Priyamani: ನನ್ನ ಜೀವನ ನನ್ನ ನಿರ್ಧಾರ, ಮುಸ್ಲಿಂ ವ್ಯಕ್ತಿಯನ್ನು ಏಕೆ ಮದುವೆಯಾದೆ ಎಂದವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ; ಪ್ರಿಯಾಮಣಿ
ಕನ್ನಡ ಸುದ್ದಿ  /  ಮನರಂಜನೆ  /  Priyamani: ನನ್ನ ಜೀವನ ನನ್ನ ನಿರ್ಧಾರ, ಮುಸ್ಲಿಂ ವ್ಯಕ್ತಿಯನ್ನು ಏಕೆ ಮದುವೆಯಾದೆ ಎಂದವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ; ಪ್ರಿಯಾಮಣಿ

Priyamani: ನನ್ನ ಜೀವನ ನನ್ನ ನಿರ್ಧಾರ, ಮುಸ್ಲಿಂ ವ್ಯಕ್ತಿಯನ್ನು ಏಕೆ ಮದುವೆಯಾದೆ ಎಂದವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ; ಪ್ರಿಯಾಮಣಿ

ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಪ್ರಿಯಾಮಣಿ ತಮ್ಮ ಬಾಲ್ಯದ ಗೆಳೆಯ ಮುಸ್ತಫಾ ರಾಜ್‌ ಅವರನ್ನು 2017 ರಲ್ಲಿ ಮದುವೆಯಾದರು. ಮದುವೆ ನಂತರ ಕೂಡಾ ಅವರು ಮೊದಲಿನಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ಧಾರೆ.

ಪತಿ ಮುಸ್ತಫಾ ರಾಜ್‌ ಜೊತೆ ಪ್ರಿಯಮಣಿ
ಪತಿ ಮುಸ್ತಫಾ ರಾಜ್‌ ಜೊತೆ ಪ್ರಿಯಮಣಿ

ಪ್ರಿಯಾಮಣಿ, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮಲಯಾಳಂ ಕುಟುಂಬಕ್ಕೆ ಸೇರಿದ ಈ ಚೆಲುವೆ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಈ ಸುಂದರಿ ವೆಬ್‌ ಸೀರೀಸ್‌ಗಳಲ್ಲಿ ಕೂಡಾ ನಟಿಸುತ್ತಿದ್ದಾರೆ.

ಹಾಗೇ ಇಂದು ದೇಶಾದ್ಯಂತ ಬಕ್ರೀದ್‌ ಹಬ್ಬ ಆಚರಿಸಲಾಗುತ್ತಿದೆ. ಈ ನಡುವೆ ಪ್ರಿಯಾಮಣಿ ತಮ್ಮ ಪತಿ ಮುಸ್ತಫಾ ರಾಜ್‌ ಬಗ್ಗೆ ಮಾತನಾಡಿರುವ ವಿಚಾರ ವೈರಲ್‌ ಆಗುತ್ತಿದೆ. ಇತ್ತೀಚೆಗೆ ತಮ್ಮ ವೆಬ್‌ ಸೀರೀಸ್‌ ಕುರಿತಾಗಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಪತಿ ಹಾಗೂ ಮುಸ್ಲಿಂ ಧರ್ಮದ ಬಗ್ಗೆ ಮಾತನಾಡಿದ್ದಾರೆ. ನಾನು ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಿದ್ದಕ್ಕೆ ಯಾವ ರೀತಿ ಜನರು ನನ್ನನ್ನು ಅಪಹಾಸ್ಯ ಮಾಡಿದರು, ಚುಚ್ಚು ಮಾತುಗಳನ್ನು ಆಡಿದರು ಎಂಬುದನ್ನು ಹೇಳಿಕೊಂಡಿದ್ದಾರೆ. ಜೊತೆಗೆ ಬಾಡಿ ಶೇಮಿಂಗ್‌ ಬಗ್ಗೆ ಕೂಡಾ ಮಾತನಾಡಿದ್ದಾರೆ.

ನನಗೆ ಬಾಡಿ ಶೇಮಿಂಗ್‌ ಬಗ್ಗೆ ಟ್ರೋಲ್‌ ಹೊಸತೇನಲ್ಲ. ಮೊದಲಿನಿಂದಲೂ ಇಂತದ್ದು ಸಾಕಷ್ಟು ನಡೆದಿವೆ. ಆದರೆ ನಾನು ಬಹಳ ಪ್ರೀತಿಸುತ್ತಿದ್ದ ಮುಸ್ತಫಾ ರಾಜ್‌ನನ್ನು ಮದುವೆ ಆದಾಗ ಜನರು ಸೋಷಿಯಲ್‌ ಮೀಡಿಯಾದಲ್ಲಿ ಒಂದೇ ಸಮ ಟ್ರೋಲ್‌ ಮಾಡಿದರು. ನಾನು ಇಂತಹ ಟ್ರೋಲಿಂಗ್‌ಗೆ ಕೇರ್‌ ಮಾಡುವುದಿಲ್ಲ. ಆದರೂ ಕೆಲವೊಮ್ಮೆ, ಜನರು ಏಕೆ ಹೀಗೆ ನಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ ಎನಿಸುತ್ತದೆ.

