ಮೊದಲ ಪತ್ನಿ ನಿವೇದಿತಾ ಗೌಡಗೆ ಡಿವೋರ್ಸ್‌ ಬಳಿಕ ಸಂಜನಾ ಆನಂದ್‌ ಜತೆಗೆ ಚಂದನ್‌ ಶೆಟ್ಟಿ ಎರಡನೇ ಮದುವೆ?
ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ಪತ್ನಿ ನಿವೇದಿತಾ ಗೌಡಗೆ ಡಿವೋರ್ಸ್‌ ಬಳಿಕ ಸಂಜನಾ ಆನಂದ್‌ ಜತೆಗೆ ಚಂದನ್‌ ಶೆಟ್ಟಿ ಎರಡನೇ ಮದುವೆ?

ಮೊದಲ ಪತ್ನಿ ನಿವೇದಿತಾ ಗೌಡಗೆ ಡಿವೋರ್ಸ್‌ ಬಳಿಕ ಸಂಜನಾ ಆನಂದ್‌ ಜತೆಗೆ ಚಂದನ್‌ ಶೆಟ್ಟಿ ಎರಡನೇ ಮದುವೆ?

ನಿವೇದಿತಾ ಗೌಡ ಜತೆಗಿನ ಡಿವೋರ್ಸ್‌ ಬಳಿಕ ನಟ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಸಂಜನಾ ಆನಂದ್‌ ಅವ್ರನ್ನು ಎರಡನೇ ಮದುವೆ ಆಗಲಿದ್ದಾರೆ ಎಂಬ ಗುಲ್ಲು ಜೋರಾಗಿದೆ. ಈ ಬಗ್ಗೆ ಸ್ವತಃ ನಟಿ ಸಂಜನಾ ಸ್ಪಷ್ಟನೆ ನೀಡಿದ್ದಾರೆ.

ಮೊದಲ ಪತ್ನಿ ನಿವೇದಿತಾ ಗೌಡಗೆ ಡಿವೋರ್ಸ್‌ ಬಳಿಕ ಸಂಜನಾ ಆನಂದ್‌ ಜತೆಗೆ ಚಂದನ್‌ ಶೆಟ್ಟಿ ಎರಡನೇ ಮದುವೆ?
ಮೊದಲ ಪತ್ನಿ ನಿವೇದಿತಾ ಗೌಡಗೆ ಡಿವೋರ್ಸ್‌ ಬಳಿಕ ಸಂಜನಾ ಆನಂದ್‌ ಜತೆಗೆ ಚಂದನ್‌ ಶೆಟ್ಟಿ ಎರಡನೇ ಮದುವೆ?

Chandan Shetty: ಸೋಷಿಯಲ್‌ ಮೀಡಿಯಾ ಸಾಕಷ್ಟು ಬದಲಾಗಿದೆ. ಒಳ್ಳೆಯ ವಿಚಾರಕ್ಕಿಂತ ಬೇಡದ ಸುದ್ದಿ ಕಾಳ್ಗಿಚ್ಚಿನಂತೆ ಸದ್ದು ಮಾಡುತ್ತದೆ. ವೈರಲ್‌ ಪಟ್ಟ ಗಿಟ್ಟಿಸಿಕೊಂಡು, ದೊಡ್ಡ ಸುದ್ದಿಯಾಗಿ ಬದಲಾಗುತ್ತದೆ. ಅದರಲ್ಲಿ ಇದ್ದ ನಿಜಾಂಶ ಎಷ್ಟು, ಸುಳ್ಳೆಷ್ಟು ಎಂಬುದನ್ನು ಅರಿಯದೇ ಕುರುಡರಾಗಿ ನಂಬುವ ಕಾಲ ಬಂದಿದೆ. ಅದೇ ರೀತಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಇನ್ನೊಂದು ವಿಚಾರ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಪತ್ನಿ ನಿವೇದಿತಾಗೆ ಡಿವೋರ್ಸ್‌ ನೀಡಿದ್ದ ಚಂದನ್‌ ಶೆಟ್ಟಿ, ಇನ್ನೇನು ಶೀಘ್ರದಲ್ಲಿ ಎರಡನೇ ಮದುವೆ ಆಗಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಸ್ಯಾಂಡಲ್‌ವುಡ್‌ ನಟಿ ಸಂಜನಾ ಆನಂದ್‌, ತಮ್ಮ ನಟನೆಯ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿಯೂ ಅವರು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಹಲವು ಸಿನಿಮಾಗಳಲ್ಲಿ ಈ ನಟಿ ಬಿಜಿಯಾಗಿದ್ದಾರೆ. ಇತ್ತ ಸಂಗೀತ ನಿರ್ದೇಶನದ ಜತೆಗೆ ಸಿನಿಮಾಗಳಲ್ಲಿ ನಾಯಕನಾಗಿಯೂ ನಟಿಸುತ್ತ ಮುಂದುವರಿದಿದ್ದಾರೆ ಚಂದನ್‌ ಶೆಟ್ಟಿ. ಇದೀಗ ಗ್ಯಾಪ್‌ನಲ್ಲಿಯೇ ಈ ಜೋಡಿ ಮದುವೆಯಾಗಲಿದೆ ಎಂಬ ಸುದ್ದಿ ತೇಲಿಬಂದಿದೆ. ಬಹುತೇಕರು ಇದು ನಿಜ ಎಂದೇ ನಂಬಿದ್ದಾರೆ.

