ಕನ್ನಡ ಸುದ್ದಿ  /  Entertainment  /  Sandalwood News Actress Namratha Gowda Kishen Bilagali Dance For Yuva Rajkumar Yuva Movie Kavithe Kavithe Song Pcp

Namratha Gowda: ಯುವ ಹಾಡಿಗೆ ನಮ್ರತಾ ಗೌಡ ಜತೆ ಮತ್ತೆ ಸಖತ್‌ ಸ್ಟೆಪ್‌ ಹಾಕಿದ ಕಿಶನ್‌ ಬಿಳಗಲಿ; ವಾವ್‌ ಅಂದ್ರು ರುಕ್ಮಿಣಿ ವಸಂತ್‌

ಯುವ ರಾಜ್‌ಕುಮಾರ್‌ ಅಭಿನಯದ ಮುಂಬರುವ "ಯುವ ಸಿನಿಮಾದ" ಕವಿತೇ ಕವಿತೇ ಏನು ಹೇಳಲಿ ನಾನು ಹೊಸತರ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಹಾಡಿಗೆ ನಮ್ರತಾ ಗೌಡ ಜತೆ ಕಿಶನ್‌ ಬಿಳಗಲಿ ಸಖತ್‌ ಸ್ಟೆಪ್‌ ಹಾಕಿದ್ದಾರೆ.

ಯುವ ಹಾಡಿಗೆ ನಮ್ರತಾ ಗೌಡ ಜತೆ ಸಖತ್‌ ಸ್ಟೆಪ್‌ ಹಾಕಿದ ಕಿಶನ್‌ ಬಿಳಗಲಿ
ಯುವ ಹಾಡಿಗೆ ನಮ್ರತಾ ಗೌಡ ಜತೆ ಸಖತ್‌ ಸ್ಟೆಪ್‌ ಹಾಕಿದ ಕಿಶನ್‌ ಬಿಳಗಲಿ

ಸ್ಯಾಂಡಲ್‌ವುಡ್‌ಗೆ ಯುವ ರಾಜ್‌ಕುಮಾರ್‌ ಯುವ ಸಿನಿಮಾದ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ಯುವ ಸಿನಿಮಾದ ಎರಡು ಹಾಡುಗಳು ಈಗಾಗಲೇ ರಿಲೀಸ್‌ ಆಗಿವೆ. ಇತ್ತೀಚಿಗೆ ಕವಿತೆ ಕವಿತೆ ಎಂಬ ಹಾಡು ರಿಲೀಸ್‌ ಆಗಿತ್ತು. ಈ ಹಾಡಿನಲ್ಲಿ ಏನೂ ಹೇಳಲಿ ನಾನು ಹೊಸತರ ಎಂಬ ಚಂದದ ಸಾಲುಗಳಿವೆ. ಈ ಹಾಡಿನ ಲಿರಿಕಲ್‌ ವಿಡಿಯೋವನ್ನು ಮಾತ್ರ ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಹಾಡಿಗೆ ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳಾದ ಕಿಶನ್‌ ಬಿಳಗಲಿ ಮತ್ತು ನಮ್ರತಾ ಗೌಡ ಡ್ಯಾನ್ಸ್‌ ಮಾಡಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ನಮ್ರತಾ ಗೌಡ ಮತ್ತು ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಕಿಶನ್‌ ಬಿಳಗಲಿ ಇದೇ ಮೊದಲು ಡ್ಯಾನ್ಸ್‌ ಮಾಡುತ್ತಿರುವುದಲ್ಲ. ಈ ಹಿಂದೆಯೂ ಇವರು ಡ್ಯಾನ್ಸ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಇವರಿಬ್ಬರು ಏನೂ ಹೇಳಲಿ ನಾನು ಹೊಸತರ ಎಂಬ ಹಾಡಿಗೆ ಚಂದದ ಡ್ಯಾನ್ಸ್‌ ಮಾಡಿದ್ದಾರೆ. ಮೂಲ ಯುವ ಸಿನಿಮಾದಲ್ಲಿ ಈ ಹಾಡಿಗೆ ಡ್ಯಾನ್ಸ್‌ ಹೇಗೆ ಇರಲಿದೆ ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ, ಯುವ ಸಿನಿಮಾದ ಹಾಡಿಗೆ ಕಿಶನ್‌ ತನ್ನದೇ ಶೈಲಿಯಲ್ಲಿ ನೃತ್ಯ ಸಂಯೋಜನೆ ಮಾಡಿ ಡ್ಯಾನ್ಸ್‌ ಮಾಡಿದ್ದಾರೆ.

