ಕನ್ನಡ ಸುದ್ದಿ  /  Entertainment  /  Sandalwood News Adarsh Iyengar S The Song Belake Was Released To Create Awareness About Global Warming Mnk

ಬದಲಾವಣೆಯ ಬೀಜ ಬಿತ್ತೋಣ, ಹಸಿರೆಂಬ ಫಸಲಿನಲಿ ಜಗವ ತಂಪಾಗಿಸೋಣ; ಜಾಗತಿಕ ತಾಪಮಾನ ಕುರಿತ ‘ಬೆಳಕೆ’ ಹಾಡು ಬಿಡುಗಡೆ

ಜಾಗತಿಕ ತಾಪಮಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶಕ್ಕೆ ಹೊಸಬರ ತಂಡವೊಂದು, ಅದಕ್ಕೆಂದೇ ಬೆಳಕೆ ಹೆಸರಿನ ಹಾಡೊಂದನ್ನು ನಿರ್ಮಾಣ ಮಾಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಆ ಹಾಡಿಗೆ ಪ್ರಮೋದ್‌ ಮರವಂತೆ ಸಾಹಿತ್ಯ ಬರೆದಿದ್ದಾರೆ.

ಬದಲಾವಣೆಯ ಬೀಜ ಬಿತ್ತೋಣ, ಹಸಿರೆಂಬ ಫಸಲಿನಲಿ ಜಗವ ತಂಪಾಗಿಸೋಣ; ಜಾಗತಿಕ ತಾಪಮಾನ ಕುರಿತ ‘ಬೆಳಕೆ’ ಹಾಡು ಬಿಡುಗಡೆ
ಬದಲಾವಣೆಯ ಬೀಜ ಬಿತ್ತೋಣ, ಹಸಿರೆಂಬ ಫಸಲಿನಲಿ ಜಗವ ತಂಪಾಗಿಸೋಣ; ಜಾಗತಿಕ ತಾಪಮಾನ ಕುರಿತ ‘ಬೆಳಕೆ’ ಹಾಡು ಬಿಡುಗಡೆ

Belake Song: ಹೊಸ ಹೊಸ ತಂಡಗಳು ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಶತಪ್ರಯತ್ನ ಮಾಡುತ್ತಿವೆ. ಕೆಲವರಿಗೆ ಲಕ್‌ ಕೈ ಹಿಡಿದರೆ, ಇನ್ನು ಕೆಲವರು ಸತತ ಪ್ರಯತ್ನದಿಂದಲೇ ಆ ಗೆಲುವಿನ ಸಿಹಿಯನ್ನು ಅನುಭವಿಸಲು ಕಾಯುತ್ತಿದ್ದಾರೆ. ಆ ಪೈಕಿ ಕನ್ನಡದ ಚಿತ್ರ ನಿರ್ಮಾಣ ಸಂಸ್ಥೆಯೊಂದು ಒಂದೊಂದೆ ಮೆಟ್ಟಿಲು ಏರುತ್ತಿದೆ. ಈಗಾಗಲೇ ಒಂದು ಸಿನಿಮಾ ನಿರ್ಮಾಣ ಮಾಡಿ, ಅದರ ಬಿಡುಗಡೆಯ ನಡುವೆಯೇ ಹಾಡೊಂದನ್ನು ಹೊರತಂದಿದೆ ಶ್ರೀ ಕೃಷ್ಣ ಪ್ರೊಡಕ್ಷನ್ಸ್‌. ಅದೂ ಪ್ರಸ್ತುತತೆಗೆ ಹತ್ತಿರವಾದ ಹಾಡನ್ನು.