ನಾನು ಎಂಗೇಜ್‌ಮೆಂಟ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಾಗ, ಮುಸ್ಲಿಂ ವ್ಯಕ್ತಿಯನ್ನು ಏಕೆ ಮದುವೆ ಆಗುತ್ತಿದ್ದೀರಿ, ಬೇರೆ ಯಾರೂ ಸಿಗಲಿಲ್ಲವೇ? ಎಂದು ಜನರು ಕೇಳಿದರು. ಆದರೆ ಇದು ನನ್ನ ಜೀವನ, ನನ್ನ ಜೀವನಕ್ಕೆ ಯಾವುದು ಸರಿ ಯಾವುದು ತಪ್ಪು ಎಂದು ಆಯ್ಕೆ ಮಾಡುವುದು ನನಗೆ ಸೇರಿದ್ದು, ಈ ಟ್ರೋಲ್‌ಗಳತ್ತ ಗಮನ ಹರಿಸಿ ನನಗೆ ನಾನೇ ನೋವುಂಟುಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಆದರೆ ನಾನು ಯಾರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಪ್ರಿಯಾಮಣಿ ತಮ್ಮ ಬಾಲ್ಯದ ಗೆಳೆಯ ಮುಸ್ತಫಾ ರಾಜ್‌ ಅವರನ್ನು 2017 ರಲ್ಲಿ ಮದುವೆಯಾದರು. ಮದುವೆ ನಂತರ ಕೂಡಾ ಅವರು ಮೊದಲಿನಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ಧಾರೆ. ಪ್ರಿಯಾಮಣಿ ಕರಿಯರ್‌ಗೆ ಪತಿ ಮುಸ್ತಫಾ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಈ ನಡುವೆ ಇಬ್ಬರೂ ಡೈವೋರ್ಸ್‌ ಪಡೆಯಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

ಮುಸ್ತಫಾ ರಾಜ್​​​​ಗೆ ಈ ಮೊದಲೇ ಮದುವೆಯಾಗಿದ್ದು ಅವರು ಮೊದಲ ಪತ್ನಿಗೆ ಕಾನೂನಿನ ಪ್ರಕಾರ ಡೈವೋರ್ಸ್‌ ನೀಡಿಲ್ಲ ಎಂಬ ಮಾತು ಕಳೆದ ವರ್ಷ ಕೇಳಿಬಂದಿತ್ತು. ''ನಾನು ಹಾಗೂ ಮುಸ್ತಫಾ ರಾಜ್ ಕಾನೂನಿನ ಪ್ರಕಾರ ಬೇರೆಯಾಗಿಲ್ಲ. ನಾನು ಇನ್ನೂ ಅವರ ಪತ್ನಿಯಾಗಿ ಉಳಿದಿದ್ದೇನೆ. ಆದ್ದರಿಂದ ಪ್ರಿಯಾ ಮಣಿ ಹಾಗೂ ಮುಸ್ತಫಾ ರಾಜ್ ಮದುವೆ ಅಸಿಂಧು ಎಂದು ಮೊದಲ ಪತ್ನಿ ಆಯೆಷಾ ಹೇಳಿದ್ದರು. ಅಷ್ಟೇ ಅಲ್ಲ ಮುಸ್ತಫಾ ಇವೆಲ್ಲವನ್ನೂ ಬಚ್ಚಿಟ್ಟು ಪ್ರಿಯಾಮಣಿ ಅವರನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಮುಸ್ತಫಾ ಹಾಗೂ ಪ್ರಿಯಾಮಣಿ ನಿರಾಕರಿಸಿದ್ದರು.

ಪ್ರಿಯಾಮಣಿ ಕೂಡಾ ಮುಸ್ತಫಾ ಮೊದಲ ಮದುವೆ ವಿಚಾರ ನನಗೆ ಗೊತ್ತು ಎಂದು ಹೇಳಿಕೊಂಡಿದ್ದರು. ಈ ಸುದ್ದಿ ಹರಡಿದ ನಂತರ ಪ್ರಿಯಾಮಣಿ ತಮ್ಮ ಪತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಅವರಿಂದ ದೂರಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಪ್ರಿಯಾಮಣಿ ಕಳೆದ ದೀಪಾವಳಿ ಹಬ್ಬದಂದು ಪತಿ ಮುಸ್ತಫಾ ರಾಜ್ ಅವರೊಂದಿಗೆ ಇರುವ ಫೋಟೋವೊಂದನ್ನು ಅಪ್ ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದರು.

Whats_app_banner