ಕನ್ನಡ ಸುದ್ದಿ  /  Photo Gallery  /  Sandalwood News Actress Priyamani Shared New Fashion Statement Photos Beautiful Creation Of 45 Tailors Pcp

Priyamani: ಮಹಾರಾಣಿಯಂತೆ ಕಂಗೊಳಿಸಿದ ಪ್ರಿಯಾಮಣಿ ; 45 ಟೈಲರ್‌ಗಳ ಪ್ರತಿಭೆಗೆ ಸಾಕ್ಷಿ ಈ ಸುಂದರ ಉಡುಗೆ

  • ದಕ್ಷಿಣ ಭಾರತದ ಸುಂದರ ಪ್ರತಿಭಾನ್ವಿತ ನಟಿ ಪ್ರಿಯಾಮಣಿ ಸುಂದರವಾದ ಉಡುಗೆಯೊಂದನ್ನು ಧರಿಸಿ ಫೋಟೋಶೂಟ್‌ ಮಾಡಿದ್ದಾರೆ. ಸುಮಾರು 45 ಟೈಲರ್‌ಗಳು ಮತ್ತು ಕೈಯಲ್ಲಿ ಕಸೂತಿ ಮಾಡುವ ಮಹಿಳೆಯರ ಶ್ರಮದ ಫಲವಾಗಿ ಈ ವಿನೂತನ ಶೈಲಿಯ ಉಡುಗೆ ತಯಾರಾಗಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಮುಖವಾಗಿ ನಟಿಸಿರುವ ಪ್ರಿಯಾಮಣಿ ಹೊಸ ಉಡುಗೆಯೊಂದನ್ನು ತೊಟ್ಟಿದ್ದಾರೆ. ಈ ಉಡುಗೆ ಸಾಕಷ್ಟು ವಿಶೇಷವಾಗಿದೆ. ಇಂಜಿರಿ ಮತ್ತು ಅವರ ತಂಡದ 45 ಟೈಲರ್‌ಗಳು ಮತ್ತು ಹ್ಯಾಂಡ್‌ವರ್ಕ್‌ ಮಹಿಳೆಯರ ಶ್ರಮದ ಫಲವಾಗಿ ಈ ಉಡುಗೆ ತಯಾರಾಗಿದೆ ಎಂದು ಪ್ರಿಯಾಮಣಿ ಬರೆದಿದ್ದಾರೆ.
icon

(1 / 8)

ಈ ಉಡುಗೆ ದೂರದಿಂದ ನೋಡಿದಾಗ ಸೀರೆಯಂತೆ ಕಾಣಿಸುತ್ತದೆ. ಕೊಂಚ ಹತ್ತಿರದಿಂದ ನೋಡಿದರೆ ಈ ಉಡುಗೆಯ ವಿನ್ಯಾಸ, ಕಸೂತಿ ಗಮನ ಸೆಳೆಯುತ್ತವೆ. ಈ ಡ್ರೆಸ್‌ನಲ್ಲಿ ಪ್ರಿಯಾಮಣಿ ಮಹಾರಾಣಿಯಂತೆ ಕಾಣಿಸುತ್ತಾರೆ ಎಂದರೆ ತಪ್ಪಾಗದು.
icon

(2 / 8)

ಇದೇ ಸಮಯದಲ್ಲಿ ಇವರು ಧರಿಸಿರುವ ಜ್ಯುವೆಲರಿಗಳೂ ಗಮನ ಸೆಳೆಯುತ್ತವೆ. ಕಿವಿಗೆ ದೊಡ್ಡ ಗಾತ್ರದ ಆಭರಣ ಧರಿಸಿದ್ದಾರೆ. ಹಣೆಯ ಮೇಲ್ಭಾಗದಲ್ಲಿ ಕೂದಲಿಗೆ ಜುವೆಲರಿ ಹಾಕಿಕೊಂಡಿದ್ದಾರೆ. ಇದೇ ಸಮಯದಲ್ಲಿ ತಲೆ ಕೂದಲನ್ನು ಜುಟ್ಟುಕೊಟ್ಟಿ ಅದಕ್ಕೆ ಹೂವನ್ನು ವೃತ್ತಾಕಾರವಾಗಿ ಕಟ್ಟಿಕೊಂಡು ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
icon

(3 / 8)

ಈ ಫೋಟೋಗಳನ್ನು ನೋಡಿ ಅಭಿಮಾನಿಗಳು, ಸಿನಿಮಾರಂಗದ ಆತ್ಮೀಯರು "ಅದ್ಭುತ" "ಬಹುಸುಂದರವಾಗಿದೆ" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಡಿಫರೆಂಟ್‌ ಲುಕ್‌ನಲ್ಲಿ ಅಭಿಮಾನಿಗಳಿಗೆ ಈ ಉಡುಗೆಯಲ್ಲಿ ಇಷ್ಟವಾಗಿದ್ದಾರೆ. 
icon

(4 / 8)

ಈ ಸೀರೆಗೆ ಹೊಂದಿಕೆಯಾಗುವಂತೆ ಪೂರ್ಣ ತೋಳಿನ ಬ್ಲೌಸ್‌ ಕೂಡ ಇದೆ.   ಇದೇ ಸಮಯದಲ್ಲಿ ಇವರು ಮಾಡರ್ನ್‌ ಲುಕ್‌ನ ಹೊಸ ಫೋಟೋಗಳನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳನ್ನು ಮುಂದಿನ ಸ್ಲೈಡ್‌ಗಳಲ್ಲಿ ನೋಡಬಹುದು.
icon

(5 / 8)

ಪ್ರಿಯಾಮಣಿ ನಟನೆಯ ಭಾಮಾ ಕಲಾಪಂ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.
icon

(6 / 8)

ಕಳೆದ ವರ್ಷ ಶಾರೂಖ್‌ ಖಾನ್‌ ನಟನೆಯ ಜವಾನ್‌ ಚಿತ್ರದಲ್ಲಿ ಪ್ರಿಯಾಮಣಿ  ಕಾಣಿಸಿಕೊಂಡಿದ್ದರು. ಅಟ್ಲಿ ನಿರ್ದೇಶನದ ಜವಾನ್‌ ಸಿನಿಮಾದಲ್ಲಿ ಇವರು ಕೂಡ ಸಾಹಸಿ ಅಧಿಕಾರಿಯಾಗಿ ಅತ್ಯುತ್ತಮವಾಗಿ ನಟಿಸಿದ್ದರು. 
icon

(7 / 8)

ಪ್ರಿಯಾಮಣಿ ಕನ್ನಡದಲ್ಲೂ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ನನ್ನ ಪ್ರಕಾರ, ಧ್ವಜ, ಚೌಕ, ಇದೊಳ್ಳೆ ರಾಮಾಯಾಣ, ದನ ಕಾಯೋನು, ಕಲ್ಪನಾ 2, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ ಹೀಗೆ ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು