ನಟಿ ಪ್ರಣೀತಾ ಸುಭಾಷ್‌ಗೆ ಗಂಡು ಮಗು ಜನನ; ಮಿಲನಾಗೆ ಹೆಣ್ಣುಮಗು, ಸ್ಯಾಂಡಲ್‌ವುಡ್‌ನಲ್ಲಿ ಮುದ್ದು ಕಂದಮ್ಮಗಳ ಕಿಲಕಿಲ ಸಂಭ್ರಮ-sandalwood news actress pranitha subhash gives birth to baby boy second child to mass leader heroine pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಟಿ ಪ್ರಣೀತಾ ಸುಭಾಷ್‌ಗೆ ಗಂಡು ಮಗು ಜನನ; ಮಿಲನಾಗೆ ಹೆಣ್ಣುಮಗು, ಸ್ಯಾಂಡಲ್‌ವುಡ್‌ನಲ್ಲಿ ಮುದ್ದು ಕಂದಮ್ಮಗಳ ಕಿಲಕಿಲ ಸಂಭ್ರಮ

ನಟಿ ಪ್ರಣೀತಾ ಸುಭಾಷ್‌ಗೆ ಗಂಡು ಮಗು ಜನನ; ಮಿಲನಾಗೆ ಹೆಣ್ಣುಮಗು, ಸ್ಯಾಂಡಲ್‌ವುಡ್‌ನಲ್ಲಿ ಮುದ್ದು ಕಂದಮ್ಮಗಳ ಕಿಲಕಿಲ ಸಂಭ್ರಮ

ನಟಿ ಪ್ರಣಿತಾ ಸುಭಾಷ್‌ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ಸಮಯದಲ್ಲಿ ಮಿಲನಾ ನಾಗರಾಜ್‌ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕಂದಮ್ಮಗಳ ಕಿಲಕಿಲ ಕೇಳಿಸುತ್ತಿದೆ.

ನಟಿ ಪ್ರಣೀತಾ ಸುಭಾಷ್‌ಗೆ ಗಂಡು ಮಗು ಜನನ
ನಟಿ ಪ್ರಣೀತಾ ಸುಭಾಷ್‌ಗೆ ಗಂಡು ಮಗು ಜನನ

ಬೆಂಗಳೂರು: ನಟಿ ಪ್ರಣಿತಾ ಸುಭಾಷ್‌ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ಸಮಯದಲ್ಲಿ ಮಿಲನಾ ನಾಗರಾಜ್‌ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಇನ್ನಷ್ಟು ನಟಿಯರು ಮಗುವಿಗೆ ಜನ್ಮ ನೀಡುವ ಸೂಚನೆ ಇದೆ. "ಇದು ನನಗೆ ಸಂತೋಷಕರ ಸುದ್ದಿ. ನಾನು ಮತ್ತು ನನ್ನ ಮಗಳು ಅರ್ನಾ ಥ್ರಿಲ್‌ ಆಗಿದ್ದೇವೆ. ನನ್ನ ಮಗುವನ್ನು ಅರ್ನಾ ಬೇಬಿ ಎಂದು ಕರೆಯುತ್ತಿದ್ದಾಳೆ. ಆಕೆಗೆ ಈ ಮಗು ತಮ್ಮ ಎಂದು ಗೊತ್ತಿಲ್ಲ" ಎಂದು ಪ್ರಣಿತಾ ಸುಭಾಷ್‌ ಪೋಸ್ಟ್‌ ಮಾಡಿದ್ದಾರೆ.

ಮೊದಲ ಡೆಲಿವರಿಗೆ ಹೋಲಿಸಿದರೆ ಎರಡನೇ ಡೆಲಿವರಿಗೆ ಸಾಕಷ್ಟು ಪ್ರಿಪೇರ್‌ ಆಗಿರಬೇಕು ಎಂದು ಅವರು ಹೇಳಿದ್ದಾರೆ. "ಅರ್ನಾ ಹೊಟ್ಟೆಯಲ್ಲಿರುವ ಸಂದರ್ಭ ಸಾಕಷ್ಟು ಜನರು ನನಗೆ ಸಲಹೆ ನೀಡುತ್ತಿದ್ದರು. ನನಗೆ ಏನೂ ಗೊತ್ತಿರಲಿಲ್ಲ. ಈ ಬಾರಿ ನಾನು ಅನುಭವಿ. ನಿಜ ಈ ಸಮಯದಲ್ಲಿ ಎಷ್ಟೋ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಈ ಬಾರಿ ನನಗೆ ಹೆಚ್ಚು ಒತ್ತಡವಾಗಿಲ್ಲ" ಎಂದು ಅವರು ಹೇಳಿದ್ದಾರೆ.

