Pooja Gandhi Marriage: ಪೂಜಾ ಗಾಂಧಿಗೆ ನಾಡಿದ್ದು ಮದುವೆ; ಕನ್ನಡ ಕಲಿಸಿದ ಗುರುವಿನ ಕೈಹಿಡಿಯಲಿದ್ದಾರಂತೆ ಮುಂಗಾರು ಮಳೆ ಚೆಲುವೆ
ಕನ್ನಡ ಸುದ್ದಿ  /  ಮನರಂಜನೆ  /  Pooja Gandhi Marriage: ಪೂಜಾ ಗಾಂಧಿಗೆ ನಾಡಿದ್ದು ಮದುವೆ; ಕನ್ನಡ ಕಲಿಸಿದ ಗುರುವಿನ ಕೈಹಿಡಿಯಲಿದ್ದಾರಂತೆ ಮುಂಗಾರು ಮಳೆ ಚೆಲುವೆ

Pooja Gandhi Marriage: ಪೂಜಾ ಗಾಂಧಿಗೆ ನಾಡಿದ್ದು ಮದುವೆ; ಕನ್ನಡ ಕಲಿಸಿದ ಗುರುವಿನ ಕೈಹಿಡಿಯಲಿದ್ದಾರಂತೆ ಮುಂಗಾರು ಮಳೆ ಚೆಲುವೆ

Pooja Gandhi Marriage: ಮುಂಗಾರು ಮಳೆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಪಡೆದ ಪೂಜಾ ಗಾಂಧಿ ಅವರ ವಿವಾಹ ಸಮಾರಂಭ ನಾಡಿದ್ದು ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲಿಕ ವಿಜಯ್‌ ಜತೆ ನಾಡಿದ್ದು ಅಂದರೆ ನವೆಂಬರ್‌ 29ರಂದು ವಿವಾಹ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಪೂಜಾ ಗಾಂಧಿಗೆ ನಾಡಿದ್ದು ಮದುವೆ; ಕನ್ನಡ ಕಲಿಸಿದ ಗುರುವಿನ ಕೈಹಿಡಿಯಲಿದ್ದಾರಂತೆ ಮಳೆ ಚೆಲುವೆ
ಪೂಜಾ ಗಾಂಧಿಗೆ ನಾಡಿದ್ದು ಮದುವೆ; ಕನ್ನಡ ಕಲಿಸಿದ ಗುರುವಿನ ಕೈಹಿಡಿಯಲಿದ್ದಾರಂತೆ ಮಳೆ ಚೆಲುವೆ

ಬೆಂಗಳೂರು: ಮುಂಗಾರು ಮಳೆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಪಡೆದ ಪೂಜಾ ಗಾಂಧಿ ಅವರ ವಿವಾಹ ಸಮಾರಂಭ ನಾಡಿದ್ದು ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲಿಕ ವಿಜಯ್‌ ಜತೆ ನಾಡಿದ್ದು ಅಂದರೆ ನವೆಂಬರ್‌ 29ರಂದು ವಿವಾಹ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಪೂಜಾ ಗಾಂಧಿ ಕಡೆಯಿಂದ ಯಾವುದೇ ಅಪ್‌ಡೇಟ್‌ ಬಂದಿಲ್ಲ.

ಪೂಜಾ ಗಾಂಧಿಗೆ ವಿಜಯ್‌ ಅವರೇ ಕನ್ನಡ ಕಲಿಸಿದ್ದಾರೆ. ಅಂದರೆ, ಬಂಗಾಳಿ ಹುಡುಗಿ ಬೆಂಗಳೂರಿಗೆ ಸಿನಿಮಾ ಕ್ಷೇತ್ರಕ್ಕೆ ಬಂದಾಗ ವಿಜಯ್‌ ಅವರೇ ಕನ್ನಡ ಮಾತನಾಡಲು ಕಲಿಸಿದ್ರು ಎಂದು ಹೇಳಲಾಗಿದೆ. ವಿಜಯ್‌ ನೆರವಿನಿಂದ ಪೂಜಾ ಗಾಂಧಿ ಕನ್ನಡ ಕಲಿತಿದ್ದರು. ತಾವೇ ಸ್ವತಃ ಕನ್ನಡ ಕಲಿತು ಕನ್ನಡ ಸಿನಿಮಾದಲ್ಲಿ ನಟನೆ ಮತ್ತು ಡಬ್ಬಿಂಗ್‌ ಮಾಡಿದ್ದಾರೆ. ಇವರು ನಾಡಿದ್ದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗಲಿದ್ದಾರೆ ಎಂದುಏಷಿಯಾನೆಟ್‌ ಸುವರ್ಣ ನ್ಯೂಸ್‌ ವರದಿ ಮಾಡಿದೆ.

ಪೂಜಾ ಗಾಂಧಿ ಅವರು ಮುಂಗಾರು ಮಳೆ ಸಿನಿಮಾದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆ ನಟಿಸಿದ್ರು. ಬಳಿಕ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಜನಪ್ರಿಯ ಚಿತ್ರನಟಿಗಳಲ್ಲಿ ಒಬ್ಬರಾಗಿ ಜನಪ್ರಿಯತೆ ಪಡೆದಿದ್ದರು.

