ಕನ್ನಡ ಸುದ್ದಿ  /  ಮನರಂಜನೆ  /  Darshan Arrest: ದರ್ಶನ್‌ ಗೆಳತಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ; ಕಾಟೇರ ನಟನ ಬಂಧನ ಬೆನ್ನಲ್ಲೇ ಚುರುಕಾದ ತನಿಖೆ

Darshan Arrest: ದರ್ಶನ್‌ ಗೆಳತಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ; ಕಾಟೇರ ನಟನ ಬಂಧನ ಬೆನ್ನಲ್ಲೇ ಚುರುಕಾದ ತನಿಖೆ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರನ್ನು ಕೊಲೆ ಪ್ರಕರಣದಲ್ಲಿ ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಗೆಳತಿ ಪವಿತ್ರಾ ಗೌಡರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Darshan Arrest: ದರ್ಶನ್‌ ಗೆಳತಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ
Darshan Arrest: ದರ್ಶನ್‌ ಗೆಳತಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Darshan Arrest) ಕೊಲೆ ಪ್ರಕರಣದಲ್ಲಿ ಮೈಸೂರಿನಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಗೆಳತಿ ಪವಿತ್ರಾ ಗೌಡರನ್ನೂ (Pavitra Gowda) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್‌ಆರ್‌ ನಗರ ಠಾಣೆ ಪೊಲೀಸರು ಪವಿತ್ರಾ ಗೌಡರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿ ಎಂಬ ವ್ಯಕ್ತಿಗೆ ಶೆಡ್‌ವೊಂದರಲ್ಲಿ ದರ್ಶನ್‌ ಸಮ್ಮುಖದಲ್ಲಿ ಹಲ್ಲೆ ನಡೆಸಲಾಗಿತ್ತು. ಇದರಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಟೇರ ನಟ ದರ್ಶನ್‌ ಬಂಧನವಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವಿತ್ರಾ ಗೌಡರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ದರ್ಶನ್‌ ಬಂಧನದ ಹೆಚ್ಚಿನ ವಿವರ

  1. ಕನ್ನಡ ನಟ ದರ್ಶನ್‌ ಅವರನ್ನು ಮೈಸೂರಿನ ರ‍್ಯಾಡಿಸನ್​ ಹೋಟೆಲ್​ನಲ್ಲಿ ಬಂಧಿಸಲಾಗಿದೆ. ದರ್ಶನ್‌ ಸೇರಿದಂತೆ ಒಟ್ಟು ಹತ್ತು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
  2. ಬೆಂಗಳೂರಿನ ಅಪೊಲೋ ಆಸ್ಪತ್ರೆಯ ಉದ್ಯೋಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವ ಆರೋಪ ದರ್ಶನ್‌ ಮತ್ತು ಇತರರ ಮೇಲಿದೆ.
  3. ರೇಣುಕಾಸ್ವಾಮಿ ಎಂಬಾಂತ ದರ್ಶನ್‌ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸಿದ್ದ ಎನ್ನಲಾಗಿದೆ.
  4. ಜೂನ್‌ 9ರಂದು ರೇಣುಕಾಸ್ವಾಮಿ ಕೊಲೆಯಾಗಿತ್ತು.
  5. ಈ ಕೊಲೆ ಪ್ರಕರಣ ತನಿಖೆಯ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ದರ್ಶನ್‌ ಶಾಮೀಲಾಗಿರುವುದನ್ನು ಪೊಲೀಸರು ತಿಳಿದುಕೊಂಡಿದ್ದಾರೆ.
  6. ಮೊದಲು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ದರ್ಶನ್‌ ಸೂಚನೆ ಮೇರೆಗೆ ಈ ಕೊಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದರು. ಕೊಲೆ ಸಂದರ್ಭ ದರ್ಶನ್‌ ಕೂಡ ಇದ್ದರು ಎನ್ನಲಾಗುತ್ತಿದೆ. ಇದೀಗ ಪೊಲೀಸರು ದರ್ಶನ್‌ರನ್ನು ಬಂಧಿಸಿದ್ದಾರೆ. ಪವಿತ್ರಾ ಗೌಡರನ್ನು ವಶಕ್ಕೆ ಪಡೆದಿದ್ದಾರೆ.
  7. ವರದಿಗಳ ಪ್ರಕಾರ ರೇಣುಕಸ್ವಾಮಿ ಕೂಡ ದರ್ಶನ್‌ ಅಭಿಮಾನಿಯಾಗಿದ್ದ. ಪವಿತ್ರಾ ಗೌಡ ದರ್ಶನ್‌ ಕುಟುಂಬದ ನೆಮ್ಮದಿ ಕೆಡಿಸುತ್ತಿದ್ದರಿಂದ ಕೋಪಗೊಂಡು ಪವಿತ್ರಾ ಗೌಡರಿಗೆ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ. ದರ್ಶನ್‌ ಮತ್ತು ವಿಜಯಲಕ್ಷ್ಮಿ ಸಂಸಾರವನ್ನು ಪವಿತ್ರಾ ಗೌಡ ಹಾಳು ಮಾಡುತ್ತಾರೆ ಎಂದು ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ದರ್ಶನ್‌ ಟೀಮ್‌ ಹಲ್ಲೆ ನಡೆಸಿದೆ.
  8. ಬೆಂಗಳೂರಿನ ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಸಮೀಪದ ಮೋರಿಯಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿತ್ತು. ಅಪರಿಚಿತ ಶವ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಸಾಕಷ್ಟು ವಿವರ ದೊರಕಿತ್ತು. ಘಟನೆಯ ಹಿಂದೆ ದರ್ಶನ್‌ ಪಾತ್ರವಿರುವುದು ತಿಳಿಯಿತು.

ಇದನ್ನೂ ಓದಿ: Darshan Arrest: ಮಹಿಳಾ ಪೀಡಕ, ಬೇಟೆಗಾರ, ಇದೀಗ ರೌಡಿ ಆಫ್‌ ಸ್ಯಾಂಡಲ್‌ವುಡ್‌; ದರ್ಶನ್‌ ಬಂಧನದ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ

ಟಿ20 ವರ್ಲ್ಡ್‌ಕಪ್ 2024