"ಈಗ ನನಗೆ ಕೊಂಚ ರೆಸ್ಟ್‌ ಬೇಕು. ಆದರೆ, ಹೆಚ್ಚು ಕಾಲ ವಿಶ್ರಾಂತಿ ಪಡೆಯುವಂತೆ ಇಲ್ಲ. ನಾನು ಕೆಲಸಕ್ಕೆ ಹಿಂತುರುಗಬೇಕು. ಎಷ್ಟು ಸಾಧ್ಯವೋ ಅಷ್ಟು ಬೇಗ ಕೆಲಸಕ್ಕೆ ಹಿಂತುರುಗುವೆ" ಎಂದು ಅವರು ಹೇಳಿದ್ದಾರೆ.

ನಟಿ ಪ್ರಣೀತಾ ಅವರು ಕನ್ನಡ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋರ್ಕಿ ಸಿನಿಮಾದ ಮೂಲಕ 2010ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಏಮ್‌ ಪಿಲ್ಲೊ ಏಮ್‌ ಪಿಲ್ಲಾಡೋ, ಭಾವ ಮುಂತಾದ ತೆಲುಗು ಸಿನಿಮಾದಲ್ಲಿ ನಟಿಸಿದರು. ಬಳಿಕ ಉದಯನ್‌ ಎಂಬ ತಮಿಳು ಚಿತ್ರದಲ್ಲಿ ನಟಿಸಿದರು. ಜರಾಸಂಧ, ಭೀಮ ತೀರದಲ್ಲಿ ಎಂಬ ಕನ್ನಡ ಚಿತ್ರಗಳಲ್ಲಿ ಬಳಿಕ ನಟಿಸಿದರು. ಸ್ನೇಹಿತರು, ಮಿಸ್ಟರ್‌ 420, ವಿಷಲ್‌ ಚಿತ್ರಗಳಲ್ಲೂ ನಟಿಸಿದ್ದಾರೆ. ಬ್ರಹ್ಮ, ಎ ಸೆಕೆಂಡ್‌ ಹ್ಯಾಂಡ್‌ ಲವರ್‌, ಜಗ್ಗು ದಾದ, ಮಾಸ್‌ ಲೀಡರ್‌, ರಾಮನ ಅವತಾರ ಇವರ ಇನ್ನಿತರ ಕನ್ನಡ ಸಿನಿಮಾಗಳು.

ನಟಿ ಮಿಲನಾ ನಾಗರಾಜ್‌ಗೆ ಹೆಣ್ಣುಮಗು

ಇದೇ ಸಮಯದಲ್ಲಿ ನಟಿ ಮಿಲನಾ ನಾಗರಾಜ್‌ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾನು ತಂದೆಯಾಗಿರುವ ಖುಷಿಯ ವಿಚಾರವನ್ನು ಡಾರ್ಲಿಂಗ್‌ ಕೃಷ್ಣ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಹೆಣ್ಣು ಮಗುವಿಗೆ ಮಿಲನಾ ಜನ್ಮ ನೀಡಿದ್ದಾಳೆ. ಅಮ್ಮ ಮಗಳು ಇಬ್ಬರೂ ಕ್ಷೇಮ" ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಅವಿವಾ ಸೀಮಂತ ಸಂಭ್ರಮ ನಡೆದಿತ್ತು.

ಹರ್ಷಿಕಾ ಪೂಣಚ್ಚ – ಭುವನ್ ಪೊನ್ನಣ್ಣ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಅವರು ರವಿವರ್ಮಾನ ಥೀಮ್‌ನಲ್ಲಿ ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಇವರ ವಿವಾಹವಾಗಿತ್ತು.