It’s baby girl: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌, ಅಪ್ಪನಾದ ಖುಷಿಯಲ್ಲಿ ಡಾರ್ಲಿಂಗ್‌ ಕೃಷ್ಣ ಹೀಗಂದ್ರು-sandalwood news actress milana nagaraj welcome baby girl darling krishna shared good news with hearty note pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  It’s Baby Girl: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌, ಅಪ್ಪನಾದ ಖುಷಿಯಲ್ಲಿ ಡಾರ್ಲಿಂಗ್‌ ಕೃಷ್ಣ ಹೀಗಂದ್ರು

It’s baby girl: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌, ಅಪ್ಪನಾದ ಖುಷಿಯಲ್ಲಿ ಡಾರ್ಲಿಂಗ್‌ ಕೃಷ್ಣ ಹೀಗಂದ್ರು

It’s baby girl: ಮಿಲನಾ ನಾಗರಾಜ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ಸುದ್ದಿಯನ್ನು ಡಾರ್ಲಿಂಗ್‌ ಕೃಷ್ಣ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಿಲನಾ ಮತ್ತು ಡಾರ್ಲಿಂಗ್‌ ಕೃಷ್ಣರಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.

It’s baby girl: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌
It’s baby girl: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌

ಬೆಂಗಳೂರು: ಕನ್ನಡ ನಟಿ ಮಿಲನಾ ನಾಗರಾಜ್‌ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ವಿಚಾರವನ್ನು ಡಾರ್ಲಿಂಗ್‌ ಕೃಷ್ಣ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "It’s baby girl ಇದು ಹೆಣ್ಣು ಮಗು (ಪ್ರೀತಿಯ ಇಮೋಜಿಗಳು). ಅಮ್ಮ ಮತ್ತು ಮಗಳು ಇಬ್ಬರೂ ಕ್ಷೇಮ. ಪ್ರೀತಿಯ ಮಿಲನಾ ನಾಗರಾಜ್‌, ತಾಯ್ತನದ ಈ ಪ್ರಯಾಣದಲ್ಲಿ ನೀನು ಅನುಭವಿಸಿದ ಒಂದು ರೀತಿಯ ನೋವು, ನಿನ್ನ ತ್ಯಾಗ, ಧೈರ್ಯದ ಕುರಿತು ಯೋಚಿಸಿದಾಗ ನನಗೆ ಗೌರವ ಮೂಡುತ್ತದೆ. ಇಂತಹ ಅದ್ಭುತ ಪ್ರಯಾಣಕ್ಕೆ ಸಾಕ್ಷಿಯಾದ ಎಲ್ಲಾ ತಾಯಂದಿರಿಗೂ ಪ್ರಣಾಮಗಳು. ನಾನು ಹೆಮ್ಮೆಯ ಮತ್ತು ಅದೃಷ್ಟದ ತಂದೆ. ಏಕೆಂದರೆ ನನಗೆ ಮಗಳು ಜನಿಸಿದ್ದಾಳೆ" ಎಂದು ಡಾರ್ಲಿಂಗ್‌ ಕೃಷ್ಣ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಅಪ್ಪನಾದ ಖುಷಿಯಲ್ಲಿರುವ ಡಾರ್ಲಿಂಗ್‌ ಕೃಷ್ಣರಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಅಭಿನಂದನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. "ನೋಡು ನಾನು ಗೆಸ್‌ ಮಾಡಿದಂತೆ ಆಯ್ತು" ಎಂದು ಚೈತ್ರಾ ವಾಸುದೇವನ್‌ ಹೇಳಿದ್ದಾರೆ. ನಿಧಿ ಸುಬ್ಬಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಧನು ಆಚಾರ್‌, ಸಂಗೀತ ಶೃಂಗೇರಿ, ಶ್ವೇತಾ ಪ್ರಸಾದ್‌ ಅಭಿನಂದನೆ ಸಲ್ಲಿಸಿದ್ದಾರೆ. ರಾಣಿ ಆಗಮಿಸಿದ್ದಾಳೆ ಎಂದು ಅಮೃತಾ ಅಯ್ಯಂಗಾರ್‌ ಕಾಮೆಂಟ್‌ ಮಾಡಿದ್ದಾರೆ. "ಅಭಿನಂದನೆಗಳು, ಹೆಣ್ಣುಮಕ್ಕಳು ಅಮೂಲ್ಯ ರತ್ನಗಳು" ಎಂದು ಸ್ಪೂರ್ತಿ ವಿಶ್ವಾಸ್‌ ಕಾಮೆಂಟ್‌ ಮಾಡಿದ್ದಾರೆ. ಕಿಚ್ಚ ಸುಮ್ಮು, ದಿಶಾ ಮದನ್‌, ಭಾರತಿ ಪ್ರಸಾದ್‌ ಸೇರಿದಂತೆ ಸಾಕಷ್ಟು ಜನರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ

ಸ್ಯಾಂಡಲ್‌ವುಡ್‌ನ ಪ್ರೇಮಿಗಳಾಗಿದ್ದ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಈಗ ಮೊದಲ ಮಗುವನ್ನು ಮನೆಗೆ ಸ್ವಾಗತಿಸಿದ ಸಂಭ್ರಮದಲ್ಲಿದ್ದಾರೆ. ಇವರಿಬ್ಬರದ್ದು ಲವ್‌ ಮ್ಯಾರೇಜ್‌. ಸುಮಾರು 8 ವರ್ಷ ಲವ್‌ ಮಾಡಿ, ಬಳಿಕ ಮದುವೆಯಾಗಿದ್ದರು. 3 ವರ್ಷದ ಹಿಂದೆ ಇವರ ವಿವಾಹ ನಡೆದಿತ್ತು. ಶಿವರಾಜ್‌ ಕುಮಾರ್‌, ಸುದೀಪ್‌, ಪುನೀತ್‌ ರಾಜ್‌ಕುಮಾರ್‌, ರವಿಚಂದ್ರನ್‌, ರಕ್ಷಿತ್‌ ಶೆಟ್ಟ, ನಿಖಿಲ್‌ ಕುಮಾರಸ್ವಾಮಿ, ತಮನ್ನಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ವಿವಾಹ ಸಮಾರಂಭದಲ್ಲಿ ಹಾಜರಿ ಹಾಕಿದ್ದರು.

ಮಿಲನಾ ನಾಗರಾಜ್‌ ಸಿನಿಮಾಗಳು

ಡಾರ್ಲಿಂಗ್‌ ಕೃಷ್ಣ ಜತೆ ಮಿಲನಾ ನಾಗರಾಜ್‌ ನಟಿಸಿದ ಲವ್‌ ಮಾಕ್ಟೇಲ್‌ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದಾದ ಬಳಿಕ ಲವ್‌ ಮಾಕ್ಟೆಲ್‌ 2 ಸಿನಿಮಾ ರಿಲೀಸ್‌ ಆಗಿತ್ತು. ಲಿಖಿತ್‌ ಶೆಟ್ಟಿ ಜತೆ ನಮ್ಮ ದುನಿಯಾ ನಮ್‌ ಸ್ಟೈಲ್‌ ಚಿತ್ರದಲ್ಲಿ, ದರ್ಶನ್‌ ಜತೆ ಬೃಂದಾವನದಲ್ಲೂ ಮಿಲನಾ ನಟಿಸಿದ್ದರು. ಚಾರ್ಲಿಯಲ್ಲಿ ಪೂರ್ವಿಯಾಗಿ ಕಾಣಿಸಿಕೊಂಡಿದ್ದರು. ಮಲಯಾಳಂನಲ್ಲಿ ಅವರುಂಡೆ ರಾವುಕಾಲ್‌ ಚಿತ್ರದಲ್ಲಿ ನಟಿಸಿದ್ದರು. ಲವ್‌ ಬರ್ಡ್ಸ್‌, ಕೌಶಲ್ಯ ಸುಪ್ರಜಾ ರಾಮಾ, ಫಾರ್‌ ರಿಜಿಸ್ಟ್ರೇಷನ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಿಲನಾ ನಟಿಸಿದ್ದಾರೆ.