ಕೃಷ್ಣಂ ಪ್ರಣಯ ಸಖಿ ಸಿನಿಮಾದ ಶೂಟಿಂಗ್ ಸೋಜಿಗ, ವಿಡಿಯೋ ಹಂಚಿಕೊಂಡ ಶ್ರುತಿ; ಶಶಿಕುಮಾರ್ ಡ್ಯಾನ್ಸ್‌ಗೆ ಕಂಗಲಾದ ಗಣೇಶ್
Krishnam pranaya sakhi: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಯಶಸ್ಸಿನ ಗುಂಗಿನಲ್ಲಿ ನಟಿ ಶ್ರುತಿ ಕೃಷ್ಣ ಅವರು ಶೂಟಿಂಗ್ ಸಂದರ್ಭದ ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಶ್ರುತಿ ಮತ್ತು ಶಶಿಕುಮಾರ್ ಡ್ಯಾನ್ಸ್‌ಗೆ ಫ್ಯಾನ್ಸ್ ವಾಹ್ ಎಂದಿದ್ದಾರೆ.
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಯಶಸ್ಸಿನ ಗುಂಗಿನಲ್ಲಿ ನಟಿ ಶ್ರುತಿ ಕೃಷ್ಣ ಅವರು ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಸಿನಿಮಾದ ಶೂಟಿಂಗ್ ವಿಡಿಯೋಗಳಲ್ಲಿ ಹಾಡಿನ ದೃಶ್ಯಗಳು ಸೇರಿದಂತೆ ಹಲವು ಸೀನ್‌ಗಳಿವೆ. ಒಂದು ಹಾಡಿನ ದೃಶ್ಯದಲ್ಲಿ ಎಲ್ಲರೂ ಕುಣಿಯುತ್ತಿದ್ದಾರೆ. ಶಶಿಕುಮಾರ್ ಅಂತೂ ಹೈ ಎನರ್ಜಿಯಿಂದ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಗಣೇಶ್ ಬೇಸರದ ಮುಖಮಾಡಿಕೊಂಡು ಡ್ಯಾನ್ಸ್ ನಿಲ್ಲಿಸಿ ಬರುತ್ತಿರುವ ದೃಶ್ಯವಿದೆ.
"ಈ ಚಿತ್ರವನ್ನು ಯಶಸ್ವಿ ಗೊಳಿಸಿದಕ್ಕೆ ಎಲ್ಲಾ ಕಲಾಭಿಮಾನಿಗಳಿಗೂ, ಯಶಸ್ವಿ ಚಿತ್ರದಲ್ಲಿ ಭಾಗವಹಿಸಲು ಅವಕಾಶ ಕೊಟ್ಟ ಚಿತ್ರ ತಂಡಕ್ಕೂ ಧನ್ಯವಾದಗಳು. ಅಮ್ಮನೊಂದಿಗೆ ಅಭಿನಯಿಸಿದು ಅವಿಸ್ಮರಣೀಯ" ಎಂದು ನಟಿ ಶ್ರುತಿ ಕೃಷ್ಣಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಶ್ರುತಿ ಹಂಚಿಕೊಂಡ ವಿಡಿಯೋಗಳನ್ನು ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. "ಶ್ರುತಿ ಅಮ್ಮ ಏನ್ ಇದು ನಿಮ್ಮ ಡ್ಯಾನ್ಸ್ ಲಕ್ಷೀ ಪಟಾಕಿ ಚಟ ಚಟ ಚಟಕ್ ಅಂತ ಅನ್ನೋಹಾಗೆ ಇದೆ ನಿಮ್ಮ ಡ್ಯಾನ್ಸ್" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ವಾವ್ ಏನ್ ಎನರ್ಜಿ ಶ್ರುತಿ ಮಾಮ್ ಸೂಪರ್ ಸೂಪರ್" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಬಾಕ್ಸ್ ಆಫೀಸ್ ಕಲೆಕ್ಷನ್
ಬಾಕ್ಸ್ ಆಫೀಸ್‌ನಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಉತ್ತಮವಾಗಿಯೇ ಗಳಿಕೆ ಮಾಡುತ್ತಿದೆ. ದಿನ 8 ಅಂದರೆ ಗುರುವಾರ ಈ ಸಿನಿಮಾ 0.42 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಏಳನೇ ದಿನ 0.54 ಕೋಟಿ ರೂ., ಮತ್ತು ಆರನೇ ದಿನ 0.68 ಕೋಟಿ ರೂ ಗಳಿಸಿತ್ತು.ಸೋಮವಾರ 0.76 ಕೋಟಿ ಗಳಿಕೆ ಮಾಡಿತ್ತು. ಈ ಸಿನಿಮಾ ಪ್ರಿಮೀಯರ್ ಶೋ ದಿನ 0.1 ಕೋಟಿ ರೂಪಾಯಿ, ಮೊದಲ ದಿನ 1.5 ಕೋಟಿ , 2ನೇ ದಿನ 0.85 ಕೋಟಿ ರೂಪಾಯಿ, 3ನೇ ದಿನ 1.7 ಕೋಟಿ ರೂಪಾಯಿ, 4ನೇ ದಿನ 2.18 ಕೋಟಿ, 5ನೇ ದಿನ 0.76 ಕೋಟಿ ರೂಪಾಯಿ ಮತ್ತು ನಿನ್ನೆ 0.68 ಕೋಟಿ ರೂ ಗಳಿಸಿತು. ಒಟ್ಟಾರೆ ಕಳೆದ ಎಂಟು ದಿನಗಳಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾವು 8.73 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಸಕ್‌ನಿಲ್ಕ್.ಕಾಂ ವರದಿ ಮಾಡಿದೆ.
ನಟ ಶರಣ್ ಮೆಚ್ಚುಗೆ
"ದುನಿಯಾ' ಮತ್ತು 'ಮುಂಗಾರುಮಳೆ' ಎರಡೂ ಸಿನಿಮಾಗಳನ್ನ ಒಂದೇ ದಿನ ಚಿತ್ರಮಂದಿರಗಳಲ್ಲಿ ನೋಡಿದ್ದೆ, ಮತ್ತೆ ಈಗ 'ಭೀಮ' ಮತ್ತು 'ಕೃಷ್ಣಂ ಪ್ರಣಯ ಸಖಿ' ಚಿತ್ರಗಳನ್ನ ಒಂದೇ ದಿನ ನೋಡಿದೆ. ಆಗಲೂ ಸೂಪರ್‌ಹಿಟ್, ಈಗಲೂ ಸೂಪರ್‌ಹಿಟ್. ನನ್ನ ನೆಚ್ಚಿನ #DuniyaVijay ಮತ್ತು @Official_Ganesh ರವರಿಗೆ ಮತ್ತು ಇಡೀ ತಂಡಕ್ಕೆ ನನ್ನ ಅಭಿನಂದನೆಗಳು" ಎಂದು ನಟ ಶರಣ್ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದುಬೈನಲ್ಲೂ ಕೃಷ್ಣಂ ಪ್ರಣಯ ಸಖಿ ಬಿಡುಗಡೆ
" ಭಾರತ ದಾಟುತ ದುಬೈಗೆ ಹಾರಲಿರುವ ಗೋಲ್ಡನ್ ಸ್ಟಾರ್ ಅಭಿನಯದ ಕೃಷ್ಣಂ ಪ್ರಣಯ ಸಖಿ. ಇದೇ ಸೆಪ್ಟೆಂಬರ್ 01 ರಂದು ದುಬೈನಲ್ಲಿ ಸಿನೆಮಾ ರಿಲೀಸ್ ಆಗಲಿದೆ" ಎಂಬ ಸುದ್ದಿಯೂ ಬಂದಿದೆ. ಈ ಮೂಲಕ ಕನ್ನಡ ಚಿತ್ರವನ್ನು ದುಬೈ ಪ್ರೇಕ್ಷಕರು ಸದ್ಯದಲ್ಲಿಯೇ ಕಣ್ತುಂಬಿಕೊಳ್ಳಲಿದ್ದಾರೆ.