ವಾವ್‌ ಅಂದ್ರು ರುಕ್ಮಿಣಿ ವಸಂತ್‌

ಕಿಶನ್‌ ಬಿಳಗಲಿ ಮತ್ತು ನಮ್ರತಾ ಗೌಡ ಡ್ಯಾನ್ಸ್‌ ನೋಡಿ ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಸಮಯದಲ್ಲಿ ನೆಟ್ಟಿಗರ ತಲೆಹರಟೆ ಕಾಮೆಂಟ್‌ಗಳೂ ಸಾಕಷ್ಟು ಬಂದಿವೆ. ಯುವ ಸಿನಿಮಾದ ನಾಯಕಿ ಈ ಹಾಡಿಗೆ ಫಿದಾ ಆಗಿದ್ದಾರೆ. ಕಿಶನ್‌ ಡ್ಯಾನ್ಸ್‌ ವಿಡಿಯೋ ನೋಡಿ "ವಾವ್‌" ಎಂದು ಕಣ್ತುಂಬ ಲವ್‌ ತುಂಬಿದ ಇಮೋಜಿಯ ಕಾಮೆಂಟ್‌ ಮಾಡಿದ್ದಾರೆ. ಕೊರಿಯಾಗ್ರಫಿ ಮತ್ತು ಇಬ್ಬರ ನೃತ್ಯ ಪ್ರದರ್ಶನ ಅದ್ಭುತವಾಗಿದೆ ಎಂದು ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಕಿಶನ್‌ ಬಿಳಗಲಿ ಡ್ಯಾನ್ಸ್‌ ವಿಡಿಯೋಗಳಿಗೆ ಒಂದಿಷ್ಟು ಜನರು ಬೇರೆ ರೀತಿಯ ಕಾಮೆಂಟ್‌ ಕೂಡ ಮಾಡಿದ್ದಾರೆ. ನಮ್ರತಾ ಗೌಡ ಮತ್ತು ಕಿಶನ್‌ ಮದುವೆ ಯಾವಾಗ? ಸ್ನೇಹಿತ್‌ ಗತಿಯೇನು ಇತ್ಯಾದಿ ಕಾಮೆಂಟ್‌ಗಳು ಬಂದಿವೆ.

ನಮ್ರತಾ ಗೌಡ ಜತೆ ತಿಂಗಳಿಗೊಂದು ವಿಡಿಯೋ

ಕಾಕತಾಳೀಯ ಎಂಬಂತೆ ಕಳೆದ ತಿಂಗಳು ಇದೇ ಸಮಯದಲ್ಲಿ ನಮ್ರತಾ ಗೌಡ ಮತ್ತು ಕಿಶನ್‌ ಬಿಳಗಲಿ ಜತೆಯಾಗಿ ಡ್ಯಾನ್ಸ್‌ ಮಾಡಿದ್ದರು. "ಮಧ್ಯರಾತ್ರಿಲಿ ಹೈವೆ ರಸ್ತೇಲಿ" ಎಂಬ ಹಾಡಿಗೆ ಇವರಿಬ್ಬರು ಡ್ಯಾನ್ಸ್‌ ಮಾಡಿದ್ದರು. ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟನೆಯ ಶಾಂತಿಕ್ರಾಂತಿ ಸಿನಿಮಾದ ಹಾಡಿಗೆ ಇವರು ಸಖತ್‌ ಡ್ಯಾನ್ಸ್‌ ಮಾಡಿದ್ದರು. ಇದಾದ ಬಳಿಕ ಫೆಬ್ರವರಿ ಎರಡನೇ ವಾರದಲ್ಲಿ ಪರವಶನಾದೆನು ಹಾಡಿಗೆ ಡ್ಯಾನ್ಸ್‌ ಮಾಡಿದ್ದರು.

ನಮ್ರತಾ ಗೌಡ ಅವರು ಬಿಗ್‌ಬಾಸ್‌ ಕನ್ನಡ ಸೀಸನ್‌ ಹತ್ತರಲ್ಲಿ ಸ್ಪರ್ಧಿಯಾಗಿದ್ದರು. ಫಿನಾಲಿ ತಲುಪುವ ಹಂತದಲ್ಲಿ ದೊಡ್ಮನೆಯಿಂದ ಹೊರಹೋಗಿದ್ದರು. ಇವರು ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಸ್ಟಾರ್‌ ಸುವರ್ಣದ ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದರು. ತಕಮಿಧಿತ ಡ್ಯಾನ್ಸ್ ಶೋನಲ್ಲಿ ಅಗ್ರ ಐದನೇ ಸ್ಥಾನಕ್ಕೆ ಬಂದಿದ್ದರು. ಅಲ್ಲೂ ಕಿಶನ್‌ ಜತೆ ಡ್ಯಾನ್ಸ್‌ ಮಾಡಿದ್ದರು. ನಾಗಿಣಿ 2 ಧಾರಾವಾಹಿಯಲ್ಲೂ ನಟಿಸಿದ್ದಾರೆ. ಬಿಬಿಕೆ 7ರಲ್ಲಿ ಕಿಶಣ್‌ ಬಿಳಗಲಿ ಸ್ಪರ್ಧಿಸಿದ್ದರು. ಇವರು ಹಿಂದಿ ಡ್ಯಾನ್ಸ್‌ ರಿಯಾಲಿಟಿ ಶೋ "ಡ್ಯಾನ್ಸ್‌ ದಿವಾನಿ ಶೋ"ನಲ್ಲಿ ಭಾಗವಹಿಸಿ ವಿನ್‌ ಆಗಿದ್ದರು.

IPL_Entry_Point