ರಂಜನಿ ರಾಘವನ್‌ ಮದುವೆಯಾಗುವ ಹುಡುಗ ಇವ್ರೇ ನೋಡಿ, ಸಾಗರ್ ಭಾರಧ್ವಜ್ ಕೈಹಿಡಿಯಲಿದ್ದಾರೆ ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿ-sandalwood news actress ranjini raghavan shares her life partner sagar bhardwaj details puttagowri maduve serial pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಂಜನಿ ರಾಘವನ್‌ ಮದುವೆಯಾಗುವ ಹುಡುಗ ಇವ್ರೇ ನೋಡಿ, ಸಾಗರ್ ಭಾರಧ್ವಜ್ ಕೈಹಿಡಿಯಲಿದ್ದಾರೆ ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿ

ರಂಜನಿ ರಾಘವನ್‌ ಮದುವೆಯಾಗುವ ಹುಡುಗ ಇವ್ರೇ ನೋಡಿ, ಸಾಗರ್ ಭಾರಧ್ವಜ್ ಕೈಹಿಡಿಯಲಿದ್ದಾರೆ ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿ

Ranjini Raghavan Life Partner: ಕನ್ನಡ ಸಿನಿಮಾ, ಸೀರಿಯಲ್‌ ನಟಿ ರಂಜನಿ ರಾಘವನ್‌ ತನ್ನ ಜೀವನ ಸಂಗಾತಿ ಸಾಗರ್‌ ಭಾರಧ್ವಜ್‌ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿ ತನ್ನ ಲೈಫ್‌ ಪಾಟ್ನರ್‌ ವಿವರವನ್ನು ಹಂಚಿಕೊಂಡಿದ್ದಾರೆ.

ರಂಜನಿ ರಾಘವನ್‌ ಜೀವನ ಸಂಗಾತಿ ಸಾಗರ್‌ ಭಾರಧ್ವಜ್‌
ರಂಜನಿ ರಾಘವನ್‌ ಜೀವನ ಸಂಗಾತಿ ಸಾಗರ್‌ ಭಾರಧ್ವಜ್‌

ಬೆಂಗಳೂರು: ಕನ್ನಡ ಸಿನಿಮಾ ಮತ್ತು ಕಿರುತೆರೆ ನಟಿ ರಂಜನಿ ರಾಘವನ್‌ ಕೊನೆಗೂ ತನ್ನ ಬಾಳ ಸಂಗಾತಿ ಕುರಿತು ಮಾಹಿತಿ ನೀಡಿದ್ದಾರೆ. ತಾನು ಮದುವೆಯಾಗಲಿರುವ ಹುಡುಗ ಸಾಗರ್‌ ಭಾರಧ್ವಜ್‌ ಎಂದಿದ್ದಾರೆ. ಇಷ್ಟು ಮಾತ್ರವಲ್ಲ ತನ್ನ ಲೈಫ್‌ ಪಾಟ್ನರ್‌ ಜತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಈ ಮೂಲಕ ರಂಜಿನಿ ರಾಘವನ್‌ ತನ್ನ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ರಂಜಿನಿಯ ಮೇಲೆ ಕ್ರಶ್‌ಗೊಂಡಿದ್ದ ಹುಡುಗರಿಗೆ ಈ ಮೂಲಕ ಶಾಕ್‌ ಕೂಡ ನೀಡಿದ್ದಾರೆ. ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿ ಸದ್ಯದಲ್ಲಿಯೇ ರಿಯಲ್‌ ಆಗಿ ಮದುವೆಯಾಗಲಿದ್ದಾರೆ.

ಇತ್ತೀಚೆಗೆ ರಂಜನಿ ರಾಘವನ್‌ ಅವರು ಸಂದರ್ಶನವೊಂದರಲ್ಲಿ ಜೀವನ ಸಂಗಾತಿ ಹೇಗಿರಬೇಕು ಎಂದು ಮಾಹಿತಿ ನೀಡಿದ್ದರು. ನಮ್ಮ ಜೀವನದಲ್ಲಿ ಆತ್ಮೀಯ ಸ್ನೇಹಿತರಾಗಿದ್ದವರೇ ಜೀವನ ಸಂಗಾತಿ ಆಗಿದ್ದರೆ ಚೆನ್ನಾಗಿರುತ್ತದೆ ಎಂದು ರಂಜಿನಿ ಹೇಳಿದ್ದಾರೆ. ನಮ್ಮ ಸಮಾಜ ಗಂಡ ಅಂದರೆ ಹೇಗಿರಬೇಕು ಎಂದು ಯೋಚಿಸುತ್ತದೆ. ಕೆಲವೊಮ್ಮೆ ಅಪರಿಚಿತರನ್ನು ಮದುವೆಯಾಗಬೇಕಾಗುತ್ತದೆ. ಇದರ ಬದಲು ನಮ್ಮನ್ನು ಚೆನ್ನಾಗಿ ತಿಳಿದುಕೊಂಡಿರುವ ಹುಡುಗನನ್ನು ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಅವರು ಹೇಳಿದ್ದರು.

