Pranitha Subhash: ಭೀಮನ ಅಮಾವಾಸ್ಯೆ; ಪತಿಯ ಪಾದ ಪೂಜೆ ಮಾಡಿದ ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್
ಕನ್ನಡ ಸುದ್ದಿ  /  ಮನರಂಜನೆ  /  Pranitha Subhash: ಭೀಮನ ಅಮಾವಾಸ್ಯೆ; ಪತಿಯ ಪಾದ ಪೂಜೆ ಮಾಡಿದ ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್

Pranitha Subhash: ಭೀಮನ ಅಮಾವಾಸ್ಯೆ; ಪತಿಯ ಪಾದ ಪೂಜೆ ಮಾಡಿದ ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್

ಕಳೆದ ವರ್ಷ ಭೀಮನ ಅಮಾವಾಸ್ಯೆ ಪೂಜೆ ವೇಳೆ ನಟಿ ಪ್ರಣಿತಾ ಸುಭಾಷ್ ಪತಿಯ ಪಾದದ ಬಳಿ ಕುಳಿತುಕೊಂಡಿದ್ದ ಫೋಟೋ ಹಂಚಿಕೊಂಡಿದ್ದರು. ಆದರೆ ಇದನ್ನು ಕೆಲವು ನೆಟ್ಟಿಗರು ಟೀಕಿಸಿದ್ದರು.

ಬೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ ಪತಿಯ ಪಾದ ಪೂಜೆ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ.
ಬೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ ಪತಿಯ ಪಾದ ಪೂಜೆ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ.

ಬೆಂಗಳೂರು: ಇವತ್ತು ಎಲ್ಲೆಡೆ ಭೀಮನ ಅಮಾವಾಸ್ಯೆಯನ್ನು (Bheemaana Amavasya) ಆಚರಿಸಲಾಗುತ್ತಿದ್ದು, ಸ್ಯಾಂಡಲ್‌ವುಡ್ (Sandalwood) ನಟಿ ಪ್ರಣಿತಾ ಸುಭಾಷ್ (Pranitha Subhash) ಈ ಬಾರಿಯೂ ಭೀಮನ ಅಮಾವಾಸ್ಯೆಯಂದು ಪತಿಯ ಪಾದ ಪೂಜೆ ಮಾಡಿದ್ದು, ಫೋಟೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಫೋಟೋಗೆ ಕ್ಯಾಪ್ಶನ್ ಕೂಡ ಬರೆದಿರುವ ಪ್ರಣಿತಾ, ಇಂದು ಬೆಳಗ್ಗೆ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಿದ್ದೇನೆ. ನಿಮಗೆ ಇದು ಪಿತೃಪ್ರಭುತ್ವದ ಪ್ರದರ್ಶನ ಅಂತ ಕಾಣಿಸಬಹುದು. ಆದರೆ ನನಗೆ ಇದು ಹೆಚ್ಚಿನ ಮಹತ್ವದ್ದಾಗಿದೆ. ಸನಾತನ ಧರ್ಮದಲ್ಲಿ ಭೀಮನ ಅಮಾವಾಸ್ಯೆಗೆ ಹೆಚ್ಚಿನ ಮಹತ್ವವಿದೆ. ಹಿಂದೂ ಆಚರಣೆಗಳು ಪಿತೃಪ್ರಧಾನವೆಂದು ವಾದಿಸುವುದು ಸಂಪೂರ್ಣವಾಗಿ ಆಧಾರರಹಿತವಾಗಿದೆ. ಯಾಕೆಂದರೆ ಇದು ದೇವಿಯನ್ನು ಸಮಾನವಾಗಿ ಪೂಜಿಸುವ ಕೆಲವು ನಂಬಿಕೆಗಳಲ್ಲಿ ಒಂದಾಗಿದೆ ಎಂದು ಬರೆದುಕೊಂಡಿದ್ದಾರೆ.

ಫೋಟೋದಲ್ಲಿ ಪ್ರಣಿತಾ ಪತಿಯ ಪಾದಕ್ಕೆ ಹೂಗಳನ್ನು ಹಾಕಿ ನಮಸ್ಕಾರ ಮಾಡುತ್ತಿದ್ದಾರೆ. ಇನ್ನ ಕಳೆದ ವರ್ಷ ಭೀಮನ ಅಮಾವಾಸ್ಯೆಯ ಪೂಜೆಯ ಫೋಟೋಗಳನ್ನು ಹಂಚಿಕೊಂಡಿದ್ದ ಪ್ರಣಿತಾ ಸುಭಾಷ್ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಕಳೆದ ವರ್ಷ ಪ್ರಣಿತಾ ತನ್ನ ಪತಿಯ ಪಾದದ ಬಳಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಫೋಟೋವನ್ನು ಕೆಲವರು ಟ್ರೋಲ್ ಮಾಡಿದ್ದರು. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಫೋಟೋ ನೋಡಿದ ಕೆಲವರು ಸೆಕ್ಸಿಸ್ಟ್ ಎಂದು ಕರೆದರೆ ಇನ್ನೂ ಕೆಲವರು ಅದು ಆಕೆಯ ಪದ್ಧತಿ ಇರಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕೊನೆಗೆ ಎಲ್ಲಾ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ್ದ ಪ್ರಣಿತಾ, ನಾನು ಒಬ್ಬ ನಟಿ. ನನ್ನ ಕ್ಷೇತ್ರವು ಗ್ಲಾಮರ್‌ಗೆ ಹೆಸರುವಾಸಿಯಾಗಿದೆ. ಜೀವನದಲ್ಲಿ ಪ್ರತಿಯೊಂದಕ್ಕೂ ಎರಡು ಬದಿಗಳು ಇರುತ್ತವೆ. ಆದರೆ ಈ ವಿಚಾರದಲ್ಲಿ ಶೇಕಡಾ 90 ರಷ್ಟು ಜನ ಇದರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಉಳಿದವುಗಳನ್ನು ನಾನು ನಿರ್ಲಕ್ಷಿಸುತ್ತೇನೆ ಎಂದಿದ್ದರು.

ಪ್ರಣಿತಾ ಸ್ಯಾಂಡ್‌ವುಡ್‌ ಮಾತ್ರವಲ್ಲದೆ, ತೆಲುಗು, ತಮಿಳಿನ ಸ್ಟಾರ್‌ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲುಗಿನ ಅತ್ತಾರಿಂಟಿಕಿ ದಾರೇದಿ ಸಿನಿಮಾ ಇವರ ಹಿಟ್‌ ಮೂವಿಗಳಲ್ಲೊಂದಾಗಿದೆ. ಪೂರ್ಕಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ಬಹುಭಾಷಾ ನಟಿ ಪ್ರಣಿತಾ, ಜರಾಸಂದ, ಮಿ.420, ಅಂಗಾರಕ, ಹಂಗಾಮಾ2, ಬ್ರಹ್ಮೋತ್ಸವಂ, ಹಾಲೋ ಗುರು ಪ್ರೇಮಕೋಸಂ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2021ರಲ್ಲಿ ಖ್ಯಾತ ಉದ್ಯಮಿ ನಿತಿನ್ ರಾಜು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪ್ರಣಿತಾ 2022ರಲ್ಲಿ ತಮ್ಮ ಮೊದಲ ಮಗು ಅರ್ನಾಳನ್ನು ಸ್ವಾಗತಿಸಿದ್ದರು.

Whats_app_banner