Viral Video: ನಟಿ ನಮ್ರತಾ ಗೌಡ- ದರ್ಶಿನಿ ಡ್ಯಾನ್ಸ್ ವಿಡಿಯೋ ವೈರಲ್; ಮೊದಲ ಹೆಜ್ಜೆಗೆ ಏನೋ ಕಂಪನ, ಏನೀ ರೋಮಾಂಚನ
Namratha Gowda Viral Video: ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ, ಕನ್ನಡ ನಟಿ ನಮ್ರತಾ ಗೌಡ ಅವರು ದರ್ಶಿನಿ ಜತೆ ಗಾಳಿಪಟ ಸಿನಿಮಾದ ನಧೀಂ ಧೀಂ ತನ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ನಟಿ ನಮ್ರತಾ ಗೌಡ ಮತ್ತು ದರ್ಶಿನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಡ್ಯಾನ್ಸ್ ವಿಡಿಯೋ ಹಂಚಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ ಸಿನಿಮಾದ ನಧೀಂ ಧೀಂ ತನ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್‌ಗೆ ದರ್ಶಿನಿ ನಿರ್ದೇಶನವಿದೆ. ಸಕ್ಕರೆ ಫಿಲ್ಮ್ಸ್, ಅದ್ವಿಕ್ ಫಿಲ್ಮ್ಸ್, ಕಾರ್ತಿಕ್ ಶ್ರೀನಿವಾಸ್ ಈ ಸುಂದರ ವಿಡಿಯೋವನ್ನು ಶೂಟ್ ಮಾಡಿದೆ. ಇದೇ ಸಮಯದಲ್ಲಿ ನಮ್ರತಾ ಉಡುಗೆ ಲಿಖಿತಾ ಸುರೇಶ್, ದರ್ಶಿನಿ ಉಡುಗೆ ಶಿಮ್ಮರ್ ಡಿಸೈನರ್ ಕಡೆಯಿಂದ ಬಂದಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸುಮಾರು ಒಂದು ಗಂಟೆಯಲ್ಲಿ ಹತ್ತು ಹಲವು ಸಾವಿರ ಲೈಕ್‌ಗಳು, ಹಲವು ಕಾಮೆಂಟ್‌ಗಳು ಬಂದಿವೆ. "ಸೂಪರ್, ವಂಡರ್‌ಫುಲ್" "ಬೆಂಕಿ" "ನಾಟ್ಯ ಮಯೂರಿ" "ಇಬ್ಬರೂ ಒಳ್ಳೆಯ ಡ್ಯಾನ್ಸರ್" "ಅವಳಿ ಸಹೋದರಿಯರ ರೀತಿ ಕಾಣಿಸುವಿರಿ" "ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ನೀವು" ಎಂದೆಲ್ಲ ಕಾಮೆಂಟ್‌ಗಳ ಸುರಿಮಳೆಯಾಗಿದೆ.
ನಟಿ ನಮ್ರತಾ ಗೌಡ- ದರ್ಶಿನಿ ಡ್ಯಾನ್ಸ್ ವಿಡಿಯೋ
ನಮ್ರತಾ ಗೌಡ ಕನ್ನಡ ಕಿರುತೆರೆ ನಟಿ. ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಬಳಿಕ ಹೆಚ್ಚಿನ ಜನಪ್ರಿಯತೆ ಪಡೆದರು. 1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಸೀರಿಯಲ್ ಪ್ರಯಾಣ ಆರಂಭಿಸಿದರು. ಇದಾದ ಬಳಿಕ ಪುಟ್ಟ ಗೌರಿ ಸೀರಿಯಲ್‌ನಲ್ಲಿ ಹಿಮಾ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಹೃದಯ ತಟ್ಟಿದರು.
ನಮ್ರತಾ ಗೌಡ ಒಳ್ಳೆಯ ಡ್ಯಾನ್ಸರ್ ಎನ್ನುವುದನ್ನೂ ಈಗಾಗಲೇ ಹಲವು ಬಾರಿ ಸಾಬೀತು ಪಡಿಸಿದ್ದಾರೆ. ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ಜನಪ್ರಿಯ ಡ್ಯಾನ್ಸರ್ ಕಿಶನ್ ಬಿಳಗಲಿ ಜತೆ ಹಲವು ವಿಡಿಯೋಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇವರು ನಾಗಿಣಿ 2 ಸೀರಿಯಲ್‌ನಲ್ಲಿ ಶಿವಾನಿ ಪಾತ್ರದಲ್ಲಿ ನಟಿಸಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಫಿನಾಲೆ ತಲುಪುವ ಕೊನೆಯ ವಾರ ತನಕ ಪ್ರಬಲವಾಗಿ ಸ್ಪರ್ಧೆ ನೀಡಿದ್ದರು.