ಸಾಗರ್‌ ಭಾರಧ್ವಜ್‌ ಯಾರು?

ಇವರು ಕ್ರೀಡಾಪಟು ಎನ್ನಲಾಗುತ್ತಿದೆ. ರನ್ನರ್‌, ಸೈಕಲಿಸ್ಟ್‌, ಬೈಕರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. ಹೆಚ್ಚಿನ ವಿವರ ಲಭ್ಯವಿಲ್ಲ. ಸದ್ಯ ಸಾಗರ್‌ ಭಾರಧ್ಯಜ್‌ ಕುರಿತು ಹೆಚ್ಚಿನ ಮಾಹಿತಿಯನ್ನು ರಂಜನಿ ಹಂಚಿಕೊಂಡಿಲ್ಲ. ಇವರು ರಂಜನಿಯ ಆತ್ಮೀಯ ಗೆಳೆಯರೇ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ. ಸದ್ಯ ಈ ಫೋಟೋದಲ್ಲಿ ಇಬ್ಬರೂ ಟೋಪಿ ಧರಿಸಿದ್ದಾರೆ. ಕನ್ನಡಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಕನ್ನಡಿ ಫ್ರೇಮ್‌ನೊಳಗೆ ಇಬ್ಬರೂ ಸುಂದರವಾಗಿ ಕಾಣಿಸಿದ್ದಾರೆ. ಈ ಫೋಟೋಗೆ "ಸಾಗರ್ ಭಾರಧ್ವಜ್ ಲವ್‌ ರಂಜನಿ ರಾಘವನ್" ಎಂಬ ಕ್ಯಾಪ್ಷನ್‌ ಅನ್ನು ರಂಜನಿ ನೀಡಿದ್ದಾರೆ. ಈ ಫೋಟೋಗೆ ಕಂಗ್ರಾಜ್ಯುಲೇಷನ್‌ ಪ್ರವಾಹವೇ ಹರಿದುಬರುತ್ತಿದೆ.

ರಂಜನಿ ರಾಘವನ್‌ ಪರಿಚಯ

ಕಿರುತೆರೆ ಪ್ರೇಕ್ಷಕರಿಗೆ ರಂಜನಿ ರಾಘವನ್‌ ಅವರು ಪುಟ್ಟ ಗೌರಿ ಮದುವೆ ಸೀರಿಯಲ್‌ ಮೂಲಕ ಆಪ್ತರು. ಇದಾದ ಬಳಿಕ ಕನ್ನಡತಿ ಸೀರಿಯಲ್‌ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಇವರು ಕಥೆ ಡಬ್ಬಿ ಎಂಬ ಕನ್ನಡ ಪುಸ್ತಕವನ್ನೂ ಬರೆದಿದ್ದಾರೆ. ಆರು ತಿಂಗಳಲ್ಲಿ ಈ ಪುಸ್ತಕ 15 ಬಾರಿ ಮುದ್ರಣಗೊಂಡಿತ್ತು. ಇದಾದ ಬಳಿಕ ಸ್ವೈಪ್‌ ರೈಟ್‌ ಎಂಬ ಪುಸ್ತಕವನ್ನೂ ಬರೆದಿದ್ದರು. ಈ ಪುಸ್ತಕ ಒಂದೇ ತಿಂಗಳಲ್ಲಿ ಭರ್ಜರಿ ಮಾರಾಟವಾಗಿತ್ತು. ಒಂದು ತಿಂಗಳಲ್ಲಿ 5 ಸಾವಿರ ಪ್ರತಿಗಳು ಮಾರಾಟವಾಗಿದ್ದವು.

ರಾಜಹಂಸ, ಟಕ್ಕರ್‌, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ. ಹಕುನಾ ಮಟಾಟಾ, ನೈಟ್‌ ಕರ್ಫ್ಯೂ, ಕಾಂಗಾರೂ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸತ್ಯಂ ಮತ್ತು ಸ್ವಪ್ನ ಮಂಟಪ ಇವರ ಮುಂಬರುವ ಸಿನಿಮಾಗಳು. ಕಿರುತೆರೆಯಲ್ಲೂ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕೆಳದಿ ಚೆನ್ನಮ್ಮ, ಅಕಾಶ ದೀಪ, ಪುಟ್ಟ ಗೌರಿ ಮದುವೆ, ಕನ್ನಡತಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಸೂಪರ್‌ ಮಿನಿಟ್‌ ಸೀಸನ್‌ 1, ಮಲಯಾಳಂನಲ್ಲಿ ಪೌರ್ಣಮಿ ಥಿಂಕಲ್‌ ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಇಷ್ಟದೇವತೆ ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 7ರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಅಂದರೆ, ಕನ್ನಡತಿ ಸೀರಿಯಲ್‌ ಪ್ರಮೋಷನ್‌ಗಾಗಿ ಭಾಗವಹಿಸಿದ್ದರು. ಗಿಚ್ಚಿ ಗಿಲಿಗಿಲಿಗೂ ಅತಿಥಿಯಾಗಿ ಆಗಮಿಸಿದ್ದರು.