ಸದ್ಯ ಬಿರು ಬೇಸಿಗೆಯಲ್ಲಿ ನಾವಿದ್ದೇವೆ. ನೀರಿನ ಅಭಾವದ ಜತೆಗೆ ಬಿಸಿಲಿನ ಹೊಡೆತಕ್ಕೂ ಮನುಷ್ಯನ ಜತೆಗೆ ಪ್ರಾಣಿ ಸಂಕುಲವೂ ನರಳುತ್ತಿವೆ. ಇದೆಲ್ಲದಕ್ಕೂ ಪರಿಸರ ನಾಶವೂ ನೇರ ಕಾರಣ. ಜನರಲ್ಲಿ ಈ ಬಗ್ಗೆ ಜಾಗೃತಿ ಜತೆಗೆ ಪರಿಸರ ಕಾಳಜಿ ಮೂಡಿಸುವ ಉದ್ದೇಶಕ್ಕೆ ಜಾಗತಿಕ ತಾಪಮಾನದ ಕುರಿತೇ ಬೆಳಕೆ ಎಂಬ ಹಾಡನ್ನು ಹೊರತಂದಿದೆ. ಈ ಹಿಂದೆ ಹೊಂಬಣ್ಣ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ, ಬೆಳಕೆ ಹಾಡನ್ನು ನಿರ್ದೇಶಿಸಿದ್ದಾರೆ. ಬೆಳಕೆ ಹಾಡಿಗೆ ಧ್ವನಿಯಾಗಿ, ಮುಖ್ಯ ಪಾತ್ರಧಾರಿಯಾಗಿಯೂ ಹಾಡಿನಲ್ಲಿ ನಟಿಸಿದ್ದಾರೆ ಆದರ್ಶ್‌ ಅಯ್ಯಂಗಾರ್.‌

ಈ ಹಾಡಿನ ಬಗ್ಗೆ ಮಾಹಿತಿ ನೀಡುವ ಗಾಯಕ ಆದರ್ಶ್‌ ಅಯ್ಯಂಗಾರ್‌, ಶ್ರೀ ಕೃಷ್ಣ ಪ್ರೊಡಕ್ಷನ್‌ ಮೂಲಕ ಒಳ್ಳೊಳ್ಳೆಯ ಸಿನಿಮಾಗಳನ್ನು ಸಮಾಜಕ್ಕೆ ನೀಡುವ ಉದ್ದೇಶ ನಮ್ಮದು. ಅದರಂತೆ ಈಗಾಗಲೇ ತಿಮ್ಮನ ಮೊಟ್ಟೆಗಳು ಸಿನಿಮಾ ನಿರ್ಮಾಣವಾಗಿ, ಬಿಡುಗಡೆಯ ಹಂತಕ್ಕೂ ಬಂದು ನಿಂತಿದೆ. ಈ ನಡುವೆ ಒಂದೊಳ್ಳೆ ಹಾಡನ್ನು ನಮ್ಮ ಬ್ಯಾನರ್‌ನಿಂದ ಹೊರತರಬೇಕು ಎಂದುಕೊಂಡು, ಬೆಳಕೆ ಹಾಡೇ ಸೂಕ್ತ ಎಂದು ಬಿಡುಗಡೆ ಮಾಡಿದ್ದೇವೆ ಎಂದರು ಆದರ್ಶ್‌.

ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಹಾಡು ಅದಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆಗ ನಾವು ಆಯ್ದುಕೊಂಡ ವಿಷಯ ಜಾಗತಿಕ ತಾಪಮಾನ. ಅದರ ಥೀಮ್‌ನಲ್ಲಿ ಬೆಳಕೆ ಹಾಡು ನಿರ್ಮಾಣವಾಯ್ತು. ಈ ಗೀತೆಗೆ ಧ್ವನಿ ನೀಡಿ ಹಾಡಿನಲ್ಲೂ ಕಾಣಿಸಿಕೊಂಡಿದ್ದೇನೆ. ರಕ್ಷಿತ್ ತೀರ್ಥಹಳ್ಳಿ ಅವರ ನಿರ್ದೇಶನವಿದೆ. ಸೂಪರ್‌ ಹಿಟ್‌ ಹಾಡುಗಳನ್ನು ನೀಡಿದ ಪ್ರಮೋದ್ ಮರವಂತೆ ಈ ಹಾಡಿಗೂ ಸಾಹಿತ್ಯ ಬರೆದಿದ್ದಾರೆ. ಹೇಮಂತ್ ಜೋಯಿಸ್ ಸಂಗೀತ ನೀಡಿದರೆ, ಗುರುಪ್ರಸಾದ್ ನಾರ್ನಾಡ್ ಕ್ಯಾಮರಾ ವರ್ಕ್‌ ಜವಾಬ್ದಾರಿ ನಿಭಾಯಿಸಿದ್ದಾರೆ. ಸುಧೀರ್ ಎಸ್ ಜೆ ಈ ಹಾಡಿ ಸಂಕಲನಕಾರರು ಎಂದರು ಆದರ್ಶ ಅಯ್ಯಂಗಾರ್.