2012ರಲ್ಲಿ ಪೂಜಾ ಗಾಂಧಿ ಅವರು ಕೈಗಾರಿಕೋದ್ಯಮಿ ಆನಂದ್‌ ಗೌಡ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಎಂಗೇಜ್‌ಮೆಂಟ್‌ ಆದ ಒಂದೇ ತಿಂಗಳಲ್ಲಿ ಇವರ ಸಂಬಂಧ ಮುರಿದುಬಿದ್ದಿತ್ತು. ನಮ್ಮಿಬ್ಬರ ಐಡಿಯಾಲಾಜಿ ಬೇರೆಬೇರೆ ಆದ ಹಿನ್ನಲೆಯಲ್ಲಿ ದೂರ ಆಗುತ್ತಿರುವುದಾಗಿ ಪೂಜಾ ಗಾಂಧಿ ತಿಳಿಸಿದ್ದರು.

ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸದಲ್ಲಿ ಉದ್ಯಮಿ ಆನಂದ್‌ ಗೌಡ ಜತೆ ನಿಶ್ಚಿತಾರ್ಥ ನಡೆದಿತ್ತು. ಪೂಜಾ ಗಾಂಧಿ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು. ಇದಕ್ಕೂ ಮೊದಲು ಸಿನಿಮಾ ವಿತರಕರಾದ ಡಾ. ಕಿರಣ್‌ ಜತೆ ಪೂಜಾ ಗಾಂಧಿ ವಿವಾಹವಾಗಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು.

ವರದಿಗಳ ಪ್ರಕಾರ ಪೂಜಾ ಗಾಂಧಿ ಮತ್ತು ವಿಜಯ್‌ ವಿವಾಹ ನಾಡಿದ್ದು ಯಲಹಂಕದಲ್ಲಿ ನಡೆಯಲಿದೆ. ಇವರಿಬ್ಬರು ಮಂತ್ರ ಮಾಂಗಲ್ಯ ವಿವಾಹ ಪದ್ಧತಿ ಮೂಲಕ ಸರಳವಾಗಿ ವಿವಾಹಗಳು ಯೋಜಿಸಿದ್ದಾರೆ ಎನ್ನಲಾಗಿದೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಈ ಕುರಿತು ಸ್ವತಂತ್ರವಾಗಿ ಪರಿಶೀಲನೆ ನಡೆಸಿಲ್ಲ.

ಪೂಜಾ ಗಾಂಧಿ ಸಿನಿಮಾಗಳು

ಕತ್ರೋನ್‌ ಕಿ ಖಿಲಾಡಿ, ದುಷ್ಮನಿ, ತಮೊಕೆ ಸಲಾಮ್‌, ಕೊಕ್ಕಿ ಮುಂತಾದ ತಮಿಳು, ಬಂಗಾಳಿ, ಹಿಂದಿ ಚಿತ್ರಗಳಲ್ಲಿ ಪೂಜಾ ಗಾಂಧಿ ನಟಿಸಿದ್ದರು. 2006ರಲ್ಲಿ ಮುಂಗಾರು ಮಳೆ ಸಿನಿಮಾವು ಇವರಿಗೆ ದೊಡ್ಡ ಮಟ್ಟದ ಬ್ರೇಕ್‌ ನೀಡಿತ್ತು. ಇದಾದ ಬಳಿಕ ಮಿಲನ, ಕೃಷ್ಣ, ಮನ್ಮಥ ಚಿತ್ರಗಳಲ್ಲಿ ನಟಿಸಿದ್ದರು. ತಮಿಳಿನ ತೋಥಲ್‌ ಪೊ ಮಲಾರಂ, ವೈಥೇಶ್ವರನ್‌ ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಇದಾದ ಬಳಿಕ ಗೆಳೆಯ, ಹನಿಹನಿ, ಆಕ್ಸಿಡೆಂಟ್‌, ಕಾಮಣ್ಣನ ಮಕ್ಕಳು, ನೀ ಟಾಟಾ ನಾ ಬಿರ್ಲಾ, ತಾಜ್‌ ಮಹಲ್‌, ಕೊಡಗಣ್ಣ ಕೋಳಿ ನುಂಗಿತ್ತಾ ಚಿತ್ರಗಳಲ್ಲಿ ನಟಿಸಿದರು.

ಬುದ್ಧಿವಂತ, ಮಹರ್ಷಿ, ಜನುಮದ ಗೆಳತಿ, ಹಾಗೆ ಸುಮ್ಮನೆ, ಅನು, ಇನಿಯಾ, ನಿನಗಾಗಿ ಕಾದಿರುವೆ, ಗೋಕುಲಾ, ಮಿನುಗು, ಶ್ರೀ ಹರಿಕಥೆ, ನಾ ರಾಣಿ ನೀ ಮಹಾರಾಣಿ, ವೇಗ, ಆಪ್ತ, ನೀ ಇಲ್ಲದೆ, ಐ ಆಮ್‌ (ಹಿಂದಿ), ಹರೇ ರಾಮ ಹರೇ ಕೃಷ್ಣ, ಪಂಚಾಮೃತ, ಜೋಗಯ್ಯ, ಪಾಗಲ್‌, ದಂಡುಪಾಳ್ಯ, ಜೈಹಿಂದ್‌, ಹೊಸ ಪ್ರೇಮ ಪುರಾಣ, ಮ್ಯಾಡ್‌ ಡ್ಯಾಡ್‌ (ಮಲಯಾಳಂ), ಅಭಿನೇತ್ರಿ, ತಿಪ್ಪಾಜಿ ಸರ್ಕಲ್‌, ಜಿಲೇಬಿ, ದಂಡುಪಾಳ್ಯ 2, ದಂಡುಪಾಳ್ಯ 3, ಸಂಹಾರಿಣಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

Whats_app_banner