ಕರ್ನಾಟಕ ಪೊಲೀಸರಿಗೆ ಹ್ಯಾಟ್ಸಪ್‌, ನ್ಯಾಯ ಮೇಲುಗೈ ಸಾಧಿಸದಿದ್ದರೆ ಏನು ಪ್ರಯೋಜನ? ರಮ್ಯಾ ಟ್ವೀಟ್‌ ನೋಡಿ ರಾಜಕೀಯಕ್ಕೆ ಬನ್ನಿ ಅಂದ್ರು ಫ್ಯಾನ್ಸ್
ಕನ್ನಡ ಸುದ್ದಿ  /  ಮನರಂಜನೆ  /  ಕರ್ನಾಟಕ ಪೊಲೀಸರಿಗೆ ಹ್ಯಾಟ್ಸಪ್‌, ನ್ಯಾಯ ಮೇಲುಗೈ ಸಾಧಿಸದಿದ್ದರೆ ಏನು ಪ್ರಯೋಜನ? ರಮ್ಯಾ ಟ್ವೀಟ್‌ ನೋಡಿ ರಾಜಕೀಯಕ್ಕೆ ಬನ್ನಿ ಅಂದ್ರು ಫ್ಯಾನ್ಸ್

ಕರ್ನಾಟಕ ಪೊಲೀಸರಿಗೆ ಹ್ಯಾಟ್ಸಪ್‌, ನ್ಯಾಯ ಮೇಲುಗೈ ಸಾಧಿಸದಿದ್ದರೆ ಏನು ಪ್ರಯೋಜನ? ರಮ್ಯಾ ಟ್ವೀಟ್‌ ನೋಡಿ ರಾಜಕೀಯಕ್ಕೆ ಬನ್ನಿ ಅಂದ್ರು ಫ್ಯಾನ್ಸ್

Actress Ramya: ಕರ್ನಾಟಕದ ವಿವಿಧ ವಿದ್ಯಮಾನಗಳ ಕುರಿತು ನಟಿ ರಮ್ಯಾ (ದಿವ್ಯ ಸ್ಪಂದನ) ಟ್ವೀಟ್‌ ಮಾಡಿದ್ದಾರೆ. ಕಾನೂನನ್ನು ಎದುರು ಹಾಕಿಕೊಳ್ಳುವ ಶ್ರೀಮಂತರು, ಶಕ್ತಿಶಾಲಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಕರ್ನಾಟಕ ಪೊಲೀಸರಿಗೆ ನಟಿ ರಮ್ಯಾ ಹ್ಯಾಟ್ಸಪ್‌ ಹೇಳಿದ್ದಾರೆ.

ಕನ್ನಡ ನಟಿ ರಮ್ಯಾ ಟ್ವೀಟ್‌
ಕನ್ನಡ ನಟಿ ರಮ್ಯಾ ಟ್ವೀಟ್‌

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ಚಿತ್ರದುರ್ಗದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ದರ್ಶನ್‌ ಮತ್ತು ಇತರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದ ಪ್ರಜ್ವಲ್‌ ರೇವಣ್ಣ ಕೇಸ್‌ನ ಬಿಸಿಯೂ ತಗ್ಗಿಲ್ಲ. ರೇವಣ್ಣ ಕುಟುಂಬದ ಸೂರಜ್‌ ರೇವಣ್ಣ ಅವರ ಹೊಸ ಪ್ರಕರಣ ಕರ್ನಾಟಕದಲ್ಲಿ ಸದ್ದು ಮಾಡುತ್ತಿದೆ. ಬಿಎಸ್‌ ಯಡಿಯೂರಪ್ಪ ಅವರು ಪೋಸ್ಕೋ ಕೇಸ್‌ ಎದುರಿಸುತ್ತಿದ್ದಾರೆ. ಹೀಗೆ, ಕರ್ನಾಟಕದಲ್ಲಿ ಹಲವು ಪ್ರಕರಣಗಳು ವಿಚಾರಣೆಯಲ್ಲಿವೆ. ಈ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಟಿ ರಮ್ಯಾ ಮಾಡಿರುವ ಟ್ವಿಟ್‌ ನೆಟ್ಟಿಗರ ಗಮನ ಸೆಳೆದಿದೆ.

