Aditi Prabhudeva: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ; ಯುಗಾದಿ ಹಬ್ಬದಂದು ಹಂಚಿಕೊಂಡ್ರು ಗುಡ್‌ನ್ಯೂಸ್‌
ಕನ್ನಡ ಸುದ್ದಿ  /  ಮನರಂಜನೆ  /  Aditi Prabhudeva: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ; ಯುಗಾದಿ ಹಬ್ಬದಂದು ಹಂಚಿಕೊಂಡ್ರು ಗುಡ್‌ನ್ಯೂಸ್‌

Aditi Prabhudeva: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ; ಯುಗಾದಿ ಹಬ್ಬದಂದು ಹಂಚಿಕೊಂಡ್ರು ಗುಡ್‌ನ್ಯೂಸ್‌

Baby Girl Born to Aditi Prabhudeva: ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಏಪ್ರಿಲ್‌ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಯುಗಾದಿ ಹಬ್ಬದಂದು ಈ ಗುಡ್‌ನ್ಯೂಸ್‌ ಅನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಹೆಣ್ಣು ಮಗುವಿಗೆ ಅಪ್ಪನಾದ ಖುಷಿಯಲ್ಲಿ ಯಶಸ್‌ ಪಟ್ಲ ಇದ್ದಾರೆ.

Aditi Prabhudeva: ಹೆಣ್ಣು ಮಗುವಿಗೆ ಜನ್ಮ ನೀಡಿದ ಆದಿತಿ ಪ್ರಭುದೇವ್‌
Aditi Prabhudeva: ಹೆಣ್ಣು ಮಗುವಿಗೆ ಜನ್ಮ ನೀಡಿದ ಆದಿತಿ ಪ್ರಭುದೇವ್‌

ಬೆಂಗಳೂರು: ಕನ್ನಡ ನಟಿ ಅದಿತಿ ಪ್ರಭುದೇವ್‌ ಮತ್ತು ಯಶಸ್‌ ಪಟ್ಲ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಹೌದು, ಆದಿತಿ ಪ್ರಭುದೇವ್‌ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಯುಗಾದಿ ಹಬ್ಬದ ಶುಭಸಮಯದಲ್ಲಿ ಈ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಏಪ್ರಿಲ್‌ 4ರಂದು ನಮ್ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ಆದಿತಿ ಪ್ರಭುದೇವ್‌ ಈ ಖುಷಿ ಸುದ್ದಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಜೀವದ ಗೆಳತಿ ಅದಿತಿ. ನಿನ್ನ ಹಾಗೆಯೇ ನಮ್ಮ ಮಗಳು" ಎಂದು ಅಪ್ಪನಾದ ಖುಷಿಯನ್ನು ಯಶಸ್‌ ಪಟ್ಲ ಸಂಭ್ರಮಿಸಿದ್ದಾರೆ.

ಇದೇ ಮಾರ್ಚ್‌ 26ರಂದು ಅದಿತಿ ಪ್ರಭುದೇವ ಅವರು ಕೊನೆಯ ತಿಂಗಳ ಪ್ರೆಗ್ನೆಸಿ ಫೋಟೋಗಳನ್ನು ಹಂಚಿಕೊಂಡಿದ್ದರು. ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದು ಕ್ಯಾಪ್ಷನ್‌ ನೀಡಿದ್ದರು. ಇದೀಗ ಏಪ್ರಿಲ್‌ 4ರಂದು ಇವರ ಮನಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ನಟಿ ಅದಿತಿ ಪ್ರಭುದೇವ ಮತ್ತು ಕೊಡಗಿನ ಯಶಸ್‌ ಪಟ್ಲ 2022ರಲ್ಲಿ ಮದುವೆಯಾಗಿದ್ದರು.