ಈ ಜೋಡಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತ, ಇನ್ನೇನು ಶೀಘ್ರದಲ್ಲಿ ಮದುವೆ ಆಗಲಿದ್ದಾರೆ ಎಂದು ಪುಕಾರು ಹಬ್ಬುತ್ತಿದ್ದಂತೆ, ಇದನ್ನು ಅರಿತ ಸಂಜನಾ ಆನಂದ್‌, ತಮ್ಮದೇ ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರದ ಸತ್ಯಾಸತ್ಯತೆ ಬಗ್ಗೆ ಬರೆದುಕೊಂಡಿದ್ದಾರೆ. ಯಾವುದು ನಿಜ, ಯಾವುದು ಸುಳ್ಳು ಎಂಬುದನ್ನು ಹೇಳಿದ್ದಾರೆ.

ಚಂದನ್ ಶೆಟ್ಟಿ ಅವರ ಜೊತೆ ನಾನು ಮದುವೆಯಾಗುತ್ತಿರುವ ಸುದ್ದಿ ಶುದ್ಧ ಸುಳ್ಳು. ಈ ತರಹದ ಸುಳ್ಳು ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ. ಎಲ್ಲರಿಗೂ ಈ ಮೂಲಕ ತಿಳಿಸುವುದೇನೆಂದರೆ ಈ ಸುಳ್ಳು ಮಾಹಿತಿಯನ್ನು ಯಾರೂ ನಂಬಬೇಡಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಈ ಸುದ್ದಿ ಹಬ್ಬಲು ಕಾರಣ ಏನಿರಬಹುದು?

ಚಂದನ್‌ ಶೆಟ್ಟಿ ಮತ್ತು ಸಂಜನಾ ಆನಂದ್‌ ಒಟ್ಟಿಗೆ ಸೂತ್ರಧಾರಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡೊಂದರಲ್ಲಿಯೂ ಸಖತ್‌ ಆಗಿಯೇ ಈ ಜೋಡಿ ಹೆಜ್ಜೆ ಹಾಕಿದೆ. ಹಾಡಿನಲ್ಲಿ ಇಬ್ಬರು ಮುದ್ದಾಗಿ ಕಂಡಿದ್ದಾರೆ. ಈ ನಡುವೆ ನಿವೇದಿತಾ ಗೌಡಗೆ ಡಿವೋರ್ಸ್‌ ನೀಡಿದ ಬಳಿಕ, ಸಂಜನಾ ಆನಂದ್‌ ಅವರನ್ನು ಎರಡನೇ ಬಾರಿ ಮದುವೆ ಆಗಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಎರಡನೇ ಮದುವೆ ಬಗ್ಗೆ ಏನಂದ್ರು ಚಂದನ್‌?

ಜುಲೈನಲ್ಲಿ ನಿವೇದಿತಾ ಗೌಡಗೆ ಡಿವೋರ್ಸ್‌ ನೀಡಿದ ಬಳಿಕ, ನಟ ಚಂದನ್‌ ಶೆಟ್ಟಿ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎರಡನೇ ಮದುವೆ ಬಗ್ಗೆ ಮಾತನಾಡಿದ್ದರು.  "ಈಗ ತಾನೇ ನಾನು ಅದರಿಂದ ಹೊರಗೆ ಬಂದಿದ್ದೇನೆ. ಎರಡನೇ ಮದುವೆ ಎಂಬುದು ಸದ್ಯಕ್ಕೆ ಬೇಡದ ವಿಚಾರ. ಆ ಥರದ ಆಲೋಚನೆಗಳಿಲ್ಲ. ಆ ಝೋನ್‌ನಿಂದ ಆಚೆ ಬಂದಿದ್ದೇನೆ. ಅದರಿಂದ ಇನ್ನಷ್ಟು ಮನಸ್ಸು ತಿಳಿ ಆಗಬೇಕಿದೆ. ಅದಕ್ಕೆ ಸಾಕಷ್ಟು ಸಮಯ ಬೇಕು. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನೋ ಗೊಂದಲದಲ್ಲಿದ್ದೇನೆ. ಅದರ ಬಗ್ಗೆ ಗಮನ ಹರಿಸುವುದಿಲ್ಲ" ಎಂದಿದ್ದಾರೆ.

Whats_app_banner