ರಾಧಾ ರಮಣ ಸೀರಿಯಲ್‌ ನಟಿ ಶ್ವೇತಾ ಪ್ರಸಾದ್ ಸಖತ್‌ ಹಾಟ್‌ ಕಣ್ರೀ;‌ ಬೆಂಗಳೂರು ತಾಪಮಾನ ಏರಿಕೆಗೆ ನೀವೇ ಕಾರಣ ಅಂದ್ರು ಫ್ಯಾನ್ಸ್‌-sandalwood news actress shwetha r prasad shared beautiful photos fans says this reason bengaluru temperature high pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಾಧಾ ರಮಣ ಸೀರಿಯಲ್‌ ನಟಿ ಶ್ವೇತಾ ಪ್ರಸಾದ್ ಸಖತ್‌ ಹಾಟ್‌ ಕಣ್ರೀ;‌ ಬೆಂಗಳೂರು ತಾಪಮಾನ ಏರಿಕೆಗೆ ನೀವೇ ಕಾರಣ ಅಂದ್ರು ಫ್ಯಾನ್ಸ್‌

ರಾಧಾ ರಮಣ ಸೀರಿಯಲ್‌ ನಟಿ ಶ್ವೇತಾ ಪ್ರಸಾದ್ ಸಖತ್‌ ಹಾಟ್‌ ಕಣ್ರೀ;‌ ಬೆಂಗಳೂರು ತಾಪಮಾನ ಏರಿಕೆಗೆ ನೀವೇ ಕಾರಣ ಅಂದ್ರು ಫ್ಯಾನ್ಸ್‌

ರಾಧಾ ರಮಣ, ಶ್ರೀರಸ್ತು ಶುಭಮಸ್ತು ಸೀರಿಯಲ್‌ ನಟಿ, ಕಾಟೇರ ಸಿನಿಮಾ ನಟಿ ಶ್ವೇತಾ ಆರ್‌ ಪ್ರಸಾದ್‌ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಹಾಟ್‌ ಫೋಟೋ ನೋಡಿ ಬೆಂಗಳೂರು ತಾಪಮಾನ ಏರಿಕೆಗೆ ನೀವೇ ಕಾರಣ ಎಂದು ಫ್ಯಾನ್ಸ್‌ ಕಾಲೆಳೆದಿದ್ದಾರೆ.

ರಾಧಾ ರಮಣ ಸೀರಿಯಲ್‌ ನಟಿ ಶ್ವೇತಾ ಪ್ರಸಾದ್ ಸಖತ್‌ ಹಾಟ್‌ ಕಣ್ರೀ
ರಾಧಾ ರಮಣ ಸೀರಿಯಲ್‌ ನಟಿ ಶ್ವೇತಾ ಪ್ರಸಾದ್ ಸಖತ್‌ ಹಾಟ್‌ ಕಣ್ರೀ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕಾಟೇರ ಸಿನಿಮಾ, ಶ್ರೀರಸ್ತು ಶುಭಮಸ್ತು, ರಾಧಾ ರಮಣದಂತಹ ಸೀರಿಯಲ್‌ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ ಶ್ವೇತಾ ಆರ್‌ ಪ್ರಸಾದ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಕಾಟೇರ ಸಿನಿಮಾದಲ್ಲೂ ಶ್ವೇತಾ ಪ್ರಸಾದ್‌ ನಟಿಸಿದ್ದರು. ಸದ್ಯ ಇವರು ಹಂಚಿಕೊಂಡಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರ ಗಮನ ಸೆಳೆದಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ತಾಪಮಾನ ಏರಿಕೆಗೆ ಕಾರಣ

ಆರ್‌ಜೆ ಪ್ರದೀಪ್‌ ಪತ್ನಿ ಶ್ವೇತಾ ಪ್ರಸಾದ್‌ ಹಂಚಿಕೊಂಡ ಹೊಸ ಫೋಟೋ ನೋಡಿ ಅಭಿಮಾನಿಗಳು, ಆತ್ಮೀಯರು ನಾನಾ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ಹಾಟ್‌, ನಮ್ಮ ಬೆಂಗಳೂರು ತಾಪಮಾನ ಏರಿಕೆಗೆ ಏನು ಕಾರಣ ಅಂತ ಈಗ ಗೊತ್ತಾಯ್ತು" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಮೊದ್ಲೆ ತಾಪಮಾನ ಜಾಸ್ತಿ, ಇನ್ನೂ ಜಾಸ್ತಿ ಆಗುತ್ತೆ" "ಸ್ಯಾಂಡಲ್‌ವುಡ್‌ನ ನಿಜವಾದ ಕ್ವೀನ್‌" "ಬೆಂಕಿ" "ಬ್ಯೂಟಿಫುಲ್‌" ಎಂದೆಲ್ಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಶ್ವೇತಾ ಪ್ರಸಾದ್‌ ಜೀವನಚರಿತ್ರೆ

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಶ್ವೇತಾ ಆರ್‌ ಪ್ರಸಾದ್‌ ಎಂದಾಗ ರಾಧಾ ರಮಣ ಸೀರಿಯಲ್‌ ನೆನಪಿಗೆ ಬರಬಹುದು. ಆ ಸೀರಿಯಲ್‌ನಲ್ಲಿ ಎಲ್ಲರ ಮನಸ್ಸಿಗೆ ಹತ್ತಿರವಾಗುವಂತೆ ನಟಿಸಿದ್ದರು. ಶ್ರೀರಸ್ತು ಶುಭಮಸ್ತು ಸೀರಿಯಲ್‌ ಮೂಲಕವೂ ಇವರು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸ್ಯಾಂಡಲ್‌ವುಡ್‌ಗೆ ಕಳ್ಬೆಟ್ಟದ ದರೋಡೆಕೋರರು ಎಂಬ ಸಿನಿಮಾದ ಮೂಲಕ ಎಂಟ್ರಿ ನೀಡಿದ್ದರು. ಈ ಸಿನಿಮಾ 2019ರ ಫೆಬ್ರವರಿ 22ರಂದು ತೆರೆ ಕಂಡಿತ್ತು. 2022ರಲ್ಲಿ ಹರಿಪ್ರಸಾದ್‌ ಜಯಣ್ಣ ನಿರ್ದೇಶನದ ಪದವಿ ಪೂರ್ವ ಎಂಬ ಸಿನಿಮಾದಲ್ಲಿಯೂ ನಟಿಸಿದ್ದಾರೆ. 2023ರ ಬ್ಲಾಕ್‌ಬಸ್ಟರ್‌ ಸಿನಿಮಾ, ದರ್ಶನ್‌ ಅಭಿನಯದ ಕಾಟೇರ ಸಿನಿಮಾದಲ್ಲೂ ನಟಿಸಿದ್ದರು. ಕಾಟೇರ ಸಿನಿಮಾಕ್ಕೆ ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳಿದ್ದರು.

ಆರ್‌ಜೆ ಪ್ರದೀಪ್‌ ಸಂಗಾತಿ

ಶ್ವೇತಾ ಪ್ರಸಾದ್‌ ಅವರು ಜನಪ್ರಿಯ ಆರ್‌ಜೆ ಪ್ರದೀಪ್‌ ಅವರ ಪತ್ನಿ. ಕಾಲೇಜಿನಲ್ಲಿದ್ದಾಗಲೇ ಪರಸ್ಪರ ಇಷ್ಟಪಟ್ಟ ಆರ್‌ಜೆ ಪ್ರದೀಪ ಮತ್ತು ಶ್ವೇತ ಬಳಿಕ ಮನೆಯವರ ಒಪ್ಪಿಗೆ ಪಡೆದು ವಿವಾಹ ಬಂಧನಕ್ಕೆ ಒಳಗಾಗಿದ್ದರು. ರಾಧಾ ರಮಣ ಸೀರಿಯಲ್‌ನಲ್ಲಿ ಮಿಸ್‌ ರಾಧಾ ಆಗಿ ಎಲ್ಲರಿಗೂ ಇಷ್ಟವಾಗಿದ್ದರು. ಶಿವಮೊಗ್ಗ ಮೂಲದ ಇವರು ಫೇಸ್‌ಬುಕ್‌ ಫೋಟೋ ಮೂಲಕವೇ ಅವಕಾಶ ಪಡೆದಿದ್ದರು. ಫೇಸ್‌ಬುಕ್‌ನಲ್ಲಿದ್ದ ಇವರ ಚಂದದ ಫೋಟೋ ನೋಡಿ ಶ್ರುತಿ ನಾಯ್ಡು ಅವರು ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ನಟಿಸುವ ಅವಕಾಶ ನೀಡಿದ್ದರು. ನಟನೆಯ ಅನುಭವ ಇಲ್ಲದೆ ಇದ್ದರೂ ಶ್ರದ್ಧೆಯಿಂದ ಕಲಿತು ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಇದಾದ ಬಳಿಕ ರಾಧಾ ರಮಣ ಸೀರಿಯಲ್‌ ಇವರ ಜನಪ್ರಿಯತೆ ಹೆಚ್ಚಿಸಿತ್ತು. ಡ್ಯಾನ್ಸಿಂಗಗ ಸ್ಟಾರ್‌ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿದ್ದರು.

ಕಾಟೇರ ಸಿನಿಮಾದ ಬಳಿಕ ಶ್ವೇತಾ ಪ್ರಸಾದ್‌ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ನಟನೆಯಿಂದ ಒಂದಿಷ್ಟು ದೂರ ಇದ್ದಾರೆ. ಇವರು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದು, ಆಗಾಗ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಸದ್ಯ ಬೆಂಗಳೂರು, ಮಂಗಳೂರು, ಧಾರವಾಡ, ಕಲಬುರಗಿ, ವಿಜಯಪುರ ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ತಾಪಮಾನ ಏರಿಕೆಯಾಗಿದೆ. ಇದೇ ಸಮಯದಲ್ಲಿ ಶ್ವೇತಾ ಪ್ರಸಾದ್‌ ಹಾಟ್‌ ಫೋಟೋ ನೋಡಿ ಅಭಿಮಾನಿಗಳು "ಬೆಂಗಳೂರು ಬಿಸಿ ಹೆಚ್ಚಳಕ್ಕೆ ನೀವೇ ಕಾರಣ" ಎಂದು ಕಾಲೆಳೆದಿದ್ದಾರೆ.