಬ್ಬರಿ ಮೂರು ವರ್ಷಗಳೇ ಕಳೆದಿವೆ. 2021ರಲ್ಲಿ ಮಹೇಶ್‌ ಕುಮಾರ್‌ ನಿರ್ದೇಶನದಲ್ಲಿ ಮದಗಜ ಸಿನಿಮಾ ಬಿಡುಗಡೆ ಆಗಿದ್ದನ್ನು ಬಿಟ್ಟರೆ, ಅದಾದ ಮೇಲೆ ಅವರ ಬೇರಾವ ಸಿನಿಮಾ ತೆರೆಕಂಡಿಲ್ಲ. ಹೊಸ ಸಿನಿಮಾ ಬಘೀರ ಘೋಷಣೆಯಾಗಿತ್ತಾದರೂ, ಚಿತ್ರೀಕರಣವೂ ಕೊಂಚ ವಿಳಂಬವಾಯ್ತು. ಇದೀಗ ಕಳೆದೊಂದು ವರ್ಷದಿಂದ ಆ ಸಿನಿಮಾ ಕೆಲಸದಲ್ಲಿಯೇ ಅವರು ಬಿಜಿಯಾಗಿದ್ದಾರೆ. ಇದೀಗ ಇದೇ ಚಿತ್ರದ ಶೂಟಿಂಗ್‌ ವೇಳೆ ಮತ್ತೆ ಪೆಟ್ಟು ಮಾಡಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಅದ್ಧೂರಿಯಾಗಿಯೇ ಬಘೀರ ಸಿನಿಮಾ ಮೂಡಿಬರುತ್ತಿದೆ. ಡಾ. ಸೂರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಟ ಶ್ರೀಮುರಳಿ ಅವರ ಜನ್ಮ ದಿನದ ಪ್ರಯುಕ್ತ ಮಾಸ್‌ ಟೀಸರ್‌ ಝಲಕ್‌ ರಿಲೀಸ್‌ ಮಾಡಿದ್ದ ಚಿತ್ರತಂಡ, ಅಲ್ಲೂ ಕುತೂಹಲ ಕೆರಳಿಸಿತ್ತು. ಖಡಕ್‌ ಪೊಲೀಸ್‌ ಅಧಿಕಾರಿಯಾಗಿ, ದುಷ್ಟರನ್ನು ಸದೆಬಡಿಯುವವನಾಗಿ ಎದುರಾಗಿದ್ದರು ಶ್ರೀಮುರಳಿ. ಇದೀಗ ಇದೇ ಸಿನಿಮಾದ ಶೂಟಿಂಗ್‌ ವೇಳೆ ಮತ್ತೊಮ್ಮೆ ಕಾಲಿಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ವ್ಹೀಲ್‌ ಚೇರ್‌ ಮೇಲೆ ಆಸ್ಪತ್ರೆಗೆ ಬಂದ ಮುರಳಿ..

ಮೈಸೂರಿನಲ್ಲಿ ಬಘೀರ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಶೂಟಿಂಗ್‌ ವೇಳೆ ಎಡಗಾಲಿನ ಹಿಮ್ಮಡಿಗೆ ತೀವ್ರ ತರಹದ ಪೆಟ್ಟಾಗಿದೆ. ಸಾಹಸ ಸನ್ನಿವೇಶದ ಶೂಟಿಂಗ್‌ ವೇಳೆ ಈ ಅವಗಢ ಸಂಭವಿಸಿದೆ. ನಿಲ್ಲಲೂ ಬಾರದ ಸ್ಥಿತಿಗೆ ಜಾರಿದ್ದ ಅವರನ್ನು ತಕ್ಷಣ ಮೈಸೂರಿನ ಮಣಿಪಾಲ್‌ ಆಸ್ಪತ್ರೆಗೆ ವ್ಹೀಲ್‌ ಚೇರ್‌ ಮೇಲೆಯೇ ಕರೆತರಲಾಗಿದೆ. ನೋವಿನ ತೀವ್ರತೆ ಹೆಚ್ಚಿದ್ದ ಕಾರಣ, ಮುಂದಿನ ಒಂದಷ್ಟು ದಿನಗಳ ಕಾಲ ಬೆಡ್‌ರೆಸ್ಟ್‌ನಲ್ಲಿಯೇ ಇರಬೇಕಾಗಿದೆ.

ಕಳೆದ ವರ್ಷವೂ ಹೀಗೆ ಆಗಿತ್ತು..

ಬಘೀರ ಸಿನಿಮಾ ಶೂಟಿಂಗ್‌ ಶುರುವಾದ ಮೇಲೆ ನಟ ಶ್ರೀಮುರಳಿ ಪದೇಪದೆ ಪೆಟ್ಟು ತಿನ್ನುತ್ತಿದ್ದಾರೆ. ಕಳೆದ ವರ್ಷವೂ ಇದೇ ಸಿನಿಮಾದ ಶೂಟಿಂಗ್‌ ವೇಳೆ, ರಾಕ್‌ಲೈನ್‌ ಸ್ಟುಡಿಯೋದಲ್ಲಿ ಮೊಣಕಾಲಿನ ಮೂಳೆ ಮುರಿತಕ್ಕೆ ತುತ್ತಾಗಿದ್ದರು. ಈಗ ಮತ್ತೆ ಅದೇ ಸಿನಿಮಾದ ಚಿತ್ರೀಕರಣದ ಸಾಹಸ ದೃಶ್ಯಗಳ ಶೂಟಿಂಗ್‌ ಸಮಯದಲ್ಲಿಯೇ ಹಿಮ್ಮಡಿ ಜಾಯಿಂಟ್‌ ಭಾಗಕ್ಕೆ ಪೆಟ್ಟಾಗಿದೆ. ಕೈನ ಬೆರಳಿನ ಭಾಗಕ್ಕೂ ಪೆಟ್ಟಾಗಿರುವುದು ವೈರಲ್‌ ಆಗಿರುವ ವಿಡಿಯೋದಲ್ಲಿ ಕಂಡಿದೆ.

ಬಹುತಾರಾಗಣದ ಸಿನಿಮಾ

ಸದ್ಯ ಬಹುತೇಕ ಶೂಟಿಂಗ್‌ ಮುಗಿಸಿಕೊಂಡಿರುವ ಬಘೀರ, ಇದೇ ವರ್ಷದಲ್ಲಿ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಶ್ರೀಮುರಳಿಗೆ ರುಕ್ಮಿಣಿ ವಸಂತ್‌ ನಾಯಕಿಯಾಗಿ ಜತೆಯಾಗಿದ್ದಾರೆ. ಇನ್ನುಳಿದಂತೆ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಅಚ್ಯುತ್‌ ಕುಮಾರ್, ರಂಗಾಯಣ ರಘು, ಗರುಡ ರಾಮ್‌ ಸೇರಿ ದೊಡ್ಡ ತಾರಾಗಣವೇ ಇದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎ.ಜೆ ಶೆಟ್ಟಿ ಅವರ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಅವರ ಸಂಗೀತ ಚಿತ್ರಕ್ಕಿದೆ. ಪ್ರಣವ್‌ ಶ್ರೀ ಪ್ರಸಾದ್‌ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

IPL_Entry_Point