ಚಂದದ ಕೆಂಪು ಸೀರೆ ಉಟುಕೊಂಡು ಗಾಜಿನ ಬಳೆಗಳನ್ನು ಧರಿಸಿ, ತಲೆಗೆ ಮಲ್ಲಿಗೆ ಹೂಗಳನ್ನು ತೊಟ್ಟುಕೊಂಡು ಅದಿತಿ ಪ್ರಭುದೇವ ಅವರು ಫೋಟೋಶೂಟ್‌ ಮಾಡಿಸಿಕೊಂಡಿದ್ದರು. ಫೋಟೋಶೂಟ್‌ ಅಂದ್ರೆ ಹೀಗಿರಬೇಕು, ಇವರ ಫೋಟೋಗಳು ಎಲ್ಲರಿಗೂ ಮಾದರಿ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದರು.

ಆದಿತಿ ಪ್ರಭುದೇವ್‌ ಅವರ ವಿವಾಹ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈಭವದಿಂದ ನಡೆದಿತ್ತು. ಅದಿತಿ ಪ್ರಭುದೇವ್‌ ವಿವಾಹಕ್ಕೆ ಕೆಜಿಎಫ್‌ ನಟ ಯಶ್‌, ರಾಧಿಕಾ ಪಂಡಿತ್‌, ಮೇಘನಾ ರಾಜ್‌ ಸರ್ಜಾ, ರಚನಾ, ಅಭಿಷೇಕ್‌ ಅಂಬರೀಶ್‌ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ಅದಿತಿ ಪ್ರಭುದೇವ - ಯಶಸ್‌ ಪಟ್ಲ ವಿವಾಹವು ಅರೇಂಜ್ಡ್‌ ಮದುವೆ ಆಗಿತ್ತು. ತನ್ನ ಕುಟುಂಬ ನೋಡಿದ ಗಂಡನ್ನು ಮೆಚ್ಚಿ ಅದಿತಿ ವಿವಾಹವಾಗಿದ್ದರು.

2023ರ ಡಿಸೆಂಬರ್‌ನಲ್ಲಿ ಇವರಿಬ್ಬರ ಎಂಗೇಜ್‌ಮೆಂಟ್‌ ನಡೆದಿತ್ತು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅದಿತಿ ಪ್ರಭುದೇವ ಮದುವೆಯಾದದ್ದು ಎಲ್ಲರಿಗೂ ಅಚ್ಚರಿ ತಂದಿತ್ತು. ಜನವರಿ 2024ರಲ್ಲಿ ನಾವು ಈ ವರ್ಷ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಇದೀಗ ಅದಿತಿ ಮನೆಗೆ ಪುಟ್ಟ ಕಂದಮ್ಮಳ ಆಗಮನವಾಗಿದೆ.

ಅದಿತಿ ಪ್ರಭುದೇವ ನಟನೆಯ ಸಿನಿಮಾಗಳು

2017ರಲ್ಲಿ ಧೈರಂ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ನೀಡಿದ್ದರು. ಬಳಿಕ ಬಜಾರ್‌, ಆಪರೇಷನ್‌ ನಕ್ಷತ್ರ, ಸಿಂಗ, ರಂಗನಾಯಕಿ, ಬ್ರಹ್ಮಚಾರಿ, ಆನ, ಒಂಬತ್ತನೇ ದಿಕ್ಕು, ಓಲ್ಡ್‌ ಮಾಂಕ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಗಜಾನನ ಆಂಡ್‌ ಗ್ಯಾಂಗ್‌, ತೋತಾಪುರಿ, ಚಾಂಪಿಯನ್‌ ,ಟ್ರಿಪಲ್‌ ರೈಡಿಂಗ್‌, ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ, ಚೋಸ್‌, ತೋತಾಪುರಿ ಚಾಪ್ಟರ್‌ 2 ಮುಂತಾದ ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮ್ಯಾಟ್ನಿ ಸಿನಿಮಾದಲ್ಲೂ ಆದಿತಿ ನಟಿಸಿದ್ದರು.

Whats_app_banner