ಕನ್ನಡ ಸುದ್ದಿ  /  ಮನರಂಜನೆ  /  ಮದ್ಯ, ಮೀನು, ಮಾಂಸವನ್ನೇ ನೈವೇದ್ಯಕ್ಕಿಟ್ಟ ನಿಶ್ವಿಕಾ ನಾಯ್ಡು! ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿಯಿಂದ ವಿಶೇಷ ಯಾಗ Video

ಮದ್ಯ, ಮೀನು, ಮಾಂಸವನ್ನೇ ನೈವೇದ್ಯಕ್ಕಿಟ್ಟ ನಿಶ್ವಿಕಾ ನಾಯ್ಡು! ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿಯಿಂದ ವಿಶೇಷ ಯಾಗ VIDEO

ಟಾಲಿವುಡ್‌ ಅಂಗಳದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತರಾದವರು ವೇಣು ಸ್ವಾಮಿ. ಪಕ್ಕದ ತೆಲುಗು ಚಿತ್ರೋದ್ಯಮದಲ್ಲಿನ ಸಾಕಷ್ಟು ಸಿನಿಮಾ ಮಂದಿಯ ಭವಿಷ್ಯ ನುಡಿದಿದ್ದ ವೇಣುಸ್ವಾಮಿ, ಸ್ಟಾರ್‌ ನಟರ ಮನೆಯಲ್ಲಿ ಹೋಮ ಹವನ, ಯಜ್ಞ ಯಾಗಗಳನ್ನೂ ಮಾಡಿದ್ದಾರೆ. ಇದೀಗ ಕನ್ನಡದ ನಟಿ ನಿಶ್ವಿಕಾ ನಾಯ್ಡು ಅವರ ಸಲುವಾಗಿಯೂ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಮದ್ಯ, ಮೀನು, ಮಾಂಸವನ್ನೇ ನೈವೇದ್ಯಕ್ಕಿಟ್ಟ ನಿಶ್ವಿಕಾ ನಾಯ್ಡು! ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿಯಿಂದ ವಿಶೇಷ ಯಾಗ VIDEO
ಮದ್ಯ, ಮೀನು, ಮಾಂಸವನ್ನೇ ನೈವೇದ್ಯಕ್ಕಿಟ್ಟ ನಿಶ್ವಿಕಾ ನಾಯ್ಡು! ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿಯಿಂದ ವಿಶೇಷ ಯಾಗ VIDEO

Nishvika Naidu: ಸ್ಯಾಂಡಲ್‌ವುಡ್‌ ನಟಿ ನಿಶ್ವಿಕಾ ನಾಯ್ಡು ಕೊನೆಯದಾಗಿ ನಟಿಸಿದ ಸಿನಿಮಾ ಎಂದರೆ ಅದು ಯೋಗರಾಜ್‌ ಭಟ್‌ ನಿರ್ದೇಶನದ ಕರಟಕ ದಮನಕ ಚಿತ್ರದಲ್ಲಿ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದ ಈ ನಟಿ ಸದ್ಯ ಕಿರುತೆರೆಯ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರ ಸ್ಥಾನದಲ್ಲಿ ಕೂತಿದ್ದಾರೆ. ಈ ನಡುವೆ ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಈ ನಡುವೆ ಮಾಂಸಾಹಾರದ ಪೂಜೆಯನ್ನೂ ನೆರವೇರಿಸಿದ್ದಾರೆ ನಿಶ್ವಿಕಾ. ಅದೂ ಖ್ಯಾತ ಜ್ಯೋತಿಷಿ ಕಡೆಯಿಂದ ಎಂಬುದು ವಿಶೇಷ.

ಟಾಲಿವುಡ್‌ ಅಂಗಳದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತರಾದವರು ವೇಣು ಸ್ವಾಮಿ. ಪಕ್ಕದ ತೆಲುಗು ಚಿತ್ರೋದ್ಯಮದಲ್ಲಿನ ಸಾಕಷ್ಟು ಸಿನಿಮಾ ಮಂದಿಯ ಭವಿಷ್ಯ ನುಡಿದಿದ್ದ ವೇಣುಸ್ವಾಮಿ, ಸ್ಟಾರ್‌ ನಟರ ಮನೆಯಲ್ಲಿ ಹೋಮ ಹವನ, ಯಜ್ಞ ಯಾಗಗಳನ್ನೂ ಮಾಡಿದ್ದಾರೆ. ಇದೀಗ ಕನ್ನಡದ ನಟಿ ನಿಶ್ವಿಕಾ ನಾಯ್ಡು ಅವರ ಸಲುವಾಗಿಯೂ ವಿಶೇಷ ಪೂಜೆ ನೆರವೇರಿಸಿದ್ದಾರೆ. ಹೈದರಾಬಾದ್‌ನ ವೇಣು ಸ್ವಾಮಿ ಅವರಿಗೆ ಸಂಬಂಧಿಸಿದ ಯಾಗ ಕೇಂದ್ರದಲ್ಲಿ, ಪೂಜೆ ನೆರವೇರಿಸಿ, ನಿಶ್ವಿಕಾ ಅವರಿಗೆ ಆಶೀರ್ವಾದ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮದ್ಯ, ಮಾಂಸವೇ ನೈವೇದ್ಯ