ಸದ್ಯ ನಮ್ರತಾ ಗೌಡ ಮತ್ತು ದರ್ಶಿನಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಡ್ಯಾನ್ಸ್ ಗೆ ಗಾಳಿಪಟದ ಹಾಡನ್ನು ಬಳಸಿಕೊಳ್ಳಲಾಗಿದೆ. ವಿಶೇಷವಾಗಿ ಗಣೇಶ್ ಹುಟ್ಟುಹಬ್ಬದಂದೇ ಈ ವಿಡಿಯೋ ಬಿಡುಗಡೆಯಾಗಿರುವುದು ಕಾಕತಾಳೀಯ. ಗಾಳಿಪಟ ಸಿನಿಮಾದ ಲಿರಿಕ್ಸ್ ಇಲ್ಲಿದೆ.
ಗಾಳಿಪಟ ಸಿನಿಮಾದ ಹಾಡಿನ ಲಿರಿಕ್ಸ್
ನಧೀಂ ಧೀಂ ತನ, ಮಧುರ ಪ್ರೇಮದ ಮೊದಲ ತಲ್ಲಣ, ಧ್ಯನ ಆಲಿಂಗನ.. ನಧೀಂ ಧೀಂ ತನ
ಮಧುರ ಪ್ರೇಮದ ಮೊದಲ ತಲ್ಲಣ, ಧ್ಯನ ಆಲಿಂಗನ
ತಾಕಿಟ ತರಿಕಿಟ ಎನ್ನುತಿದೆ.. ಈ ಹೃದಯ ಮೃದಂಗ, ಸುಂದರ ಮಾನಸ ಸರೋವರದಲಿ..
ಪ್ರೇಮ ತರಂಗ, ಈ ಕಣ್ಣಿನ ಕವನ ಓದೊ ಓ ಹುಡುಗ
ನಧೀಂ ಧೀಂ ತನ, ಮಧುರ ಪ್ರೇಮದ ಮೊದಲ ತಲ್ಲಣ, ಧ್ಯನ ಆಲಿಂಗನ,
ಮೊದಲ ಹೆಜ್ಜೆಗೆ ಏನೊ ಕಂಪನ, ಏನೀ ರೋಮಾಂಚನ! ಮಾತೊಂದ ಕೇಳು ನೀ ಹರಿಸಿ
ಹಾಡೊಂದ ಹೇಳು ನೀ ಹರಿಸಿ, ಪ್ರೇಮದ ಸರಿ-ಗಮ ಸ್ವರ ತಾಳದ ಕೊಳದಲ್ಲಿ
ಹಾಡುತ ತೇಳಾಡುತ ಜ್ವರವೇರಿಸು ಮಳೆಯಲ್ಲಿ
ಒಂದೂರಲ್ಲಿ ರಾಜ-ರಾಣಿ, ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ, ಕೋಟೆ ದಾಟಿ ಬಂದ ಕಥೆಗೆ
ನಾಯಕ ನೀನೆ.. ಆ ಚಂದಾಮಾಮ ಕಥೆಗೆ ನಾಯಕಿ ನಾ!
ನಧೀಂ ಧೀಂ ತನ, ಮಧುರ ಪ್ರೇಮದ ಮೊದಲ ತಲ್ಲಣ, ಧ್ಯನ ಆಲಿಂಗನ..
ಮೊದಲ ಹೆಜ್ಜೆಗೆ ಏನೊ ಕಂಪನ, ಏನೀ ರೋಮಾಂಚನ!
ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು ಸೋಲುವೆ ಪ್ರತಿ ಕ್ಷಣ ನನ್ನಾ ಮನದಲೆ ನಾನು
ನಿದ್ದೆ ಬರದ ಕಣ್ಣ ಮೇಲೆ.. ಕೈಯ್ಯಾ ಮುಗಿವೆ ಚುಂಬಿಸು ಒಮ್ಮೆ
ನಾನು ನಾಚಿ ನಡುಗೊ ವೇಳೆ.. ಮಲ್ಲಿ ಹೂವ ಮುಡಿಸೊ ಒಮ್ಮೆ
ನಾನು ಭೂಮಿ.. ಆವರಿಸು ಸುರಿವ ಮಳೆಯಂತೆ ನನ್ನ!
ನಧೀಂ ಧೀಂ ತನ, ಮಧುರ ಪ್ರೇಮದ ಮೊದಲ ತಲ್ಲಣ, ಧ್ಯನ ಆಲಿಂಗನ
ತಾಕಿಟ ತರಿಕಿಟ ಎನ್ನುತಿದೆ.. ಈ ಹೃದಯ ಮೃದಂಗ, ಸುಂದರ ಮಾನಸ ಸರೋವರದಲಿ..
ಪ್ರೇಮ ತರಂಗ, ಈ ಕಣ್ಣಿನ ಕವನ ಓದೊ ಓ ಹುಡುಗ!