ಕನ್ನಡ ಸುದ್ದಿ  /  ಮನರಂಜನೆ  /  ಇದು ತಪ್ಪಾಗುತ್ತೆ ಎಂದು ಸಾಕಷ್ಟು ಬಾರಿ ಹೇಳಿದೆ, ಆದ್ರೂ ಯುವ ರಾಜ್‌ಕುಮಾರ್‌ ನನ್ನ ಮಾತು ಕೇಳಲಿಲ್ಲ! ಸಪ್ತಮಿ ಗೌಡ ಆಡಿಯೋ ವೈರಲ್

ಇದು ತಪ್ಪಾಗುತ್ತೆ ಎಂದು ಸಾಕಷ್ಟು ಬಾರಿ ಹೇಳಿದೆ, ಆದ್ರೂ ಯುವ ರಾಜ್‌ಕುಮಾರ್‌ ನನ್ನ ಮಾತು ಕೇಳಲಿಲ್ಲ! ಸಪ್ತಮಿ ಗೌಡ ಆಡಿಯೋ ವೈರಲ್

ಯುವ ರಾಜ್‌ಕುಮಾರ್‌ ಶ್ರೀದೇವಿ ಭೈರಪ್ಪ ಡಿವೋರ್ಸ್‌ ಕೇಸ್‌ ನಡುವೆಯೇ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋವೊಂದು ಇದೀಗ ವೈರಲ್‌ ಆಗಿದೆ. ನನ್ನಿಂದ ತಪ್ಪಾಗಿದೆ ಎಂದೂ ಸಪ್ತಮಿ ಹೇಳಿಕೊಂಡಿದ್ದಾರೆ.

ಇದು ತಪ್ಪಾಗುತ್ತೆ ಎಂದು ಸಾಕಷ್ಟು ಬಾರಿ ಹೇಳಿದೆ, ಆದ್ರೂ ಯುವ ರಾಜ್‌ಕುಮಾರ್‌ ನನ್ನ ಮಾತು ಕೇಳಲಿಲ್ಲ! ಸಪ್ತಮಿ ಗೌಡ ಆಡಿಯೋ ವೈರಲ್
ಇದು ತಪ್ಪಾಗುತ್ತೆ ಎಂದು ಸಾಕಷ್ಟು ಬಾರಿ ಹೇಳಿದೆ, ಆದ್ರೂ ಯುವ ರಾಜ್‌ಕುಮಾರ್‌ ನನ್ನ ಮಾತು ಕೇಳಲಿಲ್ಲ! ಸಪ್ತಮಿ ಗೌಡ ಆಡಿಯೋ ವೈರಲ್

Sapthami Gowda: ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಭೈರಪ್ಪ ಡಿವೋರ್ಸ್‌ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ, ಯುವ ಸಿನಿಮಾ ನಾಯಕಿ ಸಪ್ತಮಿ ಗೌಡ ಸಹ ಸುದ್ದಿಯಲ್ಲಿದ್ದಾರೆ. ಯುವ ಮತ್ತು ಶ್ರೀದೇವಿ ಡಿವೋರ್ಸ್‌ಗೆ ಪರೋಕ್ಷವಾಗಿ ಸಪ್ತಮಿ ಗೌಡ ಅವರೇ ಕಾರಣ ಎಂಬ ಗುಮಾನಿಯೂ ಅನೇಕರಲ್ಲಿದೆ. ಸ್ವತಃ ಸಪ್ತಮಿ ಗೌಡ ಶ್ರೀದೇವಿ ಭೈರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೀಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್‌ ಆಗಿದ್ದು, ಅಚ್ಚರಿಯ ವಿಚಾರಗಳು ಬಹಿರಂಗವಾಗಿವೆ.

ಸಪ್ತಮಿ ಗೌಡ ಆಡಿಯೋ ವೈರಲ್

"ಹಾಯ್ ಸರ್ ನಿಮಗೆ ಈಗಾಗ್ಲೇ ವಿಷಯ ಗೊತ್ತಿರುತ್ತೆ, ಏನಾಗಿದೆ ಏನು ಅಂತ. ಒಂದು ಮಾತನ್ನೂ ಕೇಳಿ. ನನ್ನ ಸೈಡ್ ಆಫ್ ದಿ ಸ್ಟೋರಿನೂ ಕೇಳಿ. ನನ್ನಿಂದ ತಪ್ಪಾಗಿಲ್ಲ ಎಂದು ನಾನು ಹೇಳ್ತಿಲ್ಲ. ಖಂಡಿತ ನನ್ನಿಂದ ತಪ್ಪಾಗಿದೆ ಇಲ್ಲ ಅಂತ ಹೇಳ್ತಿಲ್ಲ. ನನ್ನ ಅಮ್ಮನ ಮೇಲೆ ಆಣೆ ಮಾಡಿ ಹೇಳ್ತೀನಿ, ಬಾಬಾನ ಮೇಲೆನೂ ಆಣೆ ಮಾಡಿ ಹೇಳ್ತಿನಿ. ಸರ್ ನಾನು ಎಂದಿಗೂ ಸಹ ಗುರುಗೆ (ಯುವ ಮೂಲ ಹೆಸರು) ನಾನು ಮದ್ವೆನ ಬಿಟ್ಟು ಬಾ ಅಂತ ಯಾವತ್ತೂ ಹೇಳಿಲ್ಲ. ತುಂಬ ಸಲ ಹೇಳಿದ್ದೇನೆ. ಅವನಿಗೂ ಸಾಕಷ್ಟು ಬಾರಿ ಹೇಳಿದ್ದೇನೆ. ನೀವು ಬೇಕಿದ್ದರೆ ಅವನನ್ನು ಕೇಳಬಹುದು. ಯಾರನಾದರೂ ಕೇಳಬಹುದು. ಇದನ್ನ ವರ್ಕೌಟ್ ಮಾಡು ಇದು ತಪ್ಪಾಗುತ್ತೆ ಬೇಡ ಎಂದು ತುಂಬಾ ಸಲ ಹೇಳಿದೀನಿ. ಹೌದು ಇದು ನಿಮ್ಮ ಸೆಟ್‌ನಲ್ಲಿ ಆಯ್ತು ಅದಕ್ಕೆ ನಿಮಗೆ ನಮ್ಮ ಮೇಲೆ ಎಷ್ಟೇ ಕೋಪ ಇರಬಹುದು ಸರ್ ಪರವಾಗಿಲ್ಲ. ಆದರೆ ನನ್ನ ಸೈಡ್ ಆಫ್ ದಿ ಸ್ಟೋರಿಯನ್ನೂ ಕೇಳಿ.

ಟ್ರೆಂಡಿಂಗ್​ ಸುದ್ದಿ

ನನ್ನಿಂದ ತಪ್ಪಾಗಿದೆ..

ಗುರುದು ಫಸ್ಟ್ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ನೀವೂ ದುಡ್ಡು ಹಾಕಿ ಸಿನಿಮಾ ಮಾಡ್ತಿದ್ದೀರಿ. ಎಲ್ಲರೂ ಕಷ್ಟ ಪಟ್ಟು ಮಾಡಿರುವ ಸಿನಿಮಾ. 100% ನಾನು ಮಧ್ಯ ಬರಲ್ಲ ಸರ್. ನಾನು ಯಾವತ್ತೂ ಕಾಂಟಾಕ್ಟ್‌ ಮಾಡಲ್ಲ ಅಂತ ಹೇಳಿದ್ದೆ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳಾಗಲು ಸಾಧ್ಯಾನಾ ಎಂದು ಯಾವತ್ತಾದ್ರೂ ಒಂದು ಸಲ ನಿಮಗೆ ಅನಿಸಿದರೆ ನನ್ನ ಸೈಡ್‌ ಕಥೆ ಕೇಳಲು ಚಾನ್ಸ್‌ ಕೊಡಿ ಸರ್. ಹೌದು ನನ್ನಿಂದ ಇನ್ನೊಬ್ಬರಿಗೆ ನೋವಾಗಿದೆ" ಎಂದು ಸಪ್ತಮಿ ಗೌಡ ಕಣ್ಣೀರು ಹಾಕುತ್ತಲೇ ಮಾತನಾಡಿದ ಆಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಶ್ರೀದೇವಿ ಕೈಗೆ ಸಿಕ್ಕಿಬಿದ್ದ ಜೋಡಿ

ಯುವ ಸಿನಿಮಾ ಶೂಟಿಂಗ್‌ ಸಮಯದಲ್ಲಿಯೇ ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದ ಶ್ರೀದೇವಿ, ಯುವ ಇದ್ದ ಸ್ಥಳಕ್ಕೆ ಹೋಗಿದ್ದರು. ಅಲ್ಲಿ ಯುವ ಜತೆಗೆ ಸಪ್ತಮಿ ಗೌಡ ಸಹ ಒಂದೇ ಕೋಣೆಯಲ್ಲಿ ಇದ್ದರು. ಇಬ್ಬರನ್ನು ರೆಡ್‌ ಹ್ಯಾಂಡ್‌ ಆಗಿಯೇ ಹಿಡಿದಿದ್ದರು ಶ್ರೀದೇವಿ. ಈ ವಿಚಾರವೂ ದಂಪತಿ ನಡುವಿನ ಮುನಿಸಿಗೆ ಕಾರಣವಾಗಿತ್ತು. ಡಿವೋರ್ಸ್‌ ಹಂತಕ್ಕೂ ಬಂದಿತ್ತು. ಯುವ ರಾಜ್‌ಕುಮಾರ್‌ ಅವರೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಶ್ರೀದೇವಿಗೆ ಲೀಗಲ್‌ ನೋಟೀಸ್‌ ಸಹ ರವಾನೆಯಾಗಿತ್ತು. ಆಗ ಸಪ್ತಮಿ ಗೌಡ ವಿಚಾರವನ್ನು ಪ್ರಸ್ತಾಪಿಸಿದ್ದರು.

ಇನ್ನೊಂದು ಕಡೆ ಶೂಟಿಂಗ್‌ ಸಮಯದಲ್ಲಿ ಇವರಿಬ್ಬರ ವಿಚಾರ ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ಅವರಿಗೆ ಗೊತ್ತಾಗಿ, ಇಬ್ಬರಿಗೂ ಎಚ್ಚರಿಕೆ ನೀಡಿದ್ದರು ಎಂದೂ ಹೇಳಲಾಗುತ್ತಿದೆ. ಇದೀಗ ನಡೆದ ಘಟನೆ ಬಗ್ಗೆ ನಿರ್ಮಾಪಕರಿಗೆ ಕ್ಷಮೆ ಕೇಳುವ ನೆಪದಲ್ಲಿ ನಡೆದ ಘಟನೆ ಬಗ್ಗೆ ಈ ಆಡಿಯೋವನ್ನೂ ಕಳಿಸಿದ್ದರು ಎನ್ನಲಾಗುತ್ತಿದೆ.