ನಟಿ ರಮ್ಯಾ ಟ್ವೀಟ್‌ನಲ್ಲಿ ಏನಿದೆ?

"ಸದ್ಯ ಹಲವು ಪ್ರಕರಣಗಳು ಸುದ್ದಿಯಲ್ಲಿವೆ. ಶ್ರೀಮಂತರು, ಪ್ರಭಾವಶಾಲಿಗಳ ಹಿಂಸಾತ್ಮಕ ಕ್ರಿಯೆಯಿಂದ ಬಡವರು, ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುತ್ತಾರೆ. ಕರ್ನಾಟಕದ ಜನಸಾಮಾನ್ಯರು ಇದರಿಂದ ತೊಂದರೆ ಅನುಭವಿಸುತ್ತಾರೆ. ಈ ಅಪರಾಧಗಳನ್ನು ಹೊರಕ್ಕೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹ್ಯಾಟ್ಸಪ್‌. ಇಂತಹ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಿದಾಗ ಮತ್ತು ಇಂತಹ ಪ್ರಕರಣಗಳಿಗೆ ನಿಜವಾದ ತಾರ್ಕಿಕ ಅಂತ್ಯ ದೊರಕಿದಾಗ ನ್ಯಾಯ ದೊರಕುತ್ತದೆ. ನ್ಯಾಯವು ಮೇಲುಗೈ ಸಾಧಿಸದೆ ಇದ್ದರೆ ಇಂತಹ ವಿಚಾರಗಳ ಕುರಿತು ಸಾರ್ವಜನಿಕರಿಗೆ ನಾವು ಏನು ಸಂದೇಶ ನೀಡುತ್ತೇವೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಇಂತಹ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಈ ಮೂಲಕ ಸಾರ್ವಜನಿಕರಿಗೆ ನ್ಯಾಯ ವ್ಯವಸ್ಥೆಯ ಕುರಿತು ಸರಿಯಾದ ಸಂದೇಶ ನೀಡಬೇಕು ಎನ್ನುವ ಅರ್ಥದಲ್ಲಿ ನಟಿ ರಮ್ಯಾ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ಗೆ ದರ್ಶನ್‌, ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ, ಯಡಿಯೂರಪ್ಪ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿದ್ದಾರೆ.

ರಮ್ಯಾ ಟ್ವೀಟ್‌ಗೆ ಫ್ಯಾನ್ಸ್‌ ಖುಷ್‌

ನಟಿ ರಮ್ಯಾ ಅವರ ಈ ಟ್ವೀಟ್‌ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ನೀವು ರಾಜಕೀಯಕ್ಕೆ ಮತ್ತೆ ಬನ್ನಿ ಮೇಡಂ ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. "ದಯವಿಟ್ಟು ನೀವು ರಾಜಕೀಯಕ್ಕೆ ಬನ್ನಿ. ನಿಮ್ಮಇಂತಹ ಧ್ವನಿಯನ್ನು ರಾಜಕೀಯದಲ್ಲಿದ್ದು ಹೊರಡಿಸಿ" "ಕ್ವೀನ್‌, ನಿಜವಾದ ಮಾತು. ದಯವಿಟ್ಟು ಪಾಲಿಟಿಕ್ಸ್‌ಗೆ ಹಿಂತುರುಗಿ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ನಟಿ ರಮ್ಯಾ ಅವರ ಈ ಹಿಂದಿನ ಟ್ವೀಟ್‌

ದರ್ಶನ್‌ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ನಟಿ ರಮ್ಯಾ ಹೀಗೆಂದು ಟ್ವೀಟ್‌ ಮಾಡಿದ್ದರು. "ಸೋಷಿಯಲ್‌ ಮೀಡಿಯಾದಲ್ಲಿ ಬ್ಲಾಕ್‌ ಆಯ್ಕೆಯನ್ನು ನೀಡಲಾಗಿದೆ. ಬ್ಲಾಕ್‌ ಮಾಡಿದರೂ ಟ್ರೋಲಿಂಗ್‌ ಮುಂದುವರೆದರೆ ನೀವು ಸಂಬಂಧಪಟ್ಟವರಿಗೆ ದೂರು ದಾಖಲಿಸಬೇಕು. ಕಳೆದ ಹಲವು ವರ್ಷಗಳಲ್ಲಿ ನನ್ನನ್ನು ಟ್ರೋಲಿಗರು ನಿರಂತರವಾಗಿ ಕೊಳಕು ಭಾಷೆ ಬಳಸಿ ಟ್ರೋಲ್‌ ಮಾಡಿದ್ದಾರೆ. ನನಗೆ ಮಾತ್ರವಲ್ಲ. ಇತರೆ ನಟಿನಟರಿಗೂ ಇದೇ ರೀತಿ ಟ್ರೋಲ್‌ ಮಾಡಿದ್ದಾರೆ. ಹೆಂಡತಿ, ಮಕ್ಕಳನ್ನು ಬಿಡದೆ ಟ್ರೋಲ್‌ ಮಾಡಿದ್ದಾರೆ. ಎಂತಹ ಶೋಚನೀಯ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ?" ಎಂದು ನಟಿ ರಮ್ಯಾ ಖೇದ ವ್ಯಕ್ತಪಡಿಸಿದ್ದರು.

ನಟಿ ರಮ್ಯಾ ಸಿನಿಮಾಗಳು

ಕನ್ನಡ ನಟಿ ರಮ್ಯಾ 2003ರಿಂದ 2016ರವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಇವರು ರಾಜಕೀಯಕ್ಕೆ ಎಂಟ್ರಿ ನೀಡಿದ್ದರು. ಅಭಿ, ಎಕ್ಸ್‌ಕ್ಯೂಸ್‌ ಮೀ, ಅಭಿಮನ್ಯು, ಕುತ್ತು, ರಂಗ ಎಸ್‌ಎಸ್‌ಎಲ್‌ಸಿ, ಕಾಂತಿ, ಗಿರಿ, ಆದಿ, ಆಕಾಶ್‌, ಗೌರಮ್ಮ, ಅಮೃತಧಾರೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೇವಂತಿ ಸೇವಂತಿ, ಜೂಲಿ, ದತ್ತ, ಜೊತೆಜೊತೆಯಲ್ಲಿ, ತನನಂ ತನನಂ, ಅರಸು, ಪ್ರಾರಂಭ, ಮೀರ ಮಾಧವ ರಾಘವ, ಪೊಲ್ಲಧವನ್‌, ತೊಂಡಿಲ್‌, ಮಸ್ಸಂಜೆ ಮಾತು, ಮೆರವಣಿಗೆ, ಬೊಂಬಾಟ್‌, ಅಂತು ಇಂತು ಪ್ರೀತಿ ಬಂತು, ವರನಂ ಅಯಿರಮ್‌, ಜಸ್ಟ್‌ ಮಾತ್‌ ಮಾತಲ್ಲಿ, ಜೊತೆಗಾರ, ಕಿಚ್ಚ ಹುಚ್ಚ, ಸಿಂಗಂ ಪುಲಿ, ಸಂಜು ವೆಡ್ಸ್‌ ಗೀತಾ, ದಂಡಂ ದಶಗುಣಂ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾನಿ ಮೇರ ನಾಮ್‌ ಪ್ರೀತಿ ಮೇರಾ ಕಾಮ್‌, ಸಿದ್ಲಿಂಗು, ಲಕ್ಕಿ, ಕಟಾರಿ ವೇರಾ ಸುರಸುಂದರಾಂಗಿ, ಕ್ರೇಜಿ ಲೋಕ, ಆರ್ಯನ್‌, ನಾಗರಹಾವು ಮುಂತಾದ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್‌ನ ಕ್ವೀನ್‌ ಎಂದೇ ಖ್ಯಾತಿ ಪಡೆದಿದ್ದಾರೆ.

Whats_app_banner