ಕನ್ನಡ ಸುದ್ದಿ  /  Entertainment  /  Sandalwood News Actress Jyothi Rai Accepted Her Relationship With Telugu Young Director Suku Purvaj Rsm

ಹೌದು ನಮ್ಮ ಎಂಗೇಜ್‌ಮೆಂಟ್‌ ಆಯ್ತು; ತೆಲುಗು ನಿರ್ದೇಶಕನೊಂದಿಗಿನ ಸಂಬಂಧ ಒಪ್ಪಿಕೊಂಡ ಜ್ಯೋತಿ ರೈ

ಪೂರ್ವಜ್‌ ಜೊತೆ ಎಂಗೇಜ್‌ಮೆಂಟ್‌ ಆಗಿದೆ ಎಂದು ಜ್ಯೋತಿ ಬರೆದುಕೊಂಡಿದ್ದಾರೆ. ಆದರೆ ಜ್ಯೋತಿ ರೈ ಕುತ್ತಿಗೆಯಲ್ಲಿ ಕರಿಮಣಿ ಕಾಣಿಸುತ್ತಿದ್ದು ಈಗಾಗಲೇ ಅವರಿಗೆ ಮದುವೆ ಆಗಿದೆ, ಬಹುಶ: ಇದು ಹಳೆಯ ಫೋಟೋಗಳಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ತೆಲುಗು ನಿರ್ದೇಶಕ ಸುಕು ಪೂರ್ವಜ್‌ ಜೊತೆ ಜ್ಯೋತಿ ರೈ
ತೆಲುಗು ನಿರ್ದೇಶಕ ಸುಕು ಪೂರ್ವಜ್‌ ಜೊತೆ ಜ್ಯೋತಿ ರೈ (PC: Jyothi Rai)

ಕನ್ನಡ ಕಿರುತೆರೆ ನಟಿ ಜ್ಯೋತಿ ರೈ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಜ್ಯೋತಿ ರೈ ಈಗ ನಾಯಕಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇನ್ನೆಂದಿಗೂ ನಾನು ಪೋಷಕ ಪಾತ್ರ ಮಾಡುವುದಿಲ್ಲ ಎಂದಿದ್ದಾರೆ. ಜೊತೆಗೆ ಹಾಟ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹಾಟ್‌ ಫೋಟೋಗಳ ಮೂಲಕ ಸುದ್ದಿಯಾದ ಜ್ಯೋತಿ ರೈ

ಕೆಲವು ದಿನಗಳಿಂದ ಸುದ್ದಿಯೇ ಇಲ್ಲದ ಜ್ಯೋತಿ ರೈ ಇದ್ದಕ್ಕಿದ್ದಂತೆ ಹಾಟ್‌ ಫೋಟೋಗಳ ಮೂಲಕ ಬಹಳ ಸುದ್ದಿಯಾಗಿದ್ದರು. ಜ್ಯೋತಿ ರೈ ಇದ್ದಕ್ಕಿದ್ದಂತೆ ಹೀಗೆ ಬದಲಾಗಿದ್ದು ಎಲ್ಲರಿಗೂ ಆಶ್ಚರ್ಯ ಉಂಟಾಗಿತ್ತು. ಅಲ್ಲದೆ ಜ್ಯೋತಿ ರೈ ಪದೇ ಪದೆ ಯುವಕನೊಬ್ಬನೊಂದಿಗೆ ಇರುವ ಫೋಟೋ ನೋಡಿ ಅನುಮಾನ ವ್ಯಕ್ತಪಡಿಸಿದ್ದರು. ಬಹುತೇಕ ಫೋಟೋಗಳಿಗೆ ಜ್ಯೋತಿ, ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿದ್ದಾರೆ. ಜ್ಯೋತಿ ರೈ ಮದುವೆ ಆಗಿದ್ದು ಒಬ್ಬ ಮಗ ಕೂಡಾ ಇದ್ದಾನೆ. ಆದರೆ ಮೊದಲ ಪತಿಯಿಂದ ಜ್ಯೋತಿ ದೂರಾಗಿದ್ದು ನಿರ್ದೇಶಕ ಸುಕು ಪೂರ್ವಜ್‌ ಜೊತೆ ಡೇಟಿಂಗ್‌ ಮಾಡುತ್ತಿರಬಹುದು ಎನ್ನಲಾಗಿತ್ತು. ಇದೀಗ ಸ್ವತ: ಜ್ಯೋತಿ ತಮ್ಮ ನಡುವಿನ ಸಂಬಂಧವನ್ನು ಕನ್ಫರ್ಮ್‌ ಮಾಡಿದ್ದಾರೆ.

‌ನಿರ್ದೇಶಕ ಸುಕು ಪೂರ್ವಜ್‌ ಜೊತೆಗೆ ಎಂಗೇಜ್‌ಮೆಂಟ್

ಸುಕು ಪೂರ್ವಜ್‌ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಜ್ಯೋತಿ ರೈ ತಮ್ಮಿಬ್ಬರ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಪೂರ್ವಜ್‌ ಜೊತೆ ಎಂಗೇಜ್‌ಮೆಂಟ್‌ ಆಗಿದೆ ಎಂದು ಜ್ಯೋತಿ ಬರೆದುಕೊಂಡಿದ್ದಾರೆ. ಆದರೆ ಜ್ಯೋತಿ ರೈ ಕುತ್ತಿಗೆಯಲ್ಲಿ ಕರಿಮಣಿ ಕಾಣಿಸುತ್ತಿದ್ದು ಈಗಾಗಲೇ ಅವರಿಗೆ ಮದುವೆ ಆಗಿದೆ, ಬಹುಶ: ಇದು ಹಳೆಯ ಫೋಟೋಗಳಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಜ್ಯೋತಿ ರೈ ಅಭಿನಯಿಸುತ್ತಿರುವ ಪ್ರಿಟಿ ಗರ್ಲ್‌ ವೆಬ್‌ ಸಿರೀಸ್‌ ಪೋಸ್ಟರ್‌ನಲ್ಲಿ ಆಕೆಯ ಹೆಸರು ಸುಕು ಪೂರ್ವಜ್‌ ಎಂದು ಬರೆಯಲಾಗಿದೆ.

ತೆಲುಗಿನಲ್ಲೂ ಫೇಮಸ್‌ ಜ್ಯೋತಿ ರೈ

ಜ್ಯೋತಿ ರೈ ಕನ್ನಡದಲ್ಲಿ ಗೆಜ್ಜೆಪೂಜೆ, ಜೋಗುಳ, ಕಿನ್ನರಿ ಸೇರಿ ಸುಮಾರು 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕೆಲವು ನಾಯಕಿ ಪಾತ್ರಗಳಾದರೆ, ಇನ್ನೂ ಕೆಲವು ತಾಯಿ ಪಾತ್ರ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಕೂಡಾ ನಟಿಸಿರುವ ಜ್ಯೋತಿ ರೈ, ತೆಲುಗು ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ. ಕನ್ಯಾದಾನಂ, ಗುಪ್ಪೆಡಂತಾ ಮನಸು ತೆಲುಗು ಧಾರಾವಾಹಿಯಲ್ಲಿ ನಟಿಸುವ ಮೂಲಕ ತೆಲುಗು ಅಭಿಮಾನಿಗಳನ್ನು ಗಳಿಸಿದ್ದಾರೆ.

ಹೆಚ್ಚಿನ ಮನರಂಜನೆ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