ಇದು ಬರೀ ಸಾಮಾನ್ಯ ಪೂಜೆ ಆಗಿರಲಿಲ್ಲ. ಸೂರ್ಯನ ರೀತಿ ರಂಗೋಲಿ ಬಿಡಿಸಿ. ಅದರ ಮೇಲೆ ಐದು ತೆಂಗಿನಕಾಯಿ ಕಳಶ ನಿರ್ಮಿಸಲಾಗುತ್ತದೆ. ಸುತ್ತಲೂ ಹೂಗಳಿಂದ ಅಲಂಕರಿಸಿ, ಮದ್ಯ ಮತ್ತು ಮೀನು, ಮಾಂಸವನ್ನು ಇರಿಸಿ ಯಾಗ ನೆರವೇರಿಸಲಾಗಿದೆ. ನಟಿ ನಿಶ್ವಿಕಾ ಅವರಿಂದಲೂ ಮಂತ್ರ ಪಠಣ ಮಾಡಿಸಿ, ಯಾಗದ ಮಧ್ಯಭಾಗಕ್ಕೆ ಹೂಗಳನ್ನು ಹಾಕಿಸಿದ್ದಾರೆ. ಈ ವಿಶೇಷ ಪೂಜೆಯ ವಿಡಿಯೋ ತುಣುಕನ್ನು ವೇಣು ಸ್ವಾಮಿಯವರು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಪೂಜೆ ಮುಗಿದ ಬಳಿಕ ಕರಟಕ ದಮನಕ ಸಿನಿಮಾದಲ್ಲಿ ಪ್ರಭುದೇವ ಅವರ ಜತೆಗೆ ನಿಶ್ವಿಕಾ ಕುಣಿದ ಹಾಡನ್ನು ವೀಕ್ಷಿಸಿದ್ದಾರೆ.

ಪೂಜೆ ನೆರವೇರಿಸಿದ್ದ ರಶ್ಮಿಕಾ ಮಂದಣ್ಣ

ಈ ರೀತಿಯ ಪೂಜೆಯನ್ನು ಬರೀ ನಿಶ್ವಿಕಾ ಮಾತ್ರವಲ್ಲ ಕನ್ನಡದ ಮತ್ತೋರ್ವ ನಟಿಯಾಗಿರುವ, ಸದ್ಯ ಬಾಲಿವುಡ್‌ನಲ್ಲಿಯೂ ಗುರುತಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಸಹ ಈ ಹಿಂದೆ ಇದೇ ವೇಣು ಸ್ವಾಮಿ ಜತೆಗೆ ಈ ಪೂಜೆ ನೆರವೇರಿಸಿದ್ದರು. ನಾಯಕಿಯ ಜಾತಕದಲ್ಲಿ ಸಮಸ್ಯೆಗಳಿದ್ದರೆ, ಅವುಗಳನ್ನು ಹೋಗಲಾಡಿಸಲು ಈ ವಿಶೇಷ ಯಾಗವನ್ನು ಮಾಡುತ್ತ ಬಂದಿದ್ದಾರೆ ವೇಣು ಸ್ವಾಮಿ.

2018ರಲ್ಲಿ ನಟನಾ ಜರ್ನಿ ಶುರು

2018ರಲ್ಲಿ ತೆರೆಗೆ ಬಂದ ಅಮ್ಮ ಐ ಲವ್‌ಯೂ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದರು ನಟಿ ನಿಶ್ವಿಕಾ ನಾಯ್ಡು. ಅದಾದ ಬಳಿಕ ವಾಸು ನಾನ್‌ ಪಕ್ಕಾ ಕಮರ್ಷಿಯಲ್, ಪಡ್ಡೆಹುಲಿ, ಜಂಟಲ್‌ಮನ್‌, ರಾಮಾರ್ಜುನ್‌, ಸಖತ್‌, ಗಾಳಿಪಟ 2, ಗುರು ಶಿಷ್ಯರು, ದಿಲ್‌ ಪಸಂದ್‌, ಗರಡಿ, ಕರಟಕ ದಮನಕ ಸಿನಿಮಾಗಳಲ್ಲಿ ನಿಶ್ವಿಕಾ ನಟಿಸಿದ್ದಾರೆ. ಚಂದನ್‌ ಶೆಟ್ಟಿಯ ಫ್ರೀಕ್‌ ಪಾರ್ಟಿ ಹಾಡಿನಲ್ಲೂ ಸೊಂಚ ಬಳುಕಿಸಿದ್ದಾರೆ.