ಇನ್ನು ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ ಸಹ ಹಾಡು ಮೂಡಿಬಂದ ಬಗೆ ಬಗ್ಗೆ ಮಾತನಾಡಿದರು. ಮೊದಲು ಬೆಂಗಳೂರಿನಲ್ಲಿ ಅಷ್ಟೊಂದು ತಾಪಮಾನ ಇರುತ್ತಿರಲಿಲ್ಲ. ಈಗ ಬೆಂಗಳೂರಿನ ಜತೆಗೆ ಶಿವಮೊಗ್ಗ ಭಾಗ, ಉತ್ತರ ಕರ್ನಾಟಕ ಭಾಗದಲ್ಲಿ ಒಂದೇ ರೀತಿಯ ತಾಪಮಾನ ಕಂಡು ಬರುತ್ತದೆ. ಈ ತಾಪಮಾನಕ್ಕೆ ಮರಗಿಡಗಳನ್ನು ಕಡಿಯುವುದೇ ಮೂಲ ಕಾರಣ. ಆ ಮರಗಿಡಗಳನ್ನು ಉಳಿಸುವುದೇ ನಮ್ಮ ನಡುವಿನ ಬಹುದೊಡ್ಡ ಸವಾಲು ಮತ್ತು ಪರಿಹಾರ. ಇದು ಹೀಗೆ ಮುಂದುವರಿದರೆ, ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಆ ಕಾರಣಕ್ಕಾಗಿಯೇ ಈ ತಾಪಮಾನದ ಜಾಗೃತಿ ಕುರಿತು ಹಾಡು ಮಾಡಿದ್ದೇವೆ ಎಂದರು ನಿರ್ದೇಶಕರ ರಕ್ಷಿತ್‌ ತೀರ್ಥಹಳ್ಳಿ.

ಸಿಂಗಾರ ಸಿರಿಯೇ ಹಾಡಿನ ಖ್ಯಾತಿಯ ಪ್ರಮೋದ್‌ ಮರವಂತೆ ಕೂಡ ಹಾಡಿನ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು. "ಈಗಾಗಲೇ ನಾನು ಸಾಕಷ್ಟು ಹಾಡುಗಳಿಗೆ ಸಾಹಿತ್ಯ ಬರೆದಿದ್ದೇನೆ. ಆ ಪೈಕಿ ಪರಿಸರ ಮತ್ತು ಜಾಗತಿಕ ತಾಪಮಾನದ ಕುರಿತು ಹಾಡು ಬರೆಯಲು ಈ ತಂಡ ಅವಕಾಶ ಮಾಡಿ ಕೊಟ್ಟಿದೆ. ಅಷ್ಟೇ ಚೆನ್ನಾಗಿ ಆ ಹಾಡು ಮೂಡಿಬಂದಿದೆ. ಇನ್ನೊಂದು ವಿಚಾರ ಏನೆಂದರೆ, ದಿನೇ ದಿನೆ ಬಿಸಿಲು ಹೆಚ್ಚಾಗುತ್ತಿದೆ. ಪ್ರಾಣಿ ಪಕ್ಷಿಗಳೂ ತತ್ತರಿಸಿವೆ. ಮನೆ ಮೇಲೆ ಅವುಗಳಿಗೂ ನೀರಿನ ವ್ಯವಸ್ಥೆ ಮಾಡಿ ಎಂಬುದು ಪ್ರಮೋದ್‌ ಮರವಂತೆ ಮಾತು.

IPL_